Hot Posts

10/recent/ticker-posts

ಮೋದಿಯನ್ನೂ ಮೀರಿಸ್ತಾನೆ ಹಾರ್ದಿಕ್ ಪಟೇಲ್?






ಇಡೀ ದೇಶದಲ್ಲಿ ಪ್ರಖರವಾದ ಭಾಷಣ
ಮಾಡಿ ಜನರನ್ನ ಸೆಳೀತಿದ್ದ ವ್ಯಕ್ತಿ ಅಂದ್ರೆ ಪ್ರಧಾನಿ ನರೇಂದ್ರ ಮೋದಿ..
ತನ್ನ ಮೊನಚು
ಮಾತುಗಳಿಂದಲೇ ಜನರ ಮನ ಗೆದ್ದು ಅಧಿಕಾರದ ಗದ್ದುಗೆ ಏರಿದ ಮೋಡಿಗಾರ. ದೇಶದ ಮೂಲೆಗಳಿಗೂ ಹೋಗಿ ಜನರನ್ನು
ಸಂಘಟಿಸಿ, ಕಾಂಗ್ರೆಸ್​​ ಭವಿಷ್ಯವನ್ನೇ ಧೂಳಿಪಟ ಮಾಡಿ ಅಧಿಕಾರಕ್ಕೇರಿದ ಪ್ರಧಾನಿ







ಆದ್ರೀಗ ಮೋದಿಗಿಂತಲೂ ಪ್ರಖರವಾದ ಮಾತಿನ ಮೋಡಿಗಾರ ಅದೇ ಗುಜರಾತ್​ ನೆಲದಲ್ಲಿ
ಜನ್ಮ ತಾಳಿದ್ದಾನೆ. ಗುಜರಾತ್​ನಲ್ಲಿ ದೊಡ್ಡ ಮಟ್ಟದ ಕ್ರಾಂತಿ ಮಾಡೋ ಮೂಲಕ ದೇಶಾದ್ಯಂತ ಮಿಂಚಿನ ಸಂಚಲನ
ಮೂಡಿಸಿದ್ದಾನೆ ಆ ಜ್ಯೂ.ಪಟೇಲ್​






ಆತನ ಹೆಸ್ರು ಹಾರ್ದಿಕ್ ಪಟೇಲ್​.. ಪಟೇಲ್ ಸಮುದಾಯದ ವ್ಯಕ್ತಿ. ವಯಸ್ದಸು
ಕೇವಲ 21 ವರ್ಷ ಅಷ್ಟೇ. ಆದ್ರೆ ಈ ಯುವಕನ ಕರೆಗೆ ಓಗೊಟ್ಟು ಅಹಮದಾಬಾದ್​​ನತ್ತ ಜನಸಾಗರವೇ ಆಗಮಿಸಿತ್ತು








ಹಾರ್ದಿಕ್ ಪಟೇಲ್ ಭಾಷಣ ಕೇಳೋದಕ್ಕೆ ಬಂದ ಜನರು ಜಾಗ ಸಾಕಾಗದೇ ನಡು ರಸ್ತೆಯಲ್ಲಿ
ನಿಂತು, ಫ್ಲೈ ಓವರ್​ಗಳ ಮೇಲೆ ನಿಂತು, ಹಾರ್ದಿಕ್ ಪಟೇಲ್​ರ ಭಾಷಣ ಕೇಳ್ತಿದ್ರು.





ಈ ನವಯುವಕನ ಕ್ರಾಂತಿಕಾರಿ ಹೆಜ್ಜೆಯನ್ನ ನೋಡಿ ಗುಜರಾತ್​ ಸರ್ಕಾರಾನೇ ಶೇಕ್
ಆಗಿದೆ. ಮೋದಿಯ ಉತ್ತರಾಧಿಕಾರಿಯಾಗಿರೋ ಆನಂದಿಬೇನ್​ಗೆ ದೊಡ್ಡಮಟ್ಟದ ತಲೆ ಬಿಸಿ ಮಾಡಿದ್ದಾರೆ. ಅಷ್ಟೇ
ಅಲ್ಲ, ಮೋದಿ ಹುಟ್ಟಿದ ನಾಡಲ್ಲೇ, ಮೋದಿಯನ್ನೇ ಅಲುಗಾಡಿಸೋ ಶಕ್ತಿಯಾಗಿ ಗುಜರಾತ್​ನಲ್ಲಿ ನೆಲೆಯೂರಿದ್ದಾರೆ.





