Hot Posts

10/recent/ticker-posts

UNTOLD STORY : ಭಾರತದ ಕರ್ನಾಟಕದಲ್ಲಿ ಹಿಜಬ್‌ ಹೋರಾಟ. 6 ಯುವತಿಯರು ಸೃಷ್ಟಿಸಿದ್ದೆಂಥಾ ನಿಗೂಢ ಪ್ರತಿಭಟನಾ ತಂತ್ರ..?

 

ಭಾರತದ ಕರ್ನಾಟಕದಲ್ಲಿ ಹಿಜಬ್‌ ಹೋರಾಟ. ೬ ಯುವತಿಯರು ಸೃಷ್ಟಿಸಿದ್ದೆಂಥಾ
ನಿಗೂಢ ಪ್ರತಿಭಟನಾ ತಂತ್ರ..?



 

how-indias-karnataka-state-burning-from-hijab-saffron-issue-womens-in-islam-restriction-for-womens-in-islam-riots-afoxtv



ವಿಶ್ವದಲ್ಲಿ ೧೯೮ಕ್ಕೂ ಹೆಚ್ಚು ದೇಶಗಳಿವೆ. ಸೌದಿ ಅರೇಬಿಯಾ (Saudi Arebia), ಯುನೈಟೆಡ್
ಎಮಿರೈಟ್ಸ್ (UAE),
ಇಂಡೋನೇಷಿಯಾ (INDONASIA), ಪಾಕಿಸ್ತಾನ (PAKISTAN), ಬಾಂಗ್ಲಾದೇಶ (BANGLADESH), ಈಜಿಪ್ಟ್ (EGYPT), ಇರಾನ್ (IRAN), ಟರ್ಕಿ (TURKI), ಅಫ್ಘಾನಿಸ್ತಾನ (AFGHANISTAN TALIBAN) ಸೇರಿದಂತೆ
ಹಲವು ದೇಶಗಳಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿದೆ.



ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಹಿಂದುಗಳೇ ಇರುವ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಏರಿಕೆಯಾಗುತ್ತಿದೆ. ಜೈನರು, ಬೌದ್ಧರು,
ಸಿಖ್ಖರು, ಪಾರ್ಸಿಗಳು ಸೇರಿದಂತೆ ಹಲವು ಧರ್ಮದವರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ ಎಂದಿಗೂ
ಕೋಮು ಸಾಮರಸ್ಯ ಹದಗೆಟ್ಟಿರಲಿಲ್ಲ. ೨೦೦೨ರಲ್ಲಿ ಗೋದ್ರಾ ಹತ್ಯಾಕಾಂಡ ಪ್ರಕರಣ ಬಿಟ್ಟರೆ
ಮತ್ಯಾವುದೇ ಸಮಯದಲ್ಲಿ ಕೋಮುಸಾಮರಸ್ಯಕ್ಕೆ ಧಕ್ಕೆಯಾಗಿರಲಿಲ್ಲ.



 



೨೦೨೨ರಲ್ಲಿ ಭಾರತ ಈಗ ಜಗತ್ತಿನಾದ್ಯಂತ ಮತ್ತೆ ಹೆಚ್ಚು ಚರ‍್ಚೆಗೆ
ಗ್ರಾಸವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಧಾರ್ಮಿಕ
ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿದೆ. ೬ ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿಗೆ ಹಿಜಬ್
ಧರಿಸಿಕೊಂಡು ಬಂದಿದ್ದರು. ಹೀಗಾಗಿ ಕಾಲೇಜಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದ
ಅಸಮಾಧಾನಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು.



 



ಮುಸ್ಲಿಂ ಯುವತಿಯರ ಪ್ರಥಿಭಟನೆ ಜೋರಾಗುತ್ತಿದ್ದಂತೆ, ಹಲವು
ಸಂಘಟನೆಗಳು ಅವರ ಬೆನ್ನಿಗೆ ನಿಂತವು. ನಿಗೂಢವಾಗಿ ೬ ವಿದ್ಯಾರ್ಥಿಗಳಿಗೆ ಪ್ರಚೋದಿಸುವ ಕೆಲಸ
ಮಾಡಿದ್ದವು. ಇದರಿಂದ ಕೇವಲ ಒಂದು ಕಾಲೇಜಿನಲ್ಲಿ ಆರಂಭವಾದ ಹಿಜಬ್ ವಿವಾದ, ನಂತರದಲ್ಲಿ ಇಡೀ
ಕರ್ನಾಟಕದಾದ್ಯಂತ ಪ್ರಾರಂಭವಾಯಿತು. ನಂತರ ಇಡೀ ಭಾರತದಲ್ಲಿ ಹಿಜಬ್ ವಿವಾದ ಬಿರುಗಾಳಿಯಂತೆ
ಹಬ್ಬಿತ್ತು.



