Hot Posts

10/recent/ticker-posts

ಗೋಲ್ಡನ್ ಲೈಫ್- ಇದು ಗೋಲ್ಡನ್ ಸ್ಟಾರ್ ಗಣೇಶ್ ರವರ ಫುಲ್ ಬಯೋಡಾಟಾ



1   ಗೋಲ್ಡನ್ ಸ್ಟಾರ Ganesh ಹುಟ್ಟಿದ್ದು   ನೆಲ ಮಂಗಲದ ಅಡಕಮಾರನಹಳ್ಳಿ ಅನ್ನೋ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ.. ದಿನಾಂಕ- ಜುಲೈ 2.. 1977 ನೇ ತಾರೀಕು..  .Kishan ಮತ್ತು Smt.Sulochana Kishan ರವರ ಮೊದಲನೆಯ ಪುತ್ರನಾಗಿ ಗಣೇಶ್ ಜನಿಸ್ತಾರೆ,, Mahesh ಮತ್ತು  Umesh. ಅನ್ನೋ ಇಬ್ಬರು ತಮ್ಮಂದಿರು ಕೂಡಾ ಇದ್ದಾರೆ..






2   ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ ಅಂತಲೇ ಖ್ಯಾತಿಯಾಗಿರುವ  ಗಣೇಶ್ ಸ್ಯಾಂಡಲ್ ವುಡ್ ನಲ್ಲಿ  ಅತಿ ಹೆಚ್ಚು ಸಂಭಾವನೆಯನ್ನು ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ.. ಗಣೇಶ್ ನಾಯಕನಟನಾಗಿ ಅಭಿನಯಿಸಿದ ಮೊಟ್ಟ ಮೊದಲ ಚಿತ್ರ ಚೆಲ್ಲಾಟ.. ಚಿತ್ರವನ್ನು ನಿದೇರ್ಶನ ಮಾಡಿದ್ದು ಖ್ಯಾತ ನಿರ್ದೇಶಕ ಎಂ.ಡಿ. ಶ್ರೀಧರ.. ಮತ್ತು೭ ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿರೋದು ಜಿಂಕೆಮರಿ ರೇಖಾ.. ಚೆಲ್ಲಾಟದಲ್ಲಿ  ಡೈನಾಮಿಕ್ ಸ್ಟಾರ ದೇವರಾಜ್, ಹಾಸ್ಯ ನಟ ಕೋಮಲ್ ಮೊದಲಾದವರು ಇದ್ದಾರೆ.. ಗಣೇಶನ ಚೆಲ್ಲಾಟ ಕನ್ನಡಿಗರ ಮನೆ ಮನಗಳಲ್ಲಿ ಬೆರೆತು ಹೋಗಿತ್ತು.. ಇದು ಗಣೇಶ್ ಗೆ ಒಳ್ಳೇ ಇಮೇಜ್ ಅನ್ನೂ ಕೂಡಾ ತಂದು ಕೊಟ್ಟಿತ್ತು.. .. ಮುಂಗಾರು ಮಳೆಯಿಂದಾಗಿ ಗಣೇಶ್ ರಾತ್ರೋ ರಾತ್ರಿ ಸ್ಟಾರ ಆಗಿ ಬಿಟ್ರು. ನಂತರ ಮದ್ವೆ ಆದಮೇಲೆ ಮ್ಮ ಹೋಮ್ ಬ್ಯಾನರ್ನಲ್ಲಿ ಕೂಲ್. ಮತ್ತಿತರ ಸಿನೆಮಾಗಳನ್ನು ಮಾಡಿದ್ರು ಆದ್ರೆ ಅದ್ಯಾವುದೂ ಅಷ್ಟಾಗಿ ಖ್ಯಾತಿಯನ್ನು ಗಳಿಸಲಿಲ್ಲ.






