Hot Posts

10/recent/ticker-posts

ಅರಬ್ಬಿ ಸಮುದ್ರದಲ್ಲಿ ಜಗತ್ತಿನ ಅತಿ ಎತ್ತರದ ಪ್ರತಿಮೆ




ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದ ಸ್ವಾಭಿಮಾನಿ ಶಿವಾಜಿ ಮಹಾರಾಜ್​.. ಬ್ರಿಟೀಷರ ಗುಂಡಿಗೆ ನಡುಗಿಸಿದ ಸಾಮ್ರಾಟನೀಗ, ಜಗತ್ತಿನ ಅತಿ ಎತ್ತರದ ಪ್ರತಿಮೆ ಮೂಲಕ ಎದ್ದು ನಿಲ್ಲೋದಕ್ಕೆ ರೆಡಿಯಾಗಿದ್ದಾನೆ. ಆ ಮೂಲಕ, ಜಗತ್ತಿನ ಇತಿಹಾಸದ ಪುಟಗಳಲ್ಲಿ, ಶಿವಾಜಿ ಹೆಸರು ರಾರಾಜಿಸುವಂತೆ ಮಾಡೋದಕ್ಕೆ, ಪ್ಲಾನ್ ಸಿದ್ಧವಾಗಿದೆ.

    ಶಿವಾಜಿ ಮಹಾರಾಜ್​.. ಕಣಕಣದಲ್ಲೂ ಸ್ವಾಭಿಮಾನ ತುಂಬಿಕೊಂಡ ದೇಶಭಕ್ತ.. ಇತಿಹಾಸದ ಪುಟಗಳಲ್ಲಿ ರಾರಾಜಿಸಿದ ಈ ಸಾಮ್ರಾಟ, ಈಗ ಪ್ರತಿಮೆಯ ಮೂಲಕ ಎದ್ದು ನಿಲ್ಲಲ್ಲೋದಕ್ಕೆ ರೆಡಿಯಾಗಿದ್ದಾನೆ. ಅದೂ ಸಣ್ಣ ಪುಟ್ಟ ಪ್ರತಿಮೆಯಲ್ಲ.. ಜಗತ್ತೇ ನಿಬ್ಬೆರಗಾಗುವಂತೆ ಮಾಡುವ, ವಿಶ್ವದ ಅತಿ ಎತ್ತರದ ಪ್ರತಿಮೆಯ ಮೂಲಕ, ಖಡ್ಗ ಹಿಡಿದು ನಿಲ್ಲಲಿದ್ದಾನೆ ಶಿವಾಜಿ..

ಇದುವರೆಗೂ ಜಗತ್ತಿನ ಅತಿ ಎತ್ತರದ ಪ್ರತಿಮೆ ಯಾವುದು ಅಂದ್ರೆ, ಅಮೆರಿಕದಲ್ಲಿ 1886 ರಲ್ಲಿ ನಿರ್ಮಾಣವಾದ ಸ್ಟಯಾಚು ಆಫ್ ಲಿಬರ್ಟಿ ಅಂತ ಎಲ್ರೂ ಹೇಳ್ತಿದ್ರು.. ಯಾಕಂದ್ರೆ ಸ್ಟ್ಯಾಚು ಆಫ್ ಲಿಬರ್ಟಿಯ ಎತ್ತರ ಬರೋಬ್ಬರಿ 305 ಅಡಿ ಎತ್ತರ..

ಆದ್ರೆ ಈ ಸ್ಟ್ಯಾಚು ಆಫ್​ ಲಿಬರ್ಟಿಗೆ ಸಡ್ಡು ಹೊಡೆದು, ಸರ್ದಾರ್​ ವಲ್ಲಭಾಯ್ ಪಟೇಲರ ಪ್ರತಿಮೆಯನ್ನು ಭಾರತದ ಮಣ್ಣಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡೋಕೆ ಸಿದ್ಧವಾಗಿದ್ದು, ನರೇಂದ್ರ ಮೋದಿ..

