Hot Posts

10/recent/ticker-posts

ಗಾಂಧಿ ಸತ್ತಾಗ ವ್ಯಾಟಿಕನ್‌ ಸಿಟಿಯ ಕ್ರೈಸ್ತರು ಕಣ್ಣೀರಿಟ್ಟಿದ್ದರು






ಗುಜರಾತ್‌ : ಮಹಾತ್ಮಾ ಗಾಂಧಿ.. ನಾಯಕತ್ವದ
ಹೆಸರಿಗೆ ಒಂದು ದಿಟ್ಟ ದಂತಕಥೆಯಾಗಿ ನಿಂತ ರಾಷ್ಟ್ರಪಿತ. ಮಾಧ್ಯಮಗಳು  ತೀಕ್ಷ್ಣವಾಗಿರದ ಕಾಲದಲ್ಲಿ ಇಡೀ ದೇಶದ ಜನರನ್ನು
ಬಡಿದೆಬ್ಬಿಸಿ ಹೋರಾಟಕ್ಕೆ ಕರೆ ಕೊಟ್ಟ ಅಹಿಂಸಾವಾದಿ. ಇಂದು ಗಾಂಧಿ ಜಯಂತಿ.
1869 ರಲ್ಲಿ ಪೋರ್‌ ಬಂದರ್‌ನಲ್ಲಿ ಜನಸಿದ ಪುಟ್ಟ ಬಾಲಕ ದೇಶದ ದಿಕ್ಕನ್ನೇ ಬದಲಿಸುವ
ಮಹಾತ್ಮನಾಗುತ್ತಾನೆ ಎಂದು ಯಾರೂ ನಂಬಿರಲಿಲ್ಲ.










ಕೆಲವೊಂದು ಜನರು ಮಹಾತ್ಮಾ ಗಾಂಧೀಜಿಯವರ
ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಸತ್ಯ ಶಾಂತಿ ಎಂದು ಬ್ರಿಟೀಷರ ಎದುರು ಕೈಕಟ್ಟಿ
ಕುಳಿತುಕೊಳ್ಳುವ ಬದಲು ಹಿಂಸೆಯಿಂದ ಬ್ರಿಟೀಷರ ವಿರುದ್ಧ ತಿರುಗಿಬಿದ್ದಿದ್ದರೆ
, ನಮಗೆ ಎಂದೋ ಸ್ವಾತಂತ್ರ‍್ಯ ಸಿಕ್ಕಿ ಬಿಡುತ್ತಿತ್ತು ಎಂದು ಬಹಳಷ್ಟು ಜನರ ವಾದ.





ಆದ್ರೆ ನನ್ನದೊಂದು ಪ್ರೆಶ್ನೆ. ಹಿಂಸೆಯಿಂದ,
ಯುದ್ಧದಿಂದ ನಾವು ಎಲ್ಲವನ್ನೂ ಪಡೆಯುವಂತಿದ್ದರೆ,
1857 ರಲ್ಲಿಯೇ ನಾವು ಸ್ವಾತಂತ್ರ‍್ಯವನ್ನು
ಪಡೆಯುತ್ತಿದ್ದೆವು. ಆಗಲೂ ಕೂಡ ದಿಟ್ಟ ಎದೆಗಾರಿಕೆಯ ಹೋರಾಟಗಾರರಾದ ಮಂಗಲ್ ಪಾಂಡೆ ಸೇರಿದಂತೆ
ಬಂದೂಕುಗಳಿಂದ ಬ್ರಿಟೀಷರ ಎದೆ ಸೀಳಬಲ್ಲ ಸೈನಿಕರಿದ್ದರು.





