Hot Posts

10/recent/ticker-posts

ಯಾರು ಈ ರಾಬರ್ಟ್​ ವಾದ್ರಾ..?











ಕೇಂದ್ರದಲ್ಲಿ
ಆಡಳಿತ ಬದಲಾವಣೆಯ ಗಾಳಿ ಜೋರಾಗಿಯೇ ಬೀಸಿದೆ
. ಈ ಹಿನ್ನೆಲೆಯಲ್ಲಿ
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜಾರಿಗೆ ತಂದಿದ್ದ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್
ವಾದ್ರಾರನ್ನು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗೆ ಒಳಪಡಿಸಬಾರದು ಎಂಬ ವಿಶೇಷ ನಿಯಮವನ್ನು
ವಾಪಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ
. ಈ ಮಧ್ಯೆ, ಸೋನಿಯಾ ಅಳಿಯ
ರಾಬರ್ಟ್ ವಾದ್ರಾ ಹಿನ್ನೆಲೆ ಏನು ಎಂದು ನೋಡಿದಾಗ ಕಾಂಗ್ರೆಸ್ ಆಡಳಿತವಿದ್ದಾಗ ರಾಬರ್ಟ್ ವಾದ್ರಾ ಅವರು
ಒಬ್ಬ ಡೆವಲಪರ್ ಆಗಿ ಗುರುತಿಸಿಕೊಂಡಿದ್ದವರು
.





ರಾಬರ್ಟ್ ವಾದ್ರಾ ಮೂಲತಃ ಪಾಕ್ ಸಿಯಾಲ್
ಕೋಟದವರು ರಾಜೇಂದ್ರ ಮತ್ತು ಮೌರೀನ್ ವಾದ್ರಾ ಅವರ ಪುತ್ರ. 1969ರ ಮೇ 18ರಂದು ಜನನ. ರಾಜೇಂದ್ರ ವಾದ್ರಾ
ಉತ್ತರಪ್ರದೇಶ ಮೂಲದವರು. ತಾಯಿ ಮೌರೀನ್ ಸ್ಕಾಟ್ಲೆಂಡಿನವರು. ಮೊರಾದಾಬಾದಿನ ರಾಜೇಂದ್ರ ಅವರು ಬಿದಿರು
ಕಲೆಗಳ ವ್ಯಾಪಾರದಲ್ಲಿ ತೊಡಗಿದ್ದವರು. ಮೂಲತಃ ರಾಜೇಂದ್ರ ಕುಟುಂಬವು ಪಾಕಿಸ್ತಾನದ ಸಿಯಾಲ್ ಕೋಟದಿಂದ
ಬಂದವರು. ದೇಶ ಇಬ್ಭಾಗವಾದಾಗ ರಾಜೇಂದ್ರರ ತಂದೆ ಭಾರತಕ್ಕೆ ಬಂದವರು.





ರಾಬರ್ಟ್ ವಾದ್ರಾ ವ್ಯಾಸಂಗ 10ನೇ
ತರಗತಿವರೆಗೂ ರಾಬರ್ಟ್ ವಾದ್ರಾ 10ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದಾರೆ. ರಾಬರ್ಟ್ ವಾದ್ರಾ 13ನೇ
ವಯಸ್ಸಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದರು. 1997ರಲ್ಲಿ ಇಬ್ಬರೂ
ವಿವಾಹವಾದರು. ದಂಪತಿಗೆ ಒಬ್ಬ ಪುತ್ರ (ರಿಹಾನ್) ಮತ್ತು ಪುತ್ರಿ ಮಿರಯಾ ಇದ್ದಾರೆ.





ರಾಬರ್ಟ್, ಪ್ರಿಯಾಂಕಾ
ಮದ್ವೆ ತಂದೆ ರಾಜೇಂದ್ರಗೆ ಇಷ್ಟವಿರಲಿಲ್ಲ ಗಮನಾರ್ಹವೆಂದರೆ ತಮ್ಮ ಮಗ ರಾಬರ್ಟ್
, ಪ್ರಿಯಾಂಕಾ
ಗಾಂಧಿಯನ್ನು ವರಿಸುವುದು ತಂದೆ ರಾಜೇಂದ್ರಗೆ ಸುತರಾಂ ಇಷ್ಟವಿರಲಿಲ್ಲ. ಹಾಗಾಗಿ ಮಗನನ್ನು ಕುಟುಂಬದಿಂದ
ದೂರವಿಟ್ಟಿದ್ದರು. 2001ರಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿದ್ದ ರಾಬರ್ಟ್
, ತನ್ನ ತಂದೆ
ರಾಜೇಂದ್ರ ಮತ್ತು ಸೋದರ ರಿಚರ್ಡ್ ಅವರುಗಳು ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದಾರೆ
ಎಂದು ಉತ್ತರ ಪ್ರದೇಶ ಎಚ್ಚರಿಕೆ ನೀಡಿದ್ದರು. ಮುಂದೆ ರಾಜೇಂದ್ರ
, ತಮ್ಮ ಪುತ್ರನ
ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.