ಜನರನ್ನು ಎತ್ತಿ ಕಟ್ಟಿದ್ದು ಹಾರ್ದಿಕ್ ಪಟೇಲ್. ಹೀಗಾಗಿ
ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ 21 ವರ್ಷದ ಈ ಹಾರ್ದಿಕ್ ಪಟೇಲ್​ರನ್ನ ಪೊಲಿಸ್ರು ಬಂಧಿಸ್ತಾರೆ.
ಹಾರ್ದಿಕ್ ಪಟೇಲ್​ರನ್ನ ಬಂಧಿಸಿದ್ರೆ, ಪ್ರತಿಭಟನೆ ನಿಲ್ಲುತ್ತೆ ಅಂತ ಎಲ್ರೂ ಅಂದುಕೊಂಡಿದ್ರು.. ಆದ್ರೆ
ಹಾಗೆ ಆಗ್ಲೇ ಇಲ್ಲ. ಪೊಲೀಸರು ಹಾರ್ದಿಕ್ ಪಟೇಲ್ರನ್ನ ಬಂಧಿಸಿದ ನಂತರ ಹೋರಾಟ ಮತ್ತಷ್ಟು ಉಗ್ರ ಸ್ವರೂಪ
ಪಡೆದುಕೊಳ್ತು.. ಪಟೇಲ್​ ಬೆಂಬಲಿಗರು ಎಲ್ಲೆಡೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ರು. ಗುಜರಾತ್​
ಗೃಹಸಚಿವರ ಮನೆಗೆ ಮುತ್ತಿಗೆ ಹಾಕಿದ್ರು..ಪರಿಣಾಮ ಗುಜರಾತ್​ನಾದ್ಯಂತ ಬಂದ್ ಮಾಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು
ಮುಚ್ಚಲಾಗಿದೆ. ವಾಹನಗಳು ರಸ್ತೆಗಿಳೀತಿಲ್ಲ.











ಯಾರು ಈ ಹಾರ್ದಿಕ್ ಪಟೇಲ್​..?





ಗುಜರಾತ್​ನಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿರೋ ವ್ಯಕ್ತಿ.
21 ವರ್ಷಕ್ಕೆ ಗುಜರಾತ್​ ಸರ್ಕಾರವನ್ನ ಗಡ ಗಡ ಅಂತ ಅಲುಗಾಡಿಸ್ತಾ ಇದ್ದಾರೆ. ಮೋದಿಗೂ ತಲೆ ನೋವು ತಂದಿದ್ದಾರೆ.
ಗುಜರಾತ್​ ಜನರನ್ನು ಒಗ್ಗೂಡಿಸಿ, ಮೋದಿ ನೆಲದಲ್ಲೇ ಮೋದಿಗೆ ಸಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದಿದಿದ್ದಾರೆ
ಈ ಹಾರ್ದಿಕ್ ಪಟೇಲ್​.





21 ವರ್ಷಗಳ ಹಿಂದೆ ಅಂದ್ರೆ 1993 ರಲ್ಲಿ, ಗುಜರಾತ್​ನ
ಅಹಮದಾಬಾದ್​ನಲ್ಲಿರೋ ವಿರಾಂಗಾಂ ಅನ್ನೋ ಗ್ರಾಮದಲ್ಲಿ 
ಈ ಹಾರ್ದಿಕ್ ಪಟೇಲ್​ ಜನ್ಮ ತಾಳ್ತಾರೆ. ಹಾರ್ದಿಕ್ ಪಟೇಲ್ ತಂದೆ ಭಾರತೀಭಾಯ್ ಪಟೇಲ್​ ಬಿಜೆಪಿಯ
ನಿಷ್ಠಾವಂತ ಕಾರ್ಯಕರ್ತರು. ಸಣ್ಣದೊಂದು ಬಿಸಿನೆಸ್​ ಮೂಲಕ ಮತ್ತು ನೀರಿನ ವ್ಯಾಪಾರದ ಮೂಲಕ ಬದುಕಿನ
ಬಂಡಿ ಸಾಗಿದ್ತಾ ಇತ್ತು ಹಾರ್ದಿಕ್ ಕುಟುಂಬ.





