
ಚೆಂದಪ್ಪನ ಅನ್ನೋ ಕ್ರೂರ ವ್ಯಕ್ತಿ ಕಥೆಯನ್ನು ಇಟ್ಟುಕೊಂಡು ಭೀಮಾತೀರದಲಿ ಚಿತ್ರವೂ ಕೂಡಾ ಒಳ್ಳೆಯ ಸಂದೇಶವನ್ನೇ ಸಾರಿದೆ.. ದುನಿಯಾ ವಿಜಯ್ ಅಭಿನಯ, ಓಂ ಪ್ರಕಾಶ್ ರಾವ್ ರವರ ಅತ್ಯುತ್ತಮ ನಿರ್ದೇಶನ ಮತ್ತು ಅಣಜಿ ನಾಗರಾಜ್ ರವರ ನಿರ್ಮಾಣ ಕೂಡಾ ಅತ್ಯುತ್ತಮವಾಗಿ ಬಂದಿದೆ.. ನಾನು ಇದನ್ನು ಪ್ರಶಂಸುತ್ತೇನೆ. ಆದ್ರೆ ಚಂದಪ್ಪ ಅನ್ನೋ ವ್ಯಕ್ತಿಯ ಜೀವನ ಚರಿತ್ರೆಯನ್ನು ಇಟ್ಟು ಕೊಂಡು ಸಿನೆಮಾ ಮಾಡ್ತಿರೋ ಚಿತ್ರ ತಂಡ ಈ ಬಡ ಕುಟುಂಬಕ್ಕೆ ಮಾಡಿದ್ದಾದ್ರೂ ಏನು..? ಅವರ ನೋವಿನ ಜೀವನವನ್ನು ಇಟ್ಟುಕೊಂಡು ದುಡ್ಡು ಮಾಡೋಕೆ ಹೊರಟಿರೋ ಚಿತ್ರ ತಂಡ ಚಂದಪ್ಪನ ಕುಟುಂಬಕ್ಕೆ ಸಹಾಯದ ಹಸ್ತವನ್ನೇ ಚಾಚಲಿಲ್ಲ..??? ಚಿತ್ರ ತಂಡಕ್ಕೆ ಒಂದು ಸಾಮಾನ್ಯ ಪ್ರಜ್ಞೆಯೂ ಇಲ್ವಾ..? ಚಿತ್ರ ತೆಗೆಯುವ ಮನುಷ್ಯರಿಗೆ ಕರುಣೆ, ಪ್ರೀತಿ, ನೋವು ತುಂಬಿದ ಜನರ ಪರಿಸ್ಥಿತಿ ಅರ್ಥವೇ ಆಗೋದಿಲ್ವಾ..? ಅನ್ನೋದು ನಮ್ಮ ಪ್ರೆಶ್ನೆ..


















Комментарии
Отправить комментарий