Hot Posts

10/recent/ticker-posts

ಬರಿ ಕೈನಲ್ಲಿ ಬಂದವನು ಲಾಟರಿಯಿಂದ ಕೋಟಿ ಕೋಟಿ ಸಂಪಾದಿಸಿದ






 ನರೇಂದ್ರ ಮೋದಿ.. ಕಾಂಗ್ರೆಸ್​​ನಲ್ಲಿರೋ ಭ್ರಷ್ಟ ನಾಯಕರ ಬಗ್ಗೆ ವಾಗ್ದಾಳಿ ಮಾಡ್ತಾ ಕೇಂದ್ರದಲ್ಲಿ ಕಮಲ ಅರಳಿಸಿದ ನಾಯಕ.. ಅಚ್ಚೇದಿನಗಳ ಕನಸನ್ನು ಬಿತ್ತಿದ ಬಿಜೆಪಿಯಲ್ಲೀಗ ತಳಮಳ ಶುರುವಾಗಿದೆ. ಅದಕ್ಕೆ ಕಾರಣ ಈಗ ಬಿಜೆಪಿ ಸೇರ್ಪಡೆಗೊಂಡಿರೋ ಚಾರ್ಲ್ಸ್​​ ಮಾರ್ಟಿನ್



    ಯಸ್.. ಚಾರ್ಲ್ಸ್​​ ಮಾರ್ಟಿನ್.. ಚೆನ್ನೈ ನಿವಾಸಿಯಾಗಿರೋ ಚಾರ್ಲ್ಸ್​ ಮಾರ್ಟಿನ್​ ಈಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದು ಈಗ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಚಾರ್ಲ್ಸ್​ ಮಾರ್ಟಿನ್​ರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿರೋದು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.. ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಕಿಡಿ ಕಾರ್ತಿವೆ..



    ಅಷ್ಟಕ್ಕೂ ಬಿಜೆಪಿ ಪಕ್ಷಕ್ಕೆ ಇಷ್ಟೋಂದು ಇರುಸು ಮುರುಸು ಉಂಟು ಮಾಡಿರೋ ಈ ಚಾರ್ಲ್ಸ್​ ಮಾರ್ಟಿನ್​​ ಯಾರು ಗೊತ್ತಾ? ಬಹುಕೋಟಿ ಲಾಟರಿ ದಂಧೆಯ ಕಿಂಗ್​ಪಿನ್​ ಸ್ಯಾಂಟಿಗೋ ಮಾರ್ಟಿನ್​ರ ಮಗ..





        

    ಚಾರ್ಲ್ಸ್​​ ಮಾರ್ಟಿನ್​​ ತಂದೆ ಅಕ್ರಮ ಲಾಟರಿ ದಂಧೆಯಿಂದ ಸಾವಿರಾರು ಕೋಟಿ ಸಂಪಾದನೆ ಮಾಡಿ, ದೇಶದ ಖಜಾನೆಯನ್ನೇ ಕೊಳ್ಳೆ ಹೊಡದು ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಗ್ಯಾಂಗ್​​ಸ್ಟರ್​.. ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳಿಂದ ಹಿಡಿದು, ಎಂಥಾ ಪ್ರಾಮಾಣಿಕ ಪೊಲೀಸರನ್ನೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಲ್ಲ ಚಾಣಾಕ್ಷ ಈತ..



    ಈತನ ಅಕ್ರಮನ ಲಾಟರಿ ದಂಧೆಗೆ ಬಾರ್ಡರ್​ ಇಲ್ಲ.. ಇಡೀ ದೇಶಾದ್ಯಂತ ತನ್ನ ಅಕ್ರಮ ಲಾಟರಿ ದಂಧೆಯನ್ನ ವಿಸ್ತರಿಸಿದ್ದಾನೆ ಈ ಕಿಂಕ್​ಪಿನ್.. ರಾಜ್ಯದಲ್ಲಿ ನಡೀತಿದ್ದ ಅಕ್ರಮ ಲಾಟರಿ ದಂಧೆಯ ಕರಾಳ ಮುಖವಾಡವನ್ನ ಬಯಲು ಮಾಡಿದ ನಂತರ ಪಾರಿರಾಜನ್ ಅಂದರ್ ಆಗಿದ್ದ.