ಹಾರ್ದಿಕ್ ತಮ್ಮ ಪ್ರಾಥಮಿಕ ಶಿಕ್ಷಣವನ್ನ ವೀರಾಂಗಾಂ
ಅನ್ನೋ ಊರಿನಲ್ಲೇ ಮುಗಿಸ್ತಾರೆ ಇದಾದ ನಂತರ, ಶೇ.50 ರಷ್ಟು ಅಂಕಗಳೊಂದಿಗೆ ಬಿಕಾಂ ಪದವಿಯನ್ನೂ ಪಡ್ಕೋತಾರೆ.
ಇದೇ ವೇಳೆ ಸರ್ದಾರ್​ ವಲ್ಲಭಾಯ್ ಪಟೇಲ್ ಗ್ರೂಪ್ಸ್​​ ಹೆಸರಿನ ಸಂಘಟನೆಗೆ ಸೇರಿಕೊಳ್ತಾರೆ.





ಸರ್ದಾರ್ ವಲ್ಲಭಾಯ್ ಪಟೇಲ್​ ಗ್ರೂಪ್ಸ್​ನಲ್ಲಿ ಅದೇನಾಯ್ತೋ
ಏನೋ.. ತಮಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಅಂತ ಹೇಳಿ, 2011 ರಲ್ಲಿ ಆ ಸಂಘಟನೆಯನ್ನು ಬಿಟ್ಟು
2015 ರ ಜುಲೈನಲ್ಲಿ ಅಂದ್ರೆ ಒಂದು ತಿಂಗಳ ಹಿಂದಷ್ಟೇ ಪಾಟಿದಾರ್​ ​ಅನಾಮತ್ ಆಂದೋಲನ್​ ಸಮಿತಿ ಅನ್ನೋ
ಹೊಸ ಸಂಘಟನೆಯನ್ನು ಶುರು ಮಾಡ್ತಾರೆ. ಹಳ್ಳಿ ಹಳ್ಳಿಗೆ ಹೋಗಿ, ಪಟೇಲ್​ ಸಮುದಾಯದ ಬಗ್ಗೆ ಜಾಗೃತಿ ಮೂಡಿಸ್ತಾರೆ.











ಬದುಕನ್ನೇ ಬದಲಿಸಿತ್ತು ಭಾಷಣ!




ಅದು ಆಗಸ್ಟ್​ 17, 2015 ನೇ ತಾರೀಕು. ಗುಜರಾತ್​ನ
ಅಹಮದಾಬಾದ್​ನಲ್ಲಿ ಒಂದು ಬೃಹತ್​ ಸಮಾವೇಶವನ್ನ ಮಾಡ್ತಾರೆ. ಆ ಸಮಾವೇಶದಲ್ಲಿ ತಮ್ಮ ಮೊನಚು ಮಾತುಗಳಿಂದ
ರಾಜಕೀಯ ಪಕ್ಷಗಳನ್ನ ತಿವೀತಾರೆ. ಈ ಭಾಷಣ ​ಹಾರ್ದಿಕ್ ಪಟೇಲ್​ರನ್ನ​ ರಾತ್ರೋ ರಾತ್ರಿ ಹೀರೋ ಮಾಡಿಬಿಟ್ಟಿತ್ತು..





