ಮೂಢನಂಬಿಕೆ ಅಂದ್ರೆ ನಮ್ಮ ಸಿಎಂ ಸಿದ್ರಾಮಯ್ಯನವರಿಗೆ ಆಗೋದೇ ಇಲ್ಲ.. ಅದಿಕ್ಕೆ ನೋಡಿ, ಅಧಿಕಾರಕ್ಕೆ ಬರ್ತಿದ್ದಂತೆ, ಮೂಢನಂಬಿಕೆ ವಿರುದ್ಧ ಕಾನೂನು ತರೋದಕ್ಕೆ ರೆಡಿಯಾಗಿದ್ರು.. ಇಂಥ ಸಿದ್ರಾಮಯ್ಯನವರೇ ಈಗ ಉಲ್ಟಾ ಹೊಡೆದಿದ್ದಾರೆ.. ಅಡ್ಡಬಿದ್ದೆ ದ್ಯಾವ್ರು ಅಂತ ಸಿಕ್ ಸಿಕ್ಕ ದೇವ್ರಿಗೆ ಕೈ ಮುಗೀತಿದ್ದಾರೆ. ಯಾಕೆ ಗೊತ್ತಾ? ಮುಂದೆ ಓದಿ
ಸಿದ್ದರಾಮಯ್ಯ.. ಸಿದ್ದರಾಮಯ್ಯನ ಹುಂಡಿಯಿಂದ ಎದ್ದು ಬಂದ ಜನನಾಯಕ.. ಕಾಂಗ್ರೆಸ್ ಪಕ್ಷದ ಹೀರೋ ಕೂಡ ಹೌದು.. ಆದ್ರೆ ಮೂಢನಂಬಿಕೆ ಅಂದ್ರೆ ಸಿಎಂ ಸಿದ್ದರಾಮಯ್ಯನವರಿಗೆ ಆಗೋದೇ ಇಲ್ಲ.. ಅದಿಕ್ಕೆ ನೋಡಿ.. ಸಿದ್ದರಾಮಯ್ಯನವರು ಸಿಎಂ ಆಗಿದ್ದೇ ತಡ, ಮೂಢ ನಂಬಿಕೆ ವಿರೋಧಿ ಕಾಯಿದೆ ಜಾರಿ ಮಾಡೋದಕ್ಕೆ ಮುಂದಾಗಿದ್ರು.
ಅರ್ಥವಿಲ್ಲದ ಆಚರಣೆಗಳಿಂದ ಏನೂ ಪ್ರಯೋಜನವಿಲ್ಲ.. ಪ್ರಯೋಜನವಿಲ್ಲದ ಸಂಪ್ರದಾಯಗಳು ನಮಗೆ ಬೇಕಾಗೇ ಇಲ್ಲ ಅನ್ನೋ ಮನಸ್ಥಿತಿ ಸಿಎಂ ಸಿದ್ದರಾಮಯ್ಯನವರದ್ದು.. ಕೂತ್ಕೊಂಡು ದೇವ್ರಿಗೆ ಕೈ ಮುಗಿದ್ರೆ, ದೆವ್ರು ಹೊಟ್ಟೆ ತುಂಬ್ಸಲ್ಲ ಅನ್ನೋ ಕಠು ಸತ್ಯ ಸಿಎಂ ಅವ್ರ ಮಾತಲ್ಲಿ ಕಂಡು ಬರುತ್ತೆ.. ಅದಿಕ್ಕೇನೇ.. ಸಿಎಂ ಸಾಹೇಬ್ರು, ಯಾವ ದೇವ್ರಿಗೂ ಮನಸಾರೆ ಕೂ ಮುಗಿಯೋದಿಲ್ಲ.. ಬೇಕು ಬೇಕು ಅಂತ ದೇವಸ್ತಾನಕ್ಕೆ ಹೋಗಿ ಪೂಜೆ ಕೂಡ ಮಾಡ್ಸೋದಿಲ್ಲ.. ಮೂಢನಂಬಿಕೆ, ಅರ್ಥವಿಲ್ಲದ ಆಚರಣೆಯನ್ನು ನಿಲ್ಲಿಸಬೇಕು ಅಂತ ಲೆಕ್ಕ ಹಾಕಿದ ಸಿಎಂ ಸಿದ್ದರಾಮಯ್ಯ, ಧಾರ್ಮಿಕ ಮುಖಂಡರು ಮತ್ತು ಸಂಪುಟ ಸದಸ್ಯರೊಂದಿಗೆ ಚರ್ಚೆ ನಡೆಸಿ, ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ಜಾರಿ ಮಾಡೋಕೆ ಮುಂದಾಗಿದ್ರು..
