ಫೆಬ್ರವರಿ 20 ಕ್ಕೆ
ರಷ್ಯಾ-ಉಕ್ರೇನ್ ಯುದ್ಧ.. ಏಲಿಯನ್ಸ್ ದಾಳಿ ಸಾಧ್ಯತೆ..?
ಇಡೀ ಜಗತ್ತಿಗೆ ಏಲಿಯನ್ಗಳ ಬಗೆಗಿನ ಕುತೂಹಲ ಇವತ್ತಿಗೂ ಕಡಿಮೆಯಾಗಿಲ್ಲ. ವಿಶ್ವಪ್ರಸಿದ್ಧ
ವಿಜ್ಞಾನಿಗಳು ಏಲಿಯನ್‌ಗಳ ಬೆನ್ನತ್ತಿದ್ದಾರೆ. ಏಲಿಯನ್‌ಗಳ ಇರುವಿಕೆಯನ್ನು ಸಾಕ್ಷಿ ಸಮೇತ ಪತ್ತೆ
ಹಚ್ಚೋದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಸಾಕ್ಷಿಗಳೂ ಏಲಿಯನ್‌ಗಳ ಇರುವಿಕೆಯನ್ನ
ಒತ್ತಿ ಹೇಳುತ್ತಿವೆ. ಈಗ ಇದೇ ಏಲಿಯನ್‌ಗಳು ಮೂರನೇ ಮಹಾಯುದ್ಧದಲ್ಲಿ ಭಾಗವಹಿಸಲಿವೆಯಾ ಎಂಬ
ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ.
ಏಲಿಯನ್ ಜೀವಿಗಳು ಎಲ್ಲಿವೆ ಗೊತ್ತಾ..?
ಏಲಿಯನ್‌ಗಳು (Aliens UFO) ಭೂಮಿಯ
ಮೇಲಿಲ್ಲ. ಅವು ಅನ್ಯಗ್ರಹದ ಜೀವಿಗಳು. ಆದರೆ ಯಾವ ಗ್ರಹದಲ್ಲಿ ಏಲಿಯನ್‌ಗಳು ವಾಸಿಸುತ್ತಿವೆ
ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಕೆಲವರು ಏಲಿಯನ್‌ಗಳು ಮಂಗಳ (MARS) ಗ್ರಹದಲ್ಲಿ ಇವೆ ಎಂದು
ಹೇಳುತ್ತಾರೆ. ಮತ್ತೆ ಕೆಲವರು ಏಲಿಯನ್‌ಗಳು ಚಂದ್ರನಲ್ಲಿವೆ (MOON) ಎಂದು ಹೇಳುತ್ತಾರೆ. ಮತ್ತೂ ಕೆಲವರು
ಏಲಿಯನ್‌ಗಳು ಶುಕ್ರಗ್ರಹದಲ್ಲಿವೆ (VENUS) ಅಂತಲೂ ಹೇಳುತ್ತಾರೆ.
ಏಲಿಯನ್‌ಗಳು
ಎಲ್ಲಿವೆ ಎಂಬುದರ ಬಗ್ಗೆ ಇಂದಿಗೂ ವಿಜ್ಞಾನಿಗಳಲ್ಲಿ ಗೊಂದಲಗಳಿವೆ. ಹೀಗಾಗಿಯೇ ಅವುಗಳ
ಬೆನ್ನತ್ತಿದ್ದಾರೆ ಸಂಶೋಧಕರು. ಆದರೆ ಈಗ ಬಂದಿರುವ ಅತಿದೊಡ್ಡ ಸುದ್ದಿ ಎಂದರೆ, ಮೂರನೇ
ಮಹಾಯುದ್ಧದಲ್ಲಿ ಏಲಿಯನ್‌ಗಳು ಭಾಗವಹಿಸಲಿವೆಯಾ..? ಅನ್ಯಗ್ರಹ ಜೀವಿಗಳಿಂದಲೇ ಭೂ ಲೋಕದಲ್ಲಿ
ಅತಿದೊಡ್ಡ ಯುದ್ಧ ಸಂಭವಿಸಲಿದೆಯಾ ಎಂಬುದು ಆಘಾತವನ್ನು ಉಂಟು ಮಾಡುತ್ತಿದೆ. ಅದೂ ಉಕ್ರೇನ್
ಮತ್ತು ರಷ್ಯಾ ನಡುವೆ ಯುದ್ಧವಾದರೆ, ಏಲಿಯನ್‌ಗಳೇ ಈ ಯುದ್ಧದ ಸಾರಥ್ಯ ವಹಿಸಿಕೊಳ್ಳಲಿವೆಯಾ ಎಂಬ
ಸುದ್ದಿಗಳಿವೆ.