ಹಾರ್ದಿಕ್ ಭಾಷಣ :


1.      1985ರಲ್ಲಿ ಕಾಂಗ್ರೆಸ್
ಕಿತ್ತೆಸೆದಿದ್ದೇವೆ, ಈಗ ಬಿಜೆಪಿ ಸರದಿ. 2017ರ ಚುನಾವಣೆಯಲ್ಲಿ ಕೆಸರಿನಲ್ಲಿರುವ ಕಮಲ ಅರಳೋದಿಲ್ಲ.
ನಮ್ಮ ಹಿತಾಸಕ್ತಿ ರಕ್ಷಿಸಲು ಮಾತುಕತೆ ನಡೆಸಿದರೆ ಕಮಲ ಮತ್ತೆ ಅರಳಲಿದೆ. ಇಲ್ಲವಾದಲ್ಲಿ ಮುಂದೆ
ಎಂದೆಂದಿಗೂ ಕಮಲವನ್ನು ಅರಳೋದಕ್ಕೆ ಬಿಡೋದಿಲ್ಲ.


2.     
ಭಯೋತ್ಪಾದಕನ ಶಿಕ್ಷೆ ತೀರ್ಮಾನಿಸಲು ಸುಪ್ರೀಂಕೋರ್ಟ್
ಮುಂಜಾನೆ 3.30ರ ತನಕ ಕಾರ್ಯನಿರ್ವಹಿಸುತ್ತದೆ. ಯುವಕರು ಹಾಗೂ ದೇಶದ ಭವಿಷ್ಯ ನಿರ್ಧರಿಸುವಲ್ಲಿ ಈ
ರೀತಿ ಏಕೆ ಸಾಧ್ಯವಿಲ್ಲ?


3.     
ನಿಮ್ಮಲ್ಲಿ ನಾವು ಭಿಕ್ಷೆ ಬೇಡುತ್ತಿಲ್ಲ. ಮೀಸಲಾತಿ
ಪಡೆಯುವುದು ನಮ್ಮ ಅಧಿಕಾರ. ಇಲ್ಲದಿದ್ದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಪಟೇಲ್ ಹಿತ
ಕಾಯುವವರು ಮಾತ್ರ ಪಟೇಲರನ್ನು ಆಳಬೇಕು.


4.     
ದೇಶದ ಯುವಕರು ಬೀದಿಯಲ್ಲಿ ನಿಂತು ಹಕ್ಕಿಗಾಗಿ
ಒತ್ತಾಯಿಸಿದಾಗ ಹಕ್ಕು ನೀಡದಿದ್ದರೆ, ನಕ್ಸಲೈಟ್, ಭಯೋತ್ಪಾದಕರಾಗುತ್ತಾರೆ.





ಈ ಭಾಷಣವನ್ನು ಕೇಳಿನೇ ಹೆಚ್ಚು ಜನರು ಮಾರು ಹೋಗಿದ್ರು.
ಹೆಚ್ಚಿನ ಜನರು ಈತನಿಗೆ ಬೆಂಬಲ ಸೂಚಿಸಿದ್ರು. ಯಾವಾಗ ಜನಬೆಂಬಲ ಸಿಕ್ತೋ, ಹಾರ್ದಿಕ್ ಪಟೇಲ್​​ ಪಟೇಲ್​
ಸಮುದಾಯದ ಏಳಿಗೇನೇ ನನ್ನ ಗುರಿ ಅಂತ ಹೇಳಿ ಇಡೀ ಪಟೇಲ್​ ಸಮುದಾಯದ ನಾಯಕನಾಗಿ ಗುರ್ತಿಸಿಕೊಳ್ತಾರೆ.
ಗುಜರಾತ್​ ಸರ್ಕಾರದ ವಿರುದ್ಧ ಹೋರಾಟಕ್ಕಿಳೀತಾರೆ.