 

3   
ಗೋಲ್ಡನ್ ಸ್ಟಾರ ಗಣೇಶ್ ಓದಿದ್ದು ನೆಲಮಂಗಲದಲ್ಲಿ.. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಡಿಪ್ಲೊಮಾವನ್ನು ಮಾಡಿರೋ ಗಣೇಶ್ , ಈಗ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಬಾಲ್ಯದಿಂದಲೇ ನಟನೆಯ ಹುಚ್ಚನ್ನು ಬೆಳೆಸಿಕೊಂಡಿದ್ದ ಗಣೇಶ್ ಗೆ ಓದಿಗಿಂತ ಸಿನೆಮಾನೇ ಜೀವನಾಡಿಯಾಗಿತ್ತು. ಹೀಗಾಗಿ ಅವರು ನಟನಾ ಶಾಲೆಗೆ ಸೇರಿಕೊಂಡ್ರು.. ನಟನೆಯಲ್ಲಿ ಪದವಿಯನ್ನು ಪಡೆದ್ರು.. ಗಣೇಶ್ ಸಿನೆಮಾದಲ್ಲಿ ಬರದಿದ್ರೆ ಎಲೆಕ್ಟ್ರಾನಿಕ್ಸ್ ಇಂಜಿನಿಯರ ಆಗಿ ಯಾವುದಾದ್ರು ಒಂದು ಕಂಪೆನಿಯಲ್ಲಿ ಕೆಲಸ ಮಾಡ್ತಿದ್ರು..


.

4    
ಗೋಲ್ಡನ್ ಸ್ಟಾರ ಗಣೇಶ್ ಚಿತ್ರ ಜೀವನ ಅಷ್ಟೋಂದು ಸುಗಮವಾಗಿರಲಿಲ್ಲ.. ಮೊದಲು ಕಿರು ತೆರೆಯಲ್ಲಿ ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸದ್ತಾ ಇದ್ರು.. ಆದ್ರೆ ಅದು ಹೊಟ್ಟೆ ತುಂಬಲಿಲ್ಲ. ಹೀಗಾಗಿ ಗಣೇಶ್ ಉದಯಾ ಟಿವಿಯಲ್ಲಿ ನಿರೂಪಕರಾಗಿ ಕೆಲಸಕ್ಕೆ ಸೇರಿಕೊಂಂಡ್ರು.. ಕಾಮಿಡಿ ಟೈಂ  ಅನ್ನೋ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆ ಮನೆಯನ್ನೂ ಮುಟ್ಟಿದ್ರು.. ಕಾಮಿಡಿ ಟೈಂ ಗಣೇಶ್ ಗೆ ಇಷ್ಟೊಂದು ಒಳ್ಳೇ ಟೈಂ ತಂದು ಕೊಡುತ್ತೆ ಅಂತ ಗಣೇಶ್ ಕೂಡಾ ಯಾವತ್ತೂ ಅಂದುಕೊಂಡಿರಲಿಲ್ಲ.. ಗಣೇಶ್ ರವರನ್ನು ಕಾಮಿಡಿ ಟೈಮ್ ನಲ್ಲಿ ನೋಡಿದ ಎಂ.ಡಿ.ಶ್ರೀಧರ ಚೆಲ್ಲಾಟ ಚಿತ್ರಕ್ಕೆ ಗಣೇಶ್ ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ರು..






5   ಗೋಲ್ಡನ್ ಸ್ಟಾರ ಗಣೇಶ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ಚೆಲ್ಲಾಟ, ನಂತರ ಯೋಗ್ ರಾಜ್ ಭಟ್ಟರ ಮುಂಗಾರು ಮಳೆ ಸಿನೆಮಾದಲ್ಲಿ ನಾಯಕರಾದ್ರು.. ಮಳೆ ಗಣೇಶ್ ಗೆ ಆಫರ ಗಳ ಸುರಿಮಳೆಯನ್ನೇ ತಂದು ಕೊಟ್ಟಿತು..  ನಿಮರ್ಾಪಕ ಕೃಷ್ಣಪ್ಪಾಗೆ 75 ಕೋಟಿ ರೂಪಾಯಿಯನ್ನು ತಂದು ಕೊಟ್ಟಿತು.. ಮುಂಗಾರು ಮಳೆಯಲ್ಲಿ ನಟಿಸಿದ್ದ ಗಣೇಶ್ ಮತ್ತು ಪೂಜಾ ಗಾಂಧಿ ಇಬ್ಬರೂ ಹೊಸಬರೆ,.. ಆದ್ರೆ ಒಂದೇ ಸಿನೆಮಾ ಅವರಿಬ್ಬರ ಸಿನಿಮಾ ಜೀವನಕ್ಕೆ ಮಹತ್ವದ ಮೈಲುಗಲ್ಲಾಯ್ತು. ಈಗ ಇಬ್ಬರೂ ನಟ ನಟಿಯರು ಕನ್ನಡ ಸಿನಿ ರಂಗದ ಬಹು ಬೇಡಿಕೆಯ ನಟ ನಟಿಯರು.. ಈಗ ಇವರಿಬ್ಬರ ಕೈಯಲ್ಲಿ ಎರಡು ವರ್ಷಗಳಿಗಾಗುವಷ್ಟು ಆಫರ ಗಳು ಇದ್ಯಂತೆ..






