ಪಾಕಿಸ್ತಾನ.. ಭಾರತದ ಕಟ್ಟಾ ವಿರೋಧಿ ರಾಷ್ಟ್ರ.. ಆದ್ರೆ ಹಿಂದೂಗಳ ಆರಾಧ್ಯ ದೇವರನ್ನು ತನ್ನ ನೆಲದಲ್ಲಿ ಪೂಜಿಸುತ್ತಿದೆ. ವೈರಿ ರಾಷ್ಟ್ರದಲ್ಲಿರೋ ಹಿಂದೂಗಳ ಪರಮ ಪವಿತ್ರವಾದ ಪುಣ್ಯ ಕ್ಷೇತ್ರ ಯಾವುದು? ಅಡ್ವಾಣಿಯನ್ನೂ ತನ್ನತ್ತ ಸೆಳೆದಿದೆ ಆ ತೀರ್ಥ ಕ್ಷೇತ್ರದ ಇತಿಹಾಸ ಏನು..? ಜಗತ್ತನ್ನೇ ನಿಬ್ಬೆರಗಾಗಿಸುವಂಥ ಶಕ್ತಿ ಆ ತೀರ್ಥಕ್ಕೆ ಇದ್ಯಾ? ಈ ಸ್ಟೋರಿ ಓದಿ.. ನಿಮಗೇ ಗೊತ್ತಾಗುತ್ತೆ
ಪಾಕಿಸ್ತಾನ.. ಬಹುತೇಕ ಮುಸ್ಲಿಂ ಸಮುದಾಯವೇ ನೆಲೆಸಿರೋ ನೆಲ ಅದು.. ಸ್ವತಂತ್ರ್ಯ ಬಂದಾಗಿನಿಂದ ಹಿಡ್ದು, ಇಲ್ಲಿಯವರೆಗೆ.. ಭಾರತದ ಜೊತೆಗೆ ಹಗೆತನ ಸಾಧಿಸಿಕೊಂಡು ಬರ್ತಾನೇ ಇರೋ ಕಡು ವೈರಿ ರಾಷ್ಟ್ರದಲ್ಲಿ, ಒಂದು ಪೌರಾಣಿಕ ಕ್ಷೇತ್ರ ಇದೆ. ಅದೂ ಹಿಂದೂ ದೇವರು ನೆಲೆಸಿರೋ ಪರಮ ಪುಣ್ಯವಾದ ಕ್ಷೇತ್ರ..
ನಿಜ.. ಇದು ನಂಬೋದಕ್ಕೆ ಆಗದೇ ಇರೋ ಒಂದು ಕಠು ಸತ್ಯ ಕಣ್ರಿ... ನಮ್ಮ ಮೇಲೆ ಹಗೆತನ ಸಾಧಿಸ್ತಿರೋ ವೈರಿ ರಾಷ್ಟ್ರದಲ್ಲೇ, ಒಂದು ಪರಮ ಪುಣ್ಯವಾದ ಹಿಂದೂ ದೇವರ ತೀರ್ಥ ಕ್ಷೇತ್ರ ಇದೆ.. ಆ ತೀರ್ಥ ಕ್ಷೇತ್ರ ಸಾಮಾನ್ಯವಾದದ್ದಲ್ಲ.. ಇತಿಹಾಸ ಪುರಾಣಗಳಲ್ಲಿ ಉಲ್ಲೇಖವಾಗಿರೋ ಶಕ್ತಿಯುತ ಪುಣ್ಯ ಕ್ಷೇತ್ರ..
ಇದೇ ನೋಡಿ.. ಪಾಕ್ ನೆಲದಲ್ಲಿರೋ ಹಿಂದೂಗಳ ಆ ಪವಿತ್ರ ತೀರ್ಥ ಕ್ಷೇತ್ರ.. ಸಾಕ್ಷಾತ್ ಶಿವನು ನೆಲೆಸಿರೋ ಕಟಾಸ್ ರಾಜ್ ಅನ್ನೋ ಪುಣ್ಯ ಕ್ಷೇತ್ರ.. ಪಾಕಿಸ್ತಾನದ ಚಕ್ವಾಲ್ ಜಿಲ್ಲೆಯಲ್ಲಿರೋ ಈ ಕಟಾಸ್ ರಾಜ್ ಕ್ಷೇತ್ರ, ಹಿಂದೂಗಳ ಪವಿತ್ರ ತೀರ್ಥ ಕ್ಷೇತ್ರವಾಗಿದೆ. ಈ ಕಟಾಸ್ ರಾಜ್ ದೇಗುಲದ ಮುಂದೆ ಇರೋ ಕುಂಡದ ತೀರ್ಥ ತುಂಬಾನೇ ಶಕ್ತಿಯುತವಾಗಿದೆ.
