Hot Posts

10/recent/ticker-posts

ಹೃದಯದ ನೋವನ್ನು ನೋಡಲಾಗದೇ ಆ ಸೂರ್ಯನೂ ಕೂಡ ಕಡಲಿನ ಮರೆಯಲ್ಲಿ ಮುಖ ಮುಚ್ಚಿಕೊಂಡ..!!



ಅವಳು ಮಹಾಲಕ್ಷ್ಮಿ.. ಕಾಲೇಜಿನಲ್ಲಿ ಓದುವಾಗ ಶಿವಾಜಿ ಅನ್ನೋ ಹುಡುಗನ ಮಾತಿನಿಂದ ಪ್ರಭಾವಿತಳಾಗಿದ್ದಳು.. ಅವನ ಬಗ್ಗೆ ಅವಳಲ್ಲಿ ಪ್ರೀತಿ ಮೂಡಿತ್ತು.. ಅದೊಂದು ದಿನ ಮಾತಾಡ್ತಾ ಮಾತಾಡ್ತಾ ತನ್ನ ಪ್ರೀತಿಯನ್ನು ಹೇಳಿ ಬಿಟ್ಟಳು.. ಅವನು ಹಿಂದೂ ಮುಂದು ನೋಡದೇ ಒಪ್ಪಿಕೊಂಡು ಬಿಟ್ಟ.. ಯಾಕಂದ್ರೆ ಆತ್ಮೀಯ ಸ್ನೇಹಿತೆ ಸಂಗಾತಿಯಾದ್ರೆ ಜೀವನ ಸುಂದರವಾಗುತ್ತೆ ಅನ್ನೋದು ಅವನ ಆಸೆ.. ಕಾಲೇಜು ಮುಗಿಯುವ ಹೊತ್ತಿಗೆ ಅವರಿಬ್ಬರೂ ಒಬ್ಬರನ್ನು ಒಬ್ಬರು ಬಿಟ್ಟು ಇರಲಾರದಷ್ಟು ಆತ್ಮೀಯರಾಗಿ ಬೆರೆತು ಹೋದರು.. ನೂರಾರು ಕನಸುಗಳನ್ನು ಕಟ್ಟಿಕೊಂಡು ಪುಟ್ಟ ಪ್ರೀತಿಯ ಗೂಡನ್ನು ಕಟ್ಟಿಕೊಂಡ್ರು.. ಆದ್ರೆ ಕಾಲೇಜು ಜೀವನ ಮುಗಿಯುವಷ್ಟರಲ್ಲಿ ಆ ಹುಡುಗಿ ಮನೆಯಲ್ಲಿ ಈ ಪ್ರೀತಿಯ ಸುದ್ದಿ ಸುನಾಮಿ ಅಲೆಯಂತೆ ಅಪ್ಪಳಿಸಿಬಿಟ್ಟಿತ್ತು..!! ಆ ಅಲೆಯ ಹೊಡೆತಕ್ಕೆ ಸಿಲುಕಿದ ಆ ಹುಡುಗಿ ತನ್ನ ಮನೆಯವರಿಗೋಸ್ಕರ ಪ್ರೀತಿಯನ್ನೇ ದೂರ ಮಾಡಿಕೊಳ್ಳಲು ಶುರು ಮಾಡಿದಳು.. ಅಷ್ಟರಲ್ಲಿ ಅವಳ ಹತ್ತಿರವಿದ್ದ ಫೋನನ್ನು ಅವಳ ಅಣ್ಣ ಕಿತ್ತು ಬಿಸಾಕಿಬಿಟ್ಟಿದ್ದ..


          ಆದರೆ ಅದೊಂದು ದಿನ ಅವನು ಅವಳನ್ನು ಭೇಟಿ ಮಾಡಿದನು.. “ನಿನ್ನನ್ನು ಬಿಟ್ಟು ಇರೋಕೆ ಆಗಲ್ಲ ಅಷ್ಟು ನಾನು ನಿನ್ನನ್ನು ಹಚ್ಚಿಕೊಂಡಿದ್ದೀನಿ ಅಂತ ಕಣ್ಣೀರು ಹಾಕಿ ಹೇಳಿದ.. ವಿಧಿಯ ಆಟ ಹೇಗಿದೆ ಅಂದ್ರೆ ಬೇಡ ಬೇಡ ಅಂದುಕೊಂಡಿದ್ದ ಹುಡುಗಿ ಬೇಕು ಬೇಕು ಅಂತ ಅವನಲ್ಲಿಗೆ ಬಂದು ಪ್ರೀತಿಯ ಗಿಡ ಬೆಳೆಸಿ ಅದು ಹೆಮ್ಮರವಾಗಿ ಬೆಳೆದ ಮೇಲೆ ಅದನ್ನು ಸುಟ್ಟು ಹಾಕು ಅಂತ ಹೇಳಿದ್ದು ಅವನಿಗೆ ಅತೀವವಾದ ನೋವು ತಂದಿತು.. ಅದಕ್ಕೆ ಅವಳು “ನಿನ್ನನ್ನು ಬಿಟ್ಟು ಇರೋದಕ್ಕೆ ನನಗೂ ಆಗಲ್ಲ.. ಆದ್ರೆ ಈಗ ನಮಗಿರೋದು ಒಂದೇ ದಾರಿ.. ನೀನು ಒಳ್ಳೇ ಸ್ಥಾನವನ್ನು ಪಡ್ಕೊ.. ಬಡವನಾಗಿರೋ ನೀನು ಸಿರಿವಂತರಂತೆ ಮನೆ ಕಟ್ಟು.. ನನಗೋಸ್ಕರ.. ಆಗ ನಿನ್ನ ಸ್ಥಾನವನ್ನು ನೋಡಿದ ಮೇಲಾದ್ರೂ ನಮ್ಮ ಮನೆಯಲ್ಲಿ ಒಪ್ಪಬಹುದು ಅಂತ ಹೇಳಿದಳು.. ಅವನಿಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳೋಕೆ ಇರೋದು ಅದೊಂದೇ ಗುರಿ ಅಂತ ಯೋಚಿಸಿ ಅದಕ್ಕೆ ಒಪ್ಪಿಗೆ ಸೂಚಿಸಿದ..


