Hot Posts

10/recent/ticker-posts

ಪ್ರೇಮ ತ್ಯಾಗಿ..?



ಪ್ರೀತಿ ಎಲ್ಲಿ ಯಾರ ಯಾರ ಮಧ್ಯೆ ಹುಟ್ಟುತ್ತೆ ಅಂತ ಯಾರಿಗೂ ಗೊತ್ತಾಗೋದಿಲ್ಲ. ಅದೊಂದು ಜಿಲ್ಲಾ ಆಸ್ಪತ್ರೆಯಲ್ಲಿ ಮಧುಮಿತ ಅನ್ನೋ ಹುಡುಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ಳು. ಅಲ್ಲೇ ಪಕ್ಕದಲ್ಲಿ ಮಧುಸೂಧನ್ ಅಂತ ಒಬ್ಬ ಹುಡುಗ ಕೂಡಾ ಅಡ್ಮಿಟ್ ಆಗಿದ್ದ.. ಮಧು ಅಂತ ಯಾರನ್ನಾದ್ರೂ  ಕರೆದರೆ, ಇಬ್ರೂ ಕೂಡಾ ಏನ್ ಡಾಕ್ಟ್ರೇ ಅಂತ ಕೇಳ್ತಿದ್ರು..


ಆಮೇಲೆ ಪರಸ್ಪರ ನೋಡಿ ನಗ್ತಿದ್ರು.. ಇಬ್ಬರು ಮಾತಾಡ್ತಾ ಇದ್ರು.. ನೋವು ನಲಿವುಗಳನ್ನು ಹಂಚಿಕೊಳ್ತಾ ಇದ್ರು.. ಆದ್ರೆ ನೀವು ಯಾಕೆ ಆಸ್ಪತ್ರೆಯಲ್ಲಿ ಅಡ್ ಮಿಟ್ ಆಗಿದ್ದೀರ ಅಂತ ಕೇಳಿದ್ರೆ ಹೇಳ್ತಿರಲಿಲ್ಲ,. “ಹೀಗೆ ಮನುಷ್ಯಾ ಅಂದ ಮೇಲೆ ಏನಾದ್ರೂ ಒಂದು ಪ್ರಾಬ್ಲಂ ಇರುತ್ತಾಲ್ವಾ ಬಿಡಿ” ಅಂತ ಹೇಳಿ ಇಬ್ರೂ ಸುಮ್ಮನಾಗ್ತಿದ್ರು..


         