ಉಕ್ಕಿನ ಮನುಷ್ಯನ ಪ್ರತಿಮೆಯನ್ನು ಉಕ್ಕಿನಿಂದಲೇ ನಿರ್ಮಾಣ ಮಾಡ್ಬೇಕು ಅಂತ, ದೇಶದ ಮೂಲೆ ಮೂಲೆಗಳಿಂದ ಕಬ್ಬಿಣ ಸಂಗ್ರಹಿಸಿದ್ರು ಮೋದಿ.. ಒಂದಲ್ಲ ಎರಡಲ್ಲ, ಸ್ಟ್ಯಾಚು ಆಫ್​ ಲಿಬರ್ಟಿಗಿಂತ ಎರಡುಪಟ್ಟು ಎತ್ತರ ಅಂದ್ರೆ, 598 ಅಡಿ ಎತ್ತರದಲ್ಲಿ ಉಕ್ಕಿನ ಮನುಷ್ಯನನ್ನು ನಿಲ್ಲಿಸೋದಕ್ಕೆ ಎಲ್ಲಾ ತಯಾರಿ ಕೂಡ ನಡೀತಿದೆ. ಏಕತೆಯ ಪ್ರತೀಕವಾದ ಪಟೇಲರ ಈ ಪ್ರತಿಮೇನೇ ಜಗತ್ತಿನ ಅತಿ ಎತ್ತರದ ಪ್ರತಿಮೆ ಅಂತ, ಇಡೀ ಜಗತ್ತು ಭಾರತದತ್ತ ತಿರುಗಿ ನೋಡಿತ್ತು.

ಆದ್ರೆ ಈಗ ಮತ್ತೆ ಭಾರತದತ್ತ ಜಗತ್ತು ತಿರುಗಿ ನೋಡೋ ಟೈಂ ಬಂದಿದೆ. ಯಾಕಂದ್ರೆ, ಸರ್ದಾರ್ ಪಟೇಲರ ಏಕತಾ ಪ್ರತಿಮೆಗಿಂತ ಎತ್ತರದಲ್ಲಿ, ಛತ್ರಪತಿ ಶಿವಾಜಿಯನ್ನು ನಿಲ್ಲಿಸೋದಕ್ಕೆ ಪ್ಲಾನ್ ರೆಡಿಯಾಗಿದೆ. ಅದೂ ಅರಬ್ಬಿ ಸಮುದ್ರದ ಮಧ್ಯದಲ್ಲಿ..

ಈ ಸ್ಟ್ಯಾಚು ಬಗ್ಗೆ ಹೇಳೋದಕ್ಕಿಂತ ಮೊದಲು, ಈ ದೇಶದ ಮಣ್ಣಿಗಾಗಿ ಹೋರಾಡಿದ, ಸ್ವಾಭಿಮಾನಿ ಸಾಮ್ರಾಟನ ಬಗ್ಗೆ ನಿಮ್ಗೇ ಹೇಳ್ಲೇಬೇಕು ಕಣ್ರಿ,. ಯಾಕಂದ್ರೆ, ಶಿವಾಜಿ ಅಂದ್ರೆ ಕೇವಲ ಒಬ್ಬ ರಾಜ ಮಾತ್ರ ಅಲ್ಲ.. ನಿದ್ರೆಯಲ್ಲೂ ಬ್ರಿಟೀಷರ ಗುಂಡಿಗೆ ನಡುಗಿಸಿದ ಸಾಮ್ರಾಟ..

ಫೆಬ್ರುವರಿ 19 1630 ರಲ್ಲಿ ಮಹಾರಾಷ್ಟ್ರದ ನಜುನಾಘರ್​ನಲ್ಲಿ ಜನಿಸಿದ ಶಿವಾಜಿಗೆ ತಾಯಿ ಜೀಜಾಬಾಯಿನೇ ಜೀವ.. ತಾಯಿ ಹೇಳಿದ ವೀರ ಕಥೆಗಳನ್ನು ಕೇಳಿ ಬೆಳೆದ ಶಿವಾಜಿಗೆ, ದೇಶಭಕ್ತಿ ಮತ್ತು ನಾಯಕತ್ವದ ಗುಣಗಳು ರಕ್ತದ ಕಣ ಕಣದಲ್ಲಿ ಬೆರೆತು ಹೋಗಿತ್ತು. ತನ್ನ ತಾಯ್ನಾಡಿನ ಸುದ್ದಿಗೆ ಬಂದೋರ, ಎದೆ ಬಗೆದು ಬಿಡ್ತಿದ್ದ ವೀರ ಸಾಮ್ರಾಟ ಶಿವಾಜಿ..