ಅದೊಂದು ದಿನ ಅವಳು ಫೋನ್ ಮಾಡಿ ನನ್ನನ್ನು ನೀನು ಎಷ್ಟು ಪ್ರೀತಿಸ್ತೀಯ..?? ನನ್ನ ಹೇಗೆ ನೋಡ್ಕೋತೀಯ  ಅಂತ ಕೇಳಿದಳು.. ಆಗ ಅವನು ಹೇಳಿದ್ದು ಇಷ್ಟು “ನಾನು ಬಿಸಿಲಲ್ಲಿ ನಿಂತಿದ್ರೂ ಪರವಾಗಿಲ್ಲ.. ಆ ನನ್ನ ನೆರಳಿನಲ್ಲಿ ನಿನ್ನನ್ನು ಸುಖವಾಗಿ ನೋಡಿಕೊಳ್ತೀನಿ ಅಂತ ಹೇಳಿದ.. ವಿಪರ್ಯಾಸ ಅಂದ್ರೆ ಆ ಮಾತಿನ ಅರ್ಥವನ್ನು ಆ ಹುಡುಗಿ ಗ್ರಹಿಸಲೇ ಇಲ್ಲ.. ಬದಲಾಗಿ “ನನ್ನನ್ನು ರಾಣಿ ಥರ ನೋಡ್ಕೋತೀನಿ ಅಂತ ತಮಾಶೇಗೂ ಹೇಳಲಿಲ್ಲ ನೀನು” ಅಂತ ಕೋಪಿಸಿಕೊಂಡಳು.. ಅವಳನ್ನು ಸಮಾಧಾನ ಮಾಡಿ ಹೇಳಿದ.. “ನಾನು ಸುಳ್ಳು ಹೇಳಿ ನಿನ್ನನ್ನು ಪ್ರೀತಿಸೋದು ದೊಡ್ಡದಲ್ಲ ಕಣೆ.,. ಆದ್ರೆ ಆಥರ ನಾನು ಹೇಳಿ ಆಮೇಲ ಅದನ್ನು ಈಡೇರಿಸೋದಕ್ಕೆ ಆಗದಿದ್ರೆ ಆಗ ನೀನು ಇದಕ್ಕಿಂತ ಹೆಚ್ಚಾಗಿ ನೋವು ಪಡ್ತೀಯ.. ಅದಿಕ್ಕೆ ನಾನು ನಿನ್ನ ಹತ್ರ ಏನನ್ನೂ ಮುಚ್ಚಿ ಇಟ್ಟಿಲ್ಲ.. ಇಡೋದೂ ಇಲ್ಲ” ಅಂತ ನೋವಿನಿಂದ ಹೇಳಿದ.. ಆದ್ರೆ  ಅವಳಿಗೆ ಹಠ ಜಾಸ್ತಿ.. ಕೋಪಿಸಿಕೊಂಡುಬಿಟ್ಟಳು..