      ಕೋಟಿ ಕೋಟಿ ಅಕ್ರಮ ಸಂಪಾದನೆ ಮಾಡಿದ ಈ ಮಾಸ್ಟರ್​ ಮೈಂಡ್​ ಮಾರ್ಟಿನ್​​ 2011 ರಲ್ಲಿ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ.. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಈತನ ಅಕ್ರಮ ಲಾಟರಿ ಜಾಲದ ವಿಸ್ತರಣೆ ಕಂಡು ಶಾಕ್ ಆಗಿತ್ತು.. ಒಂದಲ್ಲ ಎರಡಲ್ಲ.. ಒಟ್ಟು 12 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈತನ ಅವ್ಯವಹಾರ, ಅವ್ಯಾಹತವಾಗಿ ನಡೀತಿತ್ತು.



    ನಿಮಗೆ ಅಚ್ಚರಿಯಾಗೋ ಮತ್ತೊಂದು ವಿಷ್ಯ ಏನ್ ಗೊತ್ತಾ? ಚೆನ್ನೈನ ಮೂಲೆಯಲ್ಲಿ ಕೂತ್ಕೊಂಡು, ದೇಶಾದ್ಯಂತ ತನ್ನ ಅಕ್ರಮ ಲಾಟರಿ ದಂಧೆಯನ್ನ ವಿಸ್ತರಿಸಿದ ಈ ಸ್ಯಾಂಟಿಗೋ ಮಾರ್ಟಿನ್​, ಭಾರತದವನೇ ಅಲ್ಲ.. ಬರ್ಮಾ ದೇಶದಿಂದ ಬರಿಗೈನಲ್ಲಿ ಬಂದು, ಭಾರತದಲ್ಲಿ ಲಾಟರಿ ಸಾಮ್ರಾಜ್ಯವನ್ನೇ ಸ್ಥಾಪನೆ ಮಾಡಿದ್ದ.. ಸಾವಿರಾರು ಕೋಟಿಗಳ ಒಡೆಯನಾಗಿದ್ದ..



    ಬರ್ಮಾ ದೇಶದಲ್ಲಿ ಪ್ರವಾಹ ಬಂದು ಮನೆ ಮಠ ಕುಟುಂಬವನ್ನೆಲ್ಲಾ ಕಳ್ಕೊಂಡು, ಆಸರೆಗಾಗಿ ಭಾರತಕ್ಕೆ ಬಂದ ಅನಾಥ ಈತ.. ಬರೀ ಕೈನಲ್ಲಿ ದೇಶ ಬಿಟ್ಟು ಬಂದವನು, ಸೀದ ಹೋಗಿದ್ದು ತಮಿಳುನಾಡಿಗೆ.. ಇಲ್ಲಿನ ಕೊಯಮುತ್ತೂರಿನಲ್ಲಿ ನೆಲೆ ಕಂಡುಕೊಂಡ ಮಾರ್ಟಿನ್​, ತಿನ್ನೋಕೆ ಅನ್ನ ಇಲ್ಲದೆ ಒದ್ದಾಡ್ತಿದ್ದ ವ್ಯಕ್ತಿ.. ಹಸಿವನ್ನು ತಾಳೋಕೆ ಆಗದೇ ತುತ್ತು ಅನ್ನಕ್ಕಾಗಿ ಲಾಟರಿ ಅಂಗಡೀಗೆ ಕೆಲಸಕ್ಕೆ ಸೇರ್ಕೊತಾನೆ.. ಅಲ್ಲಿಂದ್ಲೇ ನೋಡಿ.. ಈತನ ಲಾಟರಿ ನಂಟು ಬೆಳೆಯೋದು..