          ಅದೇ ವಾರ್ಡ್‌ನಲ್ಲಿ ಒಬ್ರು ಅಜ್ಜಿ ಇದ್ರು.. ಆ ಅಜ್ಜಿ ಗೆ ತನ್ನವರೂ ಅಂತ ಯಾರೂ ಇರಲಿಲ್ಲ.  ಆ ಅಜ್ಜಿ ಹತ್ರ, ಇವರಿಬ್ಬರೂ ತಮ್ಮ ತಮ್ಮ ನೋವುಗಳನ್ನು ಹೇಳಿಕೊಳ್ತಾ ಇದ್ರು. ಮಧುಮಿತ ಗೆ ಎರಡೂ ಕಣ್ಣುಗಳು ಮಂಜಾಗ್ತಿದ್ವು. ಕಣ್ಣುಗಳು ಹೋಗುತ್ತೆ.. ಬೇರೆ ಕಣ್ಣುಗಳನ್ನು ಹಾಕಬೇಕು ಅಂತ ಡಾಕ್ಟರ್ ಹೇಳಿದ್ರು. ಆದ್ರೆ ಮಧುಸೂಧನ್ ಗೆ ಎರಡೂ ಕಿಡ್ನುಗಳೂ ಫೇಲ್ ಆಗಿದ್ವು. ಇಬ್ಬರೂ ಬದುಕುವ ಸಾಧ್ಯತೆಗಳೇ ಇರಲಿಲ್ಲ. ಆದ್ರೂ ಅಜ್ಜಿಯ ಜೊತೆ ಮಾತಾಡ್ತಾ, ಮೂವರೂ ಕಾಳ ಕಳೀತಾ ಇದ್ರು. ಅದೊಂದು ದಿನ ಮಧುಮಿತಾ ಡಾಕ್ಟರ್ ಗೆ ಹೇಳಿದ್ಳು “ ಡಾಕ್ಟರ್ ನನಗಂತೂ ಕಣ್ಣು ಕಾಣಲ್ಲ. ಬದುಕಿದ್ದೂ ವ್ಯರ್ಥ, ನನ್ನ ಕಿಡ್ನಿಯನ್ನು ಮಧು ಸೂಧನ್ ಗೆ ಹಾಕಿ ದಯವಿಟ್ಟು ಅಂತ ಗೋಗರೆದಳು. ಡಾಕ್ಟರ್ ಆಯ್ತು ಒಂದು ಕಿಡ್ನಿಯನ್ನ ಬದಲಾಯಿಸೋಕೆ ಒಪ್ಪುತ್ತೇವೆ. ನೋಡೋಣ ಅಂದ್ರು. ಆದ್ರೆ ಮಧು ಸೂಧನ್ ಗೆ ಎರಡೂ ಕಿಡ್ನಿ ಹೋಗಿರೋದ್ರಿಂದ ತಾನು ಬದುಕೋದಿಲ್ಲ ಅಂತ ಖಾತ್ರಿ ಆಗಿತ್ತು. ಅದಕ್ಕಾಗಿ ಅವನು ಡಾಕ್ಟರ್ ನ ಕರೆದು “ಡಾಕ್ಟರ್ ನಾನು ಹೇಗಿದ್ರೂ ಸಾಯ್ತೀನಿ. ನನ್ನ ಕಣ್ಣುಗಳನ್ನು ಮಧುಮಿತಾಗೆ ಕೊಡಿ ಅವಳ ಕಣ್ಣುಗಳಿಂದ ನಾನು ಮತ್ತೆ ಬದುಕ್ತೀನಿ“ ಅಂತ ಬೇಡಿಕೊಂಡ. ಆಯ್ತು ಅಂತ ಡಾಕ್ಟರ್ ಹೇಳಿದ್ರು..


ಇವರಿಬ್ಬರ ಮನಸಿನ ಭಾವನೆಯನ್ನು ಅರ್ಥ ಮಾಡಿಕೊಂಡ ಆ ಅಜ್ಜಿ ಅವರಿಬ್ಬರೂ ಈ ನಿರ್ಧಾರಕ್ಕೆ ಬರೋಕೆ ಕಾರಣ ಏನು ಅಂತ ಕೇಳ್ತಾಳೆ. ಆದ್ರೆ ಪಾಪ ಅವರಿಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿರ್ತಾರೆ..  ನಾವಂತೂ ಬದುಕೋದಿಲ್ಲ. ಆದ್ರೆ ನಾವು ಪ್ರೀತಿಸೋರಾದ್ರೂ ಚೆನ್ನಾಗಿ ಇರಲಿ ಅಂತ ಈ ನಿರ್ಧಾರ ಮಾಡಿದ್ದೀನಿ ಅಂತ ಇಬ್ಬರೂ ಹೇಳ್ತಾರೆ.. ಅವರಿಬ್ಬರಲ್ಲಿನ ಆ ಪ್ರೀತಿ ಈ ಅಜ್ಜಿಯ ಕಣ್ಣುಗಳಲ್ಲಿ ನೀರು ತರಿಸುತ್ತೆ.. ಇಂಥಾ ಅಗಾಧವಾದ ಪ್ರೀತಿ ಇರೋ ಈ ಜೀವಗಳ ನಡುವೆ ಯಾಕಪ್ಪಾ ಇಂಥಾ ನೋವುಗಳನ್ನು ಕೊಟ್ಟೆ ನಿನಗೆ ಕರುಣೇನೇ ಇಲ್ವಾ” ಅಂತ ಅಜ್ಜಿ ಕಣ್ಣೀರು ಇಡ್ತಾಳೆ.