ಅವರೆಲ್ಲರ ಕಿಚ್ಚಿನ ಹೋರಾಟ ಬ್ರಿಟೀಷರಲ್ಲಿ
ನಡುಕ ಹುಟ್ಟಿಸಿದ್ದೂ ಸುಳ್ಳಲ್ಲ. ಆದ್ರೆ ವಿಪರ್ಯಾಸವೆಂದರೆ ಆ ದಂಗೆ ವಿಫಲವಾಯಿತು. ಯಾಕೆ ಗೊತ್ತಾ
?
ಅಲ್ಲಿ ಉತ್ತಮ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು
ಎಂದು ಇತಿಹಾಸ ಹೇಳುತ್ತದೆ. ಆದ್ರೆ ಆ ದಿಟ್ಟ ನಾಯಕತ್ವವನ್ನು ಕೊಟ್ಟವರು ಗಾಂಧೀಜಿ. ಕೋಟಿ ಕೋಟಿ
ಭಾರತೀಯರನ್ನು ತಮ್ಮ ವ್ಯಕ್ತಿತ್ವ ಮತ್ತು ಹೋರಾಟದ ಬದುಕಿನಿಂದ ಸೆಳೆದಿಟ್ಟುಕೊಂಡಿದ್ದ ದೇಶ ಕಂಡ
ಅಪ್ರತಿಮ ನಾಯಕ ಮಹಾತ್ಮಾ ಗಾಂಧೀಜಿ.





ಸುಭಾಷ್‌ಚಂದ್ರಬೋಸ್‌ ಕೂಡ
ಮಹಾತ್ಮಾಗಾಂಧೀಜಿಯವರ ಹೋರಾಟದಿಂದ ಪ್ರೇರೇಪಿತಗೊಂಡು ಚುನಾವಣೆಯಲ್ಲಿ ಧುಮುಕಿದರು. ಅದರೆ
ನಂತರದಲ್ಲಿ ಅವರು ತೀವ್ರಗಾಮಿಗಳಾಗಿ ಬದಲಾಗಿ ತಮ್ಮದೇ ರೀತಿಯ ಹೋರಾಟದ ಮೂಲಕ ಭಾರತದ ಸ್ವಾತಂತ್ರ‍್ಯಕ್ಕಾಗಿ
ಪಣ ತೊಟ್ಟರು.





ಗಾಂಧೀಜಿ, ಸುಭಾಷ್‌ಚಂದ್ರಬೋಸ್‌, ಭಗತ್‌ ಸಿಂಗ್‌ ಎಲ್ಲರ ಹೋರಾಟದ ಅಂತಿಮ ಗುರಿ
ಒಂದೇ ಆಗಿತ್ತು. ಅದೇ ಭಾರತವನ್ನು ಬ್ರಿಟೀಷರಿಂದ ಬಂಧ ಮುಕ್ತಗೊಳಿಸುವುದು. ಇದಕ್ಕಾಗಿ ಸುಭಾಷ್‌ಚಂದ್ರಬೋಸ್‌
ಮತ್ತು ಭಗತ್‌ಸಿಂಗ್‌ ಬ್ರಿಟೀಷರೊಂದಿಗೆ ಯಾವುದೇ ರಾಜಿಯಾಗದೇ ಅಂತಿಮ ಕ್ಷಣದವರೆಗೂ
ಸ್ವಾಭಿಮಾನದಿಂದ ಹೋರಾಡಿ ವೀರ ಮರಣವನ್ನಪ್ಪಿದರು.





ಅಂತಿಮವಾಗಿ ಸ್ವಾತಂತ್ರ‍್ಯವನ್ನು ಭಾರತೀಯರ
ಕೈಗೆ ಇಟ್ಟವರು ಮಹಾತ್ಮ ಗಾಂಧೀಜಿ. ಆ ಸ್ವಾತಂತ್ರ‍್ಯದಲ್ಲಿ ಸುಭಾಷ್‌ಚಂದ್ರಬೋಸ್‌ ಅವರಂಥ
ಹೋರಾಟಗಾರರ ತ್ಯಾಗ ಬಲಿದಾನ ಇದೆ ಎಂಬುದನ್ನು ಯಾವೊಬ್ಬ ಭಾರತೀಯನೂ ಮರೆಯುವಂತಿಲ್ಲ.








ಗಾಂಧಿಜಿಗೆ ಶಾಂತಿ ಮತ್ತು ಅಹಿಂಸೆಯ ಪಾಠ
ಕಲಿಸಿದವರು ಯಾರು
?