ಅರ್ಥ ಮಾಡಿಕೊಳ್ಳುತ್ತಿಲ್ಲ ಅನ್ನೋ ನೋವು ಅವನನ್ನು ತುಂಬಾ ಬಧಿಸತೊಡಗಿದವು.. ಆದ್ರೆ ಅವಳನ್ನು ಬಿಟ್ಟು ಇರೋಕೆ ಆಗದಷ್ಟು ಹುಚ್ಚನಾಗಿ ಹೋಗಿದ್ದ..  ಒಂದು ದಿನ ಅವಳನ್ನು ತನ್ನ ಮನೆಗೆ ಕರೆಸಿದ,. ತನ್ನ ಅಪ್ಪ ಅಮ್ಮನಿಗೆ ತನ್ನ ಪ್ರೀತಿಯ ವಿಷಯ ಹೇಳಿ ದೂರ ಮಾಡಬೇಡಿ ಅಂತ ಕಣ್ಣೀರು ಹಾಕಿಕೊಂಡ.. ಕಾಡಿ ಬೇಡಿ ಏನೇನೋ ಮಾಡಿ ತನ್ನ ಅಪ್ಪ ಅಮ್ಮನಿಗೆ ಒಪ್ಪಿಸಿದ.. ಇಷ್ಟವಿಲ್ಲದಿದ್ರೂ ಮಗನ ಒತ್ತಡಕ್ಕೆ ಮತ್ತು ಅವನ ಸುಖಕ್ಕಾಗಿ ನೋಡೋಣ ಅಂತ ಅಂದ್ರು..
ನಂತರ ಸ್ವಲ್ಪ ದಿನದ ನಂತರ ಅವಳು ಫೋನ್ ಮಾಡಿದಳು.. “ನಿಮ್ ಫ್ಯಾಮಿಲಿ ನಂಗೆ ತುಂಬಾ ಇಷ್ಟ ಆಯ್ತು.. ನಿಮ್ ನಡುವೆ ಇರೋ ಆ ಪ್ರೀತಿ ತುಂಬಾನೇ ಇಷ್ಟ ಆಯ್ತು ಅಂತ ಅಂದ್ಳು.. ಅವನಿಗೆ ಖುಷಿ ಆಯ್ತು.. ಆದ್ರೆ ಅವಳು ಕೇಳಿದ ಮತ್ತೊಂದು ಮಾತು ಅವನನ್ನು ದಂಗಾಗಿಸಿತ್ತು.. “ನಿಮ್ಮ ಫ್ಯಾಮಿಲಿ ಮತ್ತು ನಾನು” ಇಬ್ಬರಲ್ಲಿ ಯಾರು ನಿಂಗೆ ಬಹಳ ಮುಖ್ಯ ಅಂತ ಕೇಳಿದಳು.. ಎರಡು ಕಣ್ಣಿನಲ್ಲಿ ಯಾವುದು ಇಷ್ಟ ಅಂತ ಹೇಳೋಕೆ ಸಾಧ್ಯಾ ಇದ್ಯಾ,,?? ನನಗೆ ಇಬ್ಬರೂ ಬಹಳ ಮುಖ್ಯ..  ಅಂತ ಅವನು ಹೇಳಿದ.. ಆದರೆ ಅವಳು ಅದ್ಯಾವುದನ್ನೂ ಒಪ್ಪಲಿಲ್ಲ.. “ನಿನಗೆ ನಾನು ಬೇಕಾದ್ರೆ ನಿಮ್ ಫ್ಯಾಲೀನ ಬಿಟ್ಟು ಬಾ.. ಇಲ್ಲ ಅಂದ್ರೆ ನಾನು ನಿಂಗೆ ಸಿಗೋದಿಲ್ಲ ಅಂತ ಹೇಳಿದಳು.. ಅವನ ಹೃದಯವೇ ಕ್ಷಣ ಹೊತ್ತು ನಿಂತು ಹೋಗಿತ್ತು.. ಪ್ರೀತಿ ಅನ್ನೋ ಅಸ್ತ್ರವನ್ನು ಇಟ್ಟುಕೊಂಡು ಅವಳು ಅವನನ್ನು ಚುಚ್ಚಿ ಕ್ಷಣ ಕ್ಷಣಕ್ಕೂ ಕೊಲ್ಲುತ್ತಿದ್ದಳು.. ಆದರೆ ಅಮಾಯಕ ಹುಡುಗನಿಗೆ “ಆ ನೋವಿನ ಅನುಭವ ಅವಳನ್ನು ಮರೆಸು ಬದಲು ಮತ್ತಷ್ಟು ಅವಳೇ ಬೇಕು ಅನ್ನೋ ಭಾವನೆ ಮೂಡಿಸತೊಡಗಿತು..ವಿಧಿಯ ಆಟ ಎಷ್ಟರ ಮಟ್ಟಿಗೆ ಕ್ರೂರತೆ ಇತ್ತು ಅಂದ್ರೆ ತನ್ನ ಕುಟುಂಬಕ್ಕಿಂತ ನನ್ನನ್ನು ನಂಬಿ ಬರುವ ನೀನೇ ನನಗೆ ಬಹಳ ಮುಖ್ಯ.. ಬಾ.. ಎಲ್ಲಾದ್ರೂ ದೂರ ಹೋಗಿ ಬಾಳೋಣ ಅಂತ ಅವನು ಹೇಳಿಬಿಟ್ಟ..
          ಆದರೆ ಆ ಹುಡುಗಿ ಹೇಳಿದ್ದು ಒಂದೇ ಮಾತು.. “ ನಾನು ನಿನ್ನ ಹಿಂದೆ ಓಡಿ ಬಂದರೆ ನನ್ನ ತಂದೆ ತಾಯಿ, ನಮ್ಮ ಮಾನ ಮರ್ಯಾದೆಯ ಗತಿ ಏನಾಗುತ್ತೆ ಅಂತ ಒಂದು ಕ್ಷಣ ಯೋಚಿಸು ಅಂದಳು.. “ಇವನು ಅವಳಿಗಾಗಿ ಕುಟುಂಬವನ್ನೆಲ್ಲಾ ಬಿಟ್ಟು ಬರಬೇಕು.. ಆದರೆ ಆ ಹುಡುಗಿ ತನ್ನ ಕುಟುಂಬದ ಬಗ್ಗೆ ಯೋಚಿಸ್ತಾ ಇದ್ದಳೆ ಅನ್ನೋ ಮಾತು ಕೇಳಿ ಇವನ ಹೃದಯ ಮತ್ತಷ್ಟು ರಕ್ತ ಕಣ್ಣೀರನ್ನು ಸುರಿಸಿತು..  “ನಿನಗೋಸ್ಕರ ನಾನು ನನ್ನ ಕುಟುಂಬಾನೇ ಬಿಟ್ಟು ಬರ್ತಿದ್ದೀನಿ.. ನನಗೋಸ್ಕರ ನೀನು ನಿನ್ನ ಕುಟುಂಬಾನ ಬಿಟ್ಟು ಬರೋದು ನ್ಯಾಯ ಅಲ್ವಾ..?? ನಿನಗೆ ನಾನು ಬೇಕಿಲ್ವಾ ಅಂತ ಕಣ್ಣೀರು ಹಾಕಿ ಕೇಳಿದ.. ಅದಕ್ಕೆ ಅವಳು ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟಳು.. “ನಿನಗೆ ನಾನು ಬೇಕು.. ನನ್ನನ್ನು ಬಿಟ್ಟು ನೀನು ಇರೋದಿಲ್ಲ.. ‌ಅದಕ್ಕೆ ನೀನು ನಾನು ಹೇಳಿದ ಹಾಗೆ ಕೇಳ್ತಾ ಇದ್ದೀಯ.. ಆದ್ರೆ ನನಗೆ ನನ್ನ ಕುಟುಂಬ ಮುಖ್ಯ.. ಆಮೇಲೆ ನೀನು ಅಂದಳು..