6    ಗಣೇಶ್ 2009 ಫೆಬ್ರುವರಿ-11 ನೇ ತಾರೀಕು ಮಧ್ಯರಾತ್ರಿ ಇದ್ದಕ್ಕಿದ್ದಂತೆ ಶಿಲ್ಪ ಬಾರ  ಕುರ ಅನ್ನೋ ಹುಡುಗಿ ಜೊತೆ ಮದುವೆ ಆಯ್ತು,, ಮದುವೆ ಆಗುತ್ತೆ ಅಂತ ಸ್ವತಹ ಗಣೇಶ್ ಗೇ ಗೊತ್ತಿರಲಿಲ್ಲ..   ಅದ್ಯಾರದೋ ಒತ್ತಡಕ್ಕೆ ಮಣಿದು ಏಕಾಏಕಿ ಮಧ್ಯರಾತ್ರಿಲ್ಲಿ ಮದುವೆ ಮಾಡಿಕೊಂಡಿದ್ರು ಗಣೇಶ್.. ಗಣೇಶ್ ಮದುವೆಯ ಹಿಂದಿನ ರಹಸ್ಯ ಇನ್ನೂ ಕೂಡಾನಿಗೂಢವಾಗಿದೆ,. ಆದ್ರೆ ಶಿಲ್ಪಾ ಗೆ ಮೊದಲೇ ಬೇರೊಂದು ಮದುವೆಯಾಗಿತ್ತು ಮತ್ತು ಒಂದು ಮಗೂ ಕೂಡಾ ಇತ್ತು ಅನ್ನೋ ಊಹಾಪೋಹಗಳು ಕೇಳಿ ಬಂದಿದ್ವು.. ಆದ್ರೆ ಈಗ ಗಣೇಶ್ ಮತ್ತು ಶಿಲ್ಪಾರವರ ದಾಂಪತ್ಯದ ಫಲವಾಗಿ ಚರಿತ್ರಿಯ ಅನ್ನೋ ಪುಟ್ಟ ಮಗು ಇದೆ..






7   
ಗಣೇಶ್  ಮೊದಲು ಯದ್ವಾ ತದ್ವಾ ಅನ್ನೋ ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದ್ರು.. ನಂತರ ಉದಯಾ ಟಿವಿಯ ವಠಾರ,ಪಾಪಾ ಪಾಂಡು. ಅನ್ನೋ ಹಲವು ಧಾರಾವಾಹಿಗಳನ್ನು ಮಾಡಿದ್ರು..  ಗಣೇಶ್ , ಸಂಜುವೆಡ್ಸ್ ಗೀತಾ ಚಿತ್ರದ ನಿರ್ದೇಕ ನಾಗ್ ಶೇಖರ ಮತ್ತು ಸಂಜು ವೆಡ್ಸ್ ಗೀತಾ ಸಿನೆಮಾದ ನಾಯಕ ನಟ ಶ್ರೀನಗರ ಕಿಟ್ಟು ಇವರೆಲ್ಲರೂ ಸಿನೆಮಾದಲ್ಲಿ ವಕಾಶವನ್ನು ಹುಡುಕುತ್ತಾ ಗಾಂಧೀ ನಗರಕ್ಕೆ ಕಾಲಿಟ್ಟವರು,, ಒಟ್ಟಿಗೆ ಒಂದೇ ರೂಮಿನಲ್ಲಿ ಇದ್ದವರು,, ಜೊತೆಯಲ್ಲಿದ್ದು ಕಷ್ಟ ಸುಖಗಳನ್ನು ಉಪವಾಸವನ್ನು ಅನುಭವಿಸಿದ್ರು.. ಆದ್ರೆ ಈಗ ಅವರೆಲ್ಲರ ಜೀವನವೂ ಸುಧಾರಿಸಿದೆ.. ಎಲ್ಲರೂ ಉತ್ತಮ ಪರಿಸ್ಥಿತಿಯಲ್ಲಿದ್ದಾರೆ. ಗಣೇಶ್ ಮತ್ತು ಶ್ರೀನಗರ ಕಿಟ್ಟಿ ಈಗ ಸ್ಯಾಂಡಲ್ ವುಡ್ ಬೇಡಿಕೆಯ ನಟ.. ನಾಗ್ ಶೇಖರ ಕನ್ನಡ ಸಿನಿ ರಂಗದ ಹಾಸ್ಯ ನಟ, ನಿದೇರ್ಶಕ ಆಗಿ ಖ್ಯಾತಿ ಗಳಿಸಿದ್ದಾರೆ..