    ಮೊದಲಿಗೆ ಲಾಟರಿ ಟಿಕೇಟ್ ಮಾರೋದಕ್ಕೆ ಶುರುಮಾಡಿದ ಮಾರ್ಟಿನ್​, ನಂತರ ತಾನೇ ಒಂದು ಲಾಟರಿ ಆಂಗಡಿ ಇಟ್ಕೊಳ್ತಾನೆ. ಆನಂತರ ಮಾರ್ಟಿನ್ ಬೆಳೆದು ನಿಂತ ಪರಿ ನಿಜಕ್ಕೂ ದೇಶದ ಎಂಥಾ ದೊಡ್ಡ ದೊಡ್ಡ ಉದ್ಯಮಿಗಳೂ ಕೂಡ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂಥಾದ್ದು..

   

    ಯಸ್, ಮಾರ್ಟಿನ್ ನೋಡ ನೋಡ್ತಿದ್ದಹಾಗೆ ತಮಿಳುನಾಡಿನಲ್ಲೇ ಕೂತು ದೇಶದ ಲಾಟರಿ ವ್ಯವಸ್ಥೆಯ ಮೇಲೆ ಎಂಥಾ ಹಿಡಿತ ಸಾಧಿಸೋಕೆ ಶುರುಮಾಡ್ದ ಅಂದ್ರೆ ಸರ್ಕಾರಿ ಲಾಟರಿಗಳನ್ನೇ ಮೂಲೆಗುಂಪು ಮಾಡಿ ಖಾಸಗಿ ಲಾಟರಿ ಟಿಕೇಟ್​ಗಳನ್ನ ಚಲಾವಣೆಗೆ ತರ್ತಾನೆ.. ಹಾಗೆ ಆತ ಶುರುಮಾಡಿದ್ದ ಮೊಟ್ಟಮೊದಲ ಖಾಸಗಿ ಲಾಟರಿ ಹೆಸರು ತಮಿಳ್ ಅರಸಿ..



    ನಂತರ ಅಸ್ಸಾಂ. ಸಿಕ್ಕೀಂ ಅರುಣಾಚಲ ಪ್ರದೇಶ, ಮಣಿಪುರ ಮೇಘಾಲಯ ಹೀಗೆ ಹತ್ತಾರು ರಾಜ್ಯಗಳ ಹೆಸರಲ್ಲಿ ಸ್ವತಃ ತಾನೇ 20ಕ್ಕೂ ಹೆಚ್ಚು ವಿವಿಧ ಲಾಟರಿ ಟಿಕೆಟನ್ನ ದೇಶದಾಂದ್ಯಂತ ಸುನಾಮಿಯಂತೆ ಶುರುಮಾಡಿದ್ದ. 12 ರಾಜ್ಯಗಳು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈತನ ಲಾಟರಿ ದಂಧೆ ನಡೀತಾ ಇತ್ತು.. ಕರ್ನಾಟಕದಂತಹ ಲಾಟರಿ ನಿಷೇಧಿತ ರಾಜ್ಯಗಳಲ್ಲೂ ಈತ ತನ್ನ ಅಕ್ರಮ ಜಾಲವನ್ನ ಅವ್ಯಾಹತವಾಗಿ ಕಾರ್ಯ ನಿರ್ವಹಿಸ್ತಾನೇ ಇತ್ತು..



    ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಪ್ರತಿ ದಿನಕ್ಕೆ 1.2 ಕೋಟಿ ಲಾಟರಿ ಟಿಕೆಟ್ಗಳು ಮಾರಾಟವಾಗ್ತಿದ್ವು.. ಬರೀ ಕೈನಲ್ಲಿ ಬಂದು ತುತ್ತು ಅನ್ನಕ್ಕೂ ಪರದಾಡ್ತಿದ್ದ ಈತನ ವಾರ್ಷಿಕ ಆದಾಯ 14 ಸಾವಿರ ಕೋಟಿ ಮುಟ್ಟಿತ್ತು.. ಆಯಾ ರಾಜ್ಯಗಳಿಗೆ ತೆರಿಗೆ ವಂಚನೆ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಕೋಟಿಯ ವ್ಯವಹಾರ ನಡೆಸ್ತಾ ಇದ್ದ ಈ ಸ್ಯಾಂಟಿಗೋ ಮಾರ್ಟಿನ್​.