ಅಂದು ಅವಳಾಗಿ ಅವಳೇ ಬಂದು ಪ್ರೀತಿ ಮಾಡ್ತೀನಿ.. ನಿನ್ ಜೊತೆ ಜೀವನ ಹಂಚಿಕೊಳ್ತೀನಿ ಅಂತ ಗೋಗರೆದ ಹುಡುಗಿ ಇದ್ದಕ್ಕಿದ್ದಂಗೆ ಈ ರೀತಿಯಾದ ಕಠಿಣ ಮಾತುಗಳನ್ನು ಆಡಿದಾಗ ಅವನಿಗೆ ತುಂಬಾ ನೋವಾಯ್ತು.. ಪ್ರೀತಿಯೇ ಬೇಡ ಅಂದುಕೊಂಡಿದ್ದ ಅವನು ಈ ಮಟ್ಟಕ್ಕೆ ಅವಳಿಗಾಗಿ ಪಟ್ಟ ಶ್ರಮ ನೀರಿನಲ್ಲಿ ಹುಣಸೆ ಹಣ್ಣು ಹಿಂಡಿದಂತಾಯ್ತು..



ಒಂದಿನ ಅವಳು ಫೋನ್ ಮಾಡಿ ಹೇಳಿದಳು..ನೀನು ಒಳ್ಳೆ ಮನೆ ಕಟ್ಟಿ, ಹಣ ಗಳಿಸು.. ಆಗ ನಾನೇ ನಮ್ ಮನೇಲಿ ಒಪ್ಪಿಸ್ತೀನಿ.. ಅಲ್ಲಿಯವರೆಗೂ ನಾನು ನಿಂಗೆ ಫೋನ್ ಮಾಡೋದಿಲ್ಲ ಅಂತ ಹೇಳಿಬಿಟ್ಟಳು.. ಅಳನ್ನು ನೋಡದೇ ಮಾತನಾಡದೇ ಅವನು ಅರೆ ಹುಚ್ಚನಾಗಿ ಹೋದ.. ಅವಳು ಕೊಟ್ಟ ಪತ್ರಗಳು, ಅವಳು ಕಳಿಸಿದ ಮೆಸೇಜ್ ಗಳನ್ನು ನೋಡ್ತಾ ನೋಡ್ತಾ ನರಕವನ್ನೇ ಅನುಭವಿಸಿಬಿಟ್ಟ.. ಆದ್ರೆ ಅದೊಂದು ದಿನ ಅವನಲ್ಲಿ ಛಲ ಹುಟ್ಟಿತು.. ದುಡ್ಡು ಇದ್ರೆ ಅವಳು ತನ್ನ ಮನೆಯಲ್ಲಿ ಒಪ್ಪಿಸೋದಕ್ಕೆ ಸಹಾಯವಾಗುತ್ತೆ.. ಅದಕ್ಕೆ ಅವಳು ಹೀಗೆ ಮಾಡ್ತಾ ಇದ್ದಾಳೆ ಅಂತ ಅವನಿಗೆ ಅರಿವಾಯ್ತು.. ಅವಳನ್ನು ಪಡೆಯಲೇ ಬೇಕು ಅನ್ನೋ ಹುಚ್ಚು ಹಠದಿಂದಾಗಿ ಲೋಕ ಗೆಲ್ಲೋಕೆ ಹೊರಟ.. ಸತತ ಪ್ರಯತ್ನ, ಹಗಲು ರಾತ್ರಿ ಎನ್ನದೇ ದುಡಿಯಲಾರಂಭಿಸಿದ.. ಅವಳು ತನಗೆ ಸಿಕ್ಕೇ ಸಿಗ್ತಾಳೇ ಅನ್ನೋ ಹುಚ್ಚಿನಿಂದ ಅವನು ಎಷ್ಟೇ ಕಷ್ಟವಾದ್ರೂ ಎಂಥದ್ದೇ ಕೆಲಸ ಇದ್ರೂ ಮಾಡ್ತಾ ಇದ್ದ.. ಅವನ ಸ್ನೇಹಿತರೇ ಬೆರಗಾಗುವಂತೆ ಕೇವಲ ಒಂದೇ ವರ್ಷದಲ್ಲಿ ಸ್ವಲ್ಪ ಹಣ ಜಮೆ ಮಾಡಿದ ಜೊತೆಗೆ  ಬ್ಯಾಂಕಿನಿಂದ ಸ್ವಲ್ಪ ಹಣವನ್ನು ಲೋನ್ ಪಡೆದು ಮನೆ ಕಟ್ಟೋಕೆ ಶುರು ಮಾಡಿದ.. ಎಲ್ಲಾ ಅವಳಿಗಾಗಿ.. ಈ ವಿಷಯ ಅಳಿಗೆ ತಿಳೀತು.. ಅವಳು