ರಾಬರ್ಟ್ ವಾದ್ರಾ ಕುಟುಂಬದಲ್ಲಿ
ಸರಣಿ ಸಾವುಗಳು ಮುಂದೆ ಕಹಿ ಬೆಳವಣಿಗೆಯೊಂದರಲ್ಲಿ 2009ರಲ್ಲಿ ನವದೆಹಲಿಯ ಯೂಸುಫ್ ಸರಾಯ್ ಪ್ರದೇಶದಲ್ಲಿರುವ
ಗೆಸ್ಟ್ ಹೌಸ್ ಒಂದರಲ್ಲಿ ರಾಬರ್ಟ್ ವಾದ್ರಾ ತಂದೆ ರಾಜೇಂದ್ರ ಅವರು ಸತ್ತುಬಿದ್ದಿದ್ದರು. ಮುಂದೆ
2003ರಲ್ಲಿ ರಾಬರ್ಟ್ ವಾದ್ರಾ ಅಣ್ಣ ರಿಚರ್ಡ್ ಆತ್ಮಹತ್ಯೆ ಮಾಡಿಕೊಂಡು ಇಹಲೋಕದ ವ್ಯಾಪಾರ ಮುಗಿಸಿದ್ದರು.
ಮುಂದೆ ರಾಬರ್ಟ್ ವಾದ್ರಾ ಕುಟುಂಬದಲ್ಲಿ ಮತ್ತೂ ಒಂದು ದುರಂತ ಸಂಭವಿಸಿತು. ಸೋದರಿ ಮಿಷೆಲ್ 2001ರಲ್ಲಿ
ಕಾರು ಅಪಘಾತದಲ್ಲಿ ಮೃತಪಟ್ಟರು.
Show
Thumbnail





ರಾಯ್‌ಬರೇಲಿ: ಕಳೆದ ಬಾರಿಯ ಚುನಾವಣೆಗಳಲ್ಲಿ
ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಪ್ರಚಾರದ ಮುಂಚೂಣಿಯಲ್ಲಿ ಮಿಂಚುತ್ತಿದ್ದರು.
ಈ ಸಲ ಪರಿಸ್ಥಿತಿ ಹಾಗಿಲ್ಲ.





ಉತ್ತರ ಪ್ರದೇಶದ ಪ್ರತಿಷ್ಠಿತ ಕ್ಷೇತ್ರಗಳಾದ
ಸೋನಿಯಾ ಗಾಂಧಿ ಸ್ಪರ್ಧಿಸುವ ರಾಯ್‌ ಬರೇಲಿ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌‌ ಗಾಂಧಿ ಕಣಕ್ಕಿಳಿದಿರುವ
ಅಮೇಠಿಯಲ್ಲಿ ರಾಬರ್ಟ್‌ ವಾದ್ರಾ ದೊಡ್ಡ ಮಟ್ಟದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಮಾಧ್ಯಮಗಳ ಕಣ್ಣಿಗೂ
ಸಿಕ್ಕಿಬಿದ್ದಿಲ್ಲ.





ಸೋನಿಯಾ ಗಾಂಧಿ ಬುಧವಾರ ಅದ್ಧೂರಿಯಾಗಿ
ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಸುವಾಗಲೂ ಮಗಳು ಪ್ರಿಯಾಂಕ ಗಾಂಧಿಯಾಗಲಿ
, ಅಳಿಯ ರಾಬರ್ಟ್‌
ವಾದ್ರಾ ಆಗಲಿ ಕಾಣಿಸಿಕೊಂಡಿಲ್ಲ. ಮಗ ರಾಹುಲ್‌ ಸ್ವತಃ ಅಮ್ಮನ ವಾಹಕಕ್ಕೆ ಡ್ರೈವರ್‌ ಆಗಿ ಗಮನಸೆಳೆದರು.
ಹೀಗೆ ಈ ಚುನಾವಣೆಯಲ್ಲಿ ಈವರೆಗೂ ಅಳಿಯನಿಗೆ ಮಣೆ ಹಾಕಲು ಸೋನಿಯಾ ಹಿಂದೇಟು ಹಾಕಿದ್ದಾರೆ.





ಇದಕ್ಕೆ ಕಾರಣವೂ ಇಲ್ಲದಿಲ್ಲ. ವಾದ್ರಾ
ಅವರನ್ನೀಗ ಭ್ರಷ್ಟಾಚಾರದ ಭೂತ ಬೆನ್ನೇರಿ ಕಾಡುತ್ತಿದೆ. ಬಿಜೆಪಿಯಾಗಲಿ
, ಆಮ್‌ ಆದ್ಮಿ
ಪಕ್ಷವಾಗಲಿ ವಾದ್ರಾ ಅವರ ಹರ್ಯಾಣ ಮತ್ತು ರಾಜಸ್ಥಾನದ ಭೂಹಗರಣದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ವಾಗ್ದಾಳಿ
ಮಾಡುವ ಅವಕಾಶವನ್ನು ತಪ್ಪಿಸಿಕೊಂಡಿಲ್ಲ. ಅವೆರಡು ರಾಜ್ಯದಲ್ಲೂ
, ಕೇಂದ್ರದಲ್ಲೂ
ಕಾಂಗ್ರೆಸ್‌ ಆಡಳಿತವಿದ್ದಾಗ ನಡೆದ ಭೂಹಗರಣದ ಉರುಳು ಈಗಲೂ ವಾದ್ರಾ ಅವರ ಬೆನ್ನು ಬಿಡುತ್ತಿಲ್ಲ. ಹೀಗಾಗಿ
ಭ್ರಷ್ಟಾಚಾರ ಮಾಡಿದವರನ್ನೇ ಪ್ರಚಾರಕ್ಕೆ ಕರೆ ತಂದರೆ ಅಪಪ್ರಚಾರವಾಗುವ ಭೀತಿ ಸೋನಿಯಾ ಅವರನ್ನು ಕಾಡುತ್ತಿದೆ.
ಆತ ನಮ್ಮ ಎರಡು ಪ್ರತಿಷ್ಠಿತ ಕ್ಷೇತ್ರಗಳಿಗೆ ಭೇಟಿಯನ್ನೇ ನೀಡಬಾರದು ಅಂತಲ್ಲ. ಆದರೆ ಪ್ರಾಮುಖ್ಯತೆ
ಕೊಡದಿರಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತವೆ.