   

    ಯಾವಾಗ ಈ ಮಾರ್ಟಿನ್ ಎಗ್ಗುಸಿಗ್ಗಿಲ್ಲದೇ ಲಾಟರಿ ದಂಧೆಯನ್ನ ನಡೆಸ್ತಾನೋ, ಅದು ಆತನ ಬುಡಕ್ಕೇ ಬಂದು ಬಿಡುತ್ತೆ.. ಕೇರಳಾ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿ, ಸರ್ಕಾರಕ್ಕೆ 40 ಕೋಟಿ ತೆರೆಗೆ ವಂಚನೆ ಮಾಡಿರುವ ಬಗ್ಗೆ ಕೇಸ್ ದಾಖಲಾಗುತ್ತೆ.. ಇದರ ಪರಿಣಾಮವಾಗಿ ಸಿಬಿಐ ಅಧಿಕಾರಿಗಳು ಈ ಸ್ಯಾಂಟಿಗೋ ಮಾರ್ಟಿನ್​ನನ್ನ ಬಂಧಿಸ್ತಾರೆ.



    ಸ್ಯಾಂಟಿಗೋ ಮಾರ್ಟಿನ್​ ಬಂಧನಕ್ಕೊಳಗಾದ್ರೂ ಈತ ಕಟ್ಟಿದ ಲಾಟರಿ ಸಾಮ್ರಾಜ್ಯ, ಇಂದಿಗೂ ಗುಪ್ತವಾಗಿ ಕಾರ್ಯನಿರ್ವಹಿಸ್ತಾನೇ ಇದೆ. ಇಂಥಾ ಲಾಟರಿ ಕಿಂಗ್​ಪಿನ್​​ ಮಗಾನೇ ಈಗ ಕೇಂದ್ರದಲ್ಲಿ ಸರ್ಕಾರ ರಚಿಸಿರೋ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾನೆ. ಬಿಜೆಪಿಯ ಹಿರಿಯ ಮುಖಂಡರು ರೆಡ್ ಕಾರ್ಪೆಟ್ ಹಾಕಿ ಮಾರ್ಟಿನ್​ ಮಗ ಚಾರ್ಲ್ಸ್​ ಮಾರ್ಟಿನ್​ರನ್ನ ಪಕ್ಷಕ್ಕೆ ಬರಮಾಡಿಕೊಂಡಿದೆ.

   

    ಇನ್ನೊಂದು ಅಚ್ಚರಿಯ ವಿಷ್ಯಾ ಏನ್​ ಗೊತ್ತಾ? ಕಳೆದ ಚುನಾವಣೆ ಟೈಮಲ್ಲಿ ಚೆನ್ನೈಗೆ ಬಂದಿದ್ದ ಮೋದಿ, ವೇದಿಕೆ ಹಂಚಿಕೊಂಡಿದ್ದು ಇದೇ ಲಾಟರಿ ಕಿಂಗ್​ಪಿನ್ ಪತ್ನಿ ಲಿಮಾ ರೋಸ್​​ ಜೊತೆ. ಈ ಎಲ್ಲಾ ಘಟನೆಗಳನ್ನು ನೋಡಿದ್ರೆ, ಲಾಟರಿ ಕಿಂಗ್​ಪಿನ್​ ಮಾರ್ಟಿನ್​​ ಮಗನನ್ನ ಪಕ್ಷಕ್ಕೆ ಸೇರಿಸಿಕೊಳ್ಳೋದಕ್ಕೆ ಬಿಜೆಪಿ ಹಿಂದಿನಿಂದಲೂ ಪ್ರಯತ್ನಿಸ್ತಾನೇ ಇತ್ತು ಅನ್ನೋದು ಕನ್ಫರ್ಮ ಆಗುತ್ತೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿಯೇ ಈಗ ಬಿಜೆಪಿ ಸೇರ್ಪಡೆಗೊಂಡಿದ್ದಾನೆ ಲಾಟರಿ ದಂಧೆಯ ಕಿಂಗ್​ಪಿನ್​ ಮಗ ಚಾರ್ಲ್ಸ್​​ ಮಾರ್ಟಿನ್​..    