ನಿಮ್ಗೆ ಗೊತ್ತಿಲ್ಲದ ಇನ್ನೂ ಒಂದು ಸತ್ಯ ಹೇಳ್ತೀವಿ ಕೇಳಿ.. ಜಗತ್ತಿನಲ್ಲಿರೋ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಇದು ಎರಡನೇ ಪುಣ್ಯ ತೀರ್ಥ ಕ್ಷೇತ್ರ.. ಈ ಕುಂಡದಲ್ಲಿರೋ ನೀರನ್ನು ಕುಡಿದ್ರೆ, ಮೋಕ್ಷ ಸಿಗುತ್ತಂತೆ.. ಮಕ್ಕಳಾಗದವರಿಗೆ ಮಕ್ಕಳಾಗುತ್ತಂತೆ. ಎಲ್ಲಾ ಪಾಪ ಕರ್ಮಗಳು ಕಳೆಯುತ್ತವಂತೆ. ಈ ಕುಂಡದಲ್ಲಿ ಮಿಂದೆದ್ದವರು ಹಲವು ಖಾಯಿಲೆಗಳಿಂದ ಗುಣಮುಖರಾಗಿದ್ದಾರಂತೆ..
ಕಟಾಸ್ರಾಜ್ನಲ್ಲಿರೋ ಈ ಕುಂಡಕ್ಕೆ ಇಷ್ಟೋಂದು ಶಕ್ತಿ ಹೇಗೆ ಬಂತು..? ಅದ್ರಲ್ಲೂ ಪಾಕಿಸ್ತಾನದಂಥ ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇವರು ನೆಲೆಸಿದ ರೀತಿಯಾದ್ರೂ ಹೇಗೆ ಅನ್ನೋ ಹಲವು ಅಚ್ಚರಿಯ ಪ್ರಶ್ನೆಗಳನ್ನು ನಿಮ್ಮನ್ನ ಕಾಡ್ತಾ ಇರಬಹುದು.. ಅದಕ್ಕೆಲ್ಲಾ ಉತ್ತರ ಇತಿಹಾಸದ ಪುಟಗಳಲ್ಲಿದೆ. ಅಸಲಿಗೆ ಪಾಕಿಸ್ತಾನದ ನೆಲದಲ್ಲಿರೋ ಕಟಾಸ್ ರಾಜ್ ತೀರ್ಥ ಕ್ಷೇತ್ರದ ಈ ಕುಂಡ, ಸಾಕ್ಷಾತ್ ಶಿವನಿಂದಲೇ ಸೃಷ್ಟಿಯಾದ ಪೌರಾಣಿಕ ಕುಂಡ.
ನಿಜ.. ಶಿವ ಪುರಾಣದ ಪ್ರಕಾರ ಇದು ಸಾಕ್ಷಾತ್ ಶಿವನ ಕಣ್ಣೀರಿಂದ ಸೃಷ್ಟಿಯಾದ ಪವಿತ್ರ ಕುಂಡ ಕಣ್ರಿ.. ಪರಶಿವನ ಪತ್ನಿ ಪಾರ್ವತಿ ಅಗ್ನಿಕುಂಡಕ್ಕೆ ಜಿಗಿದು ಸ್ವರ್ಗಸ್ಥಳಾದಾಗ, ಶಿವನಿಗೆ ತಡೆದುಕೊಳ್ಳೋಕೆ ಆಗದಂಥ ದುಃಖವಾಗುತ್ತೆ. ಅದೇ ನೋವಲ್ಲಿ ಜೋರಾಗಿ ಕಣ್ಣೀರು ಹಾಕ್ತಾನೆ. ಎರಡು ಕಣ್ಣಿಂದ ಹರಿದ ಕಣ್ಣೀರು ಎರಡು ಸ್ಥಳಗಳಲ್ಲಿ ಬಿದ್ದು ಕುಂಡವಾಗುತ್ತೆ. ಒಂದು ಕುಂಡ ಭಾರತದ ಅಜ್ಮೀರ್ನಲ್ಲಿರೋ ಪುಷ್ಕರ್ನಲ್ಲಿದೆ. ಮತ್ತೊಂದು ಕಣ್ಣಿನಿಂದ ಹರಿದ ನೀರೇ ಪಾಕಿಸ್ತಾನದ ಕಟಾಸ್ರಾಜ್ನಲ್ಲಿರೋ ಈ ಕುಂಡ
ಈ ಅಮರ ಕುಂಡದ ಇತಿಹಾಸ ಇಲ್ಲಿಗೇ ಮುಗಿಯೋದಿಲ್ಲ ಕಣ್ರಿ.. ಪಾಂಡವರು ತಮ್ಮ 14 ವರ್ಷಗಳ ವನವಾಸದಲ್ಲಿ, 4 ವರ್ಷಗಳನ್ನ ಇದೇ ಜಾಗದಲ್ಲಿ ಕಳೆದಿದ್ರು ಅಂತ ಹೇಳಲಾಗುತ್ತೆ. ಈ ಕುಂಡದ ತೀರ್ಥವೇ ಅವರ ದಾಹ ನೀಗಿಸಿತ್ತು ಅಂತ ಪುರಾಣ ಹೇಳುತ್ತೆ.
