Hot Posts

10/recent/ticker-posts

ಸದ್ದಿಲ್ಲದೇ ಜೀವ ನುಂಗಿದ ಮೊಲ

ನಮ್ಮೂರು ಯಾದಗಿರಿ..  ಬಯಲು ಸೀಮೆ ಮಂದಿ ನಾವು.. ಕಣ ಹಾಕಿದಾಗ ರಾತ್ರಿ ಹೊಲದಲ್ಲಿ ಮಲಗೋಕೆ ಹೋಗ್ತೀವಿ.. ಹೋಗಬೇಕಾದ್ರೆ ದಾರೀಲಿ ಕೋಳಿ, ಮೊಲ ಏನಾದ್ರೂ ಸಿಗಲಿ ಬೇಟೆ ಆಡಿ ಅದನ್ನು ತಗೊಂಡೋಗಿ ಹೊಲದಲ್ಲಿ ಅಡುಗೆ ಮಾಡ್ಕೊಂಡು ತಿಂತಿದ್ವಿ.. ನಾನು ನನ್ ಫ್ರೆಂಡ ಶಂಕರ್ ಇಬ್ರೂ ಒಂದುಸಲ ಹೊಲಕ್ಕೆ ಹೋಗ್ತಾ ಇದ್ದೆ.. ರಾತ್ರಿ ಆಗಿತ್ತು.. ದಾರಿ ಮೇಲೆ ಚಂದ್ರನ ಬೆಳದಿಂಗಳು ಬಿಟ್ರೆ ಬೇರೆ ಏನೂ ಇಲ್ಲ.. ಆಗ ದಾರೀಲಿ ಇದ್ದಕ್ಕಿದ್ದಂತೆ ಒಂದು ಮೊಲ ಕಾಣಿಸಿಕೊಂಡಿತು.. ನಮ್ ಹತ್ರ ಕೊಡ್ಲಿ, ಬಡಿಗಿ ಇತ್ತು.. ಇಬ್ಬರೂ ಆ ಮೊಲದ ಬೆನ್ನುಹತ್ತಿದೆವು.. ನನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಜೋರಾಗಿ  ಆ ಮೊಲದ ಕಡೆಗೆ ಬೀಸಿದೆ. ಆ ಮೊಲ ವಿಲ ವಿಲನೆ ಒದ್ದಾಡಿ ಸತ್ತು ಬಿದ್ದಿತು.. ನೋಡೋಕೆ ಭರ್ಜರಿಯಾಗಿತ್ತು.. ಅದನ್ನು ಹೆಗಲ ಮೇಲೆ ಹಾಕಿಕೊಂಡು ನಾನು ಮತ್ತೆ ಶಂಕರ್ ಇಬ್ರೂ ಮಾತಾಡ್ತಾ ಮಾತಾಡ್ತಾ  ಹೊಲದ ಕಡೆಗೆ ಹೆಜ್ಜೆ ಹಾಕಿದ್ವಿ.  ನನ್ನ ಮಾತಿಗೆ ಅವನು “ಹೂ.. ಹೂ.. ಅಂತ ಹೂಗುಡುತ್ತಿದ್ದ..!! 



