ನಾವು ಆಗ ತಾನೆ ಬಿ.ಎಡ್ ಓದೋಕೆ ಸೇರಿದ್ವಿ.. ನಮಗೆ ನಾವೇ ಪಂಡಿತರು ಅಂದುಕೊಳ್ಳುತ್ತಾ ಮಾತಿಗೆ ಮಾತು ಬೆಳೆಸುತ್ತಾ ವಾದಗಳಲ್ಲಿ ಗೆಲ್ಲುತ್ತಿದ್ವಿ.. ಆದ್ರೆ ಅದೊಂದು ದಿನ ನಮ್ಮ ಕಾಲೇಜಿನ ಇತಿಹಾಸ ಉಪಾನ್ಯಾಸಕಿಯಾದ ಶ್ರೀಮತಿ ಲೀಲಾವತಿ ಮೇಡಂ ರವರು ಒಬ್ಬ ಪುಟ್ಟ ಬಾಲಕನನ್ನು ಕರೆದುಕೊಂಡು ಬಂದ್ರು.. ಅವನ ಹೆಸರು ಕಾರ್ತಿಕ್.. ಆಗ ತಾನೆ ಎಲ್ ಕೆಜಿ ಗೆ ಸೇರಿಕೊಂಡಿದ್ದ.. ಚಿಕ್ಕ ಹುಡುಗ.. ನೋಡಲು ಗುಂಡು ಗುಂಡಾಗಿದ್ದ ಕಾರ್ತಿಕ್ ನನ್ನು ನಾವೆಲ್ಲರೂ ಒಬ್ಬ ಸಾಮಾನ್ಯ ಮಗುವಿನಂತೆ ಮಾತ್ರ ನೋಡಿದ್ವಿ.. ಸ್ವಲ್ಪ ಸಮಯದ ನಂತರ ನಮ್ಮ ಮೇಡಂ ರವರು ಕೆಲವು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಪ್ರೆಶ್ನೆಗಳನ್ನು ನಮಗೆಲ್ಲರಿಗೂ ಕೇಳಿದ್ರು.. ನೂರು ಜನರಿರುವ ಆ ಕಾಲೇಜಿನಲ್ಲಿ ನಾನು ಮತ್ತು ಕಿಶೋರ್ ಎಂಬುವವರು ಕೆಲವು ಪ್ರೆಶ್ನೆಗಳಿಗೆ ಉತ್ತರ ನೀಡಿದ್ವಿ.. ಆದ್ರೆ ತದ ನಂತರದ ಪ್ರೆಶ್ನೆಗಳಿಗೆ ಉತ್ತರ ನಮ್ಮ ಜ್ಞಾನ ಭಂಡಾರದಲ್ಲಿ ಇರಲಿಲ್ಲ... ಆದ್ರೆ ನಂತರ ಆ ಪುಟ್ಟ ಪೋರನಿಗೆ ಆ ಪ್ರೆಶ್ನೆಯನ್ನು ಕೇಳಲಾಯಿತು..

ಕಾರ್ತಿಕ್ ಸದ್ಯಕ್ಕೆ 1 ನೇ ತರಗತಿ ಓದುತ್ತಿದ್ದಾನೆ. ಇವನಿಗೆ ಒಬ್ಬಳು ಮುದ್ದಾದ ತಂಗಿ ಇದ್ದಾಳೆ.. ಇವರಿಬ್ಬರು ಮಾತನಾಡುವ ಆ ತುಂಟ ಮಾತುಗಳು ಕೇಳಲು ತುಂಬಾ ಆನಂದವಾಗಿರುತ್ತದೆ. ಆದ್ರೂ ಕೂಡಾ ಅಣ್ಣನ ಮೇಲೆ ತಂಗಿಗೆ ಅಪಾರವಾದ ಪ್ರೀತಿ ವಿಶ್ವಾಸವಿದೆ.. ಇಬ್ಬರು ಪಟ ಪಟನೆ ಮಾತಾಡ್ತಾರೆ.. ಜ್ಞಾನ ಭಂಡಾರವನ್ನೇ ತನ್ನ ತಲೆಯಲ್ಲಿ ತುಂಬಿಕೊಂಡಿರುವ ಪುಟ್ಟ ಪೋರನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ... ಹೀಗಾಗಿ ನಾನೆ ನೆನ್ನೆಯೇ ನಮ್ಮ ಗುರುಗಳ ಮನೆಗೆ ಹೋಗಿದ್ದೆ.. ಆ ಪುಟ್ಟ ಕಂದಮ್ಮಗಳೊಂದಿಗೆ ದಿನ ಪೂರ್ತಿ ಆಟವಾಡಿದೆ. ಅವರಿಗೆ ಇಷ್ಟವಾದ ತಿನಿಸುಗಳನ್ನು ಉಡುಗೊರೆಯನ್ನು ನೀಡಿ ನೆನ್ನೆಯೇ ಶುಭ ಹಾರೈಸಿದೆ..