ಉಕ್ರೇನ್ ಮತ್ತು
ರಷ್ಯಾ ದೇಶಗಳ ನಡುವೆ ಯುದ್ಧ ಭೀತಿ ಏಕೆ..?
ಉಕ್ರೇನ್ ಮತ್ತು
ರಷ್ಯಾ (RUSSIA-UKRAINE crisis) ನಡುವೆ ಯುದ್ಧದ ಭೀತಿ ಎದುರಾಗಿದೆ. ಉಕ್ರೇನ್ ದೇಶದ ಮೇಲೆ ದಾಳಿ ಮಾಡೋದಕ್ಕೆ ರಷ್ಯಾ ಸಕಲ
ರೀತಿಯಲ್ಲಿ ಸಜ್ಜಾಗಿದೆ. ಉಕ್ರೇನ್
603,628 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ದೇಶವಾಗಿದೆ. ಇದು ರಷ್ಯಾ ಮತ್ತು ಯುರೋಪ್
ದೇಶಗಳ ನಡುವೆ ಇದೆ. 1991ರವರೆಗೂ ಸೋವಿಯತ್ ಒಕ್ಕೂಟದ
ಸದಸ್ಯ ದೇಶವಾಗಿತ್ತು ಉಕ್ರೇನ್ . ಆದರೆ ನಂತರದಲ್ಲಿ ಉಕ್ರೇನ್ ನಿಧಾನವಾಗಿ ರಷ್ಯಾದ
ಹಿಡಿತದಿಂದ ಯೂರೋಪ್ ಒಕ್ಕೂಟದ ಕಡೆಗೆ ವಾಲಿತ್ತು. ಇದು ರಷ್ಯಾ ಸಿಟ್ಟಿಗೆ ಕಾರಣವಾಗಿತ್ತು.
ಉಕ್ರೇನ್‌ಗೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ಮತ್ತು ಇತರೇ ಮಿಲಿಟರಿ ಯುದ್ಧಾಸ್ತ್ರಗಳನ್ನು ನಿಡ
ತೊಡಗಿದವು. ಇದರಿಂದ ರಷ್ಯಾ ಸಿಟ್ಟು ಇನ್ನಷ್ಟು ಹೆಚ್ಚಾಯಿತು.
2013 ರಲ್ಲಿ ಉಕ್ರೇನ್ ದೇಶದಲ್ಲಿ ರಾಜಕೀಯ ಉದ್ದೇಶದಿಂದ ಗಲಭೆ
ಹೆಚ್ಚಾಯಿತು. ಉಕ್ರೇನ್ ಅಧ್ಯಕ್ಷ ಯಾನುಕೊವ್ಚ್ ವಿರುದ್ಧ ಪ್ರತಿಭಟನೆಗಳು ಹೆಚ್ಚಾದವು. ಪ್ರತಿಭಟನಾಕಾರರು ಯೂರೋಪ್
ಒಕ್ಕೂಟಕ್ಕೆ ಬೆಂಬಲಿಸಿದರು. ಉಕ್ರೇನ್ ಅಧ್ಯಕ್ಷ ಮಾತ್ರ ರಷ್ಯಾಗೆ ಬೆಂಬಲಿಸುತ್ತಿದ್ದ. ಈ
ತಿಕ್ಕಾಟದಿಂದಾಗಿ ರಾಜಕೀಯವಾಗಿ ಉಕ್ರೇನ್ ಇಬ್ಭಾಗವಾಯ್ತು. ಉಕ್ರೇನ್ ಅಧ್ಯಕ್ಷ ಯಾನುಕೊವ್ಚ್ (Volodymyr Zelensky) ದೇಶವನ್ನೇ ಬಿಟ್ಟು
ಪರಾರಿಯಾದ.
3 ಸಾವಿರ ಮಂದಿ ಈಗಾಗಲೇ ಬಲಿಯಾಗಿದ್ದಾರೆ..!