ಇವಳ ಒಂದು ಕಿಡ್ನಿಯನ್ನು ಅವನಿಗೆ ಮತ್ತು ಅವನ ಒಂದು ಕಣ್ಣನ್ನು ಇವಳಿಗೆ ಹಾಕೋಕೆ ಡಾಕ್ಟರ್ ನಿರ್ಧಾರ ಮಾಡಿದ್ರು.  ಆ ಅಜ್ಜಿಗೆ ಯಾರೂ ಇರಲಿಲ್ಲ.. ಇವರೇ ಆ ಅಜ್ಜಿಗೆ ಪ್ರಾಣದಂತಿದ್ರು.. ಆವತ್ತು ಇಬ್ಬರಿಗೂ ಆಪರೇಷನ್ ಶುರುವಾಯ್ತು.. ಇಬ್ಬರಿಗೂ ಆಪರೇಷನ್ ಯಶಸ್ವಿಯಾಗಿ ಆಯ್ತು.. ಮಧು ಸೂಧನ್ ಮತ್ತು ಮಧುಮಿತ ಇಬ್ರನ್ನೂ ವಾರ್ಡ್ ಗೆ ಶಿಫ್ಟ್ ಮಾಡಿದ್ರು.. ಇಬ್ಬರೂ ಮಾತಾಡ್ತಿದ್ರು.. ಅಲ್ಲಿ ಅಜ್ಜಿ ಇರಬೇಕಿತ್ತಲ್ವಾ ಎಲ್ಲಿಗೆ ಹೋದ್ರು ಅಂತ ಇಬ್ರೂ ಹುಡುಕಿದ್ರು.. ಬಹುಶಃ ಅಜ್ಜಿಗೆ ಡಿಶ್ಚಾರ್ಜ ಆಗಿರಬೇಕು ಅಂತ ತಿಳ್ಕೊಂಡು ಸುಮ್ಮನಾದ್ರು. ಡಾಕ್ಟರ್ ಹತ್ರ ಆ ಅಜ್ಜಿಯ ಅಡ್ರಸ್ ತಿಳ್ಕೊಂಡು ತಮಗೆ ಆಪರೇಷನ್ ಯಶಸ್ವಿಯಾಗಿದೆ ಅಂತ ಹೇಳಬೇಕು ಅನ್ನೋ ಹಂಬಲ ಹೆಚ್ಚಾಯ್ತು..


ಆಗ ಇಬ್ರೂ ಡಾಕ್ಟರ್ ಗೆ ಕರೆದು ಆ ಅಜ್ಜಿಯ ಅಡ್ರಸ್ ಕೇಳ್ತಾರೆ. ಆಗ ಡಾಕ್ಟರ್ ಅವರಿಬ್ಬರನ್ನೂ ಮತ್ತೊಂದು ಕೋಣೆಗೆ ಕರ್ಕೊಂಡು ಹೋಗ್ತಾನೆ. ಅಲ್ಲಿ ಇದ್ದಾರೆ ನೋಡಿ ನಿಮ್ಮ ಅಜ್ಜಿ ಅಂತ ಹೇಳ್ತಾರೆ.. ಮಧುಮಿತ ಗೆ ಕಣ್ಣಿನ ಪಟ್ಟಿ ತೆಗೆದಿರೋದಿಲ್ಲ ಹೀಗಾಗಿ ಅವಳಿಗೆ ಅಲ್ಲಿ ಏನು ನಡೀತಿದೆ ಅಜ್ಜಿ ಏನು ಮಾಡ್ತಿದ್ದಾಳೆ ಅಂತ ಗೊತ್ತಾಗ್ಲಿಲ್ಲ. ಆದ್ರೆ ಮಧುಸೂಧನ್ ಆ ಅಜ್ಜಿ ಇರೋ ಮಂಚದ ಹತ್ರ ಹೋದ.. ಆದ್ರೆ ಆ ಅಜ್ಜಿ ಈ ಲೋಕವನ್ನೇ ಬಿಟ್ಟು ಹೋಗಿದ್ಳು..






