Hot Posts

10/recent/ticker-posts

ಸಂಸತ್ ನಲ್ಲಿ ಶಾಸಕರ ಮಾರಾಮಾರಿ




ರೆಡ್ಡಿ ಬ್ರದರ್ಸ್
ಗಣಿ  ಗಲಾಟೆ ಸದ್ಯದಲ್ಲಿ ಮುಗಿಯುವ ಹಂತದಲ್ಲಿ ಇಲ್ಲ. ಬಳ್ಳಾರಿಯಲ್ಲಿ ಅಕ್ರಮವಾಗಿ ಗಣಿ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಪ್ರತಿ ಪಕ್ಷಗಳು ತೀವ್ರವಾಗಿ ಆಕ್ರೋಶಗೊಂಡಿವೆ. ದೇವೇಗೌಡರು "ನೈಸ್"ಆಗಿ ಮೊದಲು ಕ್ರಾಂತಿ ಆರಂಭಿಸಿದರು. ಆದರೆ ಕುಮಾರಸ್ವಾಮಿ ಆಡಳಿತದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದಾಗ ದೇವೇಗೌಡರು ಕ್ಯಾರೆ ಎಂದಿರಲಿಲ್ಲ. ಅದೂ ಅಲ್ಲದೆ ಅಂದು ಕುಮಾರಸ್ವಾಮಿ ಆಡಳಿತದಲ್ಲಿ ಅವರ ಸರ್ಕಾರ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದಿದ್ದ ಜನಾರ್ಧನ ರೆಡ್ಡಿ ಇಂದು ತಾವು ಮಾಡುತ್ತಿರುವುದು ಏನು ಎಂದು ನಾವು ಕೇಳುವುದು ತಪ್ಪೇ....?

ಪಾಪ ರೆಡ್ಡಿ ಬ್ರದರ್ಸ್ ಹೇಳುವುದೇ ಬೇರೆ... ನಾವು ಯಾವುದೇ ರೀತಿಯ ಅಕ್ರಮ ಎಸಗಿಲ್ಲ ಅಂತಾರೆ... ಅವರು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಎಂದಾದರೆ ಒಬುಳಾಪುರಂ ಮೈನಿಂಗ್ ಕಂಪನಿಗೆ  ಹೈ ಕೋರ್ಟ್ ೯ ನೋಟಿಸ್ ಯಾಕೆ ನೀಡಿತ್ತು ಎಂಬುದನ್ನು ಅವರೇ ಹೇಳ್ಬೇಕು.....ರೆಡ್ಡಿ ಬ್ರದರ್ಸ್ ಸಾಚಾ ವ್ಯಕ್ತಿಗಳು ಎಂಬುದಾದರೆ ಗಣಿ ತನಿಖೆಯನ್ನು ಸಿ.ಬಿ.ಐಗೆ ಒಪ್ಪಿಸಲು ಯಾಕೆ ಹಿಂಜರಿಯುತ್ತಿದ್ದಾರೆ....? ಇದಕ್ಕೆ ಸಮಂಜಸವಾದ ಇನ್ನು  ಉತ್ತರ ಸಿಕ್ಕಿಲ್ಲ.

Отправить комментарий

0 Комментарии