 how-indias-karnataka-state-burning-from-hijab-saffron-issue-womens-in-islam-restriction-for-womens-in-islam-riots-afoxtv



ಭಾರತದ ಕರ್ನಾಟಕದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಮೊದಲು ಹಿಜಬ್ ವಿವಾದ
ಆರಂಭವಾಯಿತು. ಉಡುಪಿಯ ಸರ್ಕಾರಿ ಪಿಯು  ಕಾಲೇಜಿನ ೬
ಮುಸ್ಲಿಂ ವಿದ್ಯಾರ್ಥಿಗಳು ಹಿಜಬ್ ಧರಿಸಿ ಆಗಮಿಸಿದ್ದರು. ಇದರಿಂದ ವಿವಾದ ಸೃಷ್ಟಿಯಾಯಿತು. ಮುಸ್ಲಿಂ
ಯುವತಿರು ಹಿಜಬ್ ಧರಿಸಿ ಬರುತ್ತೇವೆ. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದರು. ಇದು ಹಿಂದೂಗಳ
ಭಾವನೆಯನ್ನೂ ಕೆರಳಿಸಿತ್ತು. ಮುಸ್ಲಿಂ ವಿದ್ಯಾರ್ಥಿಗಳು ಹಿಜಬ್ ಧರಿಸಿದರೆ ಹಿಂದೂಗಳಾದ ನಾವು
ಕೇಸರಿ ಶಾಲು ಧರಿಸಿ ಬರುತ್ತೇವೆ. ಕೇಸರಿ ಪೇಟ ಧರಿಸುತ್ತೇವೆ ಎಂದರು. ಮುಸ್ಲಿಂ ಯುವತಿಯರು ಪಟ್ಟು
ಬಿಡದೇ ಇದ್ದಾಗ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಕೇಸರಿ ಪೇಟ ಧರಿಸಿ ಪ್ರತಿಭಟನೆಗೆ
ಇಳಿದರು.



ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಬ್ ಮತ್ತು ಕೇಸರಿ ಗದ್ದಲ, ಭಾರತ
ಮಾತ್ರವಲ್ಲದೇ ಜಗತ್ತಿನಾದ್ಯಂತ ಸುದ್ದಿಯಾಯಿತು. ಗೂಗಲ್‌ನಲ್ಲಿ ದೊಡ್ಡ ಮಟ್ಟದ ಟ್ರೆಂಡಿಂಗ್
ಸೃಷ್ಟಿಸಿತ್ತು. ಕರ್ನಾಟಕದ ಉಡುಪಿ, ಕಾರವಾರ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಕಲ್ಲಿನಿಂದ
ಹೊಡೆದಾಡಿದರು. ಪೊಲೀಸರು ಬಂದು ಪ್ರತಿಭಟನೆ ಹತ್ತಿಕ್ಕಲು ಪ್ರಾರಂಭಿಸಿದರು. ಆದರೂ ಹಿಜಬ್ ಮತ್ತು
ಕೇಸರಿ ಗಲಾಟೆ ನಿಲ್ಲಲೇ ಇಲ್ಲ.



 



ಕರ್ನಾಟಕದ ಹೈಕೋರ್ಟ್ವರೆಗೆ ಹಿಜಬ್ ವಿವಾದ ಮುಟ್ಟಿತ್ತು. ವಾದ
ಪ್ರತಿವಾದಗಳು ನಡೆದವು. ಆದರೂ ಹಿಜಬ್ ವಿವಾದಕ್ಕೆ ಅಂತ್ಯ ಸಿಗಲಿಲ್ಲ. ವಿದ್ಯಾರ್ಥಿಗಳು
ಪ್ರತಿಭಟನೆ ಬಿಡಲಿಲ್ಲ.



 



ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ
ಮುಸ್ಲಿಮರಿಗೆ ಸಾಕಷ್ಟು ಸ್ವಾತಂತ್ರ‍್ಯಗಳಿವೆ. ಇಂಥಾ ಸ್ವಾತಂತ್ರ‍್ಯಗಳು ಮುಸ್ಲಿಮರೇ
ಬಹುಸಂಖ್ಯಾತರಿರುವ ದೇಶಗಳಲ್ಲೂ ಇಲ್ಲ ಎಂಬುದು ಗಮನಾರ್ಹ ವಿಷಯ.



