Hot Posts

10/recent/ticker-posts

ಇದು ಕೇಡುಗಾಲ ಅಕ್ಕ.. ಪ್ರಳಯ ಆಗೋದು ಪಕ್ಕ.!!







ಕಲ್ಲಿನ ಕೋಳಿ ಕೂಗಿದ್ರೆ ಆಗುತ್ತೆ ಪ್ರಳಯ.. ಕಲ್ಲು ಬಸವ ಮಾತಾಡಿದ್ರೆ ಭೂಮಿಯೇ ಬಾಯಿ ತೆರೆಯುತ್ತೆ.. ಕೆಡುಗಾಲಕ್ಕೆ ನಾಯಿ ಕೂಡ ಮೊಟ್ಟೆ ಇಡುತ್ತೆ.. ಹೌದು.. ಇವೆಲ್ಲ ನಾಶದ ಸಂಕೇತ ನಮ್ಮ  ಸಮಾಜ ಹೇಳುತ್ತಾ ಬಂದಿದೆ.. ಅವ್ವಾನೂ ಹಡಿಬೇಕು, ಅಪ್ಪಾನೂ ದುಡಿಬೇಕು. ಅದಲು ಬದಲು ಆಗೋದ್ರೆ ಕಲ್ಲಿನ ಕೋಳಿ ಕೂಗತೈತೆ.. ಲೋಕಕೆ ಪ್ರಳಯ ಆಗುತೈತೆ ಅಂತ ಒಂದು ಮಾತಿದೆ.. ಇದಕ್ಕೆ ಪುಷ್ಟಿ ನೀಡುವಂತೆ ಅಲ್ಲಲ್ಲಿ ವಿಚಿತ್ರ ಘಟನೆಗಳು ನಡೀತಾ ಇವೆ.









1.
  
ಅವ್ವ ಹಡಿಬೇಕು.. ಆದ್ರೆ ಅಪ್ಪ ಹಡೆದು ಬಿಟ್ಟ..!!









ಹೌದು. ಆದ್ರೆ ಈಗ ಅವ್ವ ದುಡಿಯೋಕೆ ಹೋಗ್ತಿದ್ದಾಳೆ. ಇದು ಅಂಥ ದೊಡ್ಡ ಸುದ್ದಿಯೇನಲ್ಲ. ಅದ್ರೆ ಅದಕ್ಕಿಂತ ಅಚ್ಚರಿಯ ಸುದ್ದಿ ಅಂದ್ರೆ ಅಪ್ಪ ಹಡೆದೇಬಿಟ್ಟ..!! ವಿಶ್ವದಲ್ಲಿಯೇ ಮೊಟ್ಟ ಮೊದಲ ಅಚ್ಚರಿ ಎಂಬಂತೆ ಅಮೇರಿಕಾದಮಿ.ಲೀಎಂಬ ಪುರುಷ 2006 ರಲ್ಲಿ ಒಂದು ಮುದ್ದಾದ ಮಗುವಿಗೆ ಜನ್ಮ ನೀಡ್ತಾನೆ.. ಅಷ್ಟೇ ಅಲ್ಲ, ಆಸ್ಟ್ರೇಲಿಯಾದಮಿ.ಬೀಟಿಎಂಬ ವ್ಯಕ್ತಿಯು  2008  ಸುಮಾರಿನಲ್ಲಿ ಗರ್ಭಪತಿ ಆಗಿರ‍್ತಾನೆ..  ಇವೆಲ್ಲವನ್ನು ನೋಡ್ತಾ ಇದ್ರೆ ಕೇಡುಗಾಲ ಹತ್ರ ಬಂತಾ ಅನ್ನೋ ಆತಂಕ ನಮ್ಮೆಲ್ಲರಲ್ಲೂ ಮನೆ ಮಾಡುತ್ತೆ.















2.  ನಾಯಿ ಮೊಟ್ಟೆ ಇಟ್ಟಿತು..