ಗುಡ್ಡಗಾಡು ಜನರನ್ನು ಒಂದು ಗೂಡಿಸಿ, ಗೆರಿಲ್ಲ ಯುದ್ಧದ ತಂತ್ರ ಉಪಯೋಗಿಸಿ, ಶತೃಗಳನ್ನು ಸದೆಬಡೀತಾ ಇದ್ದ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ ಕಣ್ರಿ.. ಶಿವಾಜಿ ಸಾಮ್ರಾಜ್ಯದಲ್ಲಿ ಸೈನಿಕರು ಕಡಿನಮೆ ಇದ್ರೂ, ಯುದ್ಧಕ್ಕೆ ನಿಂತ್ರೆ ಸೋಲ್ತಾ ಇದ್ದದ್ದು ಎದುರಾಳಿಯ ಸೇನೆನೇ..

1659 ರಲ್ಲಿ ಶಿವಾಜಿ ಮೇಲೆ ದಂಡೆತ್ತಿ ಬಂದ ಅಫ್ಜಲ್​ಖಾನ್​​ನಿಂದ ಹಿಡಿದು, ಬಿಜಾಪುರದ ಆದಿಲ್​ಶಾಹಿ, ಮೊಘಲ್​ ಅರಸ ಔರಂಗಜೇಬ್​​ ಸೇನೆಯವರೆಗೆ, ಎಲ್ಲರನ್ನೂ ತನ್ನ ಚಾಣಾಕ್ಷ ಯುದ್ಧನೀತಿಯಿಂದ ಬಗ್ಗು ಬಡಿದು, ತನ್ನ ನೆಲಕ್ಕಾಗಿ ಕೊನೆಯ ಉಸಿರಿರುವವರೆಗೂ ಹೋರಾಡಿದ ಸಾಮ್ರಾಟ..

ಇದೇ ಕಾರಣಕ್ಕಾಗಿ ಶಿವಾಜಿಯ ಇತಿಹಾಸವಿರುವ ನೆಲ್ಲದಲ್ಲಿ ಶಿವಾಜಿಯ ಅತಿ ಎತ್ತರದ ಪ್ರತಿಮೆ ನಿರ್ಮಾಣ ಮಾಡೋ ಮೂಲಕ, ಮಹಾರಾಷ್ಟ್ರ ಮಣ್ಣಲ್ಲಿ ಶಿವಾಜಿಯನ್ನು ಶಾಶ್ವತವಾಗಿ ಎದ್ದುನಿಲ್ಲುವಂತೆ ಮಾಡಲಾಗ್ತಿದೆ. ಇದಕ್ಕೆ ಈಗಾಗ್ಲೇ ರೂಪು ರೇಷೆಗಳು ಸಿದ್ಧವಾಗಿದೆ. ಅರಬ್ಬಿ ಸಮುದ್ರದಲ್ಲಿ ಶಿವಾಜಿಯ ಸಾಮ್ರಾಜ್ಯದ ಅನಾವರಣ ಹೇಗಾಗುತ್ತೆ ಅನ್ನೋದರ ಸಣ್ಣ ಝಲಕ್ ಇಲ್ಲಿದೆ ನೋಡಿ..

ಸ್ಟ್ಯಾಚು ಆಫ್​ ಲಿಬರ್ಟಿಗಿಂತಲೂ ಪಟೇಲರ ಏಕತಾ ಪ್ರತಿಮೆ ದೊಡ್ಡದು.. ಆದ್ರೆ ಶಿವಾಜಿಯ ಪ್ರತಿಮೆ ಅದಕ್ಕಿಂತಲೂ ದೊಡ್ಡದು.. ಜಗತ್ತಿನ ಅತಿ ಎತ್ತರದ ಪ್ರತಿಮೆ ನಿರ್ಮಾಣ ಮಾಡೋದಕ್ಕೆ ಎಷ್ಟು ಸಾವಿರ ಕೋಟಿ ಖರ್ಚಾಗ್ತಿದೆ ಗೊತ್ತಾ..? ಸಮುದ್ರದ ಮಧ್ಯದಲ್ಲಿ ನಿರ್ಮಾಣವಾಗ್ತಿರೋ ಆ ಸ್ಟ್ಯಾಚುವಿನ ವಿಶೇಷತೆ ಏನು..? ಮುಂದೆ ಓದಿ
-------------------------------------------------------
ಅರಬ್ಬೀ ಸಮುದ್ರದ ಶಾಂತ ವಾತಾವರಣದಲ್ಲಿ, ಪಟೇಲರಿಗಿಂತ ಎತ್ತರದಲ್ಲಿ, ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿ ಶಿವಾಜಿ ಮಹಾರಾಜ್ ಎದ್ದುನಿಲ್ಲಿದ್ದಾರೆ. ಒಂದಲ್ಲ ಎರಡಲ್ಲ.. ಬರೋಬ್ಬರಿ 624 ಅಡಿ ಎತ್ತರದಲ್ಲಿ ಶಿವಾಜಿಯ ಸಾಮ್ರಾಜ್ಯದ ಅನಾವರಣವಾಗಲಿದೆ. ಸಮುದ್ರದಲ್ಲಿ ಶಿವಾಜಿ ಪ್ರತಿಮೇನ ಹೇಗೆ ನಿಲ್ಲಿಸ್ತಾರೆ..? ಆ ಸ್ಟ್ಟ್ಯಾಚುನ ವಿಶೇಷತೆ ಏನು..? ಅಲ್ಲಿ ಏನೆಲ್ಲಾ ಇರುತ್ತೆ..? ಅದ್ರ ಕಂಪ್ಲೀಟ್ ಡೀಟೇಲ್​ ಇಲ್ಲಿದೆ ನೋಡಿ.