ಮೊದಲಿಗೆ ಈ ಹೋರಾಟ ಶಾಂತಿಯುತವಾಗೇ ಇರುತ್ತೆ. ಆದ್ರೆ
ಸರ್ಕಾರ ಯಾವಾಗ ಇವರ ಬೇಡಿಕೆಗಳನ್ನ ಕಡೆಗಣಿಸ್ತೋ, ಆಗ ಇವ್ರ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತೆ..
ಅದ್ರಲ್ಲೂ ಹಾರ್ದಿಕ್ ಪಟೇಲ್​​ರನ್ನ ಬಂಧಿಸಿದ ನಂತರ, ಕಲ್ಲುತೂರಾಟ ಮತ್ತು ಬೆಂಕಿಯ ನರ್ತನ ಶುರುವಾಗಿಬಿಡುತ್ತೆ.





ಹೋರಾಟ ಹುಟ್ಟಿಕೊಂಡಿದ್ದು ಹೇಗೆ?


ಅದೊಂದು ದಿನ ಪಟೆಲ್​ ಸಮುದಾಯದ ವ್ಯಕ್ತಿಯೊಬ್ಬ ಎಂಬಿಬಿಎಸ್​​
ಕೋರ್ಸ್​ಗೆ ಅರ್ಜಿ ಸಲ್ಲಿಸ್ತಾನೆ. ಶೇ 45 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ವಿವಿಧ ಮೀಸಲಾತಿಗಳ
ಅಡಿಯಲ್ಲಿ ಸೀಟು ಪಡೀತಾರೆ. ಆದ್ರೆ ಪಟೇಲ್ ಪಟೇಲ್ ಸಮುದಾಯ ಜನರಲ್ ಮೆರಿಟ್ ಅಡಿಯಲ್ಲಿ ಬರೋದ್ರಿಂದ,
ಶೇ 90 ರಷ್ಟು ಅಂಕಗಳನ್ನ ಗಳಿಸಿದ್ರೂ​ ಸೀಟು ಸಿಗೋದಿಲ್ಲ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡ
ಹಾರ್ದಿಕ್ ಪಟೇಲ್, ಪಟೇಲ್ ಸಮುದಾಯದ ಜನರಿಗೆ ಮೀಸಲಾತಿ ಕೊಡ್ಬೇಕು ಅಂತ ದನಿ ಎತ್ತುತಾರೆ. ಪಟೇಲ್ ಸಮುದಾಯವನ್ನು
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಬೇಕು ಅಂತ ಹೋರಾಟಕ್ಕಿಳೀತಾರೆ.







ಹಾರ್ದಿಕ್ ಪಟೇಲ್​ ಇಷ್ಟೋಂದು ಜನರನ್ನ ಒಗ್ಗೂಡಿಸಿ
ಹೋರಾಟಕ್ಕಿಳಿದ್ರೂ ಗುಜರಾತ್​ ಸರ್ಕಾರ ಕ್ಯಾರೇ ಅನ್ನೋದಿಲ್ಲ. ಬದಲಿಗೆ ಹಾರ್ದಿಕ್ ಪಟೇಲ್​ ಗನ್ ಹಿಡ್ಕೊಂಡು
ನಿಂತಿರೋ ಫೋಟೋಗಳನ್ನ ಮುಂದಿಟ್ಟುಕೊಂಡು, ಈತನ ಚಾರಿತ್ರ್ಯವಧೆ ಮಾಡುತ್ತೆ. ಅಷ್ಟೇ ಅಲ್ಲ ಗುಜರಾತ್​ನಲ್ಲಿ
ಈಗಾಗಲೇ 146 ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಲಾಗಿದೆ. ಆದ್ರೀಗ ಪಟೇಲ್ ಸಮುದಾಯವನ್ನೂ ಸೇರಿಸಿದ್ರೆ
ಒಬಿಸಿ ಪಟ್ಟಿಯಲ್ಲಿ 147 ಜಾತಿಗಳು ಸೇರಿಕೊಳ್ಳುತ್ವೆ. ಹೀಗಾಗಿ ಪಟೇಲ್ ಸಮುದಾಯವನ್ನ ಹಿಂದುಳಿದ ವರ್ಗಕ್ಕೆ
ಸೇರಿಸೋಕೆ ಸಾಧ್ಯವಿಲ್ಲ ಅನ್ನುತ್ತೆ ಗುಜರಾತ್ ಸರ್ಕಾರ.





