ಕಾಡಿನ ಕ್ರೂರ ಪ್ರಾಣಿಗಳು ಅವನನ್ನು ಸುತ್ತುವರಿಯ ತೊಡಗಿದವು.
ಭಯಗ್ರಸ್ತನಾದ ಬೇಡ ಪಕ್ಕದಲ್ಲೇ ಇದ್ದ ಮರವನ್ನು ಏರಿ ಕೂತುಬಿಟ್ಟ.. ರಾತ್ರಿ ಎಲ್ಲಾ ಎಚ್ಚರವಿದ್ದ...
ಬೇಸರವಾಗಿ ಮರದ ಎಲೆಗಳನ್ನು ಒಂದೊಂದೇ ಕಿತ್ತು ಕಿತ್ತು
ಕೆಳಗೆ ಬಿಸಾಕ್ತಾ ಇದ್ದ.. ಅವನು
ಬಿಸಾಕಿದ ಎಲೆಗಳು ಅವನಿಗೆ ತಿಳೀದೇ ಕೆಳಗಿದ್ದ ಶಿವಲಿಂಗದ ಮೇಲೆ ಬೀಳ್ತಾ ಇದ್ದವು..
ಇನ್ನು ಒಂದು ವಿಚಿತ್ರ ಅಂದ್ರೆ ಆ ಬೇಡ ಏರಿದ್ದ ಮರ "ಬಿಲ್ವಮರ" ಆಗಿತ್ತು.. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು
ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಕಾಡು ಪ್ರಾಣಿಗಳಿಂದ ರಕ್ಷಿಸಿದ..
ಅಷ್ಟೆ ಅಲ್ಲ ಪುಣ್ಯದ ಫಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದನೆಂದು ಪ್ರತೀತಿ ಇದೆ.. ಮಹಾಭಾರತದಲ್ಲಿ ಬರುವ ಈ
ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದ ಅಂತ ನಂಬಲಾಗಿದೆ.
0 Комментарии