8     ಗಣೇಶ್ ಅಬ್ಬಬ್ಬಾ ಎಂಥಾ ಹುಡುಗ, ಟಪೋರಿ, ಅಮೃತಧಾರೆ, ತುಂಟ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹ ನಟನಾಗಿ ನಟಿಸಿದ್ರು.. ಕನ್ನಡ ಚಿತ್ರ ರಂಗದಲ್ಲಿ ಅತ್ಯಂತ ತಳ ಹಾದಿಯಿಂದ ಉನ್ನತ ಸ್ಥಾನಕ್ಕೆ ಏರಿದ ಇತ್ತೀಚಿನ ಹುಡುಗರಲ್ಲಿ ಗಣೇಶ್  ಕೂಡಾ ಒಬ್ರು.. ಆದ್ರೆ  ಸಹ ನಟನಾಗಿ ನಟಿಸುವಾಗ ಗಣೇಶ್ ರವರ ನಟನೆಯನ್ನು ಎಲ್ಲರೂ ಮೆಚ್ಚಿ ಪ್ರಶಂಸ್ತಿದ್ರು. ಆದ್ರೆ ಗಣೇಶ್ ನನ್ನು ನಾಯಕನ ಜಾಗದಲ್ಲಿ ನಿಲ್ಲಿಸಿ ನೋಡೋ ತಾಳ್ಮೆಯಾಗಲಿ, ಉದಾರ ಮನಸ್ಸಾಗಲೀ ಯಾರಿಗೂ ಇರಲಿಲ್ಲ. ಮನಸ್ಸು ಬಂದಿದ್ದು ನಿದೇರ್ಶಕ ಎಂ.ಡಿ.ಶ್ರೀಧರ ಗೆ ಮಾತ್ರ..






