Hot Posts

10/recent/ticker-posts

ಅರ್ಜುನ ಪ್ರಸಾದ" ಸಿಹಿ ನಾ ಕಹಿನಾ..?



ಅರ್ಜುನ್ ಸರ್ಜಾ  ಬಹುಭಾಷಾ ನಟ. ಕನ್ನಡ ತಮಿಳು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರೋ ಧೀಮಂತ ನಟ. ಆದ್ರೆ ಶ್ರೀಮಂಜುನಾಥಾ ಚಿತ್ರದ ನಂತರ ಅರ್ಜುನ್ ಸರ್ಜಾ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ ಅನ್ನೋ ಮಾತು ಕೇಳಿ ಬರ‍್ತಿತ್ತು. ಆದ್ರೆ ಕನ್ನಡ ಚಿತ್ರರಂಗದಿಂದ ದೂರ ಆಗಿಲ್ಲ ಅನ್ನೋದನ್ನು ಖಾತ್ರಿ ಪಡಿಸೋಕೆ ಕನ್ನಡದಲ್ಲಿ ಮತ್ತೊಂದು ಚಿತ್ರವನ್ನು ಮಾಡಿದ್ದಾರೆ. ಅರ್ಜುನ್ ಸರ್ಜಾ ಅಭಿನಯದ 150 ನೇ ಮತ್ತು  ಬಹು ನಿರೀಕ್ಷಿತ ಚಿತ್ರ  ಪ್ರಸಾದ್ ವಾರ ತೆರೆ ಕಂಡಿದೆ. (add Song) ".ಕೆ.ಕೆ.ಎಂಟರ್ ಟೈನ್ಮೆಂಟ್" ಬ್ಯಾನರ್ ಅಡಿಯಲ್ಲಿ ಖ್ಯಾತ ನೈಸ್ ಉದ್ಯಮಿ ಅಶೋಕ್ ಖೇಣಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.  ಚಿತ್ರ ಈಗಾಗಲೇ ಬೆರ್ಲಿನ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ, ಎಲ್ಲರ ಮೆಚ್ಚುಗೆಗಳಿಸಿದೆ.

 ಸಂಜಯ್ ಮಾಲ್ಕರ್ ರವರ ಛಾಯಾಗ್ರಹಣ ಇರೋ ಈ ಚಿತ್ರಕ್ಕೆ  ಇಳಯರಾಜ ಸಂಗೀತ  ನೀಡಿದ್ದಾರೆ.. (add Song)  ಚಿತ್ರದಲ್ಲಿ ನಹು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ತಿರೋರು ಅರ್ಜುನ್ ಸರ್ಜಾ, ಮಾಧುರಿ ಭಟ್ಟಾಚಾರ್ಯ, ಮಾಸ್ಟರ್ ಸಂಕಲ್ಪ್, ರಾಮಕೃಷ್ಣ ಮುಂತಾದವರು.. ಆದ್ರೆ ಇದನ್ನು ಅಚ್ಚುಕಟ್ಟಾಗಿ ನಿರ್ದೆಶಿಸಿರೋದು  ಮನೋಜ್ ಸಾತಿ ಅನ್ನೋ ನಿದೇರ್ಶಕರು..  ಈ ಚಿತ್ರವನ್ನು  ನಿರ್ಮಾಣ ಮಾಡಿರೋದು ಖ್ಯಾತ ಉದ್ಯಮಿ ನೈಸ್ ರಾಜ ಅಶೋಖ್ ಖೇಣಿ...  ಈ ಚಿತ್ರದ ಸಾರಾಂಶ ಇಷ್ಟೇ.. ಅಂಗ ವೈಫಲ್ಯತೆಯಿಂದ ಬಳಲುವ ಮಗುವನ್ನು ಬೆಳೆಸಿ,  ಚಿಕಿತ್ಸೆ ನೀಡುವಲ್ಲಿ ತಂದೆ-ತಾಯಿ ಪಡುವ ನೋವು, ಶ್ರಮ, ಶ್ರದ್ಧೆ ಹಾಗೂ ಕಡೆಯಲ್ಲಿ ಪರಿಹಾರ ಕಂಡಾಗ ಅವರು ತೋರುವ ಔದಾರ್ಯ, ಮೊದಲಾದವುಗಳನ್ನು ಅಚ್ಚು ಕಟ್ಟಾಗಿ "ಪ್ರಸಾದ್" ಚಿತ್ರದ ಹೂರಣ ಆಗಿದೆ. (add Song) ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗ್ತಿರೋ ಪ್ರಸಾದ ಜನರಿಗೆ ರುಚಿಸುತ್ತಾ ಅನ್ನೋದನ್ನು ಕಾದು ನೋಡಬೇಕು ಅಷ್ಟೆ.

Отправить комментарий

0 Комментарии