ಕಾಂಗ್ರೆಸ್ಸ್ ಪಾದಯಾತ್ರೆ ರಣಾಂಗಣವಾಗಲಿದೆಯಾ ಬಳ್ಳಾರಿ….?
ರೆಡ್ಡ ಬ್ರದರ್ಸ್ ರವರ ಅಕ್ರಮ ಗಣಿಗಾರಿಕೆಯ ವಿರುದ್ಧ ಕಾಂಗ್ರೆಸ್ ೨೫ರಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುತ್ತಿದೆ. ವಿರೊಧ ಪಕ್ಷದ ನಾಯಕ ಸಿದ್ಧರಾಮಯ್ಯ ಬಿಜೆಪಿಯ ಶ್ರೀರಾಮುಲು ಹೇಳಿದ ಮಾತನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ಸ್ ಸಮಾವೇಶ ಮಾಡಿಯೇ ತೀರುತ್ತೆವೆ ಎಂದು ಪ್ರತಿ ಸವಾಲು ಹಾಕಿದ್ದಾರೆ. ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದ ಜನತೆಯ ಕಣ್ಣೀಗೆ ಮಣ್ಣೆರಚಿ ಮೊಸ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದಾರೆ. ರೆಡ್ಡೀ ಬ್ರದರ್ಸ್ ರಾಜಿನಾಮೆ ನೀಡಬೇಕು. ಯಡಿಯೂರಪ್ಪನವರು ಗಣಿಧಣಿಗಳನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ಇಲ್ಲಿಯವರೆಗೆ ನಡೆದ ಅಕ್ರಮದ ಬಗ್ಗೆ ಸಿ.ಬಿ.ಐ ತನಿಖೆಗೆ ವಹಿಸಬೇಕು ಅಲ್ಲಿಯವರೆಗೆ ನಮ್ಮ ಹೊರಾಟ ನಿಲ್ಲದು ಎಂದು ಸಿದ್ದು ಗುದ್ದು ಹಾಕಿದ್ದಾರೆ.
ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಏನೇ ಬಾಯಿ ಬಡೆದುಕೊಂಡರೂ ನಾವು ತಲೆ ಕೆಡಿಸಿಕೊಳ್ಳೋದಿಲ್ಲ ಅಂತ ಬಿಜೆಪಿಯ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ. ಅವರಿಗೆ ಮಾಡಲು ಏನೂ ಕೆಲಸವಿಲ್ಲ ಅದಕ್ಕೆ ಇದನ್ನಾದರೂ ಮಾಡಿ ಅವರ ಪಾಪ ಕಳೆದುಕೊಳ್ಳಲಿ ಅಂತ ವ್ಯಂಗ್ಯ ಮಾಡಿದ್ದಾರೆ.

0 Комментарии