ಅವನ ಹುಟ್ಟು ಹಬ್ಬಕ್ಕೆ ನಾನು ಉಡುಗೊರೆ ಕೊಟ್ಟ ನಂತರ ಆ ಪುಟ್ಟ ಕಂದಮ್ಮಗಳು ನನ್ನ ಹುಟ್ಟು ಹಬ್ಬದ ದಿನಾಂಕವನ್ನು ಕೇಳಿದ್ರು.. ಸುಮ್ಮನೆ ಕೇಳ್ತಿದ್ದಾರಲ್ವಾ ಅಂತ “ಜೂನ್-೨” ಅಂತ ಹೇಳಿದೆ.. ಓಡಿ ಹೋಗಿ ಇಬ್ಬರು ತಮ್ಮ ಡೈರಿಯಲ್ಲಿ ನನ್ನ ಜನ್ಮ ದಿನಾಂಕವನ್ನು ಬರೆದು ಕೊಂಡು “ಶೇಖರ್ ಅಣ್ಣ ನಿಮ್ಮ ಬರ್ತಡೇ ದಿನ ನಾವು ಫೋನ್ ಮಾಡ್ತೀವಿ,, ರಿಸೀವ್ ಮಾಡ್ಬೇಕು” ಅಂತ ಹೇಳಿದ್ರು.. ನಾವು ವಿಷ್ ಮಾಡಿದ ನಂತರ ನಮ್ಮ ಬರ್ತಡೇ ಯಾವಾಗ ಅಂತ ದೊಡ್ಡವರಾದ ನಾವುಗಳೇ ಕೇಳೋದಿಲ್ಲ.. ಆದ್ರೆ ಆ ಪುಟ್ ಕಂದಮ್ಮಗಳು ಕೇಳಿದವು. ಅಷ್ಟೇ ಅಲ್ಲಾ ಅದನ್ನು ತಮ್ಮ ನೆನಪಿನ ಡೈರಿಯಲ್ಲಿ ಬರೆದಿಟ್ಟುಕೊಂಡ್ರು.. ಎಂಥಾ ಮುಗ್ಧತೆ...?? ಎಂಥಾ ಪ್ರೀತಿ...?? ನಂತರ ಒಂದು ಪುಟ್ಟ ಹಾಳೆಯನ್ನು ತೆಗೆದುಕೊಂಡು ಅದ್ರಲ್ಲಿ “ಹ್ಯಾಪಿ ಬರ್ತಡೇ ಶೇಖರ್ ಅಣ್ಣಾ” ಇದು ನಮ್ಮ ಕಡೆಯಿಂದ ನಿಮಗೆ ಕೊಡೋ ಗಿಫ್ಟ್” ಅಂತ ಹೇಳಿದ್ರು.. ಎಂಥಾ ಪ್ರೀತಿ ಅಲ್ವಾ..?
ನಾನು ಬಿ.ಎಡ್ ಮುಗಿಸಿ ಸುಮಾರು ಎರಡು ವರ್ಷಗಳೇ ಕಳೆದವು ಅದ್ರೂ ಕೂಡಾ ಆ ಪುಟ್ಟ ಕಂದಮ್ಮಗಳು ಇಂದಿಗೂ ನಮ್ಮನ್ನು ನೆನಪಿಟ್ಟುಕೊಂಡು ಪ್ರೀತಿಯಿಂದ ಮಾತಾಡಿಸುತ್ತಾರೆ.. ಗುರುಗಳು ನಮ್ಮ ಮೇಲೆ ಇಂದಿಗೂ ಒಳ್ಳೆಯ ಅಬಿಪ್ರಾಯವನ್ನು ಇಟ್ಟುಕೊಂಡು ಮನೆ ಮಗನಂತೆ ನೋಡಿಕೊಳ್ತಾರೆ... ಸಾಮಾಜಿಕ ಬಂಧನದಲ್ಲಿ ಬದುಕುವ ಕಲೆ ಅಂದ್ರೆ ಇದೆ ಅಲ್ವಾ..?? ಈ ಪ್ರೀತಿಗೆ ನಾನು ಸದಾ ಆಭಾರಿ.. ಜೀವನದ ಪಾಠ ಕಲಿಸಿದವರಿಗೆ ಥ್ಯಾಂಕ್ಸ್..
ಕಾರ್ತಿಕ್ ನಿನಗೆ ಮತ್ತೊಮ್ಮೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು. ನೂರು ಕಾಲ ಬಾಳು ನೀ.. ನಗು ನಗುತಾ...!!
ಇಂತಿ ನಿಮ್ಮ
ಸವಿ ನೆನಪಿನ
ಶೇಖ್(ಸ್ಪಿಯ)ರ್
9980868898

0 Комментарии