2014 ರಿಂದ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು
ಮಂದಿ ಬಲಿಯಾಗಿದ್ದಾರೆ. 2019 ಡಿಸೆಂಬರ್ ತಿಂಗಳಲ್ಲಿ ನಡೆದ ಪ್ಯಾರೀಸ್ (Paris Agreement) ಒಪ್ಪಂದದಲ್ಲಿ ರಷ್ಯಾ,
ಉಕ್ರೇನ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಭಾಗವಹಿಸಿದ್ದವು. ಶಾಂತಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ
ರಾಜಕೀಯದ ಬೆಂಕಿ ಉಕ್ರೇನ್ ದೇಶವನ್ನ ತಣ್ಣಗಾಗಲು ಬಿಡಲಿಲ್ಲ.
1,00,000 ಮಂದಿ ಸಾವು ಸಂಭವಿಸುವ ಆತಂಕ..!
ಉಕ್ರೇನ್ ದೇಶವನ್ನು ತನ್ನ ಸ್ವಾಧೀನದಲ್ಲಿಯೇ ಇಟ್ಟುಕೊಳ್ಳಬೇಕು ಎಂದು
ರಷ್ಯಾ ಹಠಕ್ಕೆ ಬಿದ್ದಿದೆ. ಇದಕ್ಕಾಗಿ ಉಕ್ರೇನ್ ಗಡಿಗೆ ರಷ್ಯಾ 1,00,000ಕ್ಕೂ ಹೆಚ್ಚು ಸೈನಿಕರನ್ನು ಕಳಿಸಿದೆ. ರಷ್ಯಾದ ಅತ್ಯಾಧುನಿಕ ಯುದ್ಧ ವಿಮಾನಗಳು
ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಯುದ್ಧ ಟ್ಯಾಂಕರ್‌ಗಳು, ನ್ಯೂಕ್ಲಿಯರ್ ಕ್ಷಿಪಣಿಗಳು, ಬಾಂಬ್‌ಗಳು
ಉಕ್ರೇನ್ ದೇಶವನ್ನು ಭಸ್ಮ ಮಾಡಲು ಸಜ್ಜಾಗಿವೆ. ರಷ್ಯಾಗೆ ವಿರುದ್ಧವಾಗಿ ಉಕ್ರೇನ್ ಕೂಡ
ಯುದ್ಧಕ್ಕೆ ಸಜ್ಜಾದಂತೆ ಕಾಣುತ್ತಿದೆ. ಯೂರೋಪ್ ಒಕ್ಕೂಟದ ದೇಶಗಳು (Europe nations, European union) ಮತ್ತು ಅಮೆರಿಕ ಉಕ್ರೇನ್‌ಗೆ
ಬೆಂಬಲವಾಗಿ ನಿಂತಿವೆ. ಅಮೆರಿಕದ 8,000 ಸೈನಿಕರು ಉಕ್ರೇನ್ ಗಡಿಯತ್ತ
ಧಾವಿಸಿದ್ದು, ರಷ್ಯಾ ವಿರುದ್ಧದ ಯುದ್ಧಕ್ಕೆ ಸಜ್ಜಾಗಿವೆ. ಒಂದು ವೇಳೆ ಉಕ್ರೇನ್ ಮತ್ತು ರಷ್ಯಾ
ನಡುವೆ ಯುದ್ಧವಾದರೆ, 75,000 ದಿಂದ 1,00,000 ಲಕ್ಷ ಜನರು ಸಾಯಬಹುದು
ಎಂದು ಅಂದಾಜಿಸಲಾಗುತ್ತಿದೆ.
ತನ್ನ ಪ್ರಜೆಗಳಿಗೆ ವಾಪಸ್ ಬನ್ನಿ ಎಂದ ಅಮೆರಿಕ..!