ಪ್ರಿಯಾಂಕ ಮತ್ತು ವಾದ್ರಾ ಪ್ರಚಾರ
ಮುಂಚೂಣಿಯಲ್ಲಿ ಇಲ್ಲದಿರುವುದು ಕಾಂಗ್ರೆಸ್‌ ವಲಯದಲ್ಲೂ ಅನೇಕರಿಗೆ ಅಚ್ಚರಿ ನೀಡಿದೆ. ಏಕೆಂದರೆ
, ಪ್ರತಿ ಸಲ ಚುನಾವಣೆಯಲ್ಲೂ
ಸೋನಿಯಾಗಾಂಧಿಗೆ ಮಗ
, ಮಗಳು, ಅಳಿಯ ಸಾಥ್‌ ಕೊಡುವುದು ಪರಿಪಾಠ. 1999ರಿಂದಲೂ ಕುಟುಂಬದವರೆಲ್ಲರೂ
ಇದ್ದು ನಾಮಪತ್ರ ಸಲ್ಲಿಸುವ ಪದ್ಧತಿಯನ್ನು ಗಾಂಧಿ ಕುಟುಂಬ ರೂಢಿಸಿಕೊಂಡಿತ್ತು.





ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ
ನೀಡಿದ ಕುಟುಂಬ ಹಾಗೂ ಪಕ್ಷದ ವಕ್ತಾರ ಕೆ.ಎಲ್‌. ಶರ್ಮ
, ಪ್ರಿಯಾಂಕ ಅವರಿಗೆ
ಆರೋಗ್ಯ ಸರಿ ಇರಲಿಲ್ಲ
, ಶೀತ ಮತ್ತು ಕೆಮ್ಮು ಇತ್ತು. ಹೀಗಾಗಿ ಮಾತಾಡುವುದೂ ಕಷ್ಟವಿತ್ತು. ಬಹುಶಃ
ವಾದ್ರಾ ಅವರು ಪ್ರಿಯಾಂಕ ಅವರೊಂದಿಗೇ ಉಳಿದುಕೊಂಡಿರಬೇಕು ಎಂದು ಸಮಜಾಯಿಷಿ ನೀಡಿದ್ದಾರೆ.





`ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಮತ್ತು ಪುತ್ರಿ ಪ್ರಿಯಾಂಕಾ
ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಅವರು ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಬೆಲೆಗೆ ಖರೀದಿಸ್ದ್ದಿದ
ಭೂಮಿ ಯನ್ನು ಭಾರಿ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದಾರೆ
~ ಎಂದು ಸಾಮಾಜಿಕ
ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.





`ವಾದ್ರಾ ಅವರು ಗುಡಗಾಂವ್ ಮತ್ತಿತರ ಕಡೆ ಚಿಕ್ಕಾಸಿಗೆ ಖರೀದಿಸಿದ್ದ
ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನುಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಿದ್ದಾರೆ
~ ಎಂದು ಅವರು
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.





ಇದಕ್ಕೆ ಸಾಕ್ಷಿಯಾಗಿ ಅವರು ಸಂಬಂಧಪಟ್ಟ
ದಾಖಲೆಗಳ ಪ್ರತಿಗಳನ್ನು ತೋರಿಸಿ
, `ಕಳೆದ ನಾಲ್ಕು ವರ್ಷಗಳಲ್ಲಿ ವಾದ್ರಾ ಅವರು ದೆಹಲಿ ಸುತ್ತ ಕನಿಷ್ಠ
31 ಕಡೆ ಜಮೀನುಗಳನ್ನು ಖರೀದಿ ಮಾಡಿದ್ದಾರೆ
~ ಎಂದರು.





ಕಾಂಗ್ರೆಸ್ ನಕಾರ: ಆದರೆ ಈ ಆರೋಪವನ್ನು
ಕಾಂಗ್ರೆಸ್ ಅಲ್ಲಗಳೆದಿದೆ.
`ಇದು ಸುಳ್ಳು ಆರೋಪ~ ಎಂದು ದೆಹಲಿ
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ. ತ್ರಿಪಾಠಿ ಹೇಳಿದ್ದಾರೆ.
`ದೆಹಲಿ ಸರ್ಕಾರವು
ಖಾಸಗಿಯವರಿಗೆ ಜಮೀನು ಮಾರಾಟ ಮಾಡಿಲ್ಲ
~ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.





ಪುರಾವೆ ಎಲ್ಲಿದೆ?: `ವಾದ್ರಾ ಅವರ
ವಿರುದ್ಧ ಮಾಡಿರುವ ಆರೋಪಗಳಿಗೆ ಕೇಜ್ರಿವಾಲ್ ಪುರಾವೆಗಳನ್ನು ನೀಡಬೇಕು
~ ಎಂದು ಕೇಂದ್ರ
ಮಾಹಿತಿ ಹಾಗೂ ಪ್ರಸಾರ ಸಚಿವೆ ಅಂಬಿಕಾ ಸೋನಿ ಶ್ರೀನಗರದಲ್ಲಿ ಹೇಳಿದ್ದಾರೆ.





 `ರಾಜಕೀಯ ಪಕ್ಷ
ಆರಂಭಿಸಿರುವ ಕೇಜ್ರಿವಾಲ್ ಅವರು ದೆಹಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ರಾಜಧಾನಿಯಲ್ಲಿ
ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ವಾದ್ರಾ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ
~ ಎಂದೂ ಅವರು
ದೂರಿದ್ದಾರೆ.





ತನಿಖೆಗೆ ಬಿಜೆಪಿ ಆಗ್ರಹ: ಕೇಜ್ರಿವಾಲ್
ಅವರು ವಾದ್ರಾ ವಿರುದ್ಧ ಮಾಡಿರುವ ಆರೋಪಗಳ ತನಿಖೆ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ.