ಇನ್ನೇನು ಕೆಲವೇ ದಿನಗಳಲ್ಲಿ ಮೂಢನಂಬಿಕೆ ಕರ್ನಾಟಕದಿಂದ ಓಡ್ಹೋಗುತ್ತೆ ಅಂತಲೇ ಎಲ್ಲರೂ ಅಂದುಕೊಂಡಿದ್ರು.. ಆದ್ರೆ ಎಲ್ಲಾ ಉಲ್ಟಾ ಹೊಡೆದಿದೆ. ಮೂಢನಂಬಿಕೆ ಕಾಯಿದೆ ಜಾರಿ ಮಾಡ್ಬೇಕು ಅಂತ ಪಟ್ಟು ಹಿಡಿದಿದ್ದ ಸಿಎಂ ಸಿದ್ದರಾಮಯ್ಯನವರೇ ಈಗ ನಿಧಾನವಾಗಿ ದೇವ್ರು ದಿಂಡ್ರು ಅಂತ ಸಿಕ್ಕ ಸಿಕ್ಕ ದೇವ್ರಿಗೆ ಕೈ ಮುಗೀತಿದ್ದಾರೆ..
ಆವತ್ತು ಇವೆಲ್ಲಾ ಮೂಢ ನಂಬಿಕೆ ಅಂತಿದ್ದ, ನಾಸ್ತಿಕ ಸ್ವಭಾವದ ಸಿಎಂ ಏಕಾಏಕಿ ನಂಬಿಕೆ ಬಗ್ಗೆ ಮಾತನಾಡೋಕೆ ಶುರು ಮಾಡಿದ್ರು.. ಆವತ್ತು ಅಂಧ ಆಚರಣೆ ಅಂದಿದ್ದೋರು, ಈಗ ವಾಸ್ತು ಪ್ರಕಾರ ಮಾತನಾಡೋಕೆ ಶುರು ಮಾಡಿದ್ರು.. ಇದು ಕೇವಲ ರಾಜಕಾರಣಿಗಳು ಮಾತ್ರವಲ್ಲ, ರಾಜ್ಯದ ಜನತೆಗೂ ಕೂಡ ಒಂದ್ ಲೆಕ್ಕದಲ್ಲಿ ಶಾಕ್ ನೀಡಿದೆ. ಹೆಂಗಿದ್ದೋರು ಹೆಂಗಾದ್ರಪ್ಪಾ ಅಂತ ಜನರು ಬಿಟ್ಟ ಕಣ್ಣು ಬಿಟ್ಟಂತೆ ನೋಡುವಂತಾಗಿದೆ..
ಅದು ಜನವರಿ 21 ನೇ ತಾರೀಕು.. ಸಿಎಂ ಸಿದ್ದರಾಮಯ್ಯನವರು, ಬೆಂಗಳೂರಿನ ಕಮಲಾನಗರದಲ್ಲಿ ನಡೆದ ಇಂಜಿನಿಯರ್ಸ್ ಅಕಾಡೆಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು.. ತಂತ್ರಜ್ಞಾನ ಯುಗದ ಬಗ್ಗೆ ಮಾತನಾಡಬೇಕಿದ್ದ ಕಾರ್ಯಕ್ರಮದಲ್ಲಿ, ಸಿಎಂ ಸಿದ್ದರಾಮಯ್ಯನವರು ವಾಸ್ತು, ಹಣೆಬರಹದಂಥ ಮೂಢನಂಬಿಕೆಗಳ ವಿಶ್ಲೇಷಣೆ ಮಾಡಿದ್ರು.. ಅಷ್ಟೇ ಅಲ್ಲ, ಎಲ್ಲರೂ ವೈಚಾರಿಕ ಮನೋಭಾವದವರು ಇರಲ್ಲ ಅಂತಾ, ಪಕ್ಕಾ ಆಸ್ತಿಕರಾಗಿ ಮಾತನಾಡಿದ್ರು..
ಬರೀ ಇಷ್ಟು ಮಾತ್ರವಲ್ಲ.. ಅಂದು ಇದೆಲ್ಲಾ ನಂಬಲ್ಲ ಅಂತಿದ್ದವರೇ ಈಗ ಎಲ್ಲರಿಗಿಂತಲೂ ಹೆಚ್ಚು ನಂಬಿಕೆ ಬೆಳೆಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ದೇವ್ರ ಮೇಲೆ ಭಕ್ತಿ ಕೂಡ ಜಾಸ್ತಿಯಾಗ್ತಿದೆ.
ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯನವರು ಹೀಗೆ ಇದ್ದಕ್ಕಿದ್ದಂತೆ ಬದಲಾಗಿದ್ಯಾಕೆ..? ಅಂಥದ್ದೇನಾಯ್ತು..? ಮುಂದೆ ಓದಿ..
