ನಾರ್ಥೆಕ್ ವೆಲ್ಸ್‌ನಲ್ಲಿ ಒಂದು ಪರಿವಾರ ವಾಸವಿತ್ತು. ಆ ಮನೆಯ ಒಡತಿಯ ಹೆಸರು ಪೈಟ್ರಿಕರ್ ಪಿಯರಸನ್.. ಆಕೆಗೆ
73 ವರ್ಷವಾಗಿದೆ. ಈಕೆಯ ಬದುಕಿನಲ್ಲಿ ನಡೆದ ಒಂದು ಭೀಕರ ಭಯಾನಕ ಘಟನೆಯನ್ನು ನಿಮ್ಮ ಮುಂದೆ ಇಡ್ತಾ ಇದೀನಿ.
1962ರಲ್ಲಿ ಈಕೆಯ ತಾತ
ಸಾಚವಿಗೀಡಾಗ್ತಾರೆ.
ಆ ದಿನ ತಾತನ ಸಾವಿನ ನೋವಿನಲ್ಲಿದ್ದ ಆಕೆಗೆ ಒಂದು ಅಚ್ಚರಿ ಕಾದಿರುತ್ತೆ.. ಈಕೆಯ ತಾತ ಸಾವಿಗೀಡಾದ ಕ್ಷಣವೇ ಅಂದ್ರೆ ಮಧ್ಯಾಹ್ನ 3 ಗಂಟೆಗೆ
ಅವರ ಮನೆಯಲ್ಲಿದ್ದ
ಗಡಿಯಾರ ಕೂಡ
ನಿಂತು
ಹೋಗಿರುತ್ತೆ..
ಇದು ಕಾಕತಾಳೀಯ ಆಂತ
ಎಲ್ಲರೂ ಕೂಡ ಸುಮ್ಮನಾಗ್ತಾರೆ. ಆದ್ರೆ ಕೆಲವು ವರ್ಷಗಳ ನಂತರ
ಅಂದ್ರೆ 1975ರಲ್ಲಿ
ಈಕೆಯ ತಂದೆ ಸಾವನ್ನಪ್ಪುತಾರೆ. ಆಗಲೂ ಪೈಟ್ರಿಕರ‍್ ಪಿಯರಸ್‌ಸನ್
ಗಡಿಯಾರದ ಕಡೆ ಕಣ್ಣು ಹಾಯಿಸ್ತಾಳೆ. ಆಗ ಆಕೆಗೆ ನಿಜಕ್ಕೂ ಶಾಕ್ ಕಾದಿತ್ತು.. ಯಾಕಂದ್ರೆ ಆಗಲೂ
ಕೂಡ ಆಕೆಯ ಮನೆಯಲ್ಲಿದ್ದ ಗಡಿಯಾರ ನಿಂತು ಹೋಗಿತ್ತು.. ಈ ಹಿಂದೆ ತಾತನ ಸಾವಿನ ಸಮಯದಲ್ಲೂ ಗಡಿಯಾರ
ನಿಂತಿದ್ದು ಆಕೆಗೆ ನೆನಪಾಯ್ತು. ಎರಡನ್ನೂ ನೆನೆಸಿಕೊಂಡ ಆಕೆ ನಿಜಕ್ಕೂ ಬೆಚ್ಚಿ ಬಿದ್ದಿದ್ಳು.
ಮನೆಯೊಳಗಿನ ಈ
ವಿಚಿತ್ರ ಇಷ್ಟಕ್ಕೆ ನಿಲ್ಲಲಿಲ್ಲ. 2002ರಲ್ಲಿ ಈಕೆ ತನ್ನ ಪತಿ ಜೊತೆ ಸುತ್ತಾಡಲು ಹೊರಗೆ ಹೋಗಿದ್ರು.. ಆದ್ರೆ
ಹೊರಗೆ ಹೋದ ಸಮಯದಲ್ಲಿ ಮನೆಯಲ್ಲಿಯೇ ಇದ್ದ ಈಕೆಯ ತಾಯಿ ತಾಯಿಯ ಸಾವಿಗೀಡಾಗ್ತಾಳೆ.. ಅಚ್ಚರಿ ಅಂದರೆ ಆಗಲೂ ಕೂಡ ಮನೆಯಲ್ಲಿದ್ದ ಗಡಿಯಾರ ಬಂದ್ ಆಗಿತ್ತು..
ಪೈಟ್ರಿಕರ್ ಪಿಯರಸನ್ ಮನೆಯಲ್ಲಿ ಯಾವಾಗ ಸಾವುಗಳು ಸಂಭವಿಸುತ್ತವೆಯೋ, ಆಗೆಲ್ಲಾ ಗಡಿಯಾರ ಕೂಡ ನಿಂತು
ಹೋಗ್ತಿತ್ತು.. ಇದು ಅಚ್ಚರಿಯಾದ್ರೂ ಸತ್ಯ.. ನಂಬಲು ಅಸಾಧ್ಯವಾದ್ರೂ, ನಂಬಲೇಬೇಕಾದ ಸತ್ಯ..
ಈ ಘಟನೆಯಿಂದಾಗಿ
ಈಕೆಗೆ ಮನೆಯಲ್ಲಿ ಇರೋಕೆ ತುಂಬಾನೇ ಭಯ ಆಗ್ತಿದ್ಯಂತೆ. ಇನ್ನು ಗಡಿಯಾರವನ್ನು ನೋಡಿದ್ರೆ ಸಾಕು
ಈಕೆಗೆ ತುಂಬಾನೆ ಭಯವಾಗ್ತಿದ್ಯಂತೆ. ಈ
ಗಡಿಯಾರವೇ ಭೂತವಾಗಿ ಮನೆಯವರನ್ನು ಸಾಯಿಸುತ್ತಿದೆ ಅಂತ
ಅಲ್ಲಿನ ಜನ್ರು ಮಾತಾಡಿಕೊಳ್ತಿದ್ದಾರೆ.
ಮಾಹಿತಿ : ಡೆಲಿ ಮೆಲ್
0 Комментарии