ಸೋನಿಯಾ ಅಳಿಯ ವಾದ್ರಾ ವಿರುದ್ಧ
ತನಿಖೆಗೆ ರಾಜಸ್ಥಾನ ಸರ್ಕಾರ ಆದೇಶ





ಜೈಪುರ : ಎ.ಐ.ಸಿ.ಸಿ ಅಧ್ಯಕ್ಷ್ಯೆ
ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ
ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದಿರುವ ವಸುಂದರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ
, ರಾಬರ್ಟ್ ವಾದ್ರಾ
ಭೂ ಅವ್ಯವಹಾರಗಳ ಬಗ್ಗೆ ತನಿಖೆಗೆ ಆದೇಶಿಸಿದೆ.





ರಾಜಸ್ಥಾನದ ಜೋಧ್ ಪುರ, ಬಾರ್ಮಾರ್, ಬಿಕಾನೇರ್ ಗಳಲ್ಲಿ
ರಾಬರ್ಟ್ ವಾದ್ರಾ ಭೂ ಅಕ್ರಮ ನಡೆಸಿರುವ ಆರೋಪವಿದ್ದು
, ಈ ಬಗ್ಗೆ ಮೇ
ತಿಂಗಳ ಅಂತ್ಯದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ
ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು
, ನಿರಂತರ ನಿಗಾ
ವಹಿಸುತ್ತಿದ್ದಾರೆ.





ಯುಪಿಎ ಸರ್ಕಾರದ 2ನೇ ಅಧಿಕಾರಾವಧಿ
ಅಂದರೆ
, 2009ರಿಂದ 2012 ವರೆಗೆ ವಾಧ್ರ ಪಾಲುದಾರಿಕೆಯ ಕಂಪನಿಗಳು ರಾಜಸ್ಥಾನದಲ್ಲಿ
ಭೂ ಬ್ಯಾಂಕ್ ಸ್ಥಾಪಿಸಿ
, ಬಿಕಾನೇರ್‌, ಜೋಧ್‌ಪುರ, ಬಾರ್ಮಾರ್ ಗಳಲ್ಲಿ
ಸರ್ಕಾರದಿಂದ ಭೂಮಿ ಪಡೆದಿದ್ದವು. ಸೋಲಾರ್ ವಿದ್ಯುತ್ ಯೋಜನೆಗೆ ಸರ್ಕಾರದಿಂದ ಪಡೆದ ಭೂಮಿಯನ್ನು ಭಾರಿ
ಬೆಲೆಗೆ ಮಾರಾಟ ಮಾಡಲಾಗಿತ್ತು.





ರಾಬರ್ಟ್ ವಾದ್ರಾ ಪಾಲುದಾರಿಕೆಯ
ಕಂಪನಿಗಳು ಸರ್ಕಾರದಿಂದ ಭೂಮಿ ಪಡೆದು ಅಕ್ರಮವಾಗಿ ಮಾರಾಟ ಮಾಡುವ ಸಂದರ್ಭದಲ್ಲಿ ಅಶೋಕ್ ಗೆಹ್ಲೋಟ್
ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಸ್ಥಾನಲ್ಲಿ ಆಡಳಿತ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ
ದಿನಗಳಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧವೂ ತನಿಖೆ ನಡೆಸುವ ಸಾಧ್ಯತೆ
ಇದೆ.





ರಾಜಸ್ಥಾನದಲ್ಲಿ ನಡೆದಿರುವ ಭೂ ಅಕ್ರಮದಲ್ಲಿ
ವಾದ್ರಾ ಅವರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಹಲವು ಬಿಜೆಪಿ ಸಂಸದರು ತನಿಖೆಗೆ ಆಗ್ರಹಿಸಿದ್ದರು.
ಆದರೆ ಆರೋಪಗಳೆಲ್ಲ ನಿರಾಧಾರ ಎಂದು ಗೆಹ್ಲೋಟ್ ಹೇಳಿದ್ದರು.





 ರಾಬರ್ಟ್ ವಾಧ್ರಾ ವಿರುದ್ಧ ಉಮಾ ಭಾರತಿ ವಾಗ್ದಾಳಿ





ಝಾನ್ಸಿ : ಎನ್.ಡಿ.ಎ ಅಧಿಕಾರಕ್ಕೆ
ಬಂದರೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾಧ್ರಾರನ್ನು ಜೈಲಿಗೆ ಕಳುಹಿಸುವುದಾಗಿ ಬಿಜೆಪಿ ನಾಯಕಿ ಉಮಾ
ಭಾರತಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.





ಝಾನ್ಸಿಯಲ್ಲಿ ಮಾತನಾಡಿದ ಅವರು, ಈ ಬಾರಿ ಎನ್.ಡಿ.ಎ
ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ ರಾಬರ್ಟ್ ವಾಧ್ರಾರನ್ನು ಜೈಲಿಗೆ ಅಟ್ಟುತ್ತೇವೆ ಎಂದು
ಗುಡುಗಿದ್ದಾರೆ.





ರಾಬರ್ಟ್ ವಾಧ್ರಾ ಎಲ್ಲಾ ನಿಯಮಗಳನ್ನು
ಮೀರಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಇದಕ್ಕೆ ಅವರ ಅತ್ತೆ ಸೋನಿಯಾ ಗಾಂಧಿಯವರ ಬೆಂಬಲವಿದೆ. ಕೇಂದ್ರ
ಸಚಿವರು ಕೂಡ ವಾಧ್ರಾಗೆ ಭಯಪಡುತ್ತಾರೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೂ ಹೆದರುತ್ತಾರೆ
ಎಂದು ಕಿಡಿಕಾರಿದ್ದಾರೆ.





ಒಂದೆಡೆ ಬಿಜೆಪಿ ಪ್ರಧಾನಿ ಅಭ್ಯರ್ಥಿ
ನರೇಂದ್ರ ಮೋದಿ
, ಬಿಜೆಪಿ ಅಧಿಕಾರಕ್ಕೆ ಬಂದರೆ ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿಕೆ
ನೀಡುತ್ತಿದ್ದರೆ
, ಇನ್ನೊಂದೆಡೆ ಉಮಾ ಭಾರತಿ ಪದೇ ಪದೇ ವಾಧ್ರಾ ವಿರುದ್ಧ ಇಂತಹ ಹೇಳಿಕೆಗಳನ್ನು
ನೀಡುತ್ತಿರುವುದು ವಿವಾದಕ್ಕೆ ಕಾರಣವಾಗುತ್ತಿದೆ.