ಈ ಕಲಿಯುಗದಲ್ಲೂ ಈ ತೀರ್ಥ ಕ್ಷೇತ್ರದಲ್ಲಿನ ನೀರು, ಹಲವು ವಿಸ್ಮಯಗಳಿಗೆ ಕಾರಣವಾಗಿದೆ. ಈಗ್ಲೂ ಹರಕೆ ಹೊತ್ತು ಬರುವ ಭಕ್ತರು ಈ ಕುಂಡದ ಪವಿತ್ರ ನೀರಿನಲ್ಲಿ ಮಿಂದೆದ್ರೆ, ಅವರ ಇಷ್ಟಾರ್ಥಗಳು ಈಡೇರುತ್ತಂತೆ.
ಈ ಕಟಾಸ್ ರಾಜ್ ತೀರ್ಥ ಕ್ಷೇತ್ರದ ಮಹತ್ವ ಎಂಥಾದ್ದು ಗೊತ್ತಾ..? ತನಗೆ ಬೇಕು ಅಂದವರನ್ನು ಎಷ್ಟೇ ದೂರ ಇದ್ರೂ ಕರೆಸಿಕೊಳ್ಳುತ್ತೆ. ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿಯವರನ್ನೂ ತನ್ನತ್ತ ಕರೆಸಿಕೊಂಡಿದೆ ಈ ಕ್ಷೇತ್ರ. ಈ ಬಗ್ಗೆ ಹೆಚ್ಚಿನ ಸ್ಟೋರಿ ಮುಂದಿದೆ ಓದಿ
--------------------------------------------------
ಈ ಸ್ಟೋರಿಯನ್ನ ನೋಡಿದ್ಮೇಲೆ, ಪಾಕ್ ನೆಲದಲ್ಲಿರೋ ಆ ಪವಿತ್ರ ಹಿಂದೂ ತೀರ್ಥ ಕ್ಷೇತ್ರಕ್ಕೆ, ನಾವೂ ಒಂದ್ಸಲ ಹೋಗ್ಬೇಕು ಅಂತ ಅನ್ನಿಸ್ತಾ ಇರಬೇಕಲ್ವಾ..? ಅದು ಅಷ್ಟು ಸುಲಭದ ಕೆಲಸವಲ್ಲ.. ವೈರಿ ರಾಷ್ಟ್ರದಲ್ಲಿರೋ ಆ ಪವಿತ್ರ ಕ್ಷೇತ್ರಕ್ಕೆ ಕಾಲಿಡಬೇಕು ಅಂದ್ರೆ, ಅದೃಷ್ಠ ಇರಬೇಕು.. ಜೊತೆಗೆ ಆ ದೇವರ ಅನುಗ್ರಹಾನೂ ಇರಬೇಕು..