 



ಅಫ್ಘಾನಿಸ್ತಾನದಲ್ಲಿ ಮುಸ್ಲಿಮರೇ ಹೆಚ್ಚಾಗಿದ್ದಾರೆ. ಅಲ್ಲಿ
ತಾಲಿಬಾನಿಗಳ ಸರ್ಕಾರವೇ ಇದೆ. ಆದರೆ ಮಹಿಳೆಯರ ಸ್ವಾತಂತ್ರ‍್ಯ ಕಿತ್ತುಕೊಳ್ಳಲಾಗಿದೆ. ಮಹಿಳೆಯರಿಗೆ
ಶಿಕ್ಷಣವನ್ನು ನಿರ್ಬಂಧಿಸಲಾಗಿದೆ. ಹಿಜಬ್ ಮತ್ತು ಬುರ್ಖಾದೊಳಗೆ ಮಹಿಳೆಯನ್ನ ಬಂಧಿಸಿಡಲಾಗಿದೆ.  ಮಹಿಳೆಯರು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವುದನ್ನೂ
ನಿಷೇಧಿಸಿದೆ. ಮುಖ ಕಾಣುವಂತೆ ಬಟ್ಟೆ ಧರಿಸಿದರೆ ಶರಿಯಾ ಕಾನೂನಿನ ಮೂಲಕ ಶಿಕ್ಷಿಸಲಾಗುತ್ತದೆ.
ಅತ್ಯಂತ ಕಠಿಣ ರೀತಿಯಲ್ಲಿ ಮತ್ತು ಅಷ್ಟೇ ಕ್ರೌರ್ಯತೆಯಿಂದ ಮಹಿಳೆಯನ್ನು ಹೊಡೆದು ಕೊಲ್ಲುವ
ಕಾನೂನು ಅಫ್ಘಾನಿಸ್ತಾನದಲ್ಲಿದೆ.



 



ಪಾಕಿಸ್ತಾನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದರೂ, ಸೇನೆಯ
ಆಡಳಿತ ಜಾರಿಯಲ್ಲಿದೆ. ಶರಿಯಾ ಕಾನೂನು ಅಲ್ಲಿ ಅಪ್ಲೈ ಆಗುತ್ತೆ. ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ
ನಿರ್ಬಂಧ ಸಡಿಲತೆ ಇದ್ದಂತೆ ಕಂಡರೂ, ಮೇಲ್ವರ್ಗದವರಿಗೆ ಮಾತ್ರ ಅನ್ವಯವಾಗುತ್ತದೆ. ಮಧ್ಯಮ ಮತ್ತು ಕೆಳವರ್ಗದ
ಮಹಿಳೆಯರು ಇಸ್ಲಾಮಿನಂತೆ ನಡೆದುಕೊಳ್ಳದಿದ್ದರೆ ಶಿಕ್ಷೆ ತಪ್ಪಿದ್ದಲ್ಲ. ಪುರುಷರ ಮಾತಿಗೆ ವಿರೋಧ
ವ್ಯಕ್ತಪಡಿಸುವಂತಿಲ್ಲ. ಪರ ಪುರುಷನನ್ನು ಕಣ್ಣೆತ್ತಿ ನೋಡುವಂತೆ ಇಲ್ಲ. ನೋಡಿದರೆ ಜೀವವನ್ನೇ
ತೆಗೆಯಲಾಗುತ್ತದೆ.



 



ಸೌದಿ ಅರೇಬಿಯಾ, ಯುನೈಟೆಡ್ ಎಮಿರೈಟ್ಸ್‌, ಬಾಂಗ್ಲಾದೇಶದಲ್ಲೂ
ಮಹಿಳೆಯರಿಗೆ ಸಾಕಷ್ಟು ನಿರ್ಬಂಧಗಳಿವೆ. ಮುಖ ಕಾಣುವಂತೆ ಬಟ್ಟೆ ಧರಿಸುವಂತಿಲ್ಲ. ಹೊರಗೆ ಹೋಗಬೇಕೆಂದರೂ,
ಪುರುಷ ಜೊತೆಗಿರಬೇಕು. ಪರಪುರುಷನ ಜೊತೆ ಕಾಣಿಸಿಕೊಂಡರೆ ಜೀವವನ್ನೇ ತೆಗೆಯುವಂಥಾ ಕಠಿಣ ಶಿಕ್ಷೆ
ಇದೆ.



 



ಇರಾನ್, ಇರಾಕ್ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ
ಮಹಿಳೆಯರಿಗೆ ನಿರ್ಬಂಧಗಳಿವೆ. ಹಾಗೆ ನೋಡಿದರೆ ಭಾರತದಲ್ಲಿ ಮಹಿಳೆಯರಿಗೆ ಅನೇಕ ಸ್ವಾತಂತ್ರ‍್ಯಗಳನ್ನು
ನೀಡಲಾಗಿದೆ. ಮುಸ್ಲಿಮರೇ ಹೆಚ್ಚಾಗಿರುವ ದೇಶಗಳಲ್ಲೇ ಮುಸ್ಲಿಂ ಮಹಿಳೆಯರನ್ನ ನಿರ್ಬಂಧಿಸಲಾಗಿದೆ.
ಆದರೆ ಹಿಂದೂಗಳೇ ಹೆಚ್ಚಾಗಿರುವ ಭಾರತ ದೇಶದಲ್ಲಿ ಮುಸ್ಲಿಮರಿಗೆ ಅನೇಕ ಸ್ವಾತಂತ್ರ‍್ಯಗಳನ್ನು
ನೀಡಲಾಗಿದೆ. ಹೀಗಿದ್ದರು ಮುಸ್ಲಿಂ ವಿದ್ಯಾರ್ಥಿಗಳು ಹಿಜಬ್ ಧರಿಸುವ ವಿಚಾರದಲ್ಲಿ ಹೋರಾಟ
ಆರಂಭಿಸಿದ್ದು, ಶಾಂತಿಯುತ ದೇಶದಲ್ಲಿ ತಲ್ಲಣ ಸೃಷ್ಟಿ ಮಾಡಿದೆ.



