Hot Posts

10/recent/ticker-posts

ಹೆಣ್ಣು ಮಕ್ಕಳು ಕರೆಂಟ್ ಇದ್ದಂಗೆ-ನಿತ್ಯಾನಂದ















ಮೋದಿಯ ಗುಜರಾತ್ ರಾಜ್ಯದಂತೆ ಕರ್ನಾಟಕವೂ ಅಭಿವೃದ್ಧಿಯತ್ತ ಮುಖ ಮಾಡುತ್ತಾ..?? 

ಯಾಕಂದ್ರೆ ಗುಜರಾತ್ ನಿಜಕ್ಕೂ ಅಭಿವೃದ್ದಿಯ ಹಾದಿಯಲ್ಲಿ ಇರುವ ರಾಜ್ಯ.. ಹೀಗಾಗಿ ಮೋದಿಯ ಜೊತೆಗೆ ಮಾತುಕತೆ ನಡೆಸಿ ಗುಜರಾತ್ ಮಾದರಿಯ ಸರ್ಕಾರವನ್ನು ತರುತ್ತೇವೆ ಎಂದು ಹೇಳಿದ ನಮ್ ಯಡ್ಯೂರಪ್ಪನವ್ರು ಇದ್ದಷ್ಟು ದಿನ ಕಣ್ಣೀರ‍್ ಹಾಕೊಂಡೇ ಹೋದ್ರು.. ಈಗ ಬಂದಿರೋ ಸದಾ ನಂದ ಗೌಡ್ರು ನಗ್ತಾ ನಗ್ತಾನೇ "ಯುಟಿಲಿಟಿ ಬಿಲ್ಡಿಂಗ್ ನಾ ಅಡ ಇಡೋಕೆ ಮುಂದಾದ್ರು.. ಇದು ಗುಜರಾತ್ ಮಾದರೀನಾ..?? ಅಂತ ತಲೆ ಕೆಡಿಸಿಕೊಳ್ತಾ ಇದ್ದಾರೆ ಓಟ ಹಾಕಿ ನಮ್ ಜನಗಳು.

  

ಗುಜರಾತ್ ನಲ್ಲಿ ಸ್ಲಂ ನಿರ್ಮೂಲನೆ ಮಾಡಿ ಅಲ್ಲಿನ ಜನರಿಗೆ ಅಪಾರ್ಟಮೆಂಟ್ ನ ಕಟ್ಟಿಕೊಟ್ರು.. ಇದ್ರಿಂದ ಸ್ಲಂ ನಿರ್ಮೂಲನೆನೂ ಆಯ್ತು.. ಜೊತೆಗೆ ಸ್ಲಂ ಜನರು ಆಕ್ರಮಿಸಿಕೊಂಡಿದ್ದ ಜಾಗವನ್ನೂ ಖಾಲಿ ಮಾಡಿಸಿದ್ರು.. ಅದನ್ನು ಅಭಿವೃದ್ದಿ ಪಡಿಸಿದ್ರು.. ಕರೆಂಟ್ ನಲ್ಲೂ ಕೂಡ ಸ್ವಾವಲಂಬನೆ ಸಾಧಿಸಬೇಕು ಅಂತ ಛಲ ತೊಟ್ಟು ಗುಜರಾತ್ ನಲ್ಲಿ ಸೋಲಾರ‍್ ಪಾರ್ಕ ಅನ್ನು ಅಭಿವೃದ್ದಿ ಪಡಿಸಿದ್ರು.. ಇದ್ರಿಂದ 600 ಮೆಗಾವ್ಯಾಟ್ ಕರೆಂಟ್ ಉತ್ಪಾದನೆ ಗುರಿ ಇಟ್ಟುಕೊಂಡವ್ರೆ.. ಆದ್ರೆ ನಮ್ ಸದಾನಂದ ಗೌಡ್ರಿಗೆ ಅದೇನ್ ಬುದ್ದಿ ಬಂತೋ ಏನೋ ಗೊತ್ತಿಲ್ಲ.. ಅದಿಕ್ಕೆ ಈಗ ಗುಜರಾತ್ ಮಾದರಿಯಲ್ಲಿ ಕರೆಂಟ್ ನ ಉತ್ಪಾದನೆ ಮಾಡೋಕೆ ಶುರು ಮಾಡೋ ಪ್ಲಾನ್ ಮಾಡಿದ್ದಾರೆ.. ಈಗಾಗ್ಲೆ ಇದಕ್ಕಾಗಿ ಬಿಜಾಪುರದಲ್ಲಿ 500 ಎಕ್ರೆ ಭೂಮಿಯನ್ನ ಗೊತ್ತು ಮಾಡವ್ವ್ರೆ.. ಬಿಜಾಪುರದ ಸೋಲಾರ‍್ ಪಾರ್ಕಿನಿಂದ ಸುಮಾರು 500 ಮೆಗಾವ್ಯಾಟ್ ಕರೆಂಟ್ ಅನ್ನು ಉತ್ಪಾದಿಸೋದಕ್ಕೆ ಅಂದಾಜಿಸಲಾಗಿದೆ.. 


   



ಅದಿಕ್ಕೆ ನಮ್ ಸದಾನಂದ್ ಗೌಡ್ರು "ಹೆಣ್ ಮಕ್ಕಳು ಕರೆಂಟ್ ಇದ್ದಂಗೆ... ಅಂತ ನಾವು ಓದಿದ್ವಿ.. ಕೆಲವರಿಗೆ ಅದು ಅನುಭವ ಕೂಡ ಆಗಿರಬಹುದು.. ಆದ್ರೆ ಈಗ ನಮ್ ಶೋಭಕ್ಕ ನಮ್ ಇಡೀ ರಾಜ್ಯಕ್ಕೇ ಕರೆಂಟ್ ಕೊಡ್ತಾವ್ರೆ" ಅಂತ ಯಾವುದೋ ಭಾಷಣದಲ್ಲಿ ಹೇಳ್ತಿದ್ರಂತೆ.. 

 

ಅದಿಕ್ಕೆ ನಿತ್ಯಾನಂದ ಏನ್ ಅಂದ ಗೊತ್ತಾ..??? 

"ಹುಷಾರು ಕಣ್ರಪ್ಪ.. ಕರೆಂಟಿನ ಸಹವಾಸ ಹೆಣ್ ಮಕ್ಕಳ ಸಹವಾಸ ಎರಡೂ ಡೇಂಜರ‍್ರೇ..

ಯಾಕಂದ್ರೆ ಕರೆಂಟು ಸರಿ ಇಲ್ಲ..

ಹಿತಮಿತವಾಗಿ ಬಳಸಿದ್ರೆ ಮನೆಯಲ್ಲಿ ಬೆಳಕಿನ ನಗೆ..

ಯಾಮಾರಿದ್ರೆ ಶಾಕ್ ಹೊಡೆದ್ರೆ ಮನೆ ಮುಂದೆ ಹೊಗೆ.


.

Отправить комментарий

0 Комментарии