ನಿಜ.. ಪಾಕಿಸ್ತಾನದ ನೆಲದಲ್ಲಿರೋ, ಹಿಂದೂಗಳ ಈ ಪವಿತ್ರ ತೀರ್ಥಕ್ಷೇತ್ರವನ್ನು ನೀವು ದರ್ಶನ ಮಾಡ್ಬೇಕು ಅಂದ್ರೆ ಅದು ಅಷ್ಟು ಸುಲಭವಲ್ಲ. ಹಿಂದೂ ತೀರ್ಥಯಾತ್ರಿಗಳ ಸುರಕ್ಷತೆ ದೃಷ್ಟಿಯಿಂದ ಭಾರತ ಸರ್ಕಾರವೇ ಪ್ರತಿ ವರ್ಷದ ಶಿವರಾತ್ರಿ ಟೈಮಲ್ಲಿ, 200 ಮಂದಿಯನ್ನ ಇಲ್ಲಿಗೆ ಸುರಕ್ಷಿತವಾಗಿ ಕಳಿಸೋ ವ್ಯವಸ್ಥೆ ಮಾಡುತ್ತೆ.
ಕಟಾಸ್ರಾಜ್ ತೀರ್ಥ ಕ್ಷೇತ್ರಕ್ಕೆ ಬರಬೇಕು ಅಂತ ಅನ್ಕೊಂಡಿರೋರೆಲ್ಲಾ, ಮೊದಲು ದೆಹಲಿಯಲ್ಲಿ ಒಟ್ಟಿಗೆ ಸೇರಬೇಕು.. ನಂತರ ಅಲ್ಲಿಂದ ಟ್ರೈನ್ನಲ್ಲಿ ಅಮೃತ್ಸರಕ್ಕೆ ಬರಬೇಕು. ಇಲ್ಲಿ ಸ್ವರ್ಣ ಮಂದಿರದಂತೆ ಕಾಣ್ತಾ ಇದ್ಯಲ್ಲ.. ಇದು ಅಮೃತ್ಸರದಲ್ಲಿರೋ ದುರ್ಗಯಾನಾ ಮಂದಿರ.. ಇಲ್ಲಿಂದಲೇ ಕಟಾಸ್ರಾಜ್ ಯಾತ್ರೆ ಶುರುವಾಗೋದು..ದುರ್ಗಾಮಾತೆ ದರ್ಶನ ಪಡೆದ ನಂತರ, ವಿಶ್ವಮಾತಾ ಮಂದಿರಕ್ಕೆ ಹೋಗ್ತಾರೆ. ಗುಹೆಯಂಥ ದೇಗುಲದಲ್ಲಿ ಬಗ್ಗಿಕೊಂಡೇ ಹೋಗ್ಬೇಕು.. ಈ ದೇಗುಲದಲ್ಲಿ ಶಿವ, ಬ್ರಹ್ಮ, ಸೇರಿದಂತೆ ಎಲ್ಲಾ ದೇವತೆಗಳು ಇಲ್ಲಿ ನೆಲೆಸಿದ್ದಾರೆ ಕಣ್ರಿ. ಈ ದೇಗುಲದೊಳಗೆ ಕಾಲಿಟ್ರೆ, ನರನಾಡಿಗಳಲ್ಲೂ ಭಕ್ತಿರಸ ಉಕ್ಕಿ ಹರಿಯುತ್ತೆ.
ಇನ್ನು ಇಲ್ಲಿ ಕಾಣೋ ಕುಂಡದಲ್ಲಿ ಮುಳುಗೆದ್ದವರು, ಸಕಲ ಪಾಪಗಳಿಂದ ಮುಕ್ತರಾಗ್ತಾರೆ ಅನ್ನೋ ನಂಬಿಕೆ ಇದೆ. ವಿಶ್ವಮಾತೆಯ ದರ್ಶನದ ಪಡೆದ ನಂತರ, ಪವಿತ್ರ ಸರೋವರದ ನಡುವೆ ಇರೋ ಸ್ವರ್ಣ ಮಂದಿರದ ಕಡೆಗೆ ಹೆಜ್ಜೆ ಹಾಕಲಾಗುತ್ತೆ. ಇಲ್ಲಿ ಶ್ರೀರಾಮನ ಶ್ರೀಮತಿ ಸೀತಾಮಾತೆ ಈ ಕುಂಡದಲ್ಲಿ ಒಮ್ಮೆ ಸ್ನಾನ ಮಾಡಿದ್ಳು ಅಂತ ಕೂಡ ಕತೆ ಇದೆ. ಸ್ವರ್ಣಮಂದಿರದಿಂದಾಗಿ, ರಾತ್ರಿ ಟೈಮಲ್ಲಿ ಈ ಸರೋವರಾ ಕೂಡ ಚಿನ್ನದಂತೆ ಕಂಗೊಳಿಸುತ್ತೆ. ಇಲ್ಲಿನ ಗುರುದ್ವಾರದಲ್ಲಿ ಪೂಜೆ ಮುಗಿಸಿದ ನಂತರ ಕಟಾಸ್ ರಾಜ್ಗೆ ಜೈಕಾರ ಹಾಕಿಕೊಂಡು, ಯಾತ್ರೆ ಶುರುಮಾಡ್ತಾರೆ. ಅಲ್ಲಿಂದ ನೇರವಾಗಿ ಬರೋದು ಅಟಾರಿ ರೈಲ್ವೇ ಸ್ಟೇಷನ್ಗೆ..