ಇನ್ನೊಂದು ಪ್ರಮುಖ ಅಂಶ ಏನ್ ಗೊತ್ತಾ? ಸೂರತ್​ ಅಹಮದಾಬಾದ್​
ಮತ್ತು ರಾಜ್ ಕೋಟ್ ಸೇರಿದಂತೆ ಪಟೇಲ್ ಸಮುದಾಯದ ಬಹುತೇಕ ಜನರು ವಜ್ರದ ವ್ಯಾಪಾರಿಗಳಾಗಿದ್ದಾರೆ. ಹೀಗಾಗಿ
ಮೀಸಲಾತಿ ಇವರಿಗೆ ಅವಶ್ಯಕತೆ ಇಲ್ಲ ಅನ್ನೋ ಮನೋಭಾವನೆ ಸರ್ಕಾರದ್ದು. ಆದ್ರೆ ಮೋದಿ ಜಾಗತಿಕ ಬಂಡವಾಳ
ಸಮಾವೇಷದಲ್ಲಿ ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ರತ್ನಗಂಬಳಿ ಹಾಸಿದ್ದಾರೆ. ಇದ್ರಿಂದ ಚಿಕ್ಕ ವಜ್ರದ
ಉದ್ಯಮವನ್ನೇ ನಂಬಿ ಬದುಕ್ತಿರೋ ವಜ್ರದ ವ್ಯಾಪಾರಿಗಳಿಗೆ ನಷ್ಟವಾಗ್ತಾ ಇದೆ. ಹೀಗಾಗಿ ಪಟೇಲ್ ಸಮುದಾಯಕ್ಕೆ
ಮೀಸಲಾತಿ ಅವಶ್ಯಕವಾಗಿದೆ. ಮೀಸಲಾತಿ ಪಡೆಯೋದು ನಮ್ಮ ಹಕ್ಕು ಅಂತ ಹೋರಾಟಕ್ಕಿಳಿದಿದೆ ಪಟೇಲ್ ಸಮುದಾಯ.
1985 ರಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಕಿತ್ತೊಗೆದಿದ್ದೇವೆ. ನಮ್ಮ ಬೇಡಿಕೆಗಳನ್ನ ಈಡೇರಿಸದೇ ಇದ್ರೆ
2017 ರಲ್ಲಿ ಗುಜರಾತ್​ನಿಂದ ಬಿಜೆಪಿಯನ್ನು ಕಿತ್ತೊಗೆಯೋದಾಗಿ ಎಚ್ಚರಿಕೆ ನೀಡಿದ್ದಾರೆ.





ಇನ್ನು ಹಾರ್ದಿಕ್ ಪಟೇಲ್​ ಬೆಂಬಲಕ್ಕೆ ಮೋದಿಯ ರಾಜಕೀಯ
ವಿರೋಧಿ ನಿತೀಶ್ ಕುಮಾರ್ ಬೆಂಬಲ ಸೂಚಿಸಿದ್ದಾರೆ. ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಕೂಡ ಹಾರ್ದಿಕ್​
ಬೆಂಬಲಕ್ಕೆ ನಿಂತಿದ್ದಾರೆ.





ಪೊಲೀಸರಿಂದ ಪರಿಸ್ತಿತಿಯನ್ನು ಕಂಟ್ರೋಲ್ ಮಾಡೋದಕ್ಕೆ
ಸಾಧ್ಯವಾಗಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರಾನೇ ಈಗ ಮಧ್ಯಪ್ರವೇಶಿಸಿದೆ.  ಸುಮಾರು 5 ಸಾವಿರ ಅರೆ ಸೇನಾ ಸಿಬ್ಬಂದಿಯನ್ನ ಗುಜರಾತ್​ಗೆ
ಕಳಿಸಿದ್ದು, ಪರಿಸ್ತಿತಿಯನ್ನ ಕಂಟ್ರೋಲ್​​ಗೆ ತೆಗೆದುಕೊಂಡಿದೆ.





