Hot Posts

10/recent/ticker-posts

ರಜೆಗಳಲ್ಲಿಯೇ ರೆಡಿಯಾಗುತ್ತೆ ಮೋದಿ ಪ್ಲಾನ್


ರಜೆಗಳು ಬಂದ್ರೆ ಸಾಕು.. ಸರ್ಕಾರಿ ನೌಕರರು ಊರ್ ಸೇರ್ಕೊಂಡ್ ಬಿಡ್ತಿದ್ರು.. ರಾಜಕಾರಣಿಗಳು ಕೂಡ ರಜೆ ಹಾಕಿ, ಮಜಾ ಮಾಡ್ತಿದ್ರು.. ಆದ್ರೆ ನರೇಂದ್ರ ಮೋದಿ ಮಾತ್ರ ಡಿಫರೆಂಟ್​.. ಹಬ್ಬ ಇದ್ರೂ, ಮೋದಿ ಮನೇಲಿ ಕೂರ್ಲಿಲ್ಲ.. ಅವರು ದೀಪಾವಳಿಯಂದು ಎಲ್ಲರಲ್ಲೂ ಭರವಸೆಯ ಬೆಳಕು ಮೂಡಿಸುವ ಕೆಲಸ ಮಾಡಿದಿರು. ಮನುಷ್ಯ ಜೀವನಕ್ಕೆ ಕಷ್ಟವಾಗಿಗೋ ಸಿಯಾಚಿನ್ ಪ್ರದೇಶಕ್ಕೆ ಹೋಗಿದ್ರು. ಅಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಅವರ ಸಾಹಸಕ್ಕೆ ಸೆಲ್ಯೂಟ್ ಹೊಡೆದ್ರು.. ಬನ್ನಿ ಹಾಗಿದ್ರೆ ಸಿಯಾಚಿನ್​ನಲ್ಲಿ ಮೋದಿ ಮಾಡಿದ್ದೇನು ಅಂತಾ ನೋಡೋಣ...

ನರೇಂದ್ರ ಮೋದಿ.. ಏನೇ ಮಾಡಿದ್ರೂ ಪಕ್ಕಾ ಲೆಕ್ಕ ಹಾಕಿನೇ ಮಾಡೋ ಒನ್ ಅಂಡ್ ಓನ್ಲಿ ಪ್ರಧಾನಿ.. ಜನರೊಂದಿಗೆ ಬೆರೆತು, ಜನರ ನಡುವೆ ಓಡಾಡಿ, ಜನರಿಗೆ ಸ್ಪಂದಿಸೋ ಪ್ರಧಾನಿ ಈ ನರೇಂದ್ರ ಮೋದಿ.. ರಜೆ ಇದ್ರೂ ಮನೆಯಲ್ಲಿ ಕೂತ್ಕೊಳ್ಳದೇ ದೇಶಕ್ಕಾಗಿ ದುಡಿಯೋ ಪ್ರಧಾನ ಸೇವಕ..!

ರಜೆಯಲ್ಲಿ ಮನೆಯಲ್ಲಿ ಕೂರಲ್ಲ ಮೋದಿ..!
ರಜೆಗಳಲ್ಲಿಯೇ ಹೊಸ ಶೇಡ್ಯೂಲ್​​ ಪ್ಲಾನ್..!

ಗಾಂಧೀಜಯಂತಿಯಂದು ಸರ್ಕಾರಿ ರಜೆ ಇತ್ತು.. ಆದ್ರೆ ಪ್ರಧಾನಿ ನರೇಂದ್ರ ಮೋದಿ, ಸ್ವಚ್ಛ ಭಾರತ್ ಅಭಿಯಾನವನ್ನು ಕೈಗೊಂಡ್ರು.. ಇದಾದ ನಂತರ ದಸರೆಯ ಸಮಯದಲ್ಲಿ ರೇಡಿಯೋದಲ್ಲಿ ಮನ್ ಕಿ ಬಾತ್​ ಅಂತ ಭಾಷಣ ಮಾಡಿದ್ರು.. ಹೀಗೆ ರಜೆ ಟೈಮಲ್ಲಿಯೂ ಒಂದೊಂದು ಕಾರ್ಯಕ್ರಮ ಹಾಕಿಕೊಳ್ತಿರೋ ಮೋದಿ, ಈ ಸಲದ ದೀಪಾವಳಿಯಲ್ಲೂ ಮನೆಲಿ ಕೂತಿಲ್ಲ.. ಜಮ್ಮು ಕಾಶ್ಮೀರಕ್ಕೆ ತೆರಳಿ, ಸೈನಿಕರೊಂದಿಗೆ ಮತ್ತು ಪ್ರವಾಹ ಸಂತ್ರಸ್ತರೊಂದಿಗೆ ದೀಪಾವಳಿಯನ್ನು ಆಚರಿಸಿದ್ದಾರೆ