ಇದು ಭಾರತ ಮತ್ತು ಪಾಕಿಸ್ತಾನವನ್ನು ಜೋಡಿಸುವ ಏಕೈಕ ರೈಲು ನಿಲ್ದಾಣ.. ಇಲ್ಲಿಂದ ವಾಘಾ ಬಾರ್ಡರ್ 2 ಕಿಮಿ ಅಷ್ಟೇ.. ಭಾರತದ ರೂಪಾಯಿಯನ್ನ ಪಾಕಿಸ್ತಾನದ ಕರೆನ್ಸಿಗೆ ಬದಲಾಯಿಸಿಕೊಂಡು, ದೇವರ ಜಪ ಮಾಡ್ತಾ ರೈಲು ಹತ್ತುತಾರೆ..
ಇನ್ನು ಲಾಹೋರ್ಗೆ ಬರೋ ಭಾರತದ ಯಾತ್ರಾರ್ಥಿಗಳಿಗೆ ಇಲ್ಲಿನ ಗುರುದ್ವಾರದಲ್ಲಿ ಉಳಿದುಕೊಳ್ಳೋಕೆ ವ್ಯವಸ್ಥೆ ಮಾಡಲಾಗಿರುತ್ತೆ. ಇಲ್ಲಿ ಬೆಳಗಿನ ತಿಂಡಿ ಮುಗಿಸಿಕೊಂಡು, ಬಸ್ಸಿನಲ್ಲಿ ಮುಂದಿನ ಯಾತ್ರೆ ಶುರು ಮಾಡ್ತಾರೆ.. ಅದೂ ಕಟಾಸ್ ರಾಜ್ ಮತ್ತು ಭೋಲೆನಾಥನನಿಗೆ ಜೈ ಕಾರ ಹಾಕೊಂಡು..
ಬೆಟ್ಟ ಗುಡ್ಡಗಳ ನಡುವಿನ ಸುದೀರ್ಘ ಪಯಣದ ನಂತರ, ಕಟಾಸ್ ರಾಜ್ ಬಂದೇ ಬಿಡುತ್ತೆ.. ಇಲ್ಲಿಗೆ ಬರೋ ಹಿಂದೂ ಭಕ್ತರನ್ನ ಸ್ವಾಗತಿಸೋದಕ್ಕೆ, ಪಾಕಿಸ್ತಾನವೇ ಸಜ್ಜಾಗಿ ನಿಂತಿರುತ್ತೆ.. ಅಷ್ಟೇ ಅಲ್ಲ, ಅವ್ರಿಗೆ ಇರೋದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಿಕೊಡುತ್ತೆ ಪಾಕಿಸ್ತಾನ.. ತಾವು ತಂಗಿರೋ ಪ್ರದೇಶದಿಂದ ಹಾಗೆ ದೂಕ್ಕೆ ಕಣ್ಣು ಹಾಯಿಸಿದ್ರೇ ಸಾಕು ಕಣ್ರಿ.. ಕಣ್ಮುಂದೆನೇ ಕಾಣುತ್ತೆ ಕಟಾಸ್ ರಾಜ್ ದೇಗುಲ.. ಅಲ್ಲೇ ಕಾಣುತ್ತೆ ಸಾಕ್ಷಾತ್ ಶಿವನೇ ಸೃಷ್ಟಿಸಿದ ಪವಿತ್ರ ಪುಣ್ಯವಾದ ಈ ಕುಂಡ..