ಪ್ರಧಾನಿ ಮೋದಿ ಕೂಡ ಹಾರ್ದಿಕ್ ಪಟೇಲ್ ಮತ್ತು ಬೆಂಬಲಿಗರ
ಮನವೊಲಿಸೋದಕ್ಕೆ ಪ್ರಯತ್ನಿಸ್ತಿದ್ದಾರೆ. ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಅಂತ ಕಿವಿ
ಮಾತು ಹೇಳಿದ್ದಾರೆ.




ಏನೇ ಆಗ್ಲಿ ಕೇವಲ 21 ನೇ ವಯಸ್ಸಿನ ಯುವಕ ತಮ್ಮ ಸಮುದಾಯದ
ಏಳಿಗೆಗಾಗಿ ಇಷ್ಟೋಂದು ಜನರನ್ನು ಸಂಘಟಿಸಿದ್ದು ನಿಜಕ್ಕೂ ಅಚ್ಚರಿಯೇ ಸರಿ. ಹೀಗೆ ಪ್ರತಿಯೊಬ್ಬ ನಾಯಕ
ಮತ್ತು ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಸಮುದಾಯದ ಏಳಿಗೆಗೆ ಶ್ರಮಿಸಿದ್ರೆ, ಎಲ್ಲರ ಅಭಿವೃದ್ಧಿಯೂ
ಆಗುತ್ತೆ. ಆದ್ರೆ ಅಧಿಕಾರದ ಗದ್ದುಗೆ ಏರಿದ ನಂತರ ಈ ರೀತಿ ಯೋಚನೆ ಮಾಡೋದನ್ನೆ ಆ ನಾಯಕರು ಮರೆತು ಬಿಡ್ತಾರೆ
ಅನ್ನೋದೇ ದುರಂತ. 







ಕೊನೆಯದೊಂದು ಮಾತು : ಮೀಸಲಾತಿಗಾಗಿ ಹೋರಾಡೋದಕ್ಕಿಂತ
ಮೀಸಲಾತಿಯನ್ನೇ ಸಂಪೂರ್ಣವಾಗಿ ರದ್ದು ಮಾಡಿದ್ರೆ ಒಳ್ಳೇದು. ಯಾರಿಗೆ ನಿಜವಾದ ಸಾಮರ್ಥ್ಯವಿರುತ್ತೋ,
ಅವರಿಗೆ ಮೆರಿಟ್ ಆಧಾರದ ಮೇಲೆ ಸ್ಥಾನ ಕಲ್ಪಿಸಿ ಕೊಡಬೇಕು. ಸಂವಿಧಾನವನ್ನು ರಚಿಸುವಾಗ ಅಂಬೇಡ್ಕರ್
ಹೇಳಿದ ಮಾತು ಕೂಡ ಅದೆ. ಮೀಸಲಾತಿ ಅನ್ನೋದು ಕೇವಲ 10 ವರ್ಷಗಳಿಗೆ ಮಾತ್ರ ಸೀಮಿತವಾಗಿರಬೇಕು. ನಂತರ
ಅದನ್ನು ರದ್ದು ಮಾಡಬೇಕು ಅಂತ. ಆದ್ರೆ ಈ ರಾಜಕೀಯ ಪುಡಾರಿಗಳು ಅದನ್ನೇ ಅಸ್ತ್ರ ಮಾಡಿಕೊಂಡು ಜನರನ್ನು
ಬಡಿದೆಬ್ಬಿಸಿ ರಾಜಕೀಯ ದಾಳವಾಗಿ ಬಳಸಿಕೊಳ್ತಾರೆ. ಚುನಾವಣೆ ಸಮಯದಲ್ಲಿ ಮಾತ್ರ ಎಲ್ಲಾ ಸಮುದಾಯದವರನ್ನು
ಬಳಸಿಕೊಂಡು ನಂತರ ಮುಂದಿನ 5 ವರ್ಷಗಳವರೆಗೆ ಪಾತಾಳಕ್ಕೆ ತುಳಿಯುವ ಹುನ್ನಾರ ನಡೆಸ್ತಾರೆ. ಗೆದ್ದ ನಂತರ
ಯಾರೂ ಯಾವ ಸಮುದಾಯವನ್ನೂ ಅಭಿವೃದ್ಧಿ ಮಾಡೋದಿಲ್ಲ. ಯಾಕೆ ಗೊತ್ತಾ? ಮುಂದಿನ ಚುನಾವಣೆಗೆ ಮತ್ತದೇ ಆಶ್ವಾಸನೆ
ತೋರಿಸಿ ಮತ್ತೆ ಅಧಿಕಾರದ ಗದ್ದುಗೆ ಏರಬೇಕಲ್ವಾ ಅದಕ್ಕೆ..? ಹೀಗೆ ಯಾರದ್ದೋ ಅಧಿಕಾರದ ದಾಳವಾಗಿ ಮೀಸಲಾತಿ
ಬಳಕೆಯಾಗ್ತಿದೆ.