ಮಹಾರಾಷ್ಟ್ರದ ಮುಂಬೈನಲ್ಲಿ ಶಿವಾಜಿ ಪ್ರತಿಮೆಗೆ ಎಲ್ಲಾ ತಯಾರಿ ನಡೆದಿದೆ. ನಾರಿಮನ್ ಪಾಯಿಂಟ್​ನಿಂದ ನಾಲ್ಕು ಕಿಲೋ ಮೀಟರ್​ ದೂರದ, ಅರಬ್ಬೀ ಸಮುದ್ರದದಲ್ಲಿ, ಶಿವಾಜಿ ಪ್ರತಿಮೆಯನ್ನು ನಿರ್ಮಾಣ ಮಾಡೋದಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಸಮುದ್ರದ ಮಧ್ಯಭಾಗದಲ್ಲಿ ದ್ವೀಪದ ಮಾದರಿ ಪ್ರದೇಶದಲ್ಲಿ ಶಿವಾಜಿಯ ಅತಿ ಎತ್ತರದ 623 ಅಡಿಯ ಸ್ಟ್ಯಾಚು ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ.

ನಾರಿಮನ್​ ಪಾಯಿಂಟ್​ನಿಂದ ನಾಲ್ಕು ಕಿಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಒಂದು ಬೃಹತ್​ ಕಲ್ಲಿದೆ. ಈ ಕಲ್ಲನ್ನು ಆಧಾರವಾಗಿಟ್ಟುಕೊಂಡು, 16 ಹೆಕ್ಟೇರ್​ ಪ್ರದೇಶದಲ್ಲಿ ಶಿವಾಜಿಯ ಪ್ರತಿಮೆ ನಿರ್ಮಾಣ ಮಾಡಲಾಗುತ್ತೆ...

ಇನ್ನು ಇಲ್ಲಿಗೆ ಬರ್ಬೇಕು ಅಂದ್ರೆ ಬೋಟ್​​ನಲ್ಲೇ ಬರಬೇಕಾಗುತ್ತೆ..  ಇಲ್ಲಾ ಅಂದ್ರೆ, ಹೆಲಿಕಾಪ್ಟರ್​ ಮೂಲಕಾನೂ ಬರಬಹುದು..

ಹಚ್ಚ ಹಸುರಿನ ವಿಶಾಲವಾದ ಉದ್ಯಾನವನದ ಜೊತೆಗೆ ನೃತ್ಯವಾಡುವ ನೀರಿನ ಚಿಲುಮೆಯ ಹಿಂಭಾಗದಲ್ಲಿ, ಕುದುರೆ ಏರಿ ಆಕಾಶದೆತ್ತರದಲ್ಲಿ ನಿಂತಿರ್ತಾನೇ ಶಿವಾಜಿ ಮಹಾರಾಜ್..

ಇದ್ರ ಮೇಲೆ ಹೋಗೋದಕ್ಕೂ ದಾರಿ ಇದೆ. ಮೆಟ್ಟಿಲುಗಳನ್ನು ಹತ್ತುವ ಮೂಲಕ, ಮೊದಲ ಮಹಡಿಯನ್ನು ತಲುಪಬಹುದು.. ಅಲ್ಲಿಂದ ಅರಬ್ಬೀ ಸಮುದ್ರದತ್ತ ಕಣ್ಣು ಹಾಯಿಸಿದ್ರೆ, ಮುಂಬೈನ ವಿಹಂಗಮ ನೋಟ ಕಣ್ಣಿಗೆ ಕಾಣುತ್ತೆ.