ಫೆಬ್ರವರಿ 20 ರಂದು ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಚಿಂತನೆ
ನಡೆಸಿದೆ ಎಂದು ಹೇಳಲಾಗುತ್ತಿದೆ. ಅಷ್ಟರಲ್ಲಿ ಉಕ್ರೇನ್ ಮತ್ತೆ ರಷ್ಯಾಗೆ ಬೆಂಬಲ ವ್ಯಕ್ತಪಡಿಸಿ
ಶರಣಾಗಬೇಕು ಎಂದು ಬಯಸುತ್ತಿದೆ. ಒಂದು ವೇಳೇ ಉಕ್ರೇನ್ ರಷ್ಯಾಗೆ ಮರಳಲು ನಿರಾಕರಿಸಿದರೆ
ಫೆಬ್ರವರಿ 20 ರಂದು ಉಕ್ರೇನ್ ಮೇಲೆ ಯುದ್ಧ ಸಾರಲಾಗುತ್ತದೆ ಎಂದು ರಷ್ಯಾದ ಮೂಲಗಳು ತಿಳಿಸಿವೆ. ಇನ್ನೂ
ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ವಾಪಸ್ ಬರಲು ಅಮೆರಿಕ ಮನವಿ ಮಾಡಿದೆ. ಒಂದು ವೇಳೇ
ಯುದ್ಧವಾಗಿ ಜೀವಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಅಮೆರಿಕನ್ನರು ವಾಪಸ್ ಬನ್ನಿ ಎಂದು ಅಮೆರಿಕ (USA President Joe Biden) ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಉಕ್ರೇನ್ ಸ್ವಾಧೀನಕ್ಕಾಗಿ ಅಮೆರಿಕ ಮತ್ತು ರಷ್ಯಾ ದೇಶಗಳು ಮತ್ತೆ
ಮುಖಾಮುಖಿಯಾಗುವ ಭೀತಿ ಕಾಡುತ್ತಿದೆ. ಒಂದು ವೇಳೆ ಅಮೆರಿಕ ಮತ್ತು ರಷ್ಯಾ ದೇಶಗಳು ಯುದ್ಧದಲ್ಲಿ
ಧುಮುಕಿದ್ದೇ ಆದರೆ, ಮೂರನೇ ಮಹಾಯುದ್ಧ ನಡೆದೇ ತೀರುತ್ತೆ ಎಂದು ಜಾಗತಿಕ ತಜ್ಞರು ಅಭಿಪ್ರಾಯ
ವ್ಯಕ್ತಪಡಿಸುತ್ತಿದ್ದಾರೆ. ಮೊದಲ ಜಾಗತಿಕ ಯುದ್ಧ ಮತ್ತು ಎರಡನೇ ಜಾಗತಿಕ ಯುದ್ಧಗಳು ಸಣ್ಣ ದೇಶಗಳ
ವಿಚಾರಕ್ಕೆ ಆರಂಭವಾದರೂ, ದೊಡ್ಡ ಮಟ್ಟದಲ್ಲಿ ಯುದ್ಧ ಮಾಡಿದ್ದು ಅಮೆರಿಕ ಮತ್ತು ರಷ್ಯಾ ದೇಶಗಳು.
ಈಗಲೂ ಉಕ್ರೇನ್ ಕೇವಲ ನೆಪವಾಗುವ ಸಾಧ್ಯತೆ ಇದೆ. ಇದು ಅಮೆರಿಕ ಮತ್ತು ರಷ್ಯಾ ನಡುವೆಯೇ
ಅತಿದೊಡ್ಡ ಯುದ್ಧಕ್ಕೆ ಕಾರಣವಾಗುವ ಸನ್ನಿವೇಶಗಳು ಗೋಚರವಾಗುತ್ತಿವೆ.
ಎರಡನೇ ಮಹಾಯುದ್ಧದಲ್ಲಿ ಏಲಿಯನ್ ಸೈನ್ಯವಿತ್ತಾ..?
ಮೊದಲನೇ ಮಹಾಯುದ್ಧ (world war 1) ಮತ್ತು ಎರಡನೇ ಮಹಾಯುದ್ಧದ (world war 2) ಸಮಯದಲ್ಲಿ ಏಲಿಯನ್‌ಗಳ
ಸೈನ್ಯವಿತ್ತು (alien army in world war) ಎಂದು ಹಲವು ಕಡೆ ವರದಿಯಾಗಿದ್ದವು. ಜರ್ಮನಿ, ಅಮೆರಿಕ ದೇಶಗಳು ಏಲಿಯನ್ ಗಳನ್ನು
ಸೃಷ್ಟಿಸಿದ್ದವು. ಅವುಗಳು ಶತ್ರು ದೇಶಗಳ ಸೈನಿಕರನ್ನು ಅಪಹರಣ ಮಾಡಿ ನಿಗೂಢವಾಗಿ
ಕೊಲ್ಲುತ್ತಿದ್ದವು ಎಂದು ಹಲವರು ಬರೆದ ಪುಸ್ತಕಗಳಲ್ಲಿವೆ. ಆಗಲೇ ಏಲಿಯನ್‌ಗಳು ಯುದ್ಧದಲ್ಲಿ ಭಾಗವಹಿಸಿದ್ದವು
ಎಂದಾದರೆ, ಮುಂದಿನ ಯುದ್ಧಗಳಲ್ಲೂ ಅನ್ಯಗ್ರಹ ಜೀವಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಹಲವರು ಊಹಿಸುತ್ತಿದ್ದಾರೆ.