ತಲೆಯ ಮೇಲೊಂದು ಹಿಮದಿಂದ ರಕ್ಷಿಸಿಕೊಳ್ಳುವ ಸನ್​​​​ಗ್ಲಾಸ್, ಕಣ್ಣಿಗೊಂದು ಗಾಗಲ್. ಇಡೀ ಮೈಗೆ ಬೆಚ್ಚಗಿನ ಲೆದರ್ ಜಾಕೆಟ್, ಕತ್ತಿಗೊಂದು ಕೆಂಪು ರುಮಾಲು, ಅದರ ಮೇಲೊಂದು ಮಿಲಿಟರಿ ಜಾಕೆಟ್. ಪ್ರಧಾನಿ ಮೋದಿ ನಿನ್ನೆ ಅಕ್ಷರಶಃ ಯೋಧರಾಗಿದ್ದರು.

ಮೊದಲಿಗೆ  ವಿಶೇಷ ವಿಮಾನದಲ್ಲಿ ಸಿಯಾಚಿನ್​​ ಪ್ರದೇಶಕ್ಕೆ ಆಗಮಿಸಿದ್ರು ಮೋದಿ..  ಸಿಯಾಚಿನ್ ಪ್ರದೇಶ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ.. ಸಮುದ್ರ ಮಟ್ಟದಿಂದ ಸುಮಾರು 12 ಸಾವಿರ ಅಡಿಗಳಷ್ಟು ಎತ್ತರವಿದೆ. ಇಂಥ ದುರ್ಗಮ ಪ್ರದೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿಯನ್ನು, ಭೂಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್​ಸಿಂಗ್​​ಸೇರಿದಂತೆ ಸೇನಾಧಿಕಾರಿಗಳ ತಂಡ ಆತ್ಮೀಯವಾಗಿ ಸ್ವಾಗತಿಸಿತು.. ಪ್ರಧಾನಿ ಮೋದಿ ಕೂಡ ಎಲ್ಲರೊಂದಿಗೆ ಹಸ್ತಲಾಘವ ಮಾಡಿದ್ರು..





2005 ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್​ಸಿಂಗ್​​ ಈ ಸಿಯಾಚಿನ್ ಪ್ರದೇಶಕ್ಕೆ ಭೇಟಿ ನೀಡಿದ್ರು.. ಇದಾದ ಸುಮಾರು 9 ವರ್ಷಗಳ ನಂತರ ಈಗಿನ ಪ್ರಧಾನಿ ನರೇಂದ್ರ ಮೋದಿ ಸಿಯಾಚಿನ್​ಗೆ ಭೇಟಿ ನೀಡಿದ್ದಾರೆ.  ಸಮುದ್ರಮಟ್ಟದಿಂದ ಸುಮಾರು 12 ಸಾವಿರ ಅಡಿಗಳಷ್ಟು ಎತ್ತರವಿರುವ ಈ ಪ್ರದೇಶದ ಉಷ್ಣಾಂಶ, ಮೈನಸ್ 30 ಡಿಗ್ರಿಯಿಂದ ಮೈನಸ್ 40 ಡಿಗ್ರಿವರೆಗೆ ಇದೆ. ಇಂಥ ಮೈ ಕೊರೆಯುವ ಮಂಜು ಇದ್ರೂ ಕೂಡ, ಪ್ರಧಾನಿ ನರೇಂದ್ರ ಮೋದಿ ಇಂದು ಸಿಯಾಚಿನ್​ಗೆ ಆಗಮಿಸಿದ್ರು..

ದೀಪಾವಳಿ ಅಂದ್ರೆ, ನನ್ನ ಫ್ಯಾಮಿಲಿ ಜೊತೆ ಕಳೀಬೇಕು, ಫ್ರೆಂಡ್ಸ್ ಜೊತೆ ಕಳೀಬೇಕು ಅನ್ನೋರೇ ಹೆಚ್ಚು.. ಆದ್ರೆ ಪ್ರಧಾನಿ ನರೇಂದ್ರ ಮೋದಿ ಕೊರೆಯುವ ಚಳಿಯಲ್ಲೂ ಸಿಯಾಚಿನ್​ಗೆ ಆಗಮಿಸಿ ಸೈನಿಕರೊಂದಿಗೆ ಕಾಲ ಕಳೆದ್ರು..