ಸಾಕಷ್ಟು ಅವಮಾನಗಳನ್ನು ಮೆಟ್ಟಿ ನಿಂತ ಸಾಧು
ಸಂತನಿಗೆ ಜಗತ್ತೇ ಇಂದು ಸಲಾಂ ಹೊಡೆಯುತ್ತಿದೆ. ಶಾಂತಿಯನ್ನು ಹುಟ್ಟು ಹಾಕಿ ಜಗತ್ತಿಗೆ ಶಾಂತಿಯ
ಪಾಠ ಕಲಿಸಿದವರು ಮೋಹನ್‌ ದಾಸ್‌ ಕರಮ್‌ ಚಂದ್‌ ಗಾಂಧಿ.





ಕ್ರಿಶ್ಚಿಯನ್‌ ಕ್ಕೆ ಸೇರುವಂತೆ ಗಾಂಧೀಜಿಗೆ
ಒತ್ತಾಯ ಮಾಡಲಾಗಿತ್ತು.!





ಗಾಂಧೀಜಿಯವರಿಗೆ ಅನೇಕ ಕ್ರಿಶ್ಚಿಯನ್
ಮಿತ್ರರು ಇದ್ದರು. ಹೀಗಾಗಿ ಕ್ರಿಶ್ಚಿಯಯನ್ ಧರ್ಮದಲ್ಲಿ ಅನೇಕ ಉತ್ತಮ ಆದರ್ಶ ಗುಣಗಳಿವೆ ಎಂದು
ಹೇಳಿ
, ಕ್ರಿಶ್ಚಿಯನ್ ಧರ್ಮಕ್ಕೆ ಸೇರಲು ಗಾಂಧೀಜೀ ಯವರನ್ನು
ಒತ್ತಾಯಿಸಿದರು. ಆಗ ಗಾಂಧೀಜೀಯವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರುವ ಮೊದಲು ನಾನು ಈಗಿರುವ
ಹಿಂದೂಧರ್ಮದಲ್ಲಿ ಏನಾದರೂ ಕೊರತೆ ಇದೆಯೇ ಎಂಬುದನ್ನು ಗಾಂಧಿಜಿ ಗುರುಗಳಾದ ಶ್ರೀ ರಾಜಚಂದ
ಭಾಯಿಯವರನ್ನು ಕೇಳಿದರು. ಆದರೆ ಗಾಂಧೀಜಿಯವರ ಎಲ್ಲಾ ಅನುಮಾನಗಳನ್ನು ತೊಡೆದು ಹಾಕಿದ ಗುರುಗಳು
ಗಾಂಧಿಜಿಯವರನ್ನು ಹಿಂದೂಧರ್ಮದಲ್ಲಿರುವಂತೆ ಸೂಚನೆ ನೀಡಿದರು. ಜೊತೆಗೆ ಇತರೇ ಧರ್ಮಗಳನ್ನೂ ಅಷ್ಟೆ
ಗೌರವದಿಂದ ಕಾಣಬೇಕು ಮತ್ತು ಸಾಧ್ಯವಾದರೆ ಅವುಗಳಲ್ಲಿನ ಉತ್ತಮ ತತ್ವಗಳನ್ನು ಮತ್ತು ನೀತಿಗಳನ್ನು
ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರಂತೆ.








ಗಾಂಧಿ ಮಹಾತ್ಮನಾಗಿದ್ದು ಹೇಗೆ ಗೊತ್ತಾ?
ಇಲ್ಲಿದೆ ಒಂದು ಉದಾಹರಣೆ.





ಒಮ್ಮೆ ಗಾಂಧೀಜಿಯವರ ಬಳಿಗೆ ಮಹಿಳೆಯೊಬ್ಬಳು
ಬಂದಳಂತೆ. ಬಾಪುಜಿ ನನ್ನ ಮಗಳು ಹೆಚ್ಚಾಗಿ ಬೆಲ್ಲವನ್ನು ತಿನ್ನುತ್ತಾಳೆ. ನೀವು ಹೇಗಾದರೂ ಮಾಡಿ
ಅವಳಿಗೆ ಬುದ್ದಿ ಹೇಳಿ. ಬೆಲ್ಲ ತಿನ್ನುವುದನ್ನು ನಿಲ್ಲಿಸುವಂತೆ ಮಾಡಿ ಎಂದು ಅಂಗಲಾಚಿದಳಂತೆ. ಆಗ
ಸ್ವಲ್ಪ ಯೋಚನೆ ಮಾಡಿದ ಮಹಾತ್ಮಾ ಗಾಂಧೀಜಿ "ನೀವು ಒಂದು ವಾರದ ನಂತರ ನಿಮ್ಮ ಮಗುವನ್ನು
ಕರೆದುಕೊಂಡು ಬನ್ನಿ ನೋಡೋಣ" ಎಂದು ಹೇಳಿ ಕಳಿಸಿದರಂತೆ.





