ಬೆಂಗಳೂರು: ಮೂರು ವರ್ಷಗಳ ಅವಧಿಯಲ್ಲಿ ಲೀಟರ್ ಪೆಟ್ರೋಲ್
ಬೆಲೆ 33 ರೂ.ನಷ್ಟು ಹೆಚ್ಚಾಗಿದೆ. ಪ್ರತಿ ತಿಂಗಳೂ ಡೀಸೆಲ್ ದರ 50 ಪೈಸೆಯಂತೆ
ಜಿಗಿಯುತ್ತಿದೆ. ಇಷ್ಟಾದರೂ ಪೆಟ್ರೋಲ್, ಡೀಸೆಲ್ ಖರೀದಿಸುವವರ ಸಂಖ್ಯೆ
ಕಡಮೆಯಾಗುತ್ತಿಲ್ಲ. ಮುಂದೊಂದು ದಿನ ಈ ಇಂಧನಗಳೇ ಬರಿದಾಗಿ ಹೋದರೆ?
'ಚಿಂತೆ
ಬೇಡ, ಪೆಟ್ರೋಲ್‌ಗೆ ಪರ್ಯಾಯವಾಗಿ ಮೆಥನಾಲ್ ಇಂಧನ ಇದೆ' ಎನ್ನುತ್ತಿದ್ದಾರೆ
ಅಮೆರಿಕದಲ್ಲಿ ಹೆಸರಾಂತ ವಿಜ್ಞಾನಿಯಾಗಿರುವ ಹೆಮ್ಮೆಯ ಕನ್ನಡಿಗ ಪ್ರೊ| ಜಿ.ಕೆ.
ಸೂರ್ಯಪ್ರಕಾಶ್. ಅವರ ಸಂಶೋಧನೆಯನ್ನು ಬಳಸಿಕೊಂಡರೆ, ದೇಶದಲ್ಲಿ ಸದ್ಯ ಲೀಟರ್‌ಗೆ 77
ರೂ.ಗೆ ಮಾರಾಟವಾಗುತ್ತಿರುವ ಪೆಟ್ರೋಲ್‌ಗೆ ಪರ್ಯಾಯವಾದ, ಪೆಟ್ರೋಲ್‌ನಷ್ಟೇ
ಪರಿಣಾಮಕಾರಿಯಾದ ಮೆಥನಾಲ್ ಇಂಧನ ಕೇವಲ 18 ರೂ. ಆಸುಪಾಸಿನಲ್ಲಿ ಸಿಗಲಿದೆ! ಈಗಾಗಲೇ
ಚೀನಾ ಮತ್ತು ಇಸ್ರೇಲ್‌ನಲ್ಲಿ ಈ ತಂತ್ರಜ್ಞಾನ ಬಳಸಿಕೊಂಡು ಉತ್ಪಾದಿಸುತ್ತಿರುವ ಪರ್ಯಾಯ
ಪೆಟ್ರೋಲ್‌ನಿಂದ ವಾಹನಗಳು ಓಡುತ್ತಿವೆ.
'ತೆಂಗಿನ ನಾರು, ಚಿಪ್ಪು, ಮನೆಯಲ್ಲಿ
ಉತ್ಪತ್ತಿಯಾಗುವ ತ್ಯಾಜ್ಯ, ಪ್ಲಾಸ್ಟಿಕ್, ಕಾರ್ಖಾನೆಗಳು ಉಗುಳುವ ಇಂಗಾಲದ ಡೈ
ಆಕ್ಸೆ„ಡ್ ಹೀಗೆ ಯಾವುದೇ ವಸ್ತು ಬಳಸಿಕೊಂಡು ಪೆಟ್ರೋಲ್‌ಗಿಂತ ಅಗ್ಗದ ಇಂಧನ
ತಯಾರಿಸಬಹುದು. ವಿದ್ಯುತ್ ಕೂಡ ಉತ್ಪಾದಿಸಬಹುದು. ಇಡೀ ಪ್ರಪಂಚವನ್ನು ಬಾಧಿಸುತ್ತಿರುವ
ಜಾಗತಿಕ ತಾಪಮಾನ ಸಮಸ್ಯೆಯನ್ನೂ ನಿವಾರಿಸಬಹುದು' ಎಂಬುದನ್ನು ಸತತ 30 ವರ್ಷಗಳ ಕಾಲ
ಸಂಶೋಧನೆ ನಡೆಸಿ ತೋರಿಸಿರುವ ಅವರಿಗೆ ಇತ್ತೀಚೆಗಷ್ಟೇ ಇಸ್ರೇಲ್ ಸರ್ಕಾರ ಬರೋಬ್ಬರಿ 6
ಕೋಟಿ ರೂ. ಮೊತ್ತದ ಬಹುಮಾನ ನೀಡಿ ಸತ್ಕರಿಸಿದೆ.