ಒಮ್ಮೆ ಫೋನ್ ಮಾಡಿದಳು.. ಅವನಿಗೆ ತನ್ನ ಪ್ರೀತಿ ಸಿಕ್ಕೇಬಿಟ್ಟಿತು ಅನ್ನೋ ಹೊಸ ಹುಮ್ಮಸ್ಸು ಮೂಡಿತು.. ಅವಳು ಮಾತನಾಡುತ್ತಾ ಮತ್ತೊಂದು ವಿಷಯವನ್ನು ಹೇಳಿದಳು.. “ನೀನು ಒಳ್ಳೇ ಸ್ಥಾನವನ್ನು ಗಳಿಸಿದ್ದೀಯ.. ಒಳ್ಳೇ ಕೆಲಸವನ್ನು ಹಿಡಿದಿದ್ದೀಯ.. ಆದ್ರೆ ನಮ್ಮ ಮನೇಲಿ  ಸರ್ಕಾರಿ ಕೆಲಸದಲ್ಲಿ ಇರೋ ಹುಡುಗನಿಗೆ ನನ್ನನ್ನು ಕೊಡಬೇಕು ಅಂತಿದ್ದಾರೆ.. ನೀನು ಸರ್ಕಾರಿ ಕೆಲಸ ತಗೋ.. ಅಮೇಲೆ ನೋಡೋಣ ಅಂದಳು..
ಇಷ್ಟು ದಿನ ಒಳ್ಳೇ ಕೆಲಸ, ಒಂದು ಮನೆ ಕಟ್ಟಿಸಿದ ನಂತರ ನಾನು ನಮ್ಮ ಮನೇಲಿ ಮಾತಾಡ್ತೀನಿ ಅಂತ ಹೇಳಿದ್ದ ತನ್ನ ಪ್ರೇಯಸಿ ಇದ್ದಕ್ಕಿದ್ದಂತೆ ಸರ್ಕಾರಿ ಕೆಲಸ ಗಿಟ್ಟಿಸಿಕೋ ಅಂತ ಹೇಳಿದ್ದು ಅವನ ಎಲ್ಲಾ ಆಸೆಗಳಿಗೆ ನೀರು ಚೆಲ್ಲಿದಂತಾಯ್ತು.. ಅವಳಿಗಾಗಿ ಅವನು ಒಂದು ವರ್ಷದಿಂದ ಪಟ್ಟ ಶ್ರಮ ವ್ಯರ್ಥವಾಯ್ತು ಅಂತ ನೊಂದುಕೊಂಡ.. ಆದ್ರೆ ಅದೇನೋ ಹುಚ್ಚು ಅವನಿಗೆ.. ಅವಳನ್ನು ಪಡೆದೇ ತೀರಬೇಕು ಅನ್ನೋ ದೃಢ ನಿರ್ಧಾ ಅವನಲ್ಲಿ ಮೂಡಿತ್ತು.. ಅದಕ್ಕಾಗಿ ಸರ್ಕಾರಿ ಕೆಲಸಕ್ಕಾಗಿ ಓದೋಕೆ ಶುರು ಮಾಡಿದ.. ಇರೋ ಕೆಲಸವನ್ನು ಬಿಟ್ಟು ಒಂದು ವರ್ಷ ಮನೆಯಲ್ಲಿ ಕುಳಿತು ಓದಿದ..  ಕೆಲಸ ಇಲ್ಲದ ಕಾರಣ ಅವನಿಗೆ ಊಟ ಮಾಡೋದಕ್ಕೂ ಹಣ ಇಲ್ಲದಂತಾಯ್ತು.. ಅದೆಷ್ಟೋ ದಿನಗಳು ಊಟವನ್ನೂ ಮಾಡದೇ ಓದಿದ.. ಅವನು ಹಸಿದಿರುವುದನ್ನು ನೋಡಿದ ಅವನ ಸ್ನೇಹಿತರೇ ಅವನನ್ನು ಕರೆದುಕೊಂಡು ಹೋಗಿ ಊಟ ಮಾಡಿಸ್ತಾ ಇದ್ರು.. ಅವನು ಓದಿದ ಶೈಲಿ ಮತ್ತು ವಿಷಯ ಜ್ಞಾನವನ್ನು ನೋಡಿದ್ರೆ ಸರ್ಕಾರಿ ಕೆಲಸ ಸಿಕ್ಕೇ ಸಿಗುತ್ತೆ ಅನ್ನೋ ದೃಢ ವಿಶ್ವಾಸ ಅವನಲ್ಲಿ ಮೂಡಿತ್ತು.. ಅಷ್ಟು ಆತ್ಮ ವಿಶ್ವಾಸದಿಂದ ಓದಿದ..