ಇನ್ನು ಇಲ್ಲಿ 300 ರಿಂದ 400 ಮಂದಿ ಕೂತ್ಕೊಳ್ಳೋಕೆ ಅನುಕೂಲವಾಗುವಂಥ ಬಯಲು ರಂಗ ಮಂದಿರ ಕೂಡ ಇರುತ್ತೆ..

ಇದ್ರ ಒಳಗೆ ಹೋದ್ರೆ, ಶಿವಾಜಿ ಮಹಾರಾಜನ ಸಾಮ್ರಾಜ್ಯದ ಅನಾವರಣವಾಗುತ್ತೆ.. ಪ್ರತಿಯೊಂದು ಗೋಡೆಯೂ ಕೂಡ, ಶಿವಾಜಿ ಬದುಕಿನ ಚಿತ್ರಣವನ್ನು ಇಂಚಿಂಚಾಗಿ ಬಿಚ್ಚಿಡ್ತವೆ ಕಣ್ರಿ...

ಇಷ್ಟೇ ಅಲ್ಲ, ಶಿವಾಜಿ ಸಾಧನೆ ಮತ್ತು ಸಾಮ್ರಾಜ್ಯವನ್ನು ಉಣಬಡಿಸೋದಕ್ಕೆ ಅಲ್ಲಿ ಲೈಬ್ರರಿ ಕೂಡ ಇರುತ್ತೆ.. ಬರೀ ಪುಸ್ತಕದ ಲೈಬ್ರರಿ ಅಲ್ಲ.. ಕಂಪ್ಯೂಟರ್ ಮತ್ತು ಇಂಟರ್​ನೆಟ್ ಸೌಲಭ್ಯವನ್ನು ನೀಡೋ ಮೂಲಕ, ಆ ಲೈಬ್ರರಿಗೆ ಡಿಜಿಟಲ್​ ಟಚ್ ಕೊಡಲಾಗುತ್ತೆ.

ಇನ್ನು ಮೇಲೆ ಹತ್ತೋದಕ್ಕೆ ಮತ್ತು ಇಳಿಯೋದಕ್ಕೆ ಇಲ್ಲಿ ಲಿಫ್ಟ್​ ವ್ಯವಸ್ಥೆ ಕೂಡ ಇರುತ್ತೆ..  ಒಂದ್ಸಲಕ್ಕೆ 10 ರಿಂದ 20 ಜನ ಈ ಲಿಫ್ಟ್​​ನಲ್ಲಿ ಹೋಗ್ಬಬಹುದು..

ಇನ್ನು ಶಿವಾಜಿ ಸಾಮ್ರಾಜ್ಯವನ್ನು ಸಿನಿಮಾ ಮೂಲಕ ಕಣ್ಣಿಗೆ ಕಾಣುವಂತೆ ಬಿಚ್ಚಿಡೋದಕ್ಕೆ, ಅಲ್ಲೊಂದು ಬೃಹತ್​​ ಥಿಯೇಟರ್​ ಕೂಡ ಇರುತ್ತೆ.

ಶಿವಾಜಿ ಕಾಲದ, ಕಲೆ ಮತ್ತು ಸಂಸ್ಕೃತಿಯ ಅನಾವರಣಕ್ಕಾಗಿ, ಮತ್ತೊಂದು ಬಯಲು ರಂಗಮಂದಿರವಿರುತ್ತೆ. ಸಾವಿರಾರು ಮಂದಿ ಕೂತ್ಕೊಳ್ಳೋಕೆ ಅಲ್ಲಿ, ಸ್ಥಳಾವಕಾಶ ಕಲ್ಪಿಸಲಾಗುತ್ತೆ.

ಇವೆಲ್ಲದರ ನಡುವೇನೇ, ಗ್ರಾನೈಟ್​ ಕಲ್ಲುಗಳು ಮತ್ತು ಕಾಂಕ್ರಿಟ್​ನಿಂದ, ಸಮುದ್ರರಾಜನಂತೆ ಶಿವಾಜಿ ಮಹಾರಾಜ್​ ವಿರಾಜಮಾನವಾಗಿ ರಾರಾಜಿಸ್ತಿರ್ತಾನೆ..

