Hot Posts

10/recent/ticker-posts

ಅತಿ ದೊಡ್ಡ ಶಾಕ್ ಕೊಡಲು ರೆಡಿಯಾದ ಮೋದಿ-ಶಾ. ರಾಜ್ಯ ನಾಯಕರಿಗೆ ಫೋನ್ ಮಾಡಿ ಮೋದಿ ಹೇಳಿದ್ದೇನು?











Modi Planning List




ಕರ್ನಾಟಕ ಚುನಾಣೆಯ ನಂತರ ಮೋದಿ ಮತ್ತು ಅಮಿತ್ ಶಾ ಇಬ್ಬರೂ ಸೈಲೆಂಟಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಗಳಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದ್ದರೂ, ಮೋದಿ ಒಂದು ಮಾತನ್ನೂ ಆಡ್ತಾ ಇಲ್ಲ. ಬಿಜೆಪಿ ಚಾಣಕ್ಯ ಅಮಿತ್ ಶಾನೂ ತುಟಿಕ್ ಪಿಟಿಕ್ ಅಂತಿಲ್ಲ. ಹಾಗಂತ ಇಬ್ಬರೂ ಸುಮ್ಮನಿದ್ದಾರೆ ಅಂತ ಅಂದುಕೊಂಡ್ರೆ ಅದು ತಪ್ಪಾಗಿಬಿಡುತ್ತೆ.












Karnataka News - ಕರ್ನಾಟಕ ಸುದ್ದಿಗಳು
Facebook Group · 143K members




Join Group


ಕರ್ನಾಟಕ ಸುದ್ದಿ ಜಗತ್ತು





ಸದ್ಯಕ್ಕೆ ಯಾವುದೇ ವಿಷಯದ ಬಗ್ಗೆ ಮಾತನಾಡದೇ ಇರೋದಕ್ಕೆ ಮೋದಿ ಮತ್ತು ಅಮಿತ್ ಶಾ ನಿರ್ಧಾರ ಮಾಡಿದ್ದಾರೆ ಅಂತ ತಿಳಿದು ಬಂದಿದೆ. ಸಣ್ಣ ಪುಟ್ಟ ಸಮಸ್ಯೆಗಳು ಮತ್ತು ಸೋಲುಗಳು ಎದುರಾದರೂ, ಅವುಗಳ ಬಗ್ಗೆ ದೀರ್ಘವಾಗಿ ಯೋಚನೆ ಮಾಡುವುದು ಬೇಡ ಎಂದು ಇಬ್ಬರೂ ನಾಯಕರು ನಿರ್ಧರಿಸಿದ್ದಾರೆ ಅಂತ ಹೇಳಲಾಗ್ತಿದೆ. ಸೋಲಿನ ವಿಚಾರಗಳ ಬಗ್ಗೆ ಚಿಂತಿಸದೇ ಮುಂದಿನ ಬಹುದೊಡ್ಡ ವಿಚಾರದ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಅಮಿತ್ ಶಾಗೆ ಮೋದಿ ಹೇಳಿದ್ದಾರೆ ಎನ್ನಲಾಗಿದೆ.





2019ರಲ್ಲಿ ಲೋಕಸಭಾ ಚುನಾವಣೆ ಇದೆ. 2014ರಲ್ಲಿ ಇದ್ದ ಪರಿಸ್ತಿತಿ ಈಗ ಇಲ್ಲವಾಗಿದೆ. ನಿರ್ಲಕ್ಷವಹಿಸಿದ್ರೆ ಸಾಲು ಸಾಲು ರಾಜ್ಯಗಳನ್ನು ಸೋತಂತೆ, ಲೋಕಸಭೆಯಲ್ಲೂ ದೊಡ್ಡ ಮಟ್ಟದ ಹಿನ್ನಡೆಯಾಗೋ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಯಲ್ಲಿ ಯಾಮಾರಬಾರದು ಅಂತ ಮೋದಿ – ಶಾ ನಿರ್ಧಾರ ಮಾಡಿದ್ದು, ಅದಕ್ಕಾಗಿ ರಣತಂತ್ರಗಳನ್ನು ಹೆಣೀತಿದ್ದಾರೆ.





ಇದರ ಜೊತೆಗೆ ಎಲ್ಲೆಲ್ಲಿ ಸಮ್ಮಿಶ್ರ ಸರ್ಕಾರಗಳು ರಚನೆಯಾಗಿವೆಯೋ, ಆ ಎಲ್ಲಾ ರಾಜ್ಯಗಳಲ್ಲೂ ಮೋದಿ ವಿಶೇಷ ಕಾಳಜಿ ವಹಿಸುವಂತೆ ರಾಜ್ಯ ಉಸ್ತುವಾರಿ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಕರ್ನಾಟಕದ ಮೇಲೆ ವಿಶೇಷ ನಿಗಾ ಇಡುವಂತೆ ರಾಜ್ಯ ನಾಯಕರಿಗೆ ಗುಪ್ತ ಸಂದೇಶ ರವಾನಿಸಲಾಗಿದೆ ಎಂಬ ಮಾತಿದೆ. ಮುಂದಿನ ಆರು ತಿಂಗಳ ಕಾಲ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಮುಂದುವರಿಯಲಿ. ಆರು ತಿಂಗಳ ನಂತರ ರಾಜ್ಯ ಸರ್ಕಾರವನ್ನು ಹೇಗೆ ಬುಡಮೇಲು ಮಾಡಬೇಕು? ಯಾವೆಲ್ಲಾ ಬ್ರಹ್ಮಾಸ್ತ್ರಗಳನ್ನು ಸಮ್ಮಿಶ್ರ ಸರ್ಕಾರದ ಮೇಲೆ ಪ್ರಯೋಗಿಸಬೇಕು ಎಂಬುದನ್ನು ಅರಿತುಕೊಂಡು, ಆ ನಿಟ್ಟಿನಲ್ಲಿ  ಕಾರ್ಯೋನ್ಮುಖವಾಗುವಂತೆ ರಾಜ್ಯ ನಾಯಕರಿಗೆ ಮೋದಿ ಮತ್ತು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಲೋಕಸಭಾ ಚುನಾವಣೆ ವೇಳೆಯಷ್ಟರಲ್ಲಿ ಅತಿ ದೊಡ್ಡ ಬ್ರೇಕಿಂಗ್ ನ್ಯೂಸ್ ಕೊಡೋ ಲೆಕ್ಕಾಚಾರದಲ್ಲಿ ಮೋದಿ ಮತ್ತು ಅಮಿತ್ ಶಾ ಟೀಂ ಇದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ.















Karnataka News - ಕರ್ನಾಟಕ ಸುದ್ದಿಗಳು
Facebook Group · 143K members




Join Group


ಕರ್ನಾಟಕ ಸುದ್ದಿ ಜಗತ್ತು



Отправить комментарий

0 Комментарии