ಇವರ ಸಂಶೋಧನೆಯ ಮಹತ್ವ ತಿಳಿದ
ರಿಲಯನ್ಸ್ ಸಮೂಹದ ಒಡೆಯ ಮುಕೇಶ್ ಅಂಬಾನಿ ಅವರು ತಮ್ಮ ನಿವಾಸಕ್ಕೆ ಸೂರ್ಯಪ್ರಕಾಶ್
ಅವರನ್ನು ಆಹ್ವಾನಿಸಿ ತಮ್ಮ ತಮ್ಮ ಪೆಟ್ರೋಲಿಯಂ ಉದ್ಯಮಕ್ಕೆ ಪರ್ಯಾಯವಾಗಿರುವ ಮೆಥನಾಲ್
ಇಂಧನದ ಬಗ್ಗೆ ಮಾಹಿತಿಪಡೆದರು. ಟಾಟಾ ಸಮೂಹ ಕಂಪನಿಗಳ ಮಾಲೀಕ ರತನ್ ಟಾಟಾ ಅವರು
ಮುಖಾಮುಖೀ ಚರ್ಚೆ ನಡೆಸಿ ಈ ಬಗ್ಗೆ ವಿವರಣೆ ಪಡೆದುಕೊಂಡರು. ಯೋಜನಾ ಆಯೋಗದ ಉಪಾಧ್ಯಕ್ಷ
ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಕೂಡ ಕುತೂಹಲದಿಂದ ಸಂಶೋಧನೆ ವಿವರ ಪಡೆದರು. ಆದರೆ
ಅಗ್ಗದ ಇಂಧನ ಮೆಥನಾಲ್ ಉತ್ಪಾದನೆ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲ ಎಂದು ಬೇಸರ
ಪಡುತ್ತಾರೆ ಸೂರ್ಯಪ್ರಕಾಶ್.
20ನೇ ವಯಸ್ಸಿನಲ್ಲೇ ಅಮೆರಿಕಕ್ಕೆ ತೆರಳಿ,
ಸಂಶೋಧನಾ ಕ್ಷೇತ್ರದಲ್ಲಿ ಬೇರೂರಿ ಅಲ್ಲೆ ನೆಲೆ ಕಂಡುಕೊಂಡಿರುವ 60ರ ಹರೆಯದ
ಸೂರ್ಯಪ್ರಕಾಶ್ ಅವರು ಶನಿವಾರ 'ಉದಯವಾಣಿ' ಕಚೇರಿಗೆ ಭೇಟಿ ನೀಡಿ, ತಮ್ಮ ಸಂಶೋಧನೆ, ಅದರ
ಮಹತ್ವವನ್ನು ಸವಿಸ್ತಾರವಾಗಿ ತಿಳಿಸಿ ಕೊಟ್ಟರು. 'ಉದಯವಾಣಿ' ಸಿಬ್ಬಂದಿ ಕೇಳಿದ ಎಲ್ಲ
ಪ್ರಶ್ನೆಗಳಿಗೂ ಉತ್ತರಗಳನ್ನು ಅಚ್ಚಕನ್ನಡದಲ್ಲೇ ನೀಡಿದರು.
3 ದಶಕಗಳ ಶ್ರಮ:
ಸದ್ಯ
ಇಡೀ ವಿಶ್ವ ತನ್ನ ಇಂಧನ ಅಗತ್ಯತೆಗಳಿಗೆ ಶೇ.80ರಷ್ಟು ಫಾಸಿಲ್ (ಪಳೆಯುಳಿಕೆ) ಇಂಧನಗಳ
ಮೇಲೆ ಅವಲಂಬಿತವಾಗಿದೆ. ಇದು ನವೀಕರಿಸಲಾಗದಂತದ್ದು ಅರ್ಥಾತ್ ಮುಂದೊಂದು ದಿನ
ಖಾಲಿಯಾಗುವಂತದ್ದು. ಈ ಇಂಧನ ಬಳಸಿದರೆ ಕಾರ್ಬನ್ ಡೈ ಆಕ್ಸೆ„ಡ್ ಉತ್ಪತ್ತಿಯಾಗಿ
ವಾಯುಮಾಲಿನ್ಯ ಉಂಟಾಗುತ್ತದೆ (ಇಡೀ ವಿಶ್ವದಲ್ಲೇ ಚೀನಾ ಅತಿ ಹೆಚ್ಚು ಕಾರ್ಬನ್ ಡೈ