ಅಮೇರಿಕಾದ ಜಾನ್ ಎಂಬುವವರು ತಮ್ಮ ಮನೆಯಲ್ಲಿ ನಾಯಿಯೊಂದನ್ನು ಸಾಕಿದ್ರು. ಆದ್ರೆ  ನಾಯಿ ಮರಿ ಹಾಕಿಲ್ಲ.. ಅಚ್ಚರಿಯೋ, ಕೇಡುಗಾಲವೋ ಗೊತ್ತಿಲ್ಲ.. ಮೊಟ್ಟೆ ಇಟ್ಟಿದೆ.. ಆದ್ರೆ ಮೊಟ್ಟೆಯು ತೆಳುವಾಗಿದ್ದು,
ಅದು
ಮೊಟ್ಟೆಯಲ್ಲ “ಚರ್ಮ” ಎಂದು ಅಮೇರಿಕಾದ ಪಶು ವೈದ್ಯರು ಹೇಳಿದ್ದಾರೆ.. ಆದ್ರೆ ನಾಯಿಯೊಂದು ಮೊಟ್ಟೆಯ ಆಕಾರದಲ್ಲಿ ಮರಿಗೆ ಜನ್ಮ ನೀಡಿದ್ದು ನಿಜಕ್ಕೂ ಅಚ್ಚರಿಯಾಗಿದೆ..















3.      ಎಮ್ಮೆಯ ಹೊಟ್ಟೆಯಲ್ಲಿ “ಮಾನವರೂಪಿ” ಕರು ಜನನ


ಥಾಯ್ ಲ್ಯಾಂಡ್ ನಲ್ಲಿ ಮತ್ತೊಂದು ವಿಚಿತ್ರ ನಡೆದಿದ್ದು ನಿಮಗೆ ತಿಳಿದಿರಬೇಕು.. ಥಾಯ್ಲಾಂಡ್
ನಲ್ಲಿ ಎಮ್ಮೆಯೊಂದು ಮನುಷ್ಯನ ರೂಪವನ್ನೇ ಹೋಲುವಂಥ ವಿಚಿತ್ರ ಮಗುವಿಗೆ ಜನ್ಮ ನೀಡಿದೆ.
ತಲೆ, ದೇಹ, ಮತ್ತು ಹೊಟ್ಟೆ, ಎಲ್ಲವೂ
ತದ್ರೂಪ್ ಮಾನವನಂತೆಯೇ
.. ಆದ್ರೆ, ಹುಟ್ಟಿದ ತಕ್ಷಣವೇ ಆ ಕರು ಹಸುನೀಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇವೆಲ್ಲವೂ ಕೇಡುಗಾಲದ ಮುನ್ಸೂಚನೆಯನ್ನು ತೋರಿಸಲು ನಡೆಯುತ್ತಿದೆ ಎಂಬುದು ಧಾರ್ಮಿಕ ಗುರುಗಳ
ವಾದ..




















4.  ನೆಲದಲ್ಲಿ ಗಿಡ
ಬೆಳಿಯುತ್ತೆ.. ಮೈಯಲ್ಲಿ ಕೂದಲು ಬೆಳೆಯುತ್ತೆ.. ಆದ್ರೆ ಇಲ್ಲಿ ಎಲ್ಲವೂ ವಿಚಿತ್ರ..!!








ಹೌದು.. ಗಿಡ ನೆಲದ ಮೇಲೆ ಬೆಳೆಯುತ್ತೆ.. ಫಲವತ್ತಾದ ಮಣ್ಣಲ್ಲಿ ಬೆಳಿಯುತ್ತೆ.. ಆದ್ರೆ ಮನುಷ್ಯನ ಅಂಗಾಂಗಳು ಗಿಡದಂತೆ ರೆಂಬೆ ಕೊಂಬೆಗಳು ಬೆಳೆಯುತ್ತಾ ಅನ್ನೋ ಅಚ್ಚರಿಗಳು ನಿಮಗೆಲ್ಲರಿಗೂ ದಂಗು ಬಡಿಸಿರಬಹುದು. ಕೇಡುಗಾಲ ಹತ್ರಕ್ಕೆ ಬಂದಿದೆ ಸ್ವಾಮಿ.. ಅದಿಕ್ಕೆ ಮನುಷ್ಯನ ದೇಹದಲ್ಲಿ ಮರದ ಬೇರುಗಳು ಬೆಳೆಯುತ್ತಿದೆ..









