Hot Posts

10/recent/ticker-posts

ಹಸಿವು ಮರೆತು ಬೆಳಕು ಕೊಟ್ಟವರು


ಆ ಹುಡುಗನಿಗೆ ಊಟದ ಪರಿವೇ ಇರಲಿಲ್ಲ.. ಸದಾ
ಲ್ಯಾಬಿನೊಳಗೆ ಕೂತು ಹೊಸತನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದ.. ಆತನಿಗೆ ಮನೆಯಾದರೂ
ಒಂದೆ.. ರೈಲಿನ ಬೋಗಿಯಾದರೂ ಒಂದೇ.. ಊಟದ ಪರಿವೇ ಇಲ್ಲದೇ ಶೋಧನೆಯ ಮೆಟ್ಟಿಲಲ್ಲಿ
ನಿಂತು ಸಾಧನೆಯ ಹಾದಿಗಾಗಿ ಎದುರು ನೋಡುತ್ತಿದ್ದ.. 




ಅವನ ಮನೆಗೆ ಹತ್ತಿರದಲ್ಲೇ ಒಂದು ರೈಲು ನಿಲ್ದಾಣವಿತ್ತು.. ಹೀಗಾಗಿ ಸಹಜವಾಗಿಯೇ ರೈಲ್ವೇ ಅಧಿಕಾರಿಗಳು ಪರಿಚಯವಾಗಿದ್ದರು.. ಮನೆಯೊಳಗೆ ಕಿರಿಕಿರಿ ಆದಾಗ.. ಅಥವ ಆತನ ಏಕಾಂತ ಸಂಶೋಧನೆಗೆ ಭಂಗವಾದಾಗ ರೈಲ್ವೇ ಬೋಗಿಯೊಳಗೆ ಹೋಗಿ ತನ್ನ ಸಂಶೋಧನೆ ಮುಂದುವರಿಸುತ್ತಿದ್ದ..



ಅದೊಂದು ದಿನ ರೈಲಿನ ಒಂದು ಬೋಗಿಯಲ್ಲಿ
ಕೂತುಕೊಂಡು ಸಂಶೋಧನೆ ಮಾಡುತ್ತಿರುವಾಗ ರೈಲಿಗೆ ಬೆಂಕಿ ಹತ್ತಿತು.. ಆಗಲೂ ಅವನಿಗೆ
ಹೊಸದೇನೋ ಆಗಿದೆ ಎಂದು ಸಂಭ್ರಮಿಸಿದ.. ಊಟದ ಪರಿವೇ ಇಲ್ಲದೇ ಸಾಧನೆಯ ಹಾದಿಯಲ್ಲಿ ಸಾಗಿದ ಆ
ಹುಡುಗ ಮುಂದೊಂದು ದಿನ ಜಗತ್ತಿಗೆ ಬೆಳಕನ್ನು ಕರುಣಿಸುವ "ಥಾಮಸ್ ಅಲ್ವಾ ಎಡಿಸನ್"
ಆಗ್ತಾನೆ ಅಂತ ಯಾರೂ ಅಂದುಕೊಂಡಿರಲಿಲ್ಲ.. ಸಾವಿರ ಬಾರಿ ಸೋತರು ಕೊನೆಗೆ ಗೆದ್ದು
ತೋರಿಸಿದನಾತ.. ಬಲ್ಬ್ ಕಂಡು ಹಿಡಿದು ನಮ್ಮನ್ನು ಬೆಳಕಲ್ಲಿಟ್ಟ.. ಸಾಧಿಸುವ
ಛಲವಿದ್ದವನಿಗೆ ಹೊಟ್ಟೆ ಹಸಿವಿನ ಸೆಳೆತವಿರೋದಿಲ್ಲ.. ಊಟ ಮಾಡುವುದನ್ನೇ ಮರೆತು
ಬಿಡ್ತಾರೆ.. ಆದ್ರೆ ಹೊಸತನದ ಸಾಧನೆಯನ್ನು ಮಾತ್ರ ಬಿಡೋದಿಲ್ಲ..

********* ಯಾಕೋ ಗೊತ್ತಿಲ್ಲ.. ಈವತ್ತು ಮಧ್ಯಾಹ್ನ ನಾನು ಕೂಡ ಊಟ ಮಾಡೋದನ್ನೆ ಮರೆತುಬಿಟ್ಟೆ..!!

Отправить комментарий

0 Комментарии