ಈ ಕುಂಡದಲ್ಲಿ ಸ್ನಾನವಾದ ನಂತರಾನೇ ದೆಗುಲವನ್ನ ಪ್ರವೇಶಿಸಬೇಕು.. ಅದು ಇಲ್ಲಿನ ನಿಯಮ.. ಇನ್ನು ಇದು ಒಟ್ಟು 7 ಮಂದಿರಗಳ ಒಂದು ಸಮ್ಮಿಲನ. ಕ್ರಿ.ಪೂ 650 ರಿಂದ 950 ರ ಕಾಲದಲ್ಲಿ ಈ ದೇಗುಲದ ನಿಮಾರ್ಣ ಆಗಿದೆ ಅಂತ ಅಂದಾಜಿಸಲಾಗಿದೆ. ಅಂದ್ರೆ, 2500 ವರ್ಷಗಳಿಗಿಂತಲೂ ಹಳೆಯ ಕಾಲದ ದೇವಸ್ಥಾನ ಇದು..
ಈ ದೇಗುಲವನ್ನ ಚೌಕಾಕಾರವಾಗಿ ಕಟ್ಟಲಾಗಿದೆ. ಪೂರ್ವದ ದಿಕ್ಕಿನಲ್ಲಿ ಪ್ರವೇಶ ದ್ವಾರ ಇದೆ. ದಕ್ಷಿಣದಲ್ಲಿ ಹನುಮಂತನ ಮಂದಿರವಿದೆ. ಮಂದಿರದೊಳಗೆ ಬಂದ ಭಕ್ತರು, ಮೊದಲಿಗೆ ಬಿಲ್ವಪತ್ರೆಯನ್ನಿಟ್ಟು, ಶಿವಲಿಂಗಕ್ಕೆ ಪೂಜೆ ಸಲ್ಲಿಸ್ತಾರೆ. ನಂತರ ಹೂವು, ಹಣ್ಣುಗಳನ್ನು ಶಿವನಿಗೆ ಸಮರ್ಪಿಸಿ, ಪಾವನರಾಗ್ತಾರೆ. ಇನ್ನು ಇಲ್ಲಿಗೆ ಬರೋ ಕೆಲವರು, ಶಿವನ ಭಜನೆ ಮಾಡ್ತಾ, ಶಿವನಾಮಸ್ಮರಣೆಯಲ್ಲಿ ಮುಳುಗಿಬಿಡ್ತಾರೆ.
ಶಿವನ ದರ್ಶನವಾದ ನಂತರ ಭಾರತದ ಹಿಂದೂ ಯಾತ್ರಾರ್ಥಿಗಳ ಜೊತೆಗೆ ಪಾಕಿಸ್ತಾನ ಸರ್ಕಾರ ಂದು ಸಂವಾದ ಕಾರ್ಯಕ್ರಮ ಇಟ್ಟುಕೊಳ್ಳುತ್ತೆ. ಪಾಕಿಸ್ತಾನದ ಮಂತ್ರಿಗಳು, ಹಿರಿಯ ಅಧಿಕಾರಿಗಳು ಅಲ್ಲಿಗೆ ಬಂದು, ಯಾತ್ರಿಕರ ಜೊತೆ ಸಂವಾದ ನಡೆಸ್ತಾರೆ. ಈ ದೇಗುಲದ ಬಗ್ಗೆ ಜೀರ್ಣೋದ್ಧಾರದ ಬಗ್ಗೆ ಚರ್ಚೆ ನಡೆಸ್ತಾರೆ.. ನಂತರ ಭಾರತದ ಯಾತ್ರಾರ್ಥಿಗಳಿಗೆ ಅತಿಥಿ ಸತ್ಕಾರ ನೀಡಿ, ಅಲ್ಲಿಂದ ಬೀಳ್ಕೊಡಲಾಗುತ್ತೆ..