ವಾದ್ರ ಅಕ್ರಮ ಬಯಲು ಮಾಡಿದ್ದ ಅಶೋಕ್
ಖೇಮ್ಕಾ ವಿರುದ್ಧ ಸಿ.ಬಿ.ಐ ತನಿಖೆ


ಅಶೋಕ್ ಖೇಮ್ಕಾ ಅಶೋಕ್ ಖೇಮ್ಕಾ





ನವದೆಹಲಿ : ಎ.ಐ.ಸಿ.ಸಿ ಅಧ್ಯಕ್ಷ್ಯೆ
ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಭೂ ಅಕ್ರಮಗಳನ್ನು ಬಯಲಿಗೆಳೆದಿದ್ದ ಹರ್ಯಾಣದ ಐ.ಎ.ಎಸ್
ಅಧಿಕಾರಿ ಅಶೋಕ್ ಖೇಮ್ಕಾ ಅವರ ವಿರುದ್ಧ ಸಿ.ಬಿ.ಐ ತನಿಖೆಗೆ ಆದೇಶ ಹೊರಡಿಸಲಾಗಿದೆ.





ಹರ್ಯಾಣ ಸರ್ಕಾರ ಅಶೋಕ್ ಖೇಮಾ ವಿರುದ್ಧ
ಸಿ.ಬಿ.ಐ ತನಿಖೆ ನಡೆಸಲು ಆದೇಶ ನೀಡಿದೆ. 2009ರಲ್ಲಿ ರಾಜ್ಯ ಗೋದಾಮು ನಿಗಮ(
State Warehouse Corporation) ದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಅಶೋಕ್ ಖೇಮ್ಕಾ, ಗುಜರಾತ್ ಮೂಲದ
ಸಂಸ್ಥೆಯೊಂದಕ್ಕೆ 8 ಕೋಟಿ ರೂ ಯೋಜನೆ ಗುತ್ತಿಗೆ ನೀಡಿರುವುದರ ಬಗ್ಗೆ ಸಿ.ಬಿ.ಐ ತನಿಖೆ ನಡೆಸಲು ಆದೇಶಿಸಲಾಗಿದೆ.





ಗುತ್ತಿಗೆ ನೀಡುವ ಸಂದರ್ಭದಲ್ಲಿ
ಅನುಮತಿ ಇಲ್ಲದೆಯೇ ನಿಯಮಗಳು ಮತ್ತು ಷರತ್ತುಗಳನ್ನು ಬದಲಾವಣೆ ಮಾಡಿ 8 ಕೋಟಿ ರೂ ಯೋಜನೆಯ ಗುತ್ತಿಗೆಯನ್ನು
ಮಂಜೂರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.





ಐಎಸ್ಎಸ್ ಅಧಿಕಾರಿ, ಅಶೋಕ್, ಸೋನಿಯಾ ಗಾಂಧಿ
ಅಳಿಯ ರಾಬರ್ಟ್ ವಾದ್ರ ಅವರು ನಡೆಸಿರುವ ಹಲವು ಅಕ್ರಮಗಳನ್ನು ಬಯಲು ಮಾಡಿದ್ದರು. ಖೇಮ್ಕಾ ಇತ್ತೀಚೆಗಷ್ಟೆ
ವಾದ್ರ ಮತ್ತು ಡಿಎಲ್‌ಎಫ್ ನಡುವಣ ಭೂ ಮಾರಾಟ ವ್ಯವಹಾರವೊಂದನ್ನು ಭೂಮಿಯ ಬೆಲೆಯನ್ನು ಅಪಮೌಲ್ಯಗೊಳಿಸಿರುವುದಕ್ಕೆ
ರದ್ದುಪಡಿಸಿದ್ದರು.





ಮನೇಸರ್ -ಶಿಖೋಪುರ್ ನಲ್ಲಿರುವ
3.5 ಎಕರೆ ನಿವೇಶನವನ್ನು ವಾದ್ರ ಇತ್ತೀಚೆಗೆ ಡಿಎಲ್‌ಎಫ್ ಗೆ 58 ಕೋಟಿ ರೂ.ಗೆ ಮಾರಿದ್ದು
, ಈ ಭೂ ವ್ಯವಹಾರವನ್ನು
ಖೇಮ್ಕಾ ರದ್ದುಪಡಿಸಿದ್ದರು. ವಾದ್ರಾ 7.5 ಕೋಟಿ ರೂ.ಗೆ ಈ ಭೂಮಿಯನ್ನು ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ
ಭೂ ಮಾರಾಟ ವ್ಯವಹಾರವನ್ನು ರದ್ದುಗೊಳಿಸಲಾಗಿತ್ತು.





ರಾಬರ್ಟ್‌ ವಾದ್ರಾ ಮತ್ತು ಅವರ ಕಂಪೆನಿಗಳು
ಭೂ ಮಿಯ ಬೆಲೆಯನ್ನು ಅಪಮೌಲ್ಯಗೊಳಿಸಿ ಸರ್ಕಾರಕ್ಕೆ ಛಾಪಾ ಶುಲ್ಕ ವಂಚಿಸಿರುವ ಪ್ರಕರಣಗಳ ಕುರಿತು
ಕೂಡ ಖೇಮ್ಕಾ ತನಿಖೆಗೆ ಆದೇಶಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ
ಅವರನ್ನು ಹರ್ಯಾಣ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.





