Hot Posts

10/recent/ticker-posts

13 ವರ್ಷದ ಬಾಲೆಯ ‘ಎದೆಗರ್ಭ’ದಲ್ಲಿತ್ತು ಮೌಂಟ್ ಎವರೆಸ್ಟ್


ಆಕೆಯ ವಯಸ್ಸು ಕೇವಲ 13 ವರ್ಷ ಮಾತ್ರ.. ಆದ್ರೆ ಅವಳು ಮಾನಸಿಕವಾಗಿ ಪ್ರಬುದ್ಧಳಾಗಿದ್ದಳು.. ದೈಹಿಕವಾಗಿ ಸಮರ್ಥಳಾಗಿದ್ದಳು.. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ಮನದಲ್ಲಿ ಒಂದು ಬಯಕೆ ಚಿಗುರೊಡೆಯಿತು. ಬಯಕೆಯ ಬೆನ್ನು ಹತ್ತಿದ ಬಾಲೆ, 13 ವರ್ಷದಲ್ಲಿಯೇ ತನ್ನ ಗುರಿ ತಲುಪಿದ್ದಾಳೆ. ಅಂದ್ಹಾಗೆ ಆ ಬಾಲೆ ಯಾರು ಗೊತ್ತಾ..?  ಮಲವತ್ ಪೂರ್ಣ..











ಪೂರ್ಣಾಳ ವಯಸ್ಸು ಕೇವಲ 13 ವರ್ಷ. ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡ್ಬೇಕು ಅನ್ನೋದು ಆಕೆಯ ಮನದಾಳದಲ್ಲಿ ಉದ್ಭವಿಸಿದ ಬಯಕೆ.  ಆಸೆಯನ್ನು ‘ಎದೆಗರ್ಭ’ದಲ್ಲಿ ಹೊತ್ತು, ಮಾತೆಯ ಮಮತೆ ನೀಡಿ ಪೋಷಿಸಿ, ಬೆಳೆಸಿದಳು.



ಸೂಕ್ತ ತರಬೇತಿ ಪಡೆದ ಆಂಧ್ರಪ್ರದೇಶದ ಪೂರ್ಣ, ಕಳೆದ ಮೇ 25, 2014 ರಲ್ಲಿ ನೇಪಾಳದ ಗಡಿ ಭಾಗದಿಂದ ಮೌಂಟ್ ಎವರೆಸ್ಟ್ ಹತ್ತುವ ನಿರ್ಧಾರ ಮಾಡಿದಳು. ಕೊರೆಯುವ ಚಳಿಗೆ ಜಗ್ಗದೇ, ಎವೆರೆಸ್ಟ್ ಮೇಲೆಕ್ಕೆ ಹೆಜ್ಜೆ ಹಾಕತೊಡಗಿದಳು.. ಆಕೆ 3,300 ಮೀಟರ್ ಎತ್ತರಕ್ಕೆ ಹೋದಾಗ ಆಕೆಯ ಕಣ್ಣಿಗೆ ಬಿದ್ದ ದೃಶ್ಯವನ್ನು ನೋಡಿ ಆಕೆ ನಿಜಕ್ಕೂ ಬೆಚ್ಚಿ ಬಿದ್ದಿದ್ದಳು.

ಯಾಕೆಂದ್ರೆ ಅಲ್ಲಿ ಆರು ಅನಾಥ ಹೆಣಗಳು ವಿರೂಪವಾಗಿ ಬಿದ್ದಿದ್ದವು...!







ಯಸ್.. ಅವು ಮೌಂಟ್ ಎವರೆಸ್ಟ್ ಹತ್ತಲು ಹೋದ ಯಾತ್ರಿಕರ ಹೆಣಗಳು..! ಅದನ್ನು ಕಂಡು ಪೂರ್ಣಗೆ ಶಾಕ್ ಆಯ್ತು.. ಆದ್ರೂ ಕೂಡ ತನ್ನ ಮನದೊಳಗಿನ ಛಲವನ್ನು ಬಿಡಲಿಲ್ಲ.. ಸಾವಿಗಿಂತ ಸಾಧನೆ ಮುಖ್ಯ ಎಂದು ಪಟ್ಟು ಹಿಡಿದ ಬಾಲೆ, ಮತ್ತೆ ಮುಂದಕ್ಕೆ ಹೆಜ್ಜೆ ಇಡುತ್ತಾ ನಡೆದಳು.. ಅಂತಿಮವಾಗಿ ಮೌಂಟ್ ಎವೆರಸ್ಟ್​​ನ ತುತ್ತ ತುದಿಯನ್ನು ತಲುಪುವುದರ ಮೂಲಕ ತನ್ನ ಸಾಧನೆಯ ದಾಹವನ್ನು ತಣಿಸಿಕೊಂಡಿದ್ದಾಳೆ..!



ವಯಸ್ಸು ಚಿಕ್ಕದಾದ್ರೂ, ಆಕೆಯ ಮನದ ಇಂಗಿತ ಮತ್ತು ಸಾಧಿಸುವ ಛಲವನ್ನು ಎಲ್ಲರೂ ಮೆಚ್ಚಲೇ ಬೇಕು... ಪೂರ್ಣಾಳ ಬದುಕಿನ ಹೆಜ್ಜೆಗಳು ನಿಜಕ್ಕೂ ಎಲ್ಲರಿಗೂ ಮಾದರಿ.. ಏನಂತೀರಿ..?



ಸವಿ ನೆನಪಿನ

ಶೇಖ್​​(ಸ್ಪಿಯ)ರ್





Отправить комментарий

0 Комментарии