ಏನಾಯ್ತು ಡಾಕ್ಟರ್ ಅಜ್ಜಿಗೆ ನಾವು ಆಪರೇಷನ್ ಗೆ ಹೋಗುವಾಗ ಚೆನ್ನಾಗಿದ್ರು. ಏನಾಯ್ತು ಅಜ್ಜಿಗೆ ಅಂತ ಕೇಳಿದ ಮಧು.. ಡಾಕ್ಟರ್ ಒಂದು ಲೆಟರ್ ನ ಮಧುಸೂಧನ್ ಕೈ ಗೆ ಕೊಡ್ತಾನೆ.. ಅದ್ರಲ್ಲಿ ಏನಿತ್ತು ಗೊತ್ತಾ..? “”ಮಕ್ಕಳೇ.. ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ನೀವಿಬ್ರೂ ನನಗೆ ಜೀವ ಆಗಿದ್ರಿ., ನಾನು ಬಿದ್ಹೋಗೋ ಮರ. ಆದ್ರೆ ನೀವಿಬ್ರೂ ಬಾಳಿ ಬದುಕಬೇಕಾಗಿರೋ ಎಳೆಯ ಜೀವಗಳು.. ನೀವಿಬ್ರೂ ನಿಮ್ಮ ಪ್ರೀತಿಗಾಗಿ ಪರಸ್ಪರ ಅಂಗಾಂಗಗಳನ್ನು ದಾನ ಮಾಡೋಕೆ ನಿರ್ಧಾ ಮಾಡಿದ್ರಿ. ಆದ್ರೆ ನೀವೇ ನನ್ನ ಜೀವ ಅಂದುಕೊಂಡಿರುವಾಗ ನಾನು ಹೇಗೆ ಇದನ್ನು ನೋಡಿಕೊಂಡು ಸುಮ್ಮನಿರಲಿ. ನೀವಿಬ್ರೂ ಚೆನ್ನಾಗಿರಬೇಕು ಅದಕ್ಕೆ ನಾನು ಈ ಲೋಕವನ್ನೇ ಬಿಡ್ತಾ ಇದ್ದೀನಿ.. ಡಾಕ್ಟರೇ ದಯವಿಟ್ಟು “ನನ್ನ ಕಣ್ಣುಗಳನ್ನು  ಮಧುಮಿತಾ ಗೆ ಕೊಡಿ. ಮತ್ತು ನನ್ನ ಎರಡೂ ಕಿಡ್ನುಗಳನ್ನು ಮಧು ಸೂಧನ್ ಗೆ ನೀಡಿ..


ಇಬ್ರೂ ಜೊತೆಯಾಗಿ ನೂರು ವರುಷ ಚೆನ್ನಾಗಿರಿ.. ಇಂತಿ ನಿಮ್ಮ ಜೀವ..” ಅಂತ ಬರೆದಿತ್ತು..


ಈಗ ಮಧು ಮತ್ತು ಮಧು ಮಿತ ಇಬ್ರೂ ಮದ್ವೆ ಆಗಿ ಎಲ್ಲರಂತೆ ಚೆನ್ನಾಗಿದ್ದಾರೆ. ಒಂದು ಪುಟಾಣಿ ಹೆಣ್ಣು ಮಗು ಇದೆ. ಅದಕ್ಕೆ ಆ ಅಜ್ಜಿಯ ಹೆಸರನ್ನೇ ಇಟ್ಟಿದ್ದಾರೆ.




Отправить комментарий

0 Комментарии