ಸೋನಿಯಾ ಗಾಂಧಿ ಅಳಿಯನ ಅಕ್ರಮಗಳನ್ನು
ಬಯಲು ಮಾಡಿದ ಬೆನ್ನಲ್ಲೇ ಅಶೋಕ್ ಖೇಮ್ಕಾ ವಿರುದ್ಧ ಹರ್ಯಾಣದಲ್ಲಿ ಆಡಳಿತ ನಡೆಸುತ್ತಿರುವ ಭೂಪೇಂದ್ರ
ಹೂಡ ನೇತೃತ್ವದ ಕಾಂಗ್ರೆಸ್ ಸರ್ಕಾರ
, ಸಿ.ಬಿ.ಐ ತನಿಖೆಗೆ ಆದೇಶ ನೀಡಿರುವುದು ಅನುಮಾನ ಮೂಡಿಸಿದೆ.





 ಅಶೋಕ್ ಖೇಮ್ಕಾ ವಿರುದ್ಧ ಚಾರ್ಜ್ ಶೀಟ್ ಗೆ ಹರ್ಯಾಣಾ ಸರ್ಕಾರ
ಸಮ್ಮತಿ





ನವದೆಹಲಿ : ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ
ಅಳಿಯ ರಾಬರ್ಟ್ ವಾದ್ರಾ ಅವರ ಭೂ ಕಬಳಿಕೆ ಹಗರಣ ಬಯಲಿಗೆಳೆದಿದ್ದ ನಿವೃತ್ತ ಐಎಎಸ್ ಅಧಿಕಾರಿ ಅಶೋಕ್
ಖೇಮ್ಕಾ ವಿರುದ್ಧ ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸಲು ಹರ್ಯಾಣಾ ಸರ್ಕಾರ ಸಮ್ಮತಿ ನೀಡಿದೆ. ಈ ಮೂಲಕ
ಖೇಮ್ಕಾ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ.





ಹರ್ಯಾಣಾ ಸೀಡ್ಸ್ ಡೆವಲಪ್ ಮೆಂಟ್
ಕಾರ್ಪೊರೇಷನ್ ನ ಕಾರ್ಯನಿರ್ವಾಕರಾಗಿದ್ದಾಗ ಖೇಮ್ಕಾ ಬೀಜ ಮಾರಾಟದಲ್ಲಿ ಅಕ್ರಮ ನಡೆಸಿದ್ದಾರೆ ಎಂದು
ಚಾರ್ಜ್ ಶೀಟ್ ಸಲ್ಲಿಸಲು ತನಿಖಾಧಿಕಾರಿಗಳಿಗೆ ಸರ್ಕಾರ ಅನುಮತಿ ನೀಡಿದೆ.





ರಾಬರ್ಟ್ ವಾದ್ರಾ ಭೂ ವಿವಾದಕ್ಕೆ
ಸಂಬಂಧಿಸಿದಂತೆ ಅಶೋಕ್ ಖೇಮ್ಕಾ ತಮ್ಮ ಕಾರ್ಯವ್ಯಾಪ್ತಿ ಮೀರಿ ವಾದ್ರಾ ಹಾಗೂ ಡಿಎಲ್ ಎಫ್ ಕಂಪನಿ ನಡುವಿನ
ವ್ಯವಹಾರವನ್ನು ರದ್ದು ಮಾಡಿದ್ದಾರೆ ಎಂದು ಆರೋಪಿಸಿ ಹರ್ಯಾಣಾ ಸರ್ಕಾರ ಈ ಮೊದಲು ಖೇಮ್ಕಾ ವಿರುದ್ಧ
ಪ್ರಕರಣ ದಾಖಲಿಸಿತ್ತು.





ವಾದ್ರಾ ಹಾಗೂ ಡಿಎಲ್ ಎಫ್ ಕಂಪನಿ
ನಡುವಿನ ಭೂ ವ್ಯವಹಾರದಲ್ಲಿ ರೂ.58 ಕೋಟಿ ಅಕ್ರಮ ವ್ಯವಹಾರ ನಡೆದಿದೆ. 8 ವರ್ಷಗಳಲ್ಲಿ ನಡೆದ ಭ್ರಷ್ಟಾಚಾರದ
ವಹಿವಾಟು 20ಸಾವಿರ ಕೋಟಿಯಿಮ್ದ
, ಒಟ್ಟು ಹಗರಣ ರೂ.3.5 ಲಕ್ಷ ಕೋಟಿ ಮೌಲ್ಯದ್ದಾಗಿದೆ ಎಂದು ಹೇಳಿದ್ದರು.





ಅಶೋಕ್ ಖೇಮ್ಕಾ ಒಂದೊಂದೇ ಭ್ರಷ್ಟಾಚಾರ
ಪ್ರಕರಣಗಳನ್ನು ಬಯಲಿಗೆಳೆಯುತ್ತಿರುವುದರಿಂದ ಹರ್ಯಾಣಾ ಸರ್ಕಾರ ಖೇಮ್ಕಾ ಸೇವಾವಧಿಯಲ್ಲಿ ಅವರನ್ನು
40 ಬಾರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎತ್ತಂಗಡಿ ಮಾಡಿತ್ತು.





ರಾಬರ್ಟ್ ವಾದ್ರಾ ಭೂ ಹಗರಣಃ ಸಂಸತ್
ನಲ್ಲಿ ಕೋಲಾಹಲ


ವಾಧ್ರಾ ಅಕ್ರಮಗಳ ಬಗ್ಗೆ ಎಸ್.ಐ.ಟಿ
ತನಿಖೆ ನಡೆಸಲು ಯಶ್ವಂತ್ ಸಿನ್ಹಾ ಪಟ್ಟು





ನವದೆಹಲಿ : ಮುಂಗಾರು ಅಧಿವೇಶನದ
ಆಗಸ್ಟ್ 13ರ ಸಂಸತ್ ಕಲಾಪದಲ್ಲಿ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಭೂ ಹಗರಣ ಪ್ರತಿದ್ವನಿಸಿದ್ದು
, ಈ ಸಂಬಂಧ ಸೋನಿಯಾಗಾಂಧಿ, ಕೇಂದ್ರ ಸರ್ಕಾರ
ಸ್ಪಷ್ಟೀಕರಣ ನೀಡಬೇಕು ಎಂದು ಉಭಯ ಸದನಗಳಲ್ಲಿ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಒತ್ತಾಯ ಮಾಡಿವೆ.





ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ
ರಾಬರ್ಟ್ ವಾದ್ರಾ ಅವರ ಭೂ ಹಗರಣ ಹಾಗೂ ಅವರು ಅಕ್ರಮವಾಗಿ ಸಂಪಾದಿಸಿರುವ 3.5 ಲಕ್ಷ ಕೋಟಿ ಆಸ್ತಿ ಗಳಿಸಿರುವುದರ
ಬಗ್ಗೆ ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಆಗ್ರಹಿಸಿದ್ದಾರೆ.
ವಾಧ್ರಾ ಅಕ್ರಮಗಳ ಬಗ್ಗೆ ಚರ್ಚೆ ನಡೆಸಲು ಪ್ರಶ್ನೋತ್ತರ ಕಲಾಪವನ್ನು ಸ್ಥಗಿತಗೊಳಿಸಿ
, ವಿಶೇಷ ಚರ್ಚೆಗೆ
ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಸಂಸದ ಯಶ್ವಂತ್ ಸಿನ್ಹಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ಒತ್ತಾಯಿಸಿದರು.
ಅಲ್ಲದೇ ಅಕ್ರದ ಬಗ್ಗೆ ಎಸ್.ಐ.ಟಿ ತನಿಖೆ ನಡೆಯಬೇಕು
, ವಾಧ್ರಾ, ಕಾಂಗ್ರೆಸ್
ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿಯೂ ಲೂಟಿ ಮಾಡಿದ್ದಾರೆ ಎಂದು ಸಿನ್ಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.





ಯಶ್ವಂತ್ ಸಿನ್ಹಾ ಅವರ ಆಗ್ರಹಕ್ಕೆ
ದನಿಗೂಡಿಸಿದ ಸಿ.ಪಿ.ಐ(ಎಂ) ನಾಯಕರು
, ವಾಧ್ರಾ ಅಕ್ರಮಗಳ ಬಗ್ಗೆ ಚರ್ಚೆ ನಡೆಸಿ ಪಾರದರ್ಶಕ ತನಿಖೆ ನಡೆಸಬೇಕು
ಎಂದು ಆಗ್ರಹಿಸಿದ್ದಾರೆ.





ರಾಜ್ಯ ಸಭೆಯಲ್ಲಿಯೂ ವಾದ್ರಾ ಪ್ರಕರಣ
ಪ್ರತಿಧ್ವನಿಸಿ ಪ್ರತಿಪಕ್ಷಗಳ ಗದ್ದಲ ತೀರ್ವಗೊಂಡ ಕಾರಣ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆ ವರೆಗೆ
ಮುಂದೂಡಲಾಗಿದೆ.





ಹಿಂದೂಗಳಿಗೆ ಜಮ್ಮು-ಕಾಶ್ಮೀರ ಸರ್ಕಾರ
ಭದ್ರತೆ ಒದಗಿಸಿಲ್ಲ:


ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ
ಅಕ್ರಮ ಪ್ರಸ್ತಾಪವಾಗುವುದಕ್ಕೂ ಮುನ್ನ ಕಿಶ್ತ್ ವಾರ್ ಕೋಮುಗಲಭೆ ಬಗ್ಗೆ ಪ್ರಸ್ತಾಪಿಸಿದ ಸಂಸದ ಯೋಗಿ
ಆದಿತ್ಯನಾಥ
, ಜಮ್ಮು-ಕಾಶ್ಮೀರ ಸರ್ಕಾರ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ.
ಅಮರನಾಥ ಯಾತ್ರೆ ಆರಂಭವಾದಾಗಲೇ ಕೋಮು ಗಲಭೆ ನಡೆಯಲು ಕಾರಣ ಏನು ಎಂದು ಸಂಸದ
, ಕೇಂದ್ರ ಸರ್ಕಾರವನ್ನು
ಪ್ರಶ್ನಿಸಿದ್ದಾರೆ.





ಅಲ್ಲದೇ ಘರ್ಷಣೆ ಸಂಭವಿಸಿದ ಸಂದರ್ಭದಲ್ಲಿ
ಓಮರ್ ಅಬ್ದುಲ್ಲಾ ಸರ್ಕಾರ ಮೂಕ ಪ್ರೇಕ್ಷಕನಂತೆ ವರ್ತಿಸುತ್ತದೆ. ಪ್ರಸ್ತುತ ನಡೆಯುತ್ತಿರುವ ಘರ್ಷಣೆ
ತಡೆಯಲು ಓಮರ್ ಅಬ್ದುಲ್ಲಾ ಸರ್ಕಾರ ವಿಫಲವಾಗಿದ್ದು
, ಈ ಬಗ್ಗೆ ಪಾರದರ್ಶಕ
ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.





ಒಟ್ಟಾರೆ ಆಗಸ್ಟ್ 13 ರ ಬೆಳಗಿನ
ಕಲಾಪ ಸಂಪೂರ್ಣವಾಗಿ ವಾದ್ರಾ ಹಗರಣ ಹಾಗೂ ಜಮ್ಮು-ಕಾಶ್ಮೀರ ವೈಫಲ್ಯಗಳ ಬಗ್ಗೆ ಉಂಟಾದ ಕೋಲಾಹಲದಲ್ಲೇ
ಮುಕ್ತಾಯಗೊಂಡಿದೆ. ಪ್ರತಿಪಕ್ಷಗಳು ಬೊಬ್ಬೆಹಾಕುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ಏನೂ ಆಗಿಯೇ
ಇಲ್ಲ ಎಂಬಂತೆ ವರ್ತಿಸುತ್ತಿದೆ. ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರ ನೀಡಿ ಸುಗಮ ಸಂಸತ್ ಕಲಾಪಕ್ಕೆ
ದಾರಿ ಮಾಡಿಕೊಡುವ ಉದ್ದೇಶ ಹೊಂದಿರುವ ಯಾವ ಲಕ್ಷಣವೂ ಕಾಣುತ್ತಿಲ್ಲ.