ಮೋದಿ ಅಡ್ವಾಣಿಯಂಥ ಘಟಾನುಘಟಿಗಳು ಇರೋ ಬಿಜೆಪಿಯಲ್ಲಿ ಚಾರ್ಲ್ಸ್​ ಮಾರ್ಟಿನ್​​ ಅಷ್ಟೋಂದು ಅನಿವಾರ್ಯಾನಾ? ವಿವಾದಗಳಿಗೂ ಕೇರ್ ಮಾಡದೇ ಚಾರ್ಲ್ಸ್​​ರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ಯಾಕೆ? ಅನ್ನೋ ಅನುಮಾನಗಳು ನಿಮ್ಮನ್ನು ಕಾಡಬಹುದು. ಆದ್ರೆ ಲಾಟರಿ ದಂಧೆಯಲ್ಲಿ ಮಿಂದೆದ್ದ ಈ ಕುಟುಂಬ, ಈ ಹಿಂದಿನಿಂದಲೂ ವಿವಿಧ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡೇ ಬಂದಿತ್ತು



ಪಾರಿ ರಾಜನ್​​ ಬಲೆಗೆ ಬೀಳ್ತಿದ್ದಹಾಗೆ ಅಕ್ರಮ ಲಾಟರಿ ದಂಧೆಯ ತನಿಖೆ ಚುರುಕುಕೊಂಡಿತ್ತು.. ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಸೇರಿದಂತೆ ರಾಜ್ಯದ ಉನ್ನತ ಅಧಿಕಾರಿಗಳ ತಲೆದಂಡ ಕೂಡ ಆಯ್ತು.. ಆಗ್ಲೇ ನೋಡಿ.. ಈ ಲಾರಿ ದಂಧೆ ಆಳವಾಗಿ ಬೇರೂರಿರೋದು ಬಯಲಾಗಿದ್ದು.. ಅದರ ಬೇರನ್ನು ಹುಡುಕಿಕೊಂಡು ಹೋದಾಗ್ಲೇ ನೋಡಿ.. ಅಕ್ರಮ ಲಾಟರಿ ದಂಧೆಯ ಕಿಂಗ್​ಪಿನ್​​ ಈ ಸ್ಯಾಂಟಿಗೋ ಮಾರ್ಟಿನ್​​ ಹೆಸರು ಬಯಲಾಗಿದ್ದು..





   ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯೊಂದಿಗಿನ ಈ ಫೋಟೋನೋಡಿದ್ರೆ ಎಂಥವರಿಗೂ ಅರ್ಥವಾಗುತ್ತೆ. ಲಾಟರಿ ಕಿಂಗ್ ಮಾರ್ಟಿನ್ ಮತ್ತು ರಾಜ್ಯವನ್ನಾಳೋ ಸಿಎಂಗಳ ನಡುವೆ ಸಂಬಂಧ ಇತ್ತು ಅಂತ.. ಅಷ್ಟೇ ಅಲ್ಲ, ತಮಿಳು ನಾಡಲ್ಲಿ ಲಾಟರಿ ನಿಷೇಧ ಮಾಡಿದ ಜಯಲಲಿತಾರನ್ನೂ ಬುಟ್ಟಿಗೆ ಬೀಳಿಸಿಕೊಂಡಿದ್ರು ಈ ಮಾರ್ಟಿನ್.