ನಮ್ಮ ಊರಿನ ಕೆರೆ ದಾಟುವಾಗ ನನ್ನ ಕಾಲಿನ ಶಬ್ಧ ಮಾತ್ರ ಕೇಳಿಸ್ತಾ ಇತ್ತು.. ಆದ್ರೆ ಶಂಕರ್ ಕಾಲಿನ ಶಬ್ಧ ಮಾತ್ರ ಕೇಳಿಸಲಿಲ್ಲ.. ನಾನು ಹಿಂದಿರುಗಿ ನೋಡಿದೆ.. ಶಂಕರ್ ಕಾಣಲಿಲ್ಲ.. ಆದ್ರೆ ಹೂ ಹೂ ಅನ್ನೋ ಶಬ್ಧ ಮಾತ್ರ ಕೇಳಿಸ್ತಾ ಇತ್ತು.. ಭಯದಿಂದ “ಲೋ ಶಂಕ್ರ.. ನಿಧಾನಕ್ಕೆ ಹಿಂದೇನೇ ಬಾರೋ.. ಅಂತ ಹೇಳಿದೆ.. ಆಗಲೂ ಹೂ ಅನ್ನೋ ಶಬ್ಧ ಕೇಳಿತು.. ಆದ್ರೆ ಅವನು ಮಾತ್ರ ಕಾಣಿಸಲಿಲ್ಲ.. ಕೆರೆ ದಾಟಿದ ನಂತರ ಹಾಗೆ ನಿದಾನವಾಗಿ ಮಾತಾಡ್ತಾ ಮಾತಾಡ್ತಾ ಆ ಹೂ ಅನ್ನೋ ಶಬ್ಧ ಎಲ್ಲಿಂದ ಬರ್ತಿದೆ ಅಂತ ಕಿವಿ ಗೊಟ್ಟು ಕೇಳಿದೆ.. ಅವನ ತಲೆ ಮೇಲಿಂದ ಬರ್ತಿತ್ತು.. ನಾನು ಹೊತ್ತುಕೊಂಡಿದ್ದು ಮೊಲ ಅಲ್ವಾ..?? ಅದು ಹೇಗೆ ಸದ್ದು ಮಾಡ್ತಿದೆ ಅಂತ ಅಚ್ಚರಿಯಾಯ್ತು.. ಆ ಮೊಲವನ್ನು ಕೆಳಗಿಳಿಸಿ ನೋಡ್ತಾನೆ.. ಆ ಮೊಲ ಶಂಕರ್ ನನ್ನು ತಿಂದು ಬಿಟ್ಟಿತ್ತು..  ಬರೀ ತಲೆ ಮಾತ್ರ ಹೊರಗೆ ಉಳಿದಿತ್ತು.. ಆ ತಲೆಯಿಂದ  ಹೂ.. ಹೂ ಅನ್ನೋ ಶಬ್ಧ ಬರ್ತಾ ಇತ್ತು.. ಆ ಮೊಲ ನನ್ನ ಫ್ರೆಂಡ್ ಶಂಕರ್ ನನ್ನು ತಿಂದಿದ್ದರಿಂದ ಕ್ಷಣ ಕ್ಷಣಕ್ಕೂ ಭಾರವಾಗ್ತಾ ಇತ್ತು.. ಅದನ್ನು ನೋಡಿದ ನನಗೆ ದಿಗ್ಬ್ರಾಂತವಾಯ್ತು.. ನನ್ನ ಸ್ನೇಹಿತನನ್ನು ಸಂಪೂರ್ಣವಾಗಿ ತಿಂದು “ನನಗೆ ಈಗ ಹೊಟ್ಟೆ ತುಂಬಿದೆ.. ನೀನು ಬೇಕಾಗಿಲ್ಲ.. ಮುಂದಿನ ಸಾರಿ ಹೊಟ್ಟೆ ಹಸಿದಾಗ ನಾನು ಬರ್ತೀನಿ.. ಅಂತ ಹೇಳಿ ಮಾಯವಾಯ್ತು.. ನಾನು ಜ್ಞಾನ ತಪ್ಪಿ ಬಿದ್ದುಬಿಟ್ಟೆ,, ನಮ್ಮಣ್ಣ ರಾತ್ರಿಯೆಲ್ಲ ಹುಡುಕಿದ..  ಬೆಳಿಗ್ಗೆ ಕೆರೆ ಹತ್ರ ನಾನು ಸಿಕ್ಕಿದೆ.. ಆಗ ನಮ್ಮ ಅಣ್ಣ ಬಂದು ಎಬ್ಬಿಸಿದ.. 

Отправить комментарий

0 Комментарии