ಅವನು ಇಂಡೋನೇಷ್ಯಾದ ಮೀನುಗಾರ.. ಹೆಸರು ಡೆಡೆ.. ಇವನ ಮೈ ಚರ್ಮ ಅಚ್ಚರಿಯ ಗೂಡಾಗಿದೆ.. ವಿಜ್ಞಾನಿಗಳ ಪಾಲಿಗೆ ಸಂಶೋಧನೆಯ ಭಾಗವಾಗಿದೆ.. ಯಾಕೆ ಅಂತೀರ..??  ಅವನ ಮೈನಲ್ಲಿ ಗಿಡ ಬೆಳೀತಿದೆ.. ಕೈ ಬೆರಳುಗಳು, ಕಾಲು ಬೆರಳುಗಳು ಮರದ ಬೇರುಗಳಂತೆ ಕವಲು ಒಡೀತಾ ಇವೆ. ಇದು ಸುಳ್ಳೋ ನಿಜವೋ ಅಂತ ತಿಳಿಯೋದಕ್ಕಾಗಿ, ವಿಶ್ವ ವಿಖ್ಯಾತ ಚರ್ಮ ತಜ್ಞ ಎಂದು ಹೆಸರು ಪಡೆದಮೇರಿ ಲ್ಯಾಂಡ್ ವಿಶ್ವ ವಿದ್ಯಾನಿಲಯದ ಚರ್ಮ ತಜ್ಞ Dr Anthony Gaspari, ಇಂಡೋನೇಷ್ಯಾಗೆ ಬಂದ್ರುಆದ್ರೆ ಅವರು ಕಂಡಿದ್ದು ಅಚ್ಚರಿ.. ಹೌದು.. ವ್ಯಕ್ತಿಯ ಮೈ ಚರ್ಮ ಅಕ್ಷರಶಃ ಗಿಡದಂತಿದೆ.. ರೆಂಬೆ ಕೊಂಬೆಗಳು ಬೆಳೀತಾ ಇವೆ.. ವರ್ಷಕ್ಕೆ ಐದು
ಸೆ.ಮೀ ಗಳಷ್ಟು ಕೊಂಬೆಗಳು, ಮತ್ತು ಬೇರುಗಳು ಬೆಳೀತಾ ಇವೆಯಂತೆ..
 ಇದು ಅಚ್ಚರಿಯೋ, ಪ್ರಳಯದ ಮುನ್ಸೂಚನೆಯೋ
ಗೊತ್ತಿಲ್ಲ..






ಆದ್ರೆ ಒಂದಂತೂ ಸತ್ಯ.. ಕೇಡುಗಾಲದಲ್ಲಿ ನಡೀಬಾರದ್ದು ನಡಿಯುತ್ತೆ ಅಂತ ಹೇಳ್ತಾರೆ. ಇಲ್ಲಿಯೂ ಕೂಡ ನಡೀಬಾರದ್ದು ನಡೀತಾ ಇದೆ.. ಕಂಡು ಕೇಳರಿಯದ ಅಚ್ಚರಿಗಳು ಕಣ್ಣೆದುರು ರ‍್ತಾ ಇವೆ.. 








5.         ವಿಜ್ಞಾನಿಗಳ
ಪ್ರಕಾರ “ನಿಬಿರೋ” ಅಪ್ಪಳಿಸುತ್ತಂತೆ.