ಇಂಥಾ ಐತಿಹಾಸಿಕ ಹಿಂದೂ ಪುಣ್ಯಕ್ಷೇತ್ರದಿಂದ, ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಗೆ ಪವಿತ್ರ ಕುಂಡದ ತೀರ್ಥ ಪ್ರತೀವರ್ಷ ಹೋಗುತ್ತೆ. ಸ್ವತಃ ಪಾಕಿಸ್ತಾನ ಸರ್ಕಾರಾನೇ ಅದನ್ನ ಅಡ್ವಾಣಿಯವ್ರಿಗೆ ಕಳಿಸಿಕೊಡುತ್ತೆ.. ಆ ದೇಗುಲಕ್ಕೂ ಅಡ್ವಾಣಿಗೂ ಇರೋ ಆ ಅನುಬಂಧ ಏನು? ಪಾಕಿಸ್ತಾನ ಸರ್ಕಾರಾನೇ ಮುತುವರ್ಜಿವಹಿಸಿ ಆ ಪವಿತ್ರ ಕುಂಡದ ತೀರ್ಥ ಕಳಿಸುತ್ತೆ ಅಂದ್ರೆ, ಅದರ ಹಿಂದಿರೋ ಮರ್ಮವೇನು? ಮುಂದಿದೆ ಓದಿ ಆ ಸ್ಟೋರಿ
------------------------------
ಪಾಕಿಸ್ತಾನದ ನೆಲದಲ್ಲಿ ಬೇರೂರಿರೋ ಹಿಂದೂ ತೀರ್ಥಕ್ಷೆತ್ರದ ಜೀರ್ಣೋದ್ದಾರಕ್ಕೆ, ಸ್ವತಃ ಪಾಕಿಸ್ತಾನಾನೇ ಮುಂದಾಗಿದೆ. ಇದಕ್ಕೆ ಸ್ಫೂರ್ತಿ ಯಾರ್ ಗೊತ್ತೇನ್ರಿ..? ಭಾರತದ ಹಿರಿಯ ರಅಜಕೀಯ ಮುತ್ಸದ್ದಿ.. ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ..
ನಿಜ... ಪಾಕ್ ನೆಲದ ದೇಗುಲದ ಜೀರ್ಣೋದ್ದಾರಕ್ಕೆ ಪಣ ತೊಟ್ಟ ವ್ಯಕ್ತಿ ಬೇರೆ ಯಾರೂ ಅಲ್ಲ. ಅದು ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ.. ಭಾರತ ಮತ್ತು ಪಾಕಿಸ್ತಾನ 1947 ರಲ್ಲಿ ಇಬ್ಭಾಗವಾದಾಗ, ಹಿಂದೂಸ್ತಾನಕ್ಕೆ ಸೇರಿದ್ದ ಈ ಕಟಾಸ್ರಾಜ್ ದೇಗುಲ ಪಾಕ್ ಪಾಲಾಯ್ತು.. ಇದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತುಂಬಾನೇ ಹಳಸಿತ್ತು. ಇದ್ರಿಂದಾಗಿ ಈ ಪವಿತ್ರ ತೀರ್ಥಕ್ಷೇತ್ರಕ್ಕೆ ಹೋಗಿ ಶಿವನ ದರ್ಶನ ಪಡೀಬೇಕು.. ಈ ಕುಂಡದಲ್ಲಿ ಮಿಂದೇಳಬೆಕು ಅನ್ನೋ ಭಕ್ತರ ಆಸೆ ಕೇವಲ ಆಸೆಯಾಗಿಯೇ ಉಳಿದು ಬಿಟ್ತು. ಆದ್ರೆ 2004 ರಲ್ಲಿ ಎನ್ಡಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ, ಪಾಕಿಸ್ತಾನದ ಜೊತೆ ಬಾಂಧವ್ಯ ವೃದ್ಧಿಗಾಗಿ ಪ್ರಯತ್ನಿಸಿದ್ರು. ಇದಕ್ಕೆ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ರು.. ಅಷ್ಟೇ ಅಲ್ಲ, ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾದ ಈ ಕಟಾಸ್ರಾಜ್ ದೇಗುಲದ ಜೀರ್ಣೋದ್ದಾರಕ್ಕೂ ಅಡಿಪಾಯ ಹಾಕಿದ್ರು.
ಇನ್ನು ಇದೇ ವೇಳೆ ಭಾರತದ ಯಾತ್ರಾರ್ಥಿಗಳಿಗೂ ಈ ಪುಣ್ಯಕ್ಷೇತ್ರ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಯ್ತು. 2005 ರಲ್ಲಿ ಸ್ವತಃ ಎಲ್ಕೆ ಅಡ್ವಾಣಿನೇ ಈ ತೀರ್ಥ ಕ್ಷೇತ್ರಕ್ಕೆ ಬಂದು, ಈ ಕುಂಡದಲ್ಲಿ ಮಿಂದೆದ್ದಿದ್ರು..