ಅಮೆರಿಕ-ರಷ್ಯಾದಲ್ಲಿ ಏಲಿಯನ್ ನಿಗೂಢ ಪ್ರದೇಶಗಳಿವೆಯಾ..?
ಅಮೆರಿಕದಲ್ಲಿ ಏರಿಯಾ 51 ಎಂಬ ನಿಗೂಢ ಪ್ರದೇಶವಿದೆ. ಅದು ಏಲಿಯನ್‌ಗಳು
ಇರುವ ಪ್ರದೇಶ ಎಂದೇ ಹೇಳಲಾಗುತ್ತದೆ. ಅಮೆರಿಕ ಏಲಿಯನ್‌ಗಳಿಗೆ ವಿಶೇಷ ತರಬೇತಿ ನೀಡುತ್ತಿದೆ ಎಂದೂ
ಅನುಮಾನಗಳಿವೆ. ಇತ್ತ ರಷ್ಯಾ ಕೂಡ ಏಲಿಯನ್‌ಗಳ ನಿಗೂಢ ಸೈನ್ಯವನ್ನು ಹೊಂದಿದೆ ಎಂದು ಜಗತ್ತಿನ
ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಷ್ಯಾದಲ್ಲೂ ಒಂದು ನಿಗೂಢ ಪ್ರದೇಶವಿದೆ. ಅಲ್ಲಿಗೆ
ಯಾರೂ ಹೋಗುವಂತಿಲ್ಲ. ಅಲ್ಲಿಗೆ ಹೋದರೆ ಯಾರೂ ವಾಪಸ್ ಬರುವುದಿಲ್ಲ ಎಂದು ಹೇಳಲಾಗುತ್ತೆ. ಅದು
ಏಲಿಯನ್‌ಗಳ ಪ್ರದೇಶವಾಗಿದ್ದು ಅಲ್ಲಿಗೆ ಹೋದವರನ್ನು ಅವು ಕೊಲ್ಲುತ್ತವೆ ಎಂದು ಹೇಳಲಾಗುತ್ತದೆ.
ರಷ್ಯಾ ಅಧ್ಯಕ್ಷ ವ್ಲಾಡಿಮೀರ‍್ ಪುಟಿನ್ ಏಲಿಯನ್ನಾ..?
ಇನ್ನೂ ರಷ್ಯಾ ಅಧ್ಯಕ್ಷ ವ್ಲಾಡಿಮೀರ‍್ ಪುಟಿನ್ (Russian President Vladimir Putin is an alien) ಒಬ್ಬ ಏಲಿಯನ್ ಎಂದು
ಹಲವರು ಅಭಿಪ್ರಾಯ ಪಡುತ್ತಾರೆ. 18 ಸೆಪ್ಟೆಂಬರ್ 1997 ರಂದು ಏಲಿಯನ್‌ಗಳು ರಷ್ಯಾ ಅಧ್ಯಕ್ಷ
ಪುಟಿನ್ ಅವರನ್ನು ಭೇಟಿಯಾಗಲು ಬಂದಿದ್ದವು ಎಂದು ವರದಿಗಳಿವೆ. ಪುಟಿನ್ ಖಾಸಗಿ ವಾಹಿನಿಗೆ ಸಂದರ್ಶನ
ನೀಡಿದ್ದರು. ನಿರೂಪಕಿಯೊಬ್ಬರು ರಷ್ಯಾ ಅಧ್ಯಕ್ಷರನ್ನು ನೀವು ನಿಜವಾಗಿಯೂ ಏಲಿಯನ್ ಎಂದು
ಹೇಳಲಾಗುತ್ತಿದೆ. ಇದು ಸತ್ಯವೇ ಎಂದು ಪ್ರಶ್ನಿಸಿದ್ದರು. ಆಗ ಪುಟಿನ್ ಕಕೊಟ್ಟ ಉತ್ತರ ನಿಜಕ್ಕೂ
ಅಚ್ಚರಿಯನ್ನು ಉಂಟು ಮಾಡಿತ್ತು. ನಾನು ಏಲಿಯನ್ ಅಲ್ಲ. ಆದರೆ ನಮ್ಮ ಪರಿವಾರದ ಭಾಗವಾಗಿ ಏಲಿಯನ್‌ಗಳು
ಇವೆ ಎಂದು ಹೇಳಿದ್ದರು ಪುಟಿನ್.