ಇನ್ನು ಇಷ್ಟೆಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಿಸಲಾಗ್ತಿರೋ ಈ ಪ್ರದೇಶಕ್ಕೆ ಕರೆಂಟ್​ ವ್ಯವಸ್ಥೆ ಬೇಕಲ್ಲಾ.. ಅದಿಕ್ಕೆ ಇಲ್ಲಿ ಈ ಬೃಹತ್​ ಫ್ಯಾನ್​ಗಳನ್ನ ಅಳವಡಿಸಲಾಗಿದೆ.. ಇವುಗಳ ಮೂಲಕ, ವಿಂಡ್​ ಪವರ್​ ಉತ್ಪಾದಿಸಿ, ಇಲ್ಲಿಗೆ ಬೇಕಾದ ಕರೆಂಟನ್ನು ಇಲ್ಲೇ ಉತ್ಪಾದಿಸಸಲಾಗುತ್ತೆ..

ಇನ್ನು ಇಷ್ಟೆಲ್ಲಾ ಸೌಕರ್ಯಗಳಿರೋ ಶಿವಾಜಿ ಪಾರ್ಕ್​ ಅನ್ನು ಸಮುದ್ರ ಮಧ್ಯದಲ್ಲಿ ನಿರ್ಮಿಸೋದು ಅಂದ್ರೆ, ಇದೊಂದು ಸವಾಲಿನ ಕೆಲಸಾನೇ ಕಣ್ರಿ.. ಇದಕ್ಕಾಗಿ ಬರೋಬ್ಬರಿ 2 ಸಾವಿರ ಕೋಟಿ ಖರ್ಚಾಗುತ್ತೆ ಅಂತ ಅಂದಾಜಿಸಲಾಗಿದೆ.

ಜಗತ್ತಿನ ಅತಿ ಎತ್ತರದ ಪ್ರತಿಮೆ ಅರಬ್ಬೀ ಸಮುದ್ರದ ಮಡಿಲಲ್ಲಿ ತಲೆ ಎತ್ತಲಿದೆ. ಈ ಶಿವಾಜಿ ಪ್ರತಿಮೆ ನಿರ್ಮಾಣ ಮಾಡೋದೇ ಒಂದು ಸವಾಲಿನ ಕೆಲಸ.. ಆದ್ರೆ ಅದಕ್ಕಿಂತ ದೊಡ್ಡ ಸವಾಲಿನ ಕೆಲಸ ಯಾವುದು ಗೊತ್ತಾ..? ಅದನ್ನು ಉಗ್ರರಿಂದ ರಕ್ಷಣೆ ಮಾಡೋದು.. ಅದಕ್ಕೆ ಅಂತಾನೇ, ದೇಶದಲ್ಲಿ ಯಾರಿಗೂ ಇಲ್ಲದ ವಿಶೇಷ ಭದ್ರತೆ ಕಲ್ಪಿಸಲಾಗಿದೆ.
---------------------------------------------
ಸ್ವಾಭಿಮಾನದ ಪ್ರತೀಕವಾದ ಶಿವಾಜಿ ಮಹಾರಾಜನ ಪ್ರತಿಮೆ ನಿರ್ಮಾಣಕ್ಕೆ, ನೂರೆಂಟು ವಿಘ್ನಗಳು ಎದುರಾಗಿವೆ. ಉಗ್ರರ ಕಾಟದ ಜೊತೆಗೆ ಪರಿಸರವಾದಿಗಳ ವಿರೋಧವನ್ನು  ಕೂಡ ಇದೆ. ಇದ್ರ ಜೊತೆಗೆ ಪ್ರತಿಮೆ  ನಿರ್ಮಾಣಕ್ಕೆ ಬೇಕಾಗೋ 2 ಸಾವಿರ ಕೋಟಿ ಸಂಗ್ರಹಿಸೋದು ಸವಾಲಿನ ವಿಷಯ.. ಅದಕ್ಕಾಗಿ ಸರ್ಕಾರ ಒಂದು ಪ್ಲಾನ್ ಕೂಡ ಮಾಡಿದೆ. ಅದೇನು ಅಂತ ನೋಡಿ ಈ ವರದಿಯಲ್ಲಿ..