2014 ರವರೆಗೆ ಎಲ್ಲವೂ ಸರಿಯಾಗೇ ಇತ್ತು.. ಆದ್ರೆ 2015 ಹೊಸ ವರ್ಷ ಯಾವಾ ಬಂತೋ..? ಆಗ ಸಿಎಂ ಲೈಫಲ್ಲಿ ನಂಬಿಕೆ ಅನ್ನೋದು ಎಂಟ್ರಿ ಕೊಟ್ಟಿತ್ತು.. ಅದ್ರಲ್ಲೂ ಆ ಜನವರಿ 10 ನೇ ತಾರೀಕು, ನಡೆದ ಘಟನೆ ದೇವರ ಮೇಲಿನ ನಂಬಿಕೆಯನ್ನ ಇನ್ನಷ್ಟು ಜಾಸ್ತಿ ಮಾಡಿತು..
ಸಿಎಂ ಸಿದ್ದರಾಮಯ್ಯನವರು ಏಕಾಏಕಿ ಬದಲಾವಣೆಯಾಗೋದಕ್ಕೂ ಒಂದು ಪವರ್ಫುಲ್ ಕಾರಣ ಇದೆ. ಅಧಿಕಾರದ ಗದ್ದುಗೆ ಏರಿದ ಕ್ಷಣದಿಂದ 2014ರ ಡಿಸೆಂಬರ್ ಅಂತ್ಯದವರೆಗೂ ಎಲ್ಲವೂ ನಾರ್ಮಲ್ಲಾಗೇ ಇತ್ತು.. ಆದ್ರೆ ಜನವರಿ 10, 2015 ರಂದು ನಡೆದ ಒಂದೇ ಒಂದು ಘಟನೆ, ಸಿಎಂ ಮನಸ್ಥಿತಿಯನ್ನು ಬದಲಿಸಿಬಿಟ್ಟಿದೆ ಅಂತ ಹೇಳಲಾಗುತ್ತಿದೆ.
ಜನವರಿ 10 ನೇ ತಾರೀಕು ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ ಜಾರ್ಜ್ ಬೆಂಗಳೂರಿನಿಂದ ಮೈಸೂರಿಗೆ ಹೋಗ್ತಾ ಇದ್ರು.. ಅವರ ಪ್ರಯಾಣಕ್ಕಾಗಿ ಪ್ರಭಾತಂ ಏವಿಯೇಷನ್ಸ್ ಸಂಸ್ಥೆ, 2ಎಂಜಿನ್ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ನೀಡಿತ್ತು.. ಬಾಡಿಗೆ ಹೆಲಿಕಾಪ್ಟರ್ ಏರಿ ಮೈಸೂರು ಸೇರೋದಕ್ಕೆ ಅಂತ, ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು. ಆದ್ರೆ ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಏರಿದ್ದೇ ತಡ.. ಕಾಪ್ಟರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು.
ಸಿಎಂ ಯಾವಾಗ ಪ್ರಯಾಣ ಮಾಡಿದ್ರೂ, ಇಂಥ ಘಟನೆಗಳು ಸಂಭವಿಸಿರಲಿಲ್ಲ.. ಆದ್ರೆ ಜನವರಿ 10 ನೇ ತಾರೀಕು ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿತ್ತು. ಕಾಪ್ಟರ್ನ ಸೈಲೆನ್ಸರ್ ನಲ್ಲಿ ಹೊಗೆ ಬರೋದರ ಜೊತೆಗೆ ಬೆಂಕಿ ಕೂಡ ಬರ್ತಾ ಇತ್ತು.. ಆ ತಕ್ಷಣವೇ ಅಲರ್ಟ್ ಆದ ಭದ್ರತಾ ಸಿಬ್ಬಂದಿ, ಕೂಡಲೇ ಸಿ.ಎಂ ಹಾಗೂ ಗೃಹಸಚಿವರನ್ನು ಹೆಲಿಕಾಪ್ಟರ್ ನಿಂದ ಕೆಳಗಿಳಿಸಿದರು. ಆ ಮೂಲಕ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ರು.. ಇದಾದ ನಂತರ ಸಿಎಂ ಸಿದ್ದರಾಮಯ್ಯ ಸೀದ ತಮ್ಮ ಹುಟ್ಟೂರು ಸಿದ್ದರಾಮಯ್ಯನ ಹುಂಡಿಗೆ ಹೋಗಿದ್ದಾರೆ. ಕೆಳ ಸಮಯ ವಿಶ್ರಾಂತಿ ಪಡೆದ ಸಿಎಂ ಸಿದ್ದರಾಮಯ್ಯನವರು ರಸ್ತೆ ಮಾರ್ಗವಾಗಿ ಕಾರಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದರು
0 Комментарии