Hot Posts

10/recent/ticker-posts

ವಿಧಿ-ಬರಹ







 


ದೇವರ ಆಟದಲಿ ನನಗೆ ಜನ್ಮವ ಕೊಟ್ಟೆ,


ಕೆಟ್ಟ ಗಳಿಗೆಯಲಿ ನನ್ನ ಭೂಮಿಗೆ ಬಿಟ್ಟೆ..





ಭೂದೇವಿಯ ಮಡಿಲಲಿ, ಕಣ್ಣ ಬಿಟ್ಟ ಕ್ಷಣದಲಿ.


ನನ್ನ ನೋಡಿ ನಗುತಲಿತ್ತು, ವಿಧಿಯು ನಿಂತು ಮರೆಯಲಿ





ವಿಧಿ ಬರಹ ಬರೆಯಲು ನನ್ನತ್ತ ಬರುತ್ತಿತ್ತು.. ವಿಧಿಯ
ಕೈಯಲ್ಲಿ ಲೇಖನಿ ಇತ್ತು..


ಬರೆಯಲೆತ್ನಿಸುತಿತ್ತು.. ಶಾಯಿ ಮುಗಿದಿತ್ತು..


ಅತ್ತಿತ್ತ ನೋಡಿತ್ತು.. ನನ್ನ ಕಣ್ಣಲ್ಲಿ ನೀರಿತ್ತು..








ಕಣ್ಣೀರಿನಲಿ ಲೇಖನಿಯ ಅದ್ದಿ ವಿಧಿಯು ಬರೆಯುತಲಿತ್ತು


ದುಃಖವೇ ನಿನ್ನ ಸುತ್ತ-ಮುತ್ತ. ಕಣ್ಣೀರೇ ನಿನ್ನ
ಸ್ವತ್ತು.


ಎಂದು ಬರೆಯಿತು ಬರಹ.. ಅದೇ ನನ್ನ ಹಣೆ ಬರಹ..


ಜೀವನವು ಅಯಿತು ಕತ್ತಲೆಯ ತರಹ..





ಬಾಳಿನಲಿ ಎಂದೆಂದು ಸುಖವ ಪಡೆಯಲಿಲ್ಲ.. ನನ್ನ ಕಣ್ಣಲ್ಲಿ
ನೀರು ಇಂದಿಗೂ ಬತ್ತಲಿಲ್ಲ..












Отправить комментарий

0 Комментарии