     ಸಂಪ್ರದಾಯವಾದಿಗಳು ಪ್ರಳಯಕ್ಕೆ ಒಂದೊಂದು ಕಾರಣ
ಕೊಡ್ತಾ ಇದ್ದಾರೆ. ಆದ್ರೆ ನಾಸಾ ವಿಜ್ಞಾನಿಗಳು ತಮ್ಮದೇ ಆದ ವೈಜ್ಞಾನಿಕ ಕಾರಣವನ್ನು ಕೊಡ್ತಿದ್ದಾರೆ.. ನಾಸಾ
ವಿಜ್ಞಾನಿಗಳ ಪ್ರಕಾರ ಪ್ರಳಯಕ್ಕೆ ಕಾರಣವಾಗೋದು ನಿಬಿರೋ ಅನ್ನೋ ಆಕಾಶ ಕಾಯ
.. ಇದು ನಭೋಮಂಡಲದಲ್ಲಿನ
ಒಂದು ಗ್ರಹದ ತುಂಡಾಗಿದ್ದು ಗ್ರಹಗಳ ಚಲನೆಯ ಸಮಯದಲ್ಲಿ ಸ್ವಲ್ಪ ಭಾಗ ಕಳಚಿಕೊಂಡಿದೆ.. ಹೀಗೆ
ಕಳಚಿಕೊಂಡಿರೋ ಆ ತುಂಡು ನೇರವಾಗಿ ಭೂಮಿಒಯ ಕಡೆಗೆ ಬರ‍್ತಾ ಇದ್ಯಂತೆ.. ಆ ನಿಬಿರೋ ಏನಾದ್ರೂ ಬಂದು
ಅಪ್ಪಳಿಸಿದ್ರೆ ಭೂಮಿ ಛಿದ್ರ-ಛಿದ್ರವಾಗೋದು ಗ್ಯಾರಂಟಿ.. ಹೀಗಾಗಿ ನಿಬಿರೋ ಅಪ್ಪಳಿಸಿದ್ರೆ
ಭೂಮಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ.. ಭೂಮಿ ಚಿದ್ರವಾಗುವುದರಿಂದ ಭೂಗರ್ಭದಲ್ಲಿ ಇರೋ
ಲಾವಾ ರಸ ಜ್ವಾಲಾಮುಖಿಯಾಗಿ ಹೊರ ಚಿಮ್ಮುತ್ತೆ.. ಹೀಗೆ ಹೊರ ಚಿಮ್ಮಿದ
ಲಾವಾ ರಸವು 700 ನಿಂದ 1,200 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ಇರುತ್ತೆ..  ನಾವು ಸ್ನಾನ ಮಾಡೋಕೆ ಉಪಯೋಗಿಸೋದೆ ಬರಿ  20-30 ಡಿಗ್ರಿಯಷ್ಟು ಬಿಸಿ ಇರೋ ನೀರನ್ನು.. ಹೀಗಿರುವಾಗ ಸಾವಿರಾರು ಡಿಗ್ರಿ ಬಿಸಿ ಮೈಮೇಲೆ
ಬಿದ್ರೆ ಏನಾಗುತ್ತೆ ಅಂಣತ ನೀವೇ ಊಹೆ ಮಾಡ್ಕೊಳ್ಳಿ.. ಏಕಾ ಏಕಿ
ಭೂಮಿಯ ಮೇಲಿರುವ ಕೋಟ್ಯಾಂತರ ಜೀವ ಸಂಕುಲ ನಶಿಸಿ ಹೋಗುತ್ತವೆ.. ಜೀವಿಗಳು
ಬದುಕಿದ್ವು ಅನ್ನೋ ಸಣ್ಣ ಸಾಕ್ಷಿಗಳು ಸಿಗೋದಿಲ್ಲ.





1.      ಮಾಯನ್ ಕ್ಯಾಲೆಂಡರ‍್
ಬೇರೆ ಪ್ರಳಯ ಖಚಿತ ಅಂತ ಹೇಳಿದೆ.. 






2.     ವಿಜ್ಞಾನಿಗಳ ಪ್ರಕಾರ ಡಿಸೆಂಬರ‍್ 21 ರಂದು ನಭೋಮಂಡಲದಲ್ಲಿ ವೈಜ್ಞಾನಿಕ ಬದಲಾವಣೆಗಳಾಗುತ್ತವೆ ಮತ್ತು ಆ ದಿನ ನೆಟ್ವರ್ಕಗಳು, ಉಪಗ್ರಹಗಳು ಕೆಲಸ ಮಾಡೋದಿಲ್ಲ ಅನ್ನೋ ಹೇಳಿಕೆಯನ್ನೂ ಕೊಟ್ಟಿದ್ದಾರೆ.






3.     ದುಡಿಯಬೇಕಿದ್ದ ಅಪ್ಪ ಹಡೆಯೋಕೆ ಶುರು ಮಾಡಿದ್ದಾನೆ.






  


ಇವೆಲ್ಲದರ ಅರ್ಥ ಎಲ್ಲೋ ಒಂದುಕಡೆ ಪ್ರಳಯ ಪಕ್ಕಾ ಅನ್ನೋದನ್ನು ಒತ್ತಿ
ಒತ್ತಿ ಹೇಳ್ತಾ ಇವೆ.. ಆದ್ರೆ ಅದು 
ಡಿಸೆಂಬರ‍್ 21 ಕ್ಕೇ ಪಕ್ಕಾನಾ ಅಥವ ದಿನಗಳು ಹಿಂದು ಮುಂದು ಹೋಗಬಹುದಾ ಅನ್ನೋ
ದೃಢ ಮಾಹಿತಿ ಮಾತ್ರ ಯಾರಿಗೂ ಗೊತ್ತಿಲ್ಲ..
 








ಸವಿನೆನಪಿನ


ಶೇಖ್(ಸ್ಪಿಯ)ರ‍್








Отправить комментарий

0 Комментарии