16 ಹೆಕ್ಟೇರ್​ ಪ್ರದೇಶದಲ್ಲಿ ಅರಬ್ಬೀ ಸಮುದ್ರದಲ್ಲಿ, ವಿಶೇಷ ಗ್ರಾನೈಟ್​ ಮತ್ತು ಸಿಮೆಂಟ್ ಮೂಲಕ, ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತೆ. ಆದರೆ ಇದ್ರಿಂದ ಸಮುದ್ರಜೀವಿಗಳಿಗೆ ತೊಂದರೆಯಾಗುತ್ತೆ ಅಂತ ಪರಿಸರವಾದಿಗಳು ಈ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಪ್ರತಿಮೆ ನಿರ್ಮಾಣಕ್ಕೆ ಮಹಾರಾಷ್ಟ್ರ ಸರ್ಕಾರ ಸ್ವಲ್ಪ ಹಣವನ್ನು ಮೀಸಲಿರಿಸಿದೆ. ಆದ್ರೆ ಅಷ್ಟ್ರಲ್ಲೇ ಪ್ರತಿಮೆ ನಿರ್ಮಾಣ ಮಾಡೋಕೆ ಶಾಧ್ಯವಿಲ್ಲ.. ಯಾಕಂದ್ರೆ, ಅದಕ್ಕೆ 2000 ಕೋಟಿ ಬೇಕು.. ಅದಕ್ಕೆ ಮಹಾರಾಷ್ಟ್ರ ಸರ್ಕಾರ ಒಂದು ಪ್ಲಾನ್ ಮಾಡಿದೆ. ಪಟೇಲರ ಏಕತಾ ಪ್ರತಿಮೆ ನಿರ್ಮಾಣಕ್ಕೆ ದೇಶದ ಜನರಿಂದ ಮೋದಿ ಕಬ್ಬಿಣ ಸಂಗ್ರಹಿಸಿದಂತೆ, ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಜನರ ಸಹಾಯ ಬೇಡಿದೆ. ಜನರ ಸ್ವಾಭಿಮಾನದ ದುಡ್ಡಲ್ಲಿ, ಸ್ವಾಭಿಮಾನಿಯ ಪ್ರತಿಮೆ ನಿರ್ಮಾಣ ಮಾಡ್ಬೇಕು ಅಂತ ಸರ್ಕಾರ ಲೆಕ್ಕಾಚಾರ ಹಾಕಿದೆ.

ಆದ್ರೆ ಪ್ರತಿಮೆ ನಿರ್ಮಾಣದ ಹೆಸರಲ್ಲಿ 2 ಸಾವಿರ ಕೋಟಿ ಖರ್ಚು ಮಾಡ್ತಿರೋದಕ್ಕೆ ಕೆಲವರು ವಿರೋಧಿಸ್ತಿದ್ದಾರೆ. ಅದೇ ದುಡ್ಡಲ್ಲಿ  ಒಂದು ಲಕ್ಷಕ್ಕೂ ಹೆಚ್ಚಿನ ಬಡವರಿಗೆ ಮನೆ ಕಟ್ಟಿಸಿಕೊಡಬಹುದು.. ಇಲ್ಲಾ ಅಂದ್ರೆ, ಅದನ್ನ ಮಹಾರಾಷ್ಟ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ರೆ, ಮಹಾರಾಷ್ಟ್ರದ ಚಿತ್ರಣಾನೇ ಬದಲಾಗಿಬಿಡುತ್ತೆ.. ಹೀಗಿರುವಾಗ, ಅಷ್ಟೋಂದು ಹಣವನ್ನು ಕೇವಲ ಪ್ರತಿಮೆ ನಿರ್ಮಾಣಕ್ಕೆ ವಿನಿಯೋಗಿಸ್ತಾ ಇರೋದು ಸರಿಯಲ್ಲ ಅಂತಾರೆ ಕೆಲವರು..

ಆದ್ರೆ ಶಿವಾಜಿ ಪ್ರತಿಮೆ ನಿರ್ಮಾಣದ ಹಿಂದೆ ದೊಡ್ಡ ಲೆಕ್ಕಾಚಾರ ಇಟ್ಕೊಂಡಿದೆ ಸರ್ಕಾರ.. 2 ಸಾವಿರ ಕೋಟಿ ಖರ್ಚು ಮಾಡಿ ಪ್ರತಿಮೆ ನಿರ್ಮಾಣ ಮಾಡೋ ಮೂಲಕ, ಮುಂಬೈ ಅನ್ನ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿ ಮಾಡೋದಕ್ಕೆ ಹೊರಟಿದೆ ಮಹಾರಾಷ್ಟ್ರ ಸರ್ಕಾರ.