ಒಂದು ವಾರದ ನಂತರ ಮಗುವನ್ನು ಕರೆದುಕೊಂಡು ಆ
ಮಹಿಳೆ ಮತ್ತೆ ಮಹಾತ್ಮಾ ಗಾಂಧಿಯವರ ಬಳಿಗೆ ಬಂದರಂತೆ. "ಬಾಪುಜಿ. ನೀವು ಹೇಳಿದಂತೆ ನನ್ನ
ಮಗುವನ್ನು ಕರೆದುಕೊಂಡು ಬಂದಿದ್ದೇನೆ. ಏನಾದರೂ ಪರಿಹಾರ ಹೇಳಿ ಎಂದು ಕೇಳಿದರಂತೆ.





ಇಲ್ಲ.. ನಿಮ್ಮ ಮಗು ಬೆಲ್ಲ ತಿನ್ನುವುದನ್ನು
ನನ್ನಿಂದ ಬಿಡಿಸಲು ಸಾಧ್ಯವಿಲ್ಲ. ಎಂದು ಹೇಳಿ ಸುಮ್ಮನಾಗಿಬಿಟ್ಟರಂತೆ. ಇತ್ತ ಮಹಿಳೆಗೆ ಅಚ್ಚರಿ.
ಅರೆ
, ಇದನ್ನು ಹೇಳಲು ಒಂದು ವಾರ ಬೇಕಿತ್ತಾ? ಎಂದು ಮಹಿಳೆ ಕೇಳಿದಳಂತೆ. ಆಗ ಮಹಾತ್ಮ ಹೇಳಿದ್ದೇನು ಗೊತ್ತಾ?





"ನೀವು ಬಂದು ಹೋದ ದಿನದಿಂದ ನಾನು ಬೆಲ್ಲ
ತಿನ್ನುವುದನ್ನು ಅಭ್ಯಾಸ ಮಾಡಿಕೊಂಡೆ. ಒಮ್ಮೆ ಅಭ್ಯಾಸವಾದ ಮೇಲೆ ಅದನ್ನು ಹೇಗೆ ಬಿಡುವುದು ಎಂದು
ಆಲೋಚಿಸಿ ಪ್ರಯತ್ನ ಕೂಡ ಮಾಡಿದೆ. ಆದ್ರೆ ಬೆಲ್ಲ ತಿನ್ನುವುದನ್ನು ಬಿಡಲು ಸಾಧ್ಯವಾಗಲೇ ಇಲ್ಲ.
ನಾನೇ ಬೆಲ್ಲ ತಿನ್ನುವುದನ್ನು ಬಿಡಲು ಸಾಧ್ಯವಾಗದೇ ಇರುವಾಗ
, ನಾನು ಆ ಮಗುವಿಗೆ ಹೇಗೆ ಬುದ್ದಿ ಹೇಳಲಿ? ಎಂದು ಕೇಳಿದರಂತೆ. ಹೀಗೆ ಮಹಾತ್ಮ ಎಲ್ಲವನ್ನೂ ತಮ್ಮ ಬದುಕಿನಲ್ಲಿ
ಅಳವಡಿಸಿಕೊಳ್ಳುತ್ತಿದ್ದರು. ಇಷ್ಟೋಂದು ಸರಳ ಸಜ್ಜನಿಕೆಯ ವ್ಯಕ್ತಿ ಮಹಾತ್ಮಾ ಗಾಂಧಿಜಿ.











ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ
ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದರು.