ಮೀಸಲಾತಿ ನೆಪದಲ್ಲಿ ಪ್ರತಿಭೆಯನ್ನು ತುಳಿಯಲಾಗ್ತಿದೆ.
ಪ್ರತಿಭಾವಂತನಿಗಿಂತ ಏನೂ ಗೊತ್ತಿಲ್ಲದ ಮೂರ್ಖರು ಅಧಿಕಾರದ ಗದ್ದುಗೆ ಏರಿ ಆಳ್ವಿಕೆ ನಡೆಸ್ತಿದ್ದಾರೆ.
 ಪ್ರತಿಭಾವಂತ ಅಧಿಕಾರ ವಂಚಿತನಾಗ್ತಿದ್ದಾನೆ. ಯಾಕೆ
ಗೊತ್ತಾ? ಮೀಸಲಾತಿಯಲ್ಲಿ ಪ್ರತಿಭೆಗೆ ಜಾಗವಿಲ್ಲ.





ಮೀಸಲಾತಿ ರದ್ದು ಮಾಡಿದ್ರೆ ಏನಾಗಬಹುದು?


ನೂರು ಜನರ ಜಾಗ ಖಾಲಿ ಇದೆ ಎಂದಾದರೆ, ಅಲ್ಲಿ ನೂರು
ಮಂದಿ ಪ್ರತಿಭಾನ್ವಿತರನ್ನೇ ನೇಮಕ ಮಾಡಬೇಕಾಗುತ್ತೆ. ಮೀಸಲಾತಿ ಇದ್ದರೆ, ಪ್ರತಿಭೆ ಇಲ್ಲದಿದ್ದರೂ ಅವರನ್ನು
ಅನಿವಾರ್ಯ ಎಂಬ ಕಾರಣಕ್ಕೆ ಅಧಿಕಾರದ ಗದ್ದುಗೆ ಮೇಲೆ ಕೂರಿಸಬೇಕಾಗುತ್ತೆ. ಹೀಗೆ ಏನೂ ಗೊತ್ತಿಲ್ಲದ
ವ್ಯಕ್ತಿಗಳಿಂದ ದೇಶದ ಪ್ರಗತಿಯನ್ನು ನಿರೀಕ್ಷಿಸಬೇಕೆ?





ಪಟೇಲ್ ಸಮುದಾಯದ ಮೀಸಲಾತಿಗೆ ಹಾರ್ದಿಕ್ ಪಟೇಲ್​ ಹೋರಾಟ
ಮಾಡ್ತಿದ್ದಾನೆ. ಆದ್ರೆ ಆತ ಮೀಸಲಾತಿ ಕಿತ್ತೊಗೆಯುವ ಹೋರಾಟಕ್ಕೆ ಮುನ್ನುಡಿ ಹಾಕಿದ್ರೆ ನಮ್ಮ ಬೆಂಬಲವೂ
ಇರ್ತಿತ್ತೇನೋ..!





Отправить комментарий

0 Комментарии