ಉಕ್ರೇನ್- ರಷ್ಯಾ ಯುದ್ಧದಲ್ಲಿ ಏಲಿಯನ್ ದಾಳಿ ಮಾಡುತ್ತವೆಯಾ..?
ಅಮೆರಿಕ ಮತ್ತು ರಷ್ಯಾ ಎರಡೂ ದೇಶಗಳಲ್ಲೂ ಏಲಿಯನ್‌ಗಳು ಇರುವಿಕೆ ಬಗ್ಗೆ
ಪ್ರಸ್ತಾಪವಿದೆ. ಸ್ವತಃ ರಷ್ಯಾ ಅಧ್ಯಕ್ಷ ಪುಟಿನ್ ಏಲಿಯನ್ ಜೊತೆಗೆ ನಿಗೂಢ ಸಂಪರ್ಕ
ಹೊಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಉಕ್ರೇನ್
ಮತ್ತು ರಷ್ಯಾ ಯುದ್ಧ ನಡೆದರೆ ಏಲಿಯನ್‌ಗಳು ಯುದ್ಧಕ್ಕೆ ಧುಮುಕುವ ಸಾಧ್ಯತೆ ಇದೆ ಎಂದು
ಅಂದಾಜಿಸಲಾಗುತ್ತಿದೆ. ರಷ್ಯಾ ಏಲಿಯನ್ ಪ್ರಯೋಗ ಮಾಡಿದರೆ, ಅಮೆರಿಕ ಕೂಡ ಏಲಿಯನ್ ಸೈನ್ಯವನ್ನೇ
ರಷ್ಯಾ ಮೇಲಿನ ದಾಳಿಗೆ ಕಳಿಸಲಿದೆ ಎಂದೂ ಹೇಳಲಾಗುತ್ತದೆ.
ಅಮೆರಿಕ –
ರಷ್ಯಾ ಅಂತಿಮ ಸಭೆ. ಶಾಂತಿನಾ..? ಕ್ರಾಂತಿನಾ..?
ಮುಂದಿನ ವಾರದಲ್ಲಿ
ಅಮೆರಿಕ ಮತ್ತು ರಷ್ಯಾ ಅಧ್ಯಕ್ಷರು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಭೇಟಿಯಲ್ಲಿ
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಭೀತಿಯ ಬಗ್ಗೆ ಚರ‍್ಚೆಯಾಗಲಿದೆ. ಈ ಚರ್ಚೆ ವೇಳೆ ಉಭಯ
ದೇಶಗಳು ಶಾಂತಿ ಒಪ್ಪಂದಕ್ಕೆ ಮುಂದಾರೆ ಮೂರನೇ ಮಹಾಯುದ್ಧದ ಭೀತಿ ಅಂತ್ಯವಾಗಲಿದೆ. ಇಲ್ಲದಿದ್ದರೆ
ಫೆಬ್ರವರಿ 20,
ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ
ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧವಾದರೆ
ನಿಜವಾಗಿಯೂ ಏಲಿಯನ್‌ಗಳು ಯುದ್ಧದಲ್ಲಿ ಭಾಗಿಯಾಗಲಿವೆಯಾ..? ಇದೇ ಈಗ ಎಲ್ಲರನ್ನೂ ಕಾಡುತ್ತಿರುವ
ಅತಿದೊಡ್ಡ ಪ್ರಶ್ನೆ ಮತ್ತು ಅತಿದೊಡ್ಡ ಆತಂಕ.
0 Комментарии