ಭೂಮಿ ಖರೀದಿಗೆ ಅಕ್ರಮ ದಾಖಲೆ ಸೃಷ್ಟಿಸಿದ
ರಾಬರ್ಟ್ ವಾದ್ರಾ: ಖೇಮ್ಕಾ ವರದಿ


ಹರಿಯಾಣ ಸರ್ಕಾರಕ್ಕೆ ವರದಿ ಸಲ್ಲಿಕೆ
ರೂ.3.5 ಲಕ್ಷ ಕೋಟಿಗೂ ಅಧಿಕ ಲಾಭ
ಗಳಿಕೆ





ಹರಿಯಾಣ : ಎಐಸಿಸಿ ಅಧ್ಯಕ್ಷೆ ಸೋನಿಯಾ
ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಿಎಲ್ ಎಫ್ ಕಂಪನಿಗೆ ಸರಕಾರಿ
ಭೂಮಿ ಪರಬಾರೆಗೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ ವಿರುದ್ಧ ಐಎ ಎಸ್ ಅಧಿಕಾರಿ ಅಶೋಕ್ ಖೇಮ್ಕಾ ಹರಿಯಾಣ
ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.





ಹರಿಯಾಣ ಹಾಗೂ ಗುರಗಾಂವ್ ಬಳಿ ರಾಬರ್ಟ್
ವಾದ್ರಾ ತಮ್ಮ ಒಡೆತನದ ಡಿಎಲ್ ಎಫ್ ಕಂಪನಿಗೆ ಸರ್ಕಾರಿ ಭೂಮಿ ಖರೀದಿಸಲು ನಕಲಿ ದಾಖಲಾತಿಗಳನ್ನು ಸಲ್ಲಿಸಿದ್ದಾರೆ
ಎಂದು ಅಶೋಕ್ ಖೆಮ್ಕಾ ನೀಡಿರುವ 100 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ.





2012, ಅಕ್ಟೋಬರ್ ನಲ್ಲಿ
ಗುರಗಾಂವ್ ಸಮೀಪದ ಶೇಖೋಪುರ್ ಗ್ರಾಮದಲ್ಲಿ ವಾದ್ರಾ ತಮ್ಮ ಡಿಎಲ್ ಎಫ್ ಕಂಪನಿಗೆ ಸರ್ಕಾರಿ ಜಮೀನನ್ನು
ಖರೀದಿಸಲು ದಾಖಲೆಗಳನ್ನು ಸಲ್ಲಿಸಿದ್ದರು. 3.5 ಕೋಟಿ ರೂ ಬೆಲೆಬಾಳುವ ಈ ಜಮೀನು ಖರೀದಿಗಾಗಿ ವಾದ್ರಾ
ಸಲ್ಲಿಸಿದ್ದ ದಾಖಲೆಗಳು ನಕಲಿ ಎಂದು ಖೆಮ್ಕಾ ದೂರಿದ್ದಾರೆ. ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ
ಖರೀದಿಸಿದ ಭೂಮಿಯನ್ನು ವಾದ್ರಾ ಮಾರುಕಟ್ಟೆ ಬೆಲೆಗಿಂತ ಅಧಿಕ ಬೆಲೆಗೆ ಮಾರಟ ಮಾಡಿದ್ದರಲ್ಲದೇ ಅದರಿಂದ
ರೂ.ಮೂರುವರೆ ಲಕ್ಷ ಕೋಟಿಗೂ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು.





ರಾಬರ್ಟ್ ವಾದ್ರಾ ವಿರುದ್ಧ ಖೆಮ್ಕಾ
ವರದಿ ಸಲ್ಲಿಸುತ್ತಿದ್ದಂತೆ ಹರಿಯಾಣ ಭೂ ದಾಖಲೆ ನಿರ್ವಹಣೆ ಇಲಾಖೆಯ ಐಜಿಪಿಯಾಗಿದ್ದ ಅಶೋಕ್ ಖೆಮ್ಕಾರವರನ್ನು
2012ರಲ್ಲಿ ಹರ್ಯಾಣಾ ಸರ್ಕಾರ ವರ್ಗಾವಣೆ ಮಾಡಿತ್ತು. ಅಲ್ಲದೇ ರಾಬರ್ಟ್ ವಾದ್ರಾ ಮತ್ತು ಅವರ ಕಂಪನಿ
ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲವೆಂದು ಗುರಗಾಂವ್ ಆಯುಕ್ತ ಕ್ಲೀನ್ ಚಿಟ್ ನೀಡಿದ್ದರು.





ಈ ಹಿನ್ನಲೆಯಲ್ಲಿ ಅಲಹಾಬಾದ್ ಹೈಕೋರ್ಟ್
ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತಲ್ಲದೇ ತನಿಖೆಗೆ ಆದೇಶಿಸಲಾಗಿತ್ತು. ಈ ಹಿನ್ನಲೆಯಲ್ಲಿ
ಸಮಿತಿಯೊಂದು ರಚನೆಯಾಗಿತ್ತು. ಈಗ ವಾದ್ರಾ ವಿರುದ್ಧ ಖೆಮ್ಕಾ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿರುವ
ಹಿನ್ನಲೆಯಲ್ಲಿ ವಾದ್ರಾಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.





Отправить комментарий

0 Комментарии