9    ನಟ ಗಣೇಶ್ ಮತ್ತು  ನಿದೇರ್ಶಕ ಎಂ.ಡಿ. ಶ್ರೀಧರ ಜೋಡಿ ಚೆಲ್ಲಾಟ ಸಿನೆಮಾವನ್ನು ಮಾಡಿತ್ತು. ಚೆಲ್ಲಾಟ ಯಶಸ್ವಿಯಾದ ನಂತರ ಮತ್ತೆ ಒಂದಾದ ಅದೇ ಜೋಡಿ ಕೃಷ್ಣ ಅನ್ನೋ ರೊಮ್ಯಾಂಟಿಕ್ ಪ್ರೇಮಕಥೆಯ ಸಿನೆಮಾವನ್ನು ಮಾಡಿದ್ರುಎರಡೂ ಸಿನೆಮಾಗಳೂ ಹಿಟ್ ಆದವು. ನಂತರ ಯೋಗ್ ರಾಜ್ ಭಟ್ ಮತ್ತು ಗಣೇಶ್ ಜೋಡಿ ಮುಂಗಾರು ಮಳೆ ಸಿನೆಮಾವನ್ನು ಮಾಡಿದ್ರು.. ಮುಂಗಾರು ಮಳೆ ಸೂಪರ ಡೂಪರ ಹಿಟ್ ಆಯ್ತು,.. ಅದಕ್ಕೆ ಮತ್ತೆ ಯೋಗ್ ರಾಜ್ ಭಟ್ ಮತ್ತು ಗಣೇಶ್ ಸೇರಿ ಗಾಳಿ ಪಟ ಅನ್ನೂ\ ಸೂಪರ ಚಿತ್ರವನ್ನು ತೆರೆಗೆ ತಣದ್ರು.. ಎರಡೂ ಸಿನೆಮಾಗಳೂ ಸೂಪರ ಹಿಟ್ ಆದವು.. ನಂತರ ಎಸ್ ನಾರಾಯಣ್ ಮತ್ತು ಗಣೇಶ್ ಸೇರಿ ಚೆಲುವಿನ ಚಿತ್ತಾರ ಅನ್ನೋ ಪ್ರೇಮ ಕಥೆಯನ್ನು ಮಾಡಿದ್ರು.. ಇದು ಕನ್ನಡ ಚಿತ್ರರಂಗದಲ್ಲೇ ಹೊಸ ಸಂಚಲನವನ್ನು ಮೂಡಿಸಿತ್ತು.. ಇದೇ ಖುಷಿಯಲ್ಲಿ ನಾರಾಯಣ್ ಮತ್ತು ಗಣೇಶ್ ಶೈಲೂ ಸಿನೆಮಾ ಮಾಡಿದ್ರು.. ಆದ್ರೆ ಅದ್ಯಾಕೋ ಅಷ್ಟಾಗಿ ಜನಮೆಚ್ಚುಗೆ ಪಡೀಲಿಲ್ಲ.. ಆದ್ರೂ ಕೂಡ ಮತ್ತೊಮ್ಮೆ ಗಣೇಶ್ ಮತ್ತು ನಾರಾಯಣ್ ಸೇರಿ ಮುಂಜಾನೆ ಅನ್ನೋ ಸಿನೆಮಾವನ್ನು ಮಾಡಿದ್ರು. ಆದ್ರೆ ಅದೇನ್ ಬ್ಯಾಡ್ ಲಕ್ಕೋ ಏನೋ ಅದೂ ಕೂಡಾ ಫ್ಲಾಪ್ ಆಯ್ತು..






10    ನಾಯಕ ನಟ ಗಣೇಶ್, ಮತ್ತು ಶ್ರೀನಗರ ಕಿಟ್ಟಿ ಮತ್ತು ನಿದೇರ್ಶಕ ನಾಗ್ ಶೇಖರ ಆತ್ಮೀಯ ಸ್ನೇಹಿತರು,, ಸಿನೆಮಾಗೆ ಸೇರಬೇಕು ಅಂತ ಹಂಬಲದಲ್ಲಿದ್ದಾಗ ಒಂದೇ ರೂಮಿನಲ್ಲಿ ಜೊತೆಯಾಗಿದ್ದವರು.. ಹೀಗಾಗಿ ಒಳ್ಳೇ ಸ್ಥಿತಿಗೆ ಬಂದ ನಂತರ ನಾಗ್ ಶೇಖರ ತನ್ನ ಆತ್ಮೀಯ ಸ್ನೇಹಿತ ಗಣೇಶ್ ರನ್ನು ಹಾಕಿಕೊಂಡು ಅರಮನೆ ಅಂತ ಸಿನೆಮಾ ಮಾಡಿದ್ರು. ಕೊಲ್ಲೇ ಅನ್ನೋ ಹಾಡಿಗೆ ಜನರು ಮುಗಿ ಬಿದ್ದು ಆಡಿಯೋವನ್ನು ಖರೀದಿಸಿರು.. ಸಿನೆಮಾ ಕೂಡಾ ಯಶಸ್ವಿಯಾಯ್ತು. ನಂತರ  ನಾಗ್ ಶೇಖರ ತನ್ನ ಇನ್ನೊಬ್ಬ ಸ್ನೇಹಿತ ಶ್ರೀನಗರ ಕಿಟ್ಟಿಗಾಗಿ ಸಂಜು ವೆಡ್ಸ್ ಗೀತಾ ಅನ್ನೋ ಸಿನೆಮಾವನ್ನು ಮಾಡಿದ್ರು.. ಅದೂ ಕೂಡಾ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೀತು..

Отправить комментарий

0 Комментарии