 



ಬಾಂಗ್ಲಾದೇಶದಲ್ಲಿ ಮುಸ್ಲಿಮರು ಬುರ್ಖಾ ಹಾಕುವಂತಿಲ್ಲ. ಹಿಜಬ್
ಧರಿಸುವಂತಿಲ್ಲ. ಶ್ರೀಲಂಕಾದಲ್ಲೂ ಮುಸ್ಲಿಮರಿಗೆ ಬುರ್ಖಾ ಮತ್ತು ಹಿಜಬ್ ನಿಷೇಧವಿದೆ.
ಚೀನಾದಲ್ಲಿಯೂ ಮುಸ್ಲಿಮರಿಗೆ ಅನೇಕ ನಿರ್ಬಂಧ ಹೇರಲಾಗಿದೆ. ಮುಸ್ಲಿಂ ಮಹಿಳೆಯರು ಬುಖಾ
ಹಾಕುವಂತಿಲ್ಲ. ಹಿಜಬ್ ಧರಿಸುವಂತಿಲ್ಲ. ಮುಸ್ಲಿಂ ಪುರುಷರು ಟೋಪಿಯನ್ನೂ ಹಾಕುವಂತಿಲ್ಲ. ಹೀಗೆ
ಜಗತ್ತಿನಾದ್ಯಂತ ಮುಸ್ಲಿಮರಿಗೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಆದರೆ ಭಾರತದಲ್ಲಿ ಎಲ್ಲರಿಗೂ
ಸಮಾನ ಹಕ್ಕುಗಳನ್ನು ನೀಡಲಾಗಿದೆ. ಇಷ್ಟಿದ್ದರೂ ಭಾರತದಂಥಾ ಭಾವೈಕ್ಯತೆಯ ದೇಶದಲ್ಲಿ ಕರ್ನಾಟಕ
ರಾಜ್ಯದಲ್ಲಿ ಹಿಜಬ್ ವಿಚಾರಕ್ಕಾಗಿ ಹೋರಾಟ ನಡೆಯುತ್ತಿದೆ.



 



ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ೬ ವಿದ್ಯಾರ್ಥಿಗಳಿಂದ ಹಿಜಬ್
ಪ್ರತಿಭನೆ ಆರಂಭವಾಯಿತು. ಆದರೆ ಇದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿರೋದನ್ನು ನೋಡುತ್ತಿದ್ದರೆ.
ಇದರ ಹಿಂದೆ ನಿಗೂಢ ವ್ಯಕ್ತಿಗಳು ಇದ್ದಾರೆ. ೬ ಮಂದಿ ವಿದ್ಯಾರ್ಥಿಗಳಿಗೆ ಕೋಮುಪ್ರಚೋದನೆ ನೀಡುವ
ಮೂಲಕ ಧಾರ್ಮಿಕ ಶಾಂತಿಯನ್ನು ಕದಡುತ್ತಿದ್ದಾರೆ ಎಂದು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರದ ಮಂತ್ರಿಗಳು
ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ೬ ವಿದ್ಯಾರ್ಥಿಗಳ ಹೋರಾಟದ ಹಿಂದಿನ ಸಂಚು
ಎಂಥದ್ದು ಮತ್ತು ಇವರ ಹಿಂದಿರೋ ಕಾಣದ ಕೈಗಳು ಭಾರತದಂಥಾ ದೇಶದಲ್ಲಿ ಕೋಮು ಸೌಹಾರ್ದತೆ ಕದಡಿದ್ದು
ಹೇಗೆ ಎಂಬುದನ್ನು ತನಿಖೆಯಿಂದ ಗೊತ್ತಾಗಬೇಕಿದೆ.

 



#karnataka news #karnataka
hijab news #hijab
karnataka #Hijab
controversy #Karnataka
CM



 #karnatakanews #karnatakahijabnews #hijabkarnataka #Hijabcontroversy #KarnatakaCM
#hijabnewskarnataka



Отправить комментарий

0 Комментарии