ಇನ್ನು ದಿನಕ್ಕೆ 10 ಸಾವಿರ ಮಂದಿ ಇಲ್ಲಿಗೆ ಭೇಟಿ ಕೊಡ್ತಾರೆ ಅಂತ ಅಂದಾಜಿಸಲಾಗಿದೆ.  ದಿನಕಳೆದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತೆ. ಇದ್ರಿಂದ, ಮಹಾರಾಷ್ಟ್ರ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತೆ. ಸ್ಥಳೀಯರಿಗೆ ಉದ್ಯೋಗ ನೀಡೋದರ ಜೊತೆಗೆ ಮತ್ತೊಂದಷ್ಟು ಅಭಿವೃದ್ಧಿ ಯೋಜನೆಗಳಿಗೆ ಈ ಆದಾಯವನ್ನು ವಿನಿಯೋಗಿಸೋ ಲೆಕ್ಕಾಚಾರ ಹೊಂದಿದೆ ಮಹಾರಾಷ್ಟ್ರ ಸರ್ಕಾರ.

ಇನ್ನು ಈ ಶಿವಾಜಿ ಪ್ರತಿಮೆಯನ್ನು 2019 ರೊಳಗೆ ನಿರ್ಮಿಸೋ ಪ್ಲಾನ್ ಇದೆ. ಇದನ್ನು ನಿರ್ಮಿಸೋದು ಎಷ್ಟು ಕಷ್ಟಾನೋ, ಅದಕ್ಕಿಂತ ಕಷ್ಟವಾದ ಕೆಲಸ ಅದನ್ನು ಉಗ್ರರಿಂದ ಕಾಪಾಡೋದು..

ಯಸ್​... ಮುಂಬೈ ಮೇಲೆ ದಾಳಿ ನಡೆಸಿದಂತೆ, ಶಿವಾಜಿ ಪ್ರತಿಮೆ ಮೇಲೂ ಉಗ್ರರು ದಾಳಿ ನಡೆಸಬಹುದು.. ಅದನ್ನ ರಕ್ಷಣೆ ಮಾಡೋದಕ್ಕೆ ಅಂತಾನೇ ದೇಶದಲ್ಲೇ ಯಾರಿಗೂ ಇಲ್ಲದ ಝಡ್​ ಪ್ಲಸ್​ ಪ್ಲಸ್​​ ಸೆಕ್ಯೂರಿಟಿ ನೀಡಲಾಗುತ್ತೆ ಈ ಶಿವಾಜಿ ಪ್ರತಿಮೆಗೆ..

ನೂರಾರು ಕಿಮೀ ದೂರದಲ್ಲಿರುವ ಉಗ್ರರ ಸುಳಿವು ಪತ್ತೆ ಹಚ್ಚಬಲ್ಲ ಆಂಟಿ ರಡಾರ್​ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಭದ್ರತಾ ದಳ, ಮುಂಬೈ ಪೊಲೀಸ್​ ಪಡೆ ಕೂಡ ಶಿವಾಜಿಯನ್ನು ಕಾಯ್ತಾರೆ. ಇವೆಲ್ಲದರ ಜೊತೆಗೆ ಹೆಜ್ಜೆ ಹೆಜ್ಜೆಗೂ ಸಿಸಿಟಿವಿಗಳನ್ನು ಕೂಡ ಅಳವಡಿಸಲಾಗುತ್ತೆ. ಪರ್ಮನೆಂಟ್​ ಬಂಕರ್​ಗಳನ್ನು ನಿರ್ಮಿಸಲಿದ್ದು, ಸಮುದ್ರ ರಾಜನ ರಕ್ಷಣೆಗೆ, ಅತ್ಯಾಧುನಿಕ ಭದ್ರತೆಯನ್ನು ಕಲ್ಪಿಸಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆದ್ರೆ, 2019 ರೊಳಗೆ, ಜಗತ್ತಿನ ಅತಿ ಎತ್ತರದ ಪ್ರತಿಮೆ ಮುಂಬೈನ ಅರಬ್ಬಿ ಸಮುದ್ರದಲ್ಲಿ ತಲೆ ಎತ್ತಲಿದೆ. ಸ್ವಾಭಿಮಾನದ ಸಂಕೇತವಾಗಿ ಆಕಾಶದೆತ್ತರದಲ್ಲಿ ಶಿವಾಜಿ ಎದ್ದು ನಿಲ್ಲಲಿದ್ದಾರೆ.

Отправить комментарий

0 Комментарии