ನಂತರ ಸೈನಿಕರ ಕಾರ್ಯವನ್ನು ಶ್ಲಾಘಿಸಿದ ಮೋದಿ, ಮೊದಲಿಗೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ, ದೀಪಾವಳಿಯ ಶುಭ ಕೋರಿದ್ರು.. ದೇಶದ ಜನರು ಇಂದು ನಿರಾಳವಾಗಿ ದೀಪಾವಳಿ ಆಚರಿಸುತ್ತಿದ್ದಾರೆ. ಅವರ ನಿರಾಳತೆಗೆ ಕಾರಣ ನೀವು.. ನಿಮ್ಮ ಹೋರಾಟದ ಬದುಕೇ ನಿಮ್ಮ ಸಂದೇಶ ಅಂತ ಹೇಳಿದ್ರು.. ಈ ವೇಳೆ ಸೈನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಭಾಷಣ, ಸೈನಿಕರಿಗೆ ಇನ್ನಷ್ಟು ಚೈತನ್ಯ ತುಂಬಿತು..

ಪ್ರಖರ ವಾಗ್ಮಿಯಾದ ಮೋದಿ, ತಮ್ಮ ಭಾಷಣದ ಮೂಲಕವೇ ಸೈನಿಕರಿಗೆ ಚೈತನ್ಯ ತುಂಬಿದ್ರು.. ನಂತರ ಎಲ್ಲಾ ಸೈನಿಕರೊಂದಿಗೆ ಹಸ್ತಲಾಘವ ಮಾಡಿದ್ರು..

ನಂತರ ಸೈನಿಕರೊಂದಿಗೆ ಕುಳಿತು ವಿಶೇಷ ಭೋಜನವನ್ನು ಸೇವಿಸಿದ್ರು.. ಬೆಳಕಿನ ಹಬ್ಬ ದೀಪಾವಳಿಯ ದಿನ, ಪ್ರಧಾನಿಯೊಂದಿಗೆ ಊಟ ಮಾಡಿದ ಖುಷಿ ನಮ್ಮ ಸೈನಿಕರಿಗಿತ್ತು.. ನಿನ್ನೆ ಒಂದೇ ದಿನದಲ್ಲಿ, ಪ್ರಧಾನಿ ಮತ್ತು ಸೈನಿಕರ ನಡುವೆ ಒಂದು ಭಾವುಕ ಅನುಬಂಧ ಏರ್ಪಟ್ಟಿದ್ದು ಮಾತ್ರ ಸುಳ್ಳಲ್ಲ..

ಇದೇ ವೇಳೆ ದಿಟ್ಟ ಸೈನಿಕನಂತೆ, ಗಡಿ ಕಾಯುತ್ತಿದ್ದ ಶ್ವಾನರಾಜನನ್ನೂ, ಮೋದಿ ಆತ್ಮೀಯವಾಗಿ ಮಾತನಾಡಿಸಿದ್ರು.. ಶ್ವಾನದ ತಲೆ ಸವರಿ ಶ್ವಾನದ ಸೇವೆಯನ್ನು ಹೊಗಳಿದ್ರು.. ಭಾರತದ ಗಿಡ ಮರಗಳು, ಪ್ರಾಣಿಗಳು ಸೇರಿದಂತೆ ಚರಾ ಚರ ವಸ್ತುಗಳಲ್ಲೂ ದೇಶಾಭಿಮಾನ ಅಡಗಿದೆ ಅಂತ ಮೋದಿ ಹೇಳಿದ್ರು..
------------------------------------------------------------------------------------
ಸೈನಿಕರ ಹುಮ್ಮಸ್ಸು ಹೆಚ್ಚಿಸಿದ ಪ್ರಧಾನಿ ಮೋದಿ
ಯೋಧರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ
ದೇಶಸೇವೆಗಾಗಿ ಯೋಧರನ್ನು ಅಭಿನಂದಿಸಿದ ಮೋದಿ
‘ನಿಮ್ಮ ಸೇವೆಯನ್ನು ದೇಶ ಸದಾ ಸ್ಮರಿಸುತ್ತದೆ’
ಸಿಯಾಚಿನ್ ಪ್ರದೇಶದಲ್ಲಿ ಮೋದಿ ದೀಪಾವಳಿ
ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ
ಭರವಸೆಯ ಬೆಳಕು ಮೂಡಿಸಿದ ನರೇಂದ್ರ ಮೋದಿ
ಯೋಧರ ಜೊತೆ ಪ್ರಧಾನಿ ಮೋದಿ ಮಾತುಕತೆ




Отправить комментарий

0 Комментарии