   

    ರಾಜ್ಯದ ಸಿಎಂಗಳನ್ನು ಬಿಟ್ಟಿಗೆ ಹಾಕಿಕೊಮಡಿದ್ದ ಮಾರ್ಟಿನ್​, ಬರೀ ಲಾಟರಿ ದಂಧೆ ಮಾತ್ರವಲ್ಲ.. ರಿಯಲ್ ಎಸ್ಟೇಟ್​ ದಂಧೆಯಲ್ಲೂ ತೊಡಗಿಸಿಕೊಂಡಿದ್ರು.. ಹೀಗಾಗಿ ಹಲವು ಭೂ ವಿವಾದಗಳಲ್ಲೂ ಈತನನ್ನ ಸುತ್ತಿಕೊಂಡಿವೆ. ಸದ್ಯಕ್ಕೆ ಜಾಮೀನಿನ ಮೇಲೆ ಬಿಡುಗಡೆಯಾಗಿರೋ ಮಾರ್ಟಿನ್​ ಮೇಲೆ 32 ಕೇಸುಗಳು ಕತ್ತಿಯಂತೆ ನೇತಾಡ್ತಿವೆ. ವಿಚಾರಣೆ ಇನ್ನೂ ನಡೀತಾನೇ ಇದೆ. ತನ್ನ ತಂದೆಯನ್ನ ಹೇಗಾದ್ರೂ ಮಾಡಿ ಈ ಎಲ್ಲಾ ಪ್ರಕರಣಗಳಿಂದ ಮುಕ್ತಗೊಳಿಸಬೇಕು ಅನ್ನೋದು ಚಾರ್ಲ್ಸ್​​ ಲೆಕ್ಕಾಚಾರ. ಇದೇ ಕಾರಣಕ್ಕೆ ಈಗ ಅಧಿಕಾರದಲ್ಲಿರೋ ಬಿಜೆಪಿಗೆ ಚಾರ್ಲ್ಸ್​​ ಸೇರ್ಪಡೆಗೊಂಡಿದ್ದಾನೆ ಅನ್ನೋದು ರಾಜಕೀಯ ತಜ್ಞರ ಲೆಕ್ಕಾಚಾರ.

   

    ಇನ್ನು ತಮಿಳುನಾಡಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ಪಕ್ಷಗಳನ್ನ ಬಿಟ್ರೆ ಬೇರೆ ಯಾವ ಪಕ್ಷಕ್ಕೂ ಅಲ್ಲಿ ಸ್ಥಾನವಿಲ್ಲ.. ಹೀಗಾಗಿ ಈ ನೆಲದಲ್ಲಿ ಕಮಲ ಅರಳಿಸಬೇಕು ಅನ್ನೋದು ಬಿಜೆಪಿಯ ಲೆಕ್ಕಾಚಾರ.. ಈ ಕನಸು ನನಸಾಗಬೇಕಾದ್ರೆ, ಈ ಚಾರ್ಲ್ಸ್​ ಮಾಟಿರ್ನ್​ ಬಿಜೆಪಿಗೆ ಅನಿವಾರ್ಯ.. ಇದೇ ಕಾರಣಕ್ಕೆ ಕಣ್ರಿ.. ಚಾರ್ಲ್ಸ್​ ಮಾರ್ಟಿನ್​​ ತಂದೆ ಲಾಟರಿ ಕಿಂಗ್​ಪಿನ್ ಅಂತ ಗೊತ್ತಿದ್ರೂ, ಈತನನ್ನ ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ.



    ಆದ್ರೆ ಈ ಹಿಂದೆ ಸ್ವಲ್ಪ ಎಚ್ಚರ ತಪ್ಪಿ ಸುಷ್ಮಾ ಸ್ವರಾಜ್​, ಲಲಿತ್ ಮೋದಿಗೆ ಸಹಾಯ ಮಾಡಿದ್ದೇ ಈಗ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಬರೀ ಸುಷ್ಮಾ ಸ್ವರಾಜ್​ ಮಾತ್ರವಲ್ಲ.. ರಾಜಸ್ಥಾನ ಸಿಎಂ ವಸುಂಧರಾ ರಾಜೆಗೂ ಲಲಿತ್ ಕಂಟಕ ತಂದೊಡ್ಡಿದ್ದಾರೆ. ಈ ಸಮಸ್ಯೆಯಿಂದ ಪಾರಾಗೋ ಮುನ್ನವೇ, ಈಗ ಬಿಜೆಪಿ ಲಾಟರಿ ಕಿಂಗ್​ಪಿನ್​​ ಮಗ ಚಾರ್ಲ್ಸ್​ ಮಾರ್ಟಿನ್​ರನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ.



