Hot Posts

10/recent/ticker-posts

ಫೇಸ್‌ಬುಕ್, ಟ್ವಿಟ್ಟರ್‌‌ ಕಲಿಯಲು ಮುಗಿ ಬೀಳುತ್ತಿರುವ ರಾಜಕಾರಣಿಗಳು.











ನವದೆಹಲಿ
: ಫೇಸ್‌‌ಬುಕ್ ಮತ್ತು ಟ್ವಿಟ್ಟರ್
ಗಳು ಸೇರಿದಂತೆ ಸಾಮಾಜಿಕ ತಾಣಗಳನ್ನು ಸಮರ್ಪಕವಾಗಿ
ಬಳಸಿಕೊಳ್ಳುವಂತೆ ಕೇಂದ್ರದ ಎರಡೂ ಪಕ್ಷದ
ನಾಯಕರುಗಳು ಚಿಂತಿಸುತ್ತಿದ್ದಾರೆ. 2014 ಲೋಕಸಭಾ ಉಪಚುನಾವಣೆ ಸಮೀಪಿಸುತ್ತಿದ್ದಂತೆ,
ಪ್ರಚಾರದ ಕಾವನ್ನು ಹೆಚ್ಚಿಸಿರುವ ರಾಷ್ಟ್ರೀಯ
ಪಕ್ಷಗಳು ಪ್ರಚಾರಕ್ಕೆ ಉಪಯುಕ್ತವಾಗುವ ಎಲ್ಲಾ ಮೂಲಗಳನ್ನು ಸಂಪೂರ್ಣವಾಗಿ
ಬಳಸಿಕೊಳ್ಳುವಂತೆ ಕರೆ ನೀಡಿವೆ.


2009 ರಲ್ಲಿ
ಚುನಾವಣೆಯಲ್ಲಿ ಸೋಲುಂಡ ಬಿಜೆಪಿ ಅಂದಿನಿಂದ
ಸಾಮಾಜಿಕ ತಾಣಗಳನ್ನು ಸಮರ್ಪಕವಗಿ ಬಳಸಿಕೊಳ್ಳುತ್ತಿದೆ. ಬಿಜೆಪಿಯ ಕೇಂದ್ರ ಹಾಗೂ
ರಾಜ್ಯದ ಬಹಳಷ್ಟು ನಾಯಕರು ಈಗಾಗಲೇ
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಆದಾಗ್ಯೂ ಇನ್ನು ಮುಂದೆ
ಇನ್ನಷ್ಟು ಹೆಚ್ಚು ಒತ್ತುಕೊಡುವಂತೆ ರಾಷ್ಟ್ರೀಯ
ನಾಯಕರು ಸೂಚನೆ ನೀಡಿದ್ದಾರೆ.





"ಸಾಮಾಜಿಕ
ಜಾಲತಾಣಗಳು ಮತದಾರರನ್ನು ಸೆಳೆಯುವ ಏಕೈಕ ಪ್ರಮುಖ
ತಾಣ. ಹೀಗಾಗಿ ಮತದಾರನಿಗೆ ಇನ್ನಷ್ಟು
ಹತ್ತಿರವಾಗಿ ನಮ್ಮ ಪಕ್ಷದತ್ತ ಸೆಳೆಯಲು
ಸಾಮಾಜಿಕ ಜಾಲ ತಾಣಗಳು ಅಗತ್ಯವಾಗಿದ್ದು
ಅವುಗಳನ್ನು ಸಮರ್ಪಕವಗಿ ಬಳಸಿಕೊಳ್ಳಬೇಕು" ಎಂದು ರಾಷ್ಟ್ರೀಯ ಬಿಜೆಪಿ
ನಾಯಕರು ತಮ್ಮ ಪಕ್ಷದ ಕಾರ್ಯಕರ್ತರು
ಮತ್ತು ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ.





ಬಿಜೆಪಿ
ಸಾಮಾಜಿಕ ಜಾಲ
ತಾಣಗಳ ಮೂಲಕ ಸುಮಾರು 2  ಕೋಟಿ ಜನರನ್ನು ತಲುಪಬೇಕು
ಎನ್ನುವ ಗುರಿಯನ್ನು ಇಟ್ಟುಕೊಂಡಿದೆ.





ಯುವ ಪೀಳಿಗೆಯ ಜನರು ಸಾಮಾಜಿಕ
ಜಾಲ ತಾಣಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದು ಅವರನ್ನು ಪಕ್ಷದ ನಿಲುವುಗಳು
ಮತ್ತು ಪ್ರಣಾಳಿಕೆಗಳು ತಲುಪಬೇಕು. ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು
ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರಿಸುವುದರೊಂದಿಗೆ
ಇನ್ನಷ್ಟು ಯುವ ಜನತೆಯನ್ನು ಸೆಳೆಯಬೇಕಿದೆ
ಎಂದು ಬಿಜೆಪಿ ತಿಳಿಸಿದೆ.





ಗುಜರಾತ್
ಮುಖ್ಯಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್ನಲ್ಲಿ ಈಗಾಗಲೇ 21ಲಕ್ಷ
ಫಾಲೋವರ್ಗಳನ್ನು ಹೊಂದಿದ್ದಾರೆ. ಇದು
ಬಿಜೆಪಿಯತ್ತ ಯುವ ಪೀಳಿಗೆ ವಾಲುತ್ತಿರುವುದಕ್ಕೆ
ಸಾಕ್ಷಿ ಎಂದು ಬಿಜೆಪಿ ನಾಯಕರು
ಅಭಿಪ್ರಾಯಪಟ್ಟರು.





ಇನ್ನೊಂದೆಡೆ
ಕಾಂಗ್ರೆಸ್ಪಕ್ಷ ಕೂಡ ಸಾಮಾಜಿಕ
ಜಾಲ ತಾಣಗಳ ಮೂಲಕ ಯುವ
ಜನತೆಯನ್ನು ಸೆಳೆಯಲು ಯತ್ನಿಸುತ್ತಿದೆಯಾದರೂ ಪರಿಣಾಮಕಾರಿಯಾಗಿ
ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ.





ಇದಕ್ಕೆ
ಪ್ರತಿಕ್ರಿಯಿಸಿದ ಕಾಂಗ್ರೆಸ್‌‌ ನಾಯಕ ಶಶಿ ತರೂರ್
"ಬಹಳಷ್ಟು ಜನ ಫಾಲೋವರ್ಗಳು
ಇದ್ದ ಮಾತ್ರಕ್ಕೆ ಅವರು ನಮಗೇ ಮತ
ಹಾಕುತ್ತಾರೆ ಎಂದು ಭಾವಿಸಲು ಸಾಧ್ಯವಾಗುವುದಿಲ್ಲ.
ಎಂದು ಹೇಳುವುದರ ಮೂಲಕ ಮೋದಿ ಫಾಲೋವರ್ಗಳು ಮೋದಿಯತ್ತ ವಾಲಿಲ್ಲ
ಎನ್ನುವುದನ್ನು ಒತ್ತಿ ಹೇಳಿದ್ರು.




ಕಾಂಗ್ರೆಸ್ಕೂಡ ಸಾಮಾಜಿಕ ಜಾಲ ತಾಣಗಳತ್ತ ಮುಖ ಮಾಡಿದ್ದು ಸೈಬರ್ಪ್ರಚಾರದತ್ತ 2014 ಚುನಾವಣೆ ಸಾಗುತ್ತಿದೆ

Отправить комментарий

0 Комментарии