Hot Posts

10/recent/ticker-posts

ದೇವರನ್ನು ತೋರಿಸಿದ ಸನ್ಯಾಸಿ

ದೇವರನ್ನು ತೋರಿಸಿದ ಸನ್ಯಾಸಿ


ಒಂದು ದಿನ ಒಬ್ಬ ಸನ್ಯಾಸಿಯು ನದಿ ತೀರದಲ್ಲಿ ಧ್ಯಾನ ಮಾಡುತ್ತಿದ್ದರು.. ಒಬ್ಬ ಯುವಕನು ಅವರ ಬಳಿಗೆ ಬಂದು ಅವರ ಧ್ಯಾನಕ್ಕೆ ಅಡಚಣೆಯನ್ನು ಉಂಟು ಮಾಡಿ “ಗುರುಗಳೆ ನನು ನಿಮ್ಮ ಶಿಷ್ಯನಾಗಲು ಬಯಸುತ್ತಿದ್ದೇನೆ” ಎಂದು ಹೇಳಿದನು,. ಆಗ ಆ ಸನ್ಯಾಸಿಯು “ಏಕೆ?” ಎಂದು ಕಾರಣ ಕೇಳಿದರು. ಆ ಯುವಕನು ಒಂದು ಕ್ಷಣ ಯೋಚಿಸಿ “ನಾನು ದೇವರನ್ನು ಹುಡುಕಲು ಬಯಸುತ್ತಿದ್ದೇನೆ” ಎಂದು ಹೇಳಿದನು.


ಗುರುಗಳು ಏಕಾಏಕಿ ಜಿಗಿದು ನಿಂತರು.. ಮತ್ತು ಆ ಯುವಕನ ಕತ್ತನ್ನು ಹಿಡಿದುಕೊಂಡು, ಎಳೆದು ತಂದು, ನದಿಯಲ್ಲಿ ಬಿಡುತ್ತಾರೆ. ಮತ್ತು ಅವನ ತಲೆಯನ್ನು ಹಿಡಿದುಕೊಂಡು ನೀರಿನೊಳಗೆ ಮುಳುಗಿಸುತ್ತಾರೆ. ಒಂದು ನಿಮಿಷ ಅವನನ್ನು ಹಾಗೇ ನೀರಿನಲ್ಲಿ ಮುಳುಗಿಸಿದ ನಂತರ ಅವನಿಗೆ ಜಾಡಿಸಿ ಒದೆಯುತ್ತಾರೆ. ಅವನಿಗೆ ಉಸಿರು ಕಟ್ಟಿದಂತಾಗುತ್ತದೆ ಮತ್ತು ಆನಂತರ ಆ ತೊಂದರೆಯಿಂದ ಸುಧಾರಿಸಿಕೊಳ್ಳಲು ಅವನಿಗೆ ಅವಕಾಶ ನೀಡುತ್ತಾರೆ.. ನಂತರ ಆ ಸನ್ಯಾಸಿಯು ಆ ಯುವಕನನ್ನು ನದಿಯಿಂದ ಎಳೆದು ಹೊರ ತರುತ್ತಾರೆ. ಆ ನೀರಿನಿಂದಾಗಿ ಆ ಯುವಕನಿಗೆ ಉಸಿರು ಕಟ್ಟಿದಂತಾಗುತ್ತದೆ. ಉಸಿರಾಡಲು ಕಷ್ಟವಾಗಿ ಕೆಮ್ಮುತ್ತಿರುತ್ತಾನೆ. ಅಂತಿಮವಾಗಿ ಅವನನ್ನು ಆರಾಮಾಗಿ ಬಿಟ್ಟು ಆ ಸನ್ಯಾಸಿ ಹೇಳುತ್ತಾನೆ “ಈಗ ಹೇಳು.. ನಿನ್ನನ್ನು ನೀರಿನಲ್ಲಿ ಮುಳುಗಿಸಿದಾಗ ಎಲ್ಲದಕ್ಕಿಂತ ಅತಿ ಮುಖ್ಯವಾಗಿ ನಿನಗೆ ಬೇಕೆನಿಸಿದ್ದು ಯಾವುದು..??” ಎಂದು ಕೇಳುತ್ತಾರೆ. ಆಗ ಯುವಕ “ಗಾಳಿ” ಎಂದು ಉತ್ತರಿಸುತ್ತಾನೆ..




“ಚೆನ್ನಾಗಿದೆ.. ಈಗ ಮನೆಗೆ ಹೋಗು.. ಗಾಳಿಗಿಂತ ದೊಡ್ಡ ದೇವರು ನಿನಗೆ ಬೇಕು ಅಂತ ಅನಿಸಿದಾಗ ಮತ್ತೆ ನನ್ನ ಹತ್ತಿರ ಬಾ” ಎಂದು ಹೇಳುತ್ತಾನೆ ಆ ಸನ್ಯಾಸಿ

Отправить комментарий

0 Комментарии