ಪರೀಕ್ಷಾ ದಿನ ಬಂದೇ ಬಿಟ್ಟಿತು,, ಅದರ ಹಿಂದಿನ ದಿನ ಆ ಹುಡುಗಿ ಇವನಿಗೆ ಫೋನ್ ಮಾಡಿ ಮೀಟ್ ಮಾಡಬೇಕು ಅಂತ ಹೇಳಿದಳು. ಅವರಿಬ್ಬರೂ ಒಂದುವರೆ ವರ್ಷದಿಂದ ಮಾತಾಡೇ ಇರಲಿಲ್ಲ.. ಅದಕ್ಕೆ “ಪ್ರೀತಿಯನ್ನು ನೋಡದೇ ಅವಳಿಗೆ ಇರೋದಕ್ಕೆ ಆಗಲಿಲ್ಲ.. ಅದಕ್ಕೆ ತನ್ನನ್ನು ನೋಡಬೇಕು ಅನ್ನೋ ಪ್ರೀತಿಯ ಹಂಬಲದಿಂದ ಬರ್ತಾ ಇದ್ದಾಳೆ ಅಂತ ಇವನು ಖುಷಿ ಪಟ್ಟ.. ಅವಳನ್ನು ಪಡೆದೇ ತೀರಬೇಕು ಅನ್ನೋ ಹಠದಿಂದ ಊಟ, ನಿದ್ದೆಯನ್ನು ಬಿಟ್ಟು ಓದಿದ್ದ.. ಅವನನ್ನು ನೋಡಿ ಆ ಹುಡುಗಿಗೆ ಕನಿಕರವೇ ಬರಲಿಲ್ಲ.. ಅವನ ಯೋಗಕ್ಷೇಮವನ್ನೇ ವಿಚಾರಿಸದೇ ನೇರವಾಗಿ ವಿಷಯಕ್ಕೆ ಬಂದಳು “ನನಗೆ ನಾಲ್ಕು ಲಕ್ಷ ರೂಪಾಯಿ ಬೇಕು.. ಕೊಡಿ ನಮ್ ಮನೇಲಿ ಒಪ್ಪಿಸ್ತೀನಿ ಅಂದಳು..!!
ಆಗ ಅವನಿಗೆ ತಿಳೀತು.. ಅವಳು ಬಂದಿದ್ದು ಪ್ರೀತಿಯಿಂದ ಮಾತಾಡಿ ಯೋಗಕ್ಷೇಮ ವಿಚಾರಿಸೋದಕ್ಕಾಗಿ ಅಲ್ಲ.. ಹಣ ಕೇಳೋದಕ್ಕಾಗಿ ಅಂತ.. ಈ ಮಾತು ಕೇಳಿ ಅವನಿಗೆ ಅತೀವವಾದ ದುಃಖ ಆಯ್ತು..  “ ಒಂದೂವರೆ ವರ್ಷದಿಂದ ಒಂದೂ ಫೋನ್ ಕೂಡ ಮಾಡಿರಲಿಲ್ಲ.. ಯಾಕೆ ಆದ್ರೆ ಅವರ ಮನೇಲಿ ಹೊರಗಡೆ ಹೋಗೋಕೆ ಬಿಡೋದಿಲ್ಲ ಅಂತ ನೆಪ ಹೇಳಿದಳು..