ಪುರಾತನ ಭಾರತೀಯ ಸತ್ಯವಂತ ರಾಜ ಹರಿಶ್ಚಂದ್ರನ
ಕಥೆ ಬಾಲಕರಾಗಿದ್ದ ಗಾಂಧಿಯವರ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಆ ಕಥೆ ಅವರ ಮನವನ್ನು ಪದೇಪದೇ
ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ
ಆತ್ಮಚತಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನನ್ನು ಕಾಡಿಸಿದ ಪರಿಣಾಮವಾಗಿ ನಾನೇ
ಸ್ವತಃ ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು
ಬರೆದುಕೊಂಡಿದ್ದಾರೆ.








ಬಾಲ್ಯ ವಿವಾಹವಾದ ಮಹಾತ್ಮ





13 ವರ್ಷದ ಮೋಹನ್‌ದಾಸ್‌ ಅವರು 14 ವರ್ಷದ ಕಸ್ತೂರಬಾಯಿ ಮಖಾಂಜಿ ಅವರನ್ನು ಮದುವೆಯಾದರು. 1885 ರಲ್ಲಿ, ಗಾಂಧಿಯವರು 15 ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು, ಆದರೆ ಆ ಮಗು ಕೆಲವೇ ದಿನಗಳಲ್ಲಿ ಅಸು ನೀಗಿತ್ತು. ಇನ್ನೊಂದು ವಿಪರ್ಯಾಸವೆಂದರೆ,
ಕರಮ್‌ಚಂದ್‌‌ ಗಾಂಧಿಯವರು ಕೂಡ ಅದೇ ವರ್ಷದ
ಆರಂಭದನಲ್ಲಿ ನಿಧನರಾಗಿದ್ದರು.





ಮೋಹನ್‌ದಾಸ್ ಮತ್ತು ಕಸ್ತೂರಬಾ ಇನ್ನೂ
ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ:
1888 ರಲ್ಲಿ ಜನಿಸಿದ ಹರಿಲಾಲ್‌; 1892 ರಲ್ಲಿ ಜನಿಸಿದ
ಮಣಿಲಾಲ್‌
; 1897ರಲ್ಲಿ ಜನಿಸಿದ ರಾಮ್‌ದಾಸ್‌; ಮತ್ತು 1900 ರಲ್ಲಿ ಜನಿಸಿದ ದೇವದಾಸ್‌.











ಮಾತು ತಪ್ಪದ ಗಾಂಧೀಜಿ ಹಸಿದ ಹೊಟ್ಟೆಯಲ್ಲಿ
ಬದುಕು ದೂಡಿದರು.





ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ
ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿದ ಗಾಂಧೀಜಿ
,  ನ್ಯಾಯವಾದಿಯಾಗಿ ತರಬೇತಿ ಪಡೆಯಲು ಲಂಡನ್‌ಗೆ
ಪ್ರಯಾಣಿಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ
, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು
ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದರು.
ಆದರೆ ವಿದೇಶದಲ್ಲಿ ಮಾಂಸಾಹಾರವೇ ಹೆಚ್ಚು ಪ್ರಸ್ತುತ. ಲಂಡನ್‌ನಲ್ಲಿ ಸಸ್ಯಾಹಾರ ಸಿಗದೇ ಇರುವಾಗ
ಬಹಳಷ್ಟು ದಿನಗಳ ಕಾಲ ಹಸಿದ ಹೊಟ್ಟೆಯಲ್ಲೇ ಬದುಕು ದೂಡಿದ ನಿಷ್ಟಾವಂತ ಗಾಂಧೀಜಿ.





ಹಲವು ಹೊಟೇಲುಗಳಲ್ಲಿ ಮಹಾತ್ಮಾ
ಗಾಂಧೀಜಿಯವರಿಗೆ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು
ಎದುರಿಸಬೇಕಾಯಿತು.








ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೇಲೆ ಹಲ್ಲೆ.





