Hot Posts

10/recent/ticker-posts

ಹುಲಿಜಂತಿ ಮಾಳಿಂಗರಾಯನ ಕಥೆ





ಹುಲಿಜಂತಿ ಮಾಳಿಂಗರಾಯ.. ಕುರುಬ ಜನಾಂಗದ ಮೂಲ
ಪುರುಷರಲ್ಲಿ ಒಬ್ಬರು..
ಮಾಳಿಂಗರಾಯ ಮೂಲತಃ ಕುರುಬ ಜನಾಂಗಕ್ಕೆ ಸೇರಿದವರಾದ್ದರಿಂದ ಕುರಿ ಕಾಯುವುದೇ ಅವರ
ಕಾಯಕವಾಗಿತ್ತು... ಅವರು ಮಹಾನ್ ಶಿವಭಕ್ತರೂ ಆಗಿದ್ದರು.. 





ಒಮ್ಮೆ ಶಿವಭಕ್ತಿಯನ್ನು ಪರೀಕ್ಷಿಸಲು
ಸಾಕ್ಷಾತ್ ಪರಮೇಶ್ವರನೇ ಧರೆಗಿಳಿದು ಬಂದನು.. ಮಾಳಿಂಗರಾಯ ನೂರಾರು ಕುರಿಗಳೊಂದಿಗೆ ಬಯಲು
ಪ್ರದೇಶದಲ್ಲಿಯೇ ವಾಸ ಮಾಡ್ತಿದ್ದ.. ಇದನ್ನು ಕಂಡ ಶಿವನು “ಏನಪ್ಪಾ..  ನೀನು ಕುರಿಗಳನ್ನೆಲ್ಲಾ ಹೀಗೆ ಬಯಲಲ್ಲಿ ಕಟ್ತೀಯಲ್ವಾ..
ಅಕಸ್ಮಾತ್ ಮಳೆ ಬಂದ್ರೆ ಏನ್ ಮಾಡ್ತೀಯ..?? ಅಂತ ಕೇಳಿದನಂತೆ.. ಆಗ ಮಾಳಿಂಗರಾಯ “ಮಳೆ ಬರೋದಕ್ಕೆ
ಇನ್ನು ಮೂರು ತಿಂಗಳು ಬೇಕು.. ಅಲ್ಲಿವರೆಗೂ ಮಳೆ ಬರೋದಿಲ್ಲ.. ಅಷ್ಟರಲ್ಲಿ ನಾನು ನಮ್ಮೂರು
ಸೇರಿಬಿಡುತ್ತೇನೆ” ಅಂತ ಹೇಳಿದ್ನಂತೆ.. “ಶಿವ ಮಳೆ ಯಾವಾಗ್ ಬೇಕಾದ್ರೂ ಸುರಿಸಬಹುದಪ್ಪಾ,,
ಹೇಳೋಕ್ ಆಗಲ್ಲ”... ಅಂತ ಮಾರುವೇಷದಲ್ಲಿದ್ದ ಪರಶಿವನು ಹೇಳುತ್ತಾನೆ.. ಆಗ “ಶಿವನು ಮನಸ್ಸು
ಮಾಡಿದ್ರು ಅದು ಆಗಲ್ಲ.. ನಾನು ಹೇಳಿದ ಸಮಯದಲ್ಲೇ ಮಳೆ ಆಗುತ್ತೆ” ಅಂತ ಹೇಳಿದನಂತೆ ಮಾಳಿಂಗರಾಯ..





 ಈ ಮಾತು ಕೇಳಿ ಶಿವನಿಗೆ ಕೋಪ ಬಂತು.. ಮಳೆಯನ್ನು ಸುರಿಸಿ ಮಾಳಿಂಗರಾಯನ ಊಹೆಯನ್ನು ಸುಳ್ಳು
ಮಾಡಬೇಕೆಂದು ನೇರವಾಗಿ ಕೈಲಾಸಕ್ಕೆ ಬಂದ.. ಆದರೆ ಕೈಲಾಸದಲ್ಲಿ ಶಿವನು ಇಲ್ಲದೇ ಇರೋದ್ರಿಂದ ವರುಣದೇವನೂ
ಸೇರಿದಂತೆ ಎಲ್ಲಾ ದೇವತೆಗಳು ದಿಕ್ಕಾಪಾಲಾಗಿ ಹೋಗಿದ್ದರು.. ಅವರೆಲ್ಲರನ್ನೂ ಕೈಲಾಸಕ್ಕೆ ಕರೆಸಿ..
ಒಂದು ಗೂಡಿಸಿ ಮಳೆಯನ್ನು ಸುರಿಸುವಷ್ಟರಲ್ಲಿ ಮೂರು ತಿಂಗಳುಗಳೇ ಕಳೆದು ಹೋದವು.. ಅಷ್ಟರಲ್ಲಿ
ಮಾಳಿಂಗರಾಯ ಕುರಿ ಹಿಂಡಿನೊಂದಿಗೆ ತನ್ನ ಮನೆ ಸೇರಿದ್ದ.. ಇದನ್ನು ಅರಿತ ಶಿವನು “ಶಿವನಿಗಿಂತ
ಶಿವಭಕ್ತನಿಗೆ ಹೆಚ್ಚು ಶಕ್ತಿ ಇದೆ..” ಎಂದು ಅರಿತುಕೊಂಡು ಸುಮ್ಮನಾದ.. ಶಿವನ ಅಂತರಾತ್ಮವನ್ನು
ಶಿವನಿಗಿಂತ ಹೆಚ್ಚಾಗಿ ಶಿವಭಕ್ತರಿಗೇ ಹೆಚ್ಚು ತಿಳಿದಿರುತ್ತದೆ” ಎಂಬುದು ಹುಲಿಜಂತಿ ಮಾಳಿಂಗರಾಯರು
ತೋರಿಸಿಕೊಟ್ಟಿದ್ದಾರೆ


 


Отправить комментарий

1 Комментарии

  1. ಕರೆಸಿಧ್ಧೆಶ್ವರನ ಶಿಷ್ಯ ನನ್ನ ಮಹಿಮಾಂತಕ ಮಾಳಿಂಗರಾಯ. .........

    ОтветитьУдалить