ಒಂದು ಫೋನ್ ಮಾಡೋದಕ್ಕೂ ಬಿಡದಷ್ಟು ಬಿಗಿ ಭದ್ರತೆ ಅವಳ ಮನೆಯಲ್ಲಿ ಇದ್ದಿದ್ರೆ ಹಣ ಕೇಳೋದಕ್ಕಾಗಿ ಇವನು ಇದ್ದ ಜಾಗದ ವರೆಗೂ ಅವಳು ಬರೋದಕ್ಕೆ ಸಾಧ್ಯಾನಾ..???


ಅತಿ ಬಡವನಾಗಿದ್ದವನು ಅವಳಿಗಾಗಿ ಹಗಲು ರಾತ್ರಿ ದುಡಿದು ಮನೆ ಕಟ್ಟಿಸುತ್ತಿರುವಾಗ ಸರ್ಕಾರಿ ಕೆಲಸ ಬೇಕು ಅಂತ ಮತ್ತೊಂದು ನೆಪ ಹೇಳಿದ್ದು ಯಾಕೆ..??


ಸರ್ಕಾರಿ ಕೆಲಸ ಬೇಕು ಅಂತ ಹೇಳಿದ್ದ ತನ್ನ ಹುಡುಗಿ ನಾಲ್ಕು ಲಕ್ಷ ಕೊಟ್ರೆ ನಾನು ಮನೇಲಿ ಮಾತಾಡ್ತೀನಿ ಅಂತ ಹೇಳಿದ್ದರ ಹಿಂದಿರೋ ಅರ್ಥವೇನು..??


ಇದೆಲ್ಲಾ ಚಿಂತೆಗಳು ಆ ಮುಗ್ಧ ಹುಡುಗನ ಹೃದಯವನ್ನು ಇನ್ನಷ್ಟು ಘಾಸಿಗೊಳಿಸಿದವು.. ಅವನು ಅವಳಿಗಾಗಿ ಒಂದೊಂದು ಸಾಧನೆಯ ಮೆಟ್ಟಿಲು ಹತ್ತುತ್ತಿದ್ದರೂ ಅದಕ್ಕೆ ಅವಳು ಒತ್ತಾಸೆಯಾಗಿ ನಿಲ್ಲುವ ಬದಲು ಅವನ ಸಾಧನೆಗೆ ಅಡ್ಡಿಯಾಗತೊಡಗಿದಳು.. ಅವನು ನಿರ್ಮಲ ಮನಸ್ಸಿನಿಂದ ಅವಳಿಗಾಗಿ, ಅವಳ ಪ್ರೀತಿಗಾಗಿ ಶ್ರಮಿಸ್ತಾ ಇದ್ರೆ ಸದಾ ಕಾಲ ಹಣಕ್ಕೆ ಪ್ರಾಶಸ್ತ್ಯ ನೀಡ್ತ ಇದ್ದಳು..









ಹಣವಿಲ್ಲದೇ ತನ್ನ ಪ್ರಿಯತಮೆಯನ್ನು ಪಡೆಯಲಾಗದು.. ಹಣ ಇದ್ದರೆ ಮಾತ್ರ ಪ್ರೀತಿ ತೋರಿಸ್ತಾಳೆ ಅನ್ನೋದಾದ್ರೆ ಬದುಕಿನಲ್ಲಿ ಕಷ್ಟದ ಸಮಯಗಳು ಬಂದ್ರೆ ಅವಳು ಬಿಟ್ಟು ಹೋಗಬಹುದು ಅನ್ನೋ ಆತಂಕ ಅವನಲ್ಲಿ ಮನೆ ಮಾಡಿತ್ತು.. ಅಕಸ್ಮಾತ್ ಸರ್ಕಾರಿ ಕೆಲಸ ಪಡೆದಾಗ ಅವಳು ಅಕಸ್ಮಾತ್ ಇವನನ್ನು ಮದುವೆಯಾದರೆ ಅದು ಪ್ರೀತಿಯಿಂದ ಅಲ್ಲ.. ಆ ಕೆಲಸದಿಂದ ಬರುವ ಹಣಕ್ಕಾಗಿ ಮಾತ್ರ.. ಅನ್ನೋ ಕಹಿ ಸತ್ಯ ಅವನಿಗೆ ಅರ್ಥವಾಯಿತು..  ಅವನು ತನ್ನ ಪ್ರೀತಿಯನ್ನು ಪಡೆಯಲಾಗದೇ ಜೀವನದಲ್ಲಿ ಸೋತು ಹೋದ..!! “ಹಣ ಇರುವ ವ್ಯಕ್ತಿಯೊಂದಿಗೆ ನೀವು ಸುಖವಾಗಿ ಇರ್ತೀರ.. ನನ್ನಿಂದ ನಿಮ್ಮನ್ನು ಪಡೆದುಕೊಳ್ಳಲು ಸಾದ್ಯವಿಲ್ಲ.. ಅಂತ ನನಗೆ ಈಗ ಗೊತ್ತಾಯ್ತು..!! ನಿಜ ಜೀವನದ ಅರಿವು ಮೂಡಿಸಿ ಬದುಕಿನ ದಾರಿಯನ್ನು ತೋರಿಸಿದ್ದೀರಿ.. ನೀವೇ ನನ್ನ ಗುರುಗಳು.. ಅಂತ ತನ್ನ ಪ್ರೇಯಸಿಗೆ ನಮಸ್ಕರಿಸಿ ಅಲ್ಲಿಂದ ಹೊರಟು ಹೋದ.. ಮನದಲ್ಲಿ ಇದ್ದ ನೋವಿನ ಅಲೆಗಳು ಕಣ್ಣೀರಿನ ರೂಪದಲ್ಲಿ ಹೊರಗೆ ಬರುತ್ತಿವೆ.. ಆ ಹುಡುಗನ ಹೃದಯದ ನೋವನ್ನು ನೋಡಲಾಗದೇ ಆ ಸೂರ್ಯನೂ ಕೂಡ ಕಡಲಿನ ಮರೆಯಲ್ಲಿ ತನ್ನ ಮುಖವನ್ನು ಮುಚ್ಚಿಕೊಳ್ಳುತ್ತಿದ್ದಾನೆ.. ರಾತ್ರಿಯ ಕತ್ತಲೆಯಲ್ಲಿ ಅವನ ನೋವು ಯಾರಿಗೂ ಕಾಣಲಿಲ್ಲ.. ಜಗತ್ತಿಗೆ ಅವನ ನೋವು ಅರ್ಥವಾಗಲೇ ಇಲ್ಲ..!!