ಗಾಂಧಿಜಿ ದ.ಆಫ್ರಿಕಾದ ರೈಲಿನಲ್ಲಿ ಪ್ರಥಮ
ದರ್ಜೆಯ ಚೀಟಿಯನ್ನು ಪಡೆದು ಪ್ರಯಾಣಿಸುತ್ತಿದ್ದರೂ
, ಅಲ್ಲಿನವರು ಪೀಟರ್‌ಮೆರಿಟ್ಜ್‌ಬರ್ಗ್‌ ಎಂಬಲ್ಲಿ ಗಾಂಧಿಜಿವರನ್ನು ಪ್ರಥಮ ದರ್ಜೆಯ
ಡಬ್ಬಿಯಿಂದ ಬಲವಂತವಾಗಿ ಕೆಳಗಿಳಿಸಿದರು.


ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ
ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ
, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು
ಗಾಂಧಿಯವರ ಮೇಲೆ ಹಲ್ಲೆ ಕೂಡ ನಡೆಸಿದ.





ಅಷ್ಟೇ ಅಲ್ಲ ಜನವರಿ 1897 ರಲ್ಲಿ ಗಾಂಧಿಯವರು ಡರ್ಬನ್‌ಗೆ ಆಗಮಿಸಿದಾಗ, ಅಲ್ಲಿನ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು.





1906 ರಲ್ಲಿ ಮೊಟ್ಟ ಮೊದಲಬಾರಿಗೆ ಗಾಂಧಿಯವರು
ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಅಳವಡಿಸಿಕೊಂಡರು. ಇದರಿಂದ ಜೈಲು ಕೂಡ ಸೇರಿದರು
ಗಾಂಧಿಜಿ.













ಮಹಾತ್ಮನ ಶಕ್ತಿ ಎಂಥದ್ದು ಎಂಬುದು ನಿಮಗೆ
ಗೊತ್ತಾ
?





ಗಾಂಧೀಜೀ ಅವರ ನಿರ್ಭಯತೆ, ಅಗಾಧ ಆತ್ಮ ಶಕ್ತಿ, ಅಸಾಧಾರಣ ಸಂಕಲ್ಪ ಶಕ್ತಿಗಳು ಈ ಆಧ್ಯಾತ್ಮ
ಸಾಧನೆಯ ಫಲ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಜೀವಿತ ಕಾಲದಲ್ಲಿಯೇ ಭಾರತದ ಅಂದಿನ ನಲವತ್ತು
ಕೋಟಿ ಜನರ
, ವಿದ್ಯಾವಂತರ, ಅವಿದ್ಯಾವಂತರ, ಹೆಂಗಸರ,ಮಕ್ಕಳ, ಹೃದಯವನ್ನು ತಟ್ಟಿದ, ಮಿಡಿದ ವ್ಯಕ್ತಿ ಮಹಾತ್ಮಾ ಗಾಂಧೀಜಿ.





ಇಂಥವರು ಜಗತ್ತಿನ ಇತಿಹಾಸದಲ್ಲಿ ಸಿಗಲಾರರು;
ಮುಂದೆ ಸಿಗುವರೆಂಬ ಭರವಸೆಯೂ ಇಲ್ಲ ಎಂದು ಮಹಾಯೋಗಿ
ಪರಮಹಂಸ ಯೋಗಾನಂದರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.





 


ಅರವಳಿಕೆ ಮದ್ದು ಇಲ್ಲದೆಯೇ ಗಾಂಧಿಜಿ
ಆಪರೇಷನ್‌ ಮಾಡಿಸಿಕೊಂಡ ದಿಟ್ಟ ಮನಸ್ತಿತಿಯವರು.





ಗಾಂಧೀಜಿಯವರು ತಮ್ಮ ಅಪೆಂಡಿಸೈಟಿಸ್ ಆಪರೇಶನ್
ಸಮಯದಲ್ಲಿ ಅರವಳಿಕೆ ಅಂದ್ರೆ ಅನಿಸ್ತೀಶಿಯವನ್ನು ತೆಗೆದುಕೊಳ್ಳದೆ
, ಅದೇ ಸಮಯದಲ್ಲಿ ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದರು. ಇಂತಹ ಏಕಾಗ್ರಚಿತ್ತ
ಮನಸ್ತಿತಿಯ ವ್ಯಕ್ತಿ ಹಿಂದೆಂದೂ ಸಿಕ್ಕಿಲ್ಲ. ಮತ್ತು ಮುಂದೆಯೂ ಇಂತಹ ವ್ಯಕ್ತಿ ಜನಿಸುತ್ತಾನೆಂದು
ಊಹಿಸಲೂ ಸಾಧ್ಯವಿಲ್ಲ ಎಂದು  ಪರಮಹಂಸ ಯೋಗಾನಂದರು
ಉದಾಹರಿಸಿದ್ದಾರೆ.








