Hot Posts

10/recent/ticker-posts

ಶಿವ ಪುರಾಣ - ೩ - ಬೇಡರ ಕಣ್ಣಪ್ಪನ ಕಥೆ




“ಕಾಳ”
ಅನ್ನುವಂಥ ಬೇಡನಿಗೆ ಅದೊಂದು ದಿನ ಬೇಟೆಯೇ ಸಿಕ್ಕಿರಲಿಲ್ಲ...  ಎಲ್ಲಾಕಡೆ ಸುತ್ತಾಡಿ ಸುತ್ತಾಡಿ ಸುಸ್ತಾಗಿ, ಕೊನೆಗೆ
ಶಿವಲಿಂಗದ ಬಳಿ ಕುಳಿತುಬಿಟ್ಟ.. ಅಷ್ಟರಲ್ಲಿ ಬೇಟೆಯೊಂದು ಕಾಣಿಸಿಕೊಂಡಿತು..




ಶಿವನ ಮಹಿಮೆಯಿಂದಾನೇ
 ಬೇಟೆ ಸಿಕ್ಕಿತು ಅಂತ  ಆವತ್ತಿಂದ ಅವನು ಶಿವ ಭಕ್ತನಾದ..  ತಾನು ಕೊಂದ ಪ್ರಾಣಿಗಳ ಹಸಿ ಮಾಂಸವನ್ನು ದೇವರಿಗೆ
ನೈವೇದ್ಯ ಮಾಡುತ್ತಿದ್ದ. ಬಾಯಲ್ಲಿ ನೀರನ್ನು ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ. 




ಶಿವನಿಗೆ
ಕಾಳನ ಭಕ್ತಿಯನ್ನು ಪರೀಕ್ಷಿಸಬೇಕೆಂದು ಮನಸ್ಸಾಯಿತು.. ಲಿಂಗದಲ್ಲಿ ಎರಡು ಕಣ್ಣುಗಳನ್ನು ಮೂಡಿಸಿ
, ಅದರಿಂದ ರಕ್ತ ಬರುವಂತೆ ಮಾಡಿದ. ಇದನ್ನು
ಕಂಡ ಕಾಳ ತನ್ನ ಕಣ್ಣನ್ನೇ ಕಿತ್ತು ಶಿವನಿಗೆ ಅರ್ಪಿಸಿದನಂತೆ. ಕಾಲ ನೆಂಬ ಬೇಡ ಶಿವವನ್ನು
ಪೂಜಿಸಿದ್ದರಿಂದ ಶಿವನು ಕಾಳಹಸ್ತೀಶ್ವರನಾದ... ಆ ಪ್ರದೇಶವೇ ಇಂದಿನ ಕಾಳಹಸ್ತಿ ಎಂಬುದಾಗಿ
ಪ್ರಸಿದ್ಧಿಯಾಯಿತು.

Отправить комментарий

0 Комментарии