    ಈಗಾಗಲೇ ಇದು ದೊಡ್ಡ ಬಿರುಗಾಳಿಯಂತೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಲಾಟರಿ ಕಿಂಗ್​ಪಿನ್​ ಮಗನಿಗೆ ಬಿಜೆಪಿ ಮಣೆ ಹಾಕಿರೋದು ಮೋದಿ ಸರ್ಕಾರದ ಘನತೆಯನ್ನ ಕುಗ್ಗಿಸುವಂತೆ ಮಾಡಿದೆ.



    ಆದ್ರೆ ಪ್ರತಿಪಕ್ಷಗಳ ಈ ಟೀಕೆಗೆ ಬಿಜೆಪಿ ಸಮರ್ಥನೆ ನೀಡಿದೆ. ಸ್ಯಾಂಟೆಗೋ ಮಾರ್ಟಿನ್​ ಮೇಲೆ ಕೇಸುಗಳಿವೆ. ಆದ್ರೆ ಆತನ ಮಗ ಚಾರ್ಲ್ಸ್​ ಮಾರ್ಟಿನ್​ ಮೇಲೆ ಯಾವ ಕೇಸುಗಳೂ ಇಲ್ಲ.. ಈತ ಸ್ವಚ್ಛ ವ್ಯಕ್ತಿ.. ಹೀಗಾಗಿ ಚಾರ್ಲ್ಸ್​ ಮಾರ್ಟಿನ್​ರನ್ನ ಬಿಜೆಪಿಗೆ ಸೇರಿಸಿಕೊಂಡಿದ್ದೇವೆ ಅಂತ ಸಮಜಾಯಿಷಿ ನೀಡ್ತಾರೆ..



    ಬಿಜೆಪಿಯವರು ಏನೇ ಸಮರ್ಥನೆ ಮಾಡ್ಕೊಂಡಿರಬಹುದು. ಆದ್ರೆ, ಚಾರ್ಲ್ಸ್​​ ಮಾರ್ಟಿನ್​ರನ್ನ ಪಕ್ಷಕ್ಕೆ ಸೇರಿಸಿಕೊಂಡಿರೋದು ಬಿಜೆಪಿ ವರ್ಚಸ್ಸನ್ನ ಕುಗ್ಗಿಸಿದೆ. ಈಗಾಗಲೇ ಲಲಿತ್ ಮೋದಿಯಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿಗೆ ಚಾರ್ಲ್ಸ್​ ಮಾರ್ಟಿನ್​ ಸೇರ್ಪಡೆ ಮತ್ತಷ್ಟು ಕಂಟಕವಾಗಲಿದೆ ಅನ್ನೋದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ.



    ತಮಿಳುನಾಡಿನಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಬೇಕು ಅನ್ನೋ ಒಂದೇ ಉದ್ದೇಶದಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಳ್ತಾ? ಅಥವ ಆತನ ತಂದೆ ತಪ್ಪು ಮಾಡಿದ್ರೇನು ಚಾರ್ಲ್ಸ್​ ಮಾರ್ಟಿನ್​ ಸ್ವಚ್ಛ ವ್ಯಕ್ತಿ ಅಂತ ಈತನಿಗೆ ಮಣೆ ಹಾಕಲಾಯ್ತಾ? ಈ ಪ್ರಶ್ನೆಗಳು ಒಂದುಕಡೆ ಇರಲಿ.. ಆದ್ರೆ, ಚಾರ್ಲ್ಸ್​ ಮಾರ್ಟಿನ್​​ರನ್ನ ಪಕ್ಷಕ್ಕೆ ಸೇರಿಸಿಕೊಳ್ಳೋ ಮೊದಲು ಬಿಜೆಪಿ ಸ್ವಲ