ಗಾಂಧಿ ಸತ್ತಾಗ ಕ್ರೈಸ್ತರು ಕಣ್ಣೀರಿಟ್ಟರು.





ಮಹಾತ್ಮಾ ಗಾಂಧೀಜಿಯವರನ್ನು ನಾಥೋರಾಮ್‌
ಗೋಡ್ಸೆ ಗುಂಡಿಕ್ಕಿ ಕೊಲೆ ಮಾಡಿದಾಗ
, ವ್ಯಾಟಿಕನ್ ಸಿಟಿಯ ಪೋಪರು ತಾವು ಒಬ್ಬ
ಕ್ರೈಸ್ತ ಸಂತನನ್ನು ಕಳೆದುಕೋಡಷ್ಟೇ ದುಃಖವಾಗಿದೆ ಎಂದರು.








ವಿಜ್ಞಾನಿ ಐನ್‌ ಸ್ಟೈನ್‌ ಗಾಂಧಿ
ವ್ಯಕ್ತಿತ್ವದ ಬಗ್ಗೆ ಏನ್ ಹೇಳಿದ್ರು
ಗೊತ್ತಾ
?





ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿನ್ ಅವರು
ಗಾಂಧಿಜಿಯವರ ಬಗ್ಗೆ ಅಪಾರವಾಗಿ ತಿಳಿದಿದ್ದರು. ಮಹಾತ್ಮಾ ಗಾಂಧೀಜಿಯವರು ಹತ್ಯೆಯಾದ ಸಮಯದಲ್ಲಿ
"ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು
ಶತಮಾನಗಳ ನಂತರ ಮುಂದಿನ ಪೀಳಿಗೆಯ ಜನರು ನಂಬುವುದೇ ಕಷ್ಟವಾಗಬಹುದು" ಎಂದರು. ಈ ಒಂದು ಮಾತೇ
ಸಾಕು ಮಹಾತ್ಮನ ವ್ಯಕ್ತಿತ್ವದ ಬಗ್ಗೆ ತಿಳಿಸಲು.





ಇಂತಹ ಮಹಾನ್‌ ಹೋರಾಟಗಾರನ ಹೆಸರಿನಲ್ಲಿ ಇದೀಗ
ನೋಬೆಲ್‌ ಪ್ರಶಸ್ತಿಯನ್ನೂ ನೀಡಲಾಗುತ್ತದೆ.









ಮಹಾತ್ಮಾಗಾಂಧಿಯವರ ಶಾಂತಿ ಮತ್ತು ಅಹಿಂಸೆಯನ್ನು
ವಿಶ್ವಸಂಸ್ಥೆ ಕೂಡ ಅಳವಡಿಸಿಕೊಂಡಿದ್ದು, ಗಾಂಧೀಜಿಯವರ ಜನ್ಮ ದಿನವನ್ನು ಅಂತರ್‌
ರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಇದು ಮಹಾತ್ಮಾ ಗಾಂಧೀಜೀಯವರಿಗೆ ವಿಶ್ವಸಂಸ್ಥೆ
ನೀಡಿದ ಗೌರವ.








ಇಂತಹ ಮಹಾನ್‌ ಚೇತನ, ಅಹಿಂಸಾವಾದಿ, ಮಹಾತ್ಮಾ ಗಾಂಧೀಜಿಯವರು ಭಾರತದ ಭೂಮಿಯಲ್ಲಿ
ಹೆಜ್ಜೆ ಇಟ್ಟು ಬದುಕಿದ್ದರು ಎಂದು ಹೇಳಿಕೊಳ್ಳುವುದು ಭಾರತೀಯರಾದ ನಮೆಗಲ್ಲರಿಗೂ ಹೆಮ್ಮೆಯಲ್ಲವೇ
?


Отправить комментарий

0 Комментарии