ಅಂದಿನಿಂದ ಪಾಕಿಸ್ತಾನದ ನೆಲದಲ್ಲಿರೋ, ಈ ಹಿಂದೂ ತೀರ್ಥಕ್ಷೇತ್ರದ ಅಭಿವೃದ್ಧಿಗೆ ಪಾಕ್ ಸರ್ಕಾರ ಬೆನ್ನೆಲುಬಾಗಿ ನಿಂತಿದೆ. 2 ಕೋಟಿ ರೂಪಾಯಿಯಲ್ಲಿ ಶಿವಲಿಂಗಕ್ಕೆ ಮತ್ತೆ ಐತಿಹಾಸಿಕ ಮೆರುಗು ನೀಡಿದೆ. 2006-07 ರಲ್ಲಿ ಈ ದೇಗುಲದ ಜೀರ್ಣೋದ್ದಾರಕ್ಕೆ ಪಾಕ್ ಸರ್ಕಾರ ನೀಡಿದ ಮೊತ್ತ, ಬರೋಬ್ಬರಿ 8 ಕೋಟಿ..
ಈ ಕಟಾಸ್ರಾಜ್ ಪುಣ್ಯಕ್ಷೇತ್ರದ ಜೀರ್ಣೋದ್ದಾರವಾಗಿದ್ದು ಅಡ್ವಾಣಿಯಿಂದ.. ಭಾರತದ ಹಿಂದೂ ಭಕ್ತರಿಗೆ ಈ ತೀರ್ಥ ಕ್ಷೇತ್ರ ಬಾಗಿಲು ತೆಗೆದಿದ್ದು ಅಡ್ವಾಣಿಯಿಂದ.. ಆಧುನಿಕ ಯುಗದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಾವೈಕ್ಯತೆಯ ಕುರುಹಾಗಿ ಈ ಕಟಾಸ್ರಾಜ್ ತಲೆ ಎತ್ತಿದ್ದು ಎಲ್ಕೆ ಅಡ್ವಾಣಿಯಿಂದ. ಇದೇ ಕಾರಣಕ್ಕೆ ಕಣ್ರಿ.. ಪ್ರತಿ ವರ್ಷ ತಪ್ಪದೇ ಈ ಪವಿತ್ರ ಕುಂಡದ ತೀರ್ಥವನ್ನ, ಎಲ್ಕೆ ಅಡ್ವಾಣಿಯವರಿಗೆ ಕಳಿಸಿಕೊಡುತ್ತೆ ಪಾಕಿಸ್ತಾನದ ಸರ್ಕಾರ...
ಈಗಲೂ ಮರೆತಿಲ್ಲ.. ಅಡ್ವಾಣಿಯವರ ಈ ಕಾರ್ಯವನ್ನ ಪಾಕಿಸ್ತಾನ ಈಗ್ಲೂ ಮರೆತಿಲ್ಲ.. ಅದೇ ಕಾರಣಕ್ಕೆ.. ಈ ವರ್ಷ ಕೂಡ ಈ ಪವಿತ್ರ ಕುಂಡದ ತೀರ್ಥವನ್ನು ಎಲ್.ಕೆ.ಅಡ್ವಾಣಿಯವರಿಗೆ ಕಳಿಸಿಕೊಟ್ಟಿದೆ ಪಾಕಿಸ್ತಾನ. ಆ ಮೂಲಕ ಭಾರತ ಮತ್ತು ಪಾಕಿಸ್ತಾನದ ಭಾವೈಕ್ಯತೆಗೆ ಶ್ರಮಿಸಿದ ಅಡ್ವಾಣಿಯವರಿಗೆ ಗೌರವ ಸೂಚಿಸಿದೆ.
ಏನೇ ಆಗ್ಲಿ.. ವೈರಿ ನಾಡಲ್ಲಿ ಹಿಂದೂ ತೀರ್ಥಕ್ಷೇತ್ರ ಇರೋದೇ ವಿಶೇಷ.. ಅದ್ರಲ್ಲೂ ಪಾಕ್ ಸರ್ಕಾರಾನೇ ಆ ತೀರ್ಥ ಕ್ಷೇತ್ರದ ಜೀರ್ಣೋದ್ಧಾರಕ್ಕೆ ನಿಂತಿರೋದು ಅಚ್ಚರಿನೇ ಸರಿ.. ಉಬಯ ದೇಶಗಳ ನಡುವಿನ ವಿರಸದ ನಡುವೇನೂ, ಈ ಹಿಂದೂ ಕ್ಷೇತ್ರ ಸೇಫಾಗಿದೆ ಅನ್ನೋದೇ ಒಂದು ಸಮಾಧಾನದ ಸಂಗತಿ.
0 Комментарии