ಆಕ್ಸೆ„ಡ್ ಉಗುಳುತ್ತಿದೆ. ಇದರ ಪರಿಣಾಮವಾಗಿ ಇತ್ತೀಚೆಗೆ ಶಾಂಘೈನಲ್ಲಿ ಕೆಲ ದಿನಗಳ ಕಾಲ
ಶಾಲೆಗಳನ್ನು ಮುಚ್ಚಲಾಗಿತ್ತು.). ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚುವುದರಿಂದ
ಜಾಗತಿಕ ತಾಪಮಾನ ಹೆಚ್ಚುವುದಷ್ಟೇ ಅಲ್ಲ, ಸಮುದ್ರದ ನೀರು ಆಮ್ಲಿàಕರಣಗೊಂಡು ಹವಳದ ರಾಶಿ
(ಕೋರಲ್ ರೀಫ್) ನಶಿಸುತ್ತದೆ. ಹವಳದಿಂದಲೇ ಆಹಾರ ಕಂಡುಕೊಳ್ಳುವ ಮತ್ಸé ಸಂಪತ್ತು
ನಾಶವಾಗಿ ಘನಘೋರ ಪರಿಣಾಮ ಉಂಟಾಗಲಿದೆ. ಇದರ ಬಗ್ಗೆ ಯಾರೂ ಚಿಂತನೆ ನಡೆಸಿ ಕ್ರಮ
ಕೈಗೊಳ್ಳಲು ಮುಂದಾಗಿಲ್ಲ ಎಂದು ಸೂರ್ಯಪ್ರಕಾಶ್ ಆತಂಕ ವ್ಯಕ್ತಪಡಿಸಿದರು.
ಜಾಗತಿಕ
ತಾಪಮಾನಕ್ಕೆ ಕಾರಣವಾಗುತ್ತಿರುವ ಇಂಗಾಲದ ಡೈ ಆಕ್ಸೆ„ಡ್ ಅನ್ನೇ ಬಳಸಿಕೊಂಡು
ವಾಹನಗಳಿಗೆ ಇಂಧನ ತಯಾರಿಸಬಹುದು. ವಿದ್ಯುತ್ ಕೂಡ ಉತ್ಪಾದಿಸಬಹುದು ಎಂಬುದನ್ನು 30
ವರ್ಷಗಳ ಕಾಲ ಸಂಶೋಧನೆ ನಡೆಸಿ ಶೋಧಿಸಲಾಗಿದೆ. ಈಗಾಗಲೇ ಚೀನಾದಲ್ಲಿ ಶೇ.10ರಷ್ಟು
ವಾಹನಗಳು ಮೆಥನಾಲ್‌ನಿಂದಲೇ ಓಡುತ್ತಿವೆ. 2018ರ ಹೊತ್ತಿಗೆ ಪೆಟ್ರೋ ರಾಸಾಯನಿಕಗಳ ಮೇಲಿನ
ಅವಲಂಬನೆ ಕಡಿದುಕೊಂಡು ಮೆಥನಾಲ್ ಅನ್ನು ಪರ್ಯಾಯವಾಗಿ ಬಳಸುವ ನಿಟ್ಟಿನಲ್ಲಿ ಚೀನಾ
ಮುನ್ನುಗ್ಗುತ್ತಿದೆ ಎಂದು ಎಚ್ಚರಿಸುತ್ತಾರೆ.
ಈ ಹೊಸ ಸಂಶೋಧನೆ ಬಳಸಿ ಇಸ್ರೇಲ್
ಈಗಾಗಲೇ ವಿದ್ಯುತ್ಛಕ್ತಿ ತಯಾರಿಸುತ್ತಿದೆ. ದಕ್ಷಿಣ ಆಫ್ರಿಕದಲ್ಲಿ ವಿವಿಧ ಸಂಘಟನೆಗಳು
ಸೀಮೆಎಣ್ಣೆ ಸ್ಟೋವ್‌ಗೆ ಬದಲಾಗಿ ಒಂದು ಸಾವಿರಕ್ಕೂ ಅಧಿಕ ಮೆಥನಾಲ್ ಸ್ಟೋವ್‌ಗಳನ್ನು
ಜನರಿಗೆ ಒದಗಿಸಿವೆ ಎಂದು ಐಸ್‌ಲ್ಯಾಂಡ್‌ನಲ್ಲಿ ಕಾರ್ಬನ್ ಡೈ ಆಕ್ಸೆ„ಡ್ ಬಳಸಿ ಇಂಧನ
ಉತ್ಪಾದಿಸುವ ಘಟಕ ಸ್ಥಾಪನೆಗೆ ದುಡಿದಿರುವ ಸೂರ್ಯಪ್ರಕಾಶ್ ಹೇಳುತ್ತಾರೆ
ಮಾಹಿತಿ : ಉದಯವಾಣಿ
0 Комментарии