                                                                    ಈ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು..??
                                                                             ಇಂತಿ ನಿಮ್ಮ ಸವಿ ನೆನಪಿನ
ಶೇಖ್(ಸ್ಪಿಯ)ರ್

Отправить комментарий

4 Комментарии

  1. edu thuba hudugara jevanadali agodilla e rethi but kelavara jevanadali aguthe a rethi kelavarali nanu obyba kanri mosa hode

    ОтветитьУдалить
  2. enri udgiru andre mosa madoru anno tara bardidira?

    ОтветитьУдалить
  3. enri udgiru andre mosa madoru anno tara bardidira?

    ОтветитьУдалить
  4. ಸ್ನೇಹಿತರೆ..
    ಇಲ್ಲಿ ಯಾರನ್ನು ತಪ್ಪಾಗಿ ಬಿಂಬಿಸಿಲ್ಲ..
    ಕೇವಲ ಕಾಲ್ಪನಿಕ ಸತ್ಯಗಳಿಗೆ ಲೇಖನದ ರೂಪ ಕೊಟ್ಟಿದ್ದೇನೆ ಅಷ್ಟೆ..

    ಎರಡನೆಯದಾಗಿ ಕಮೆಂಟ್ ಮಾಡಿದ ಸ್ನೇಹಿತರು ಯಾರು ಅಂತ ಗೊತ್ತಿಲ್ಲ ಆದ್ರೆ ಅವರಿಗೆ ನಾನು ಒಂದು ವಿಷಯ ಸ್ಪಷ್ಟ ಪಡಿಸೋದಕ್ಕೆ ಬಯಸ್ತೇನೆ.. ಬಹುಶಃ ನೀವು ಒಂದೇ ಒಂದು ಕಥೆಯನ್ನು ಓದಿದ್ದೀರಿ ಅನಿಸ್ತಾ ಇದೆ.. ನನ್ನ ಬ್ಲಾಗ್ ನಲ್ಲಿ ಇರುವಂಥ ಶೇಕಡಾ 90 ರಷ್ಟು ಕಥೆಗಳು ಹೆಣ್ಣಿನ ಮನದ ಭಾವನೆಯನ್ನು ಹೇಳುವ ಕಥೆಗಳಿವೆ.. ನೀವು ಅದನ್ನು ಒಮ್ಮೆ ಓದಿ ನೋಡಿ.
    ನಿಮ್ಮ ಅಭಿಪ್ರಾಯ ತಿಳಿಸಿ.. ನಿಮ್ಮ ಅಭಿಪ್ರಾಯ ಹೇಗೆ ಇದ್ರೂ ಅದಕ್ಕೆ ಸ್ವಾಗತ : : :)


    http://kranthikidi.blogspot.in/2012/08/blog-post_1.html

    http://kranthikidi.blogspot.in/2012/03/blog-post_28.html

    http://kranthikidi.blogspot.in/2012/04/blog-post_03.html

    http://kranthikidi.blogspot.in/2012/03/blog-post_29.html

    http://kranthikidi.blogspot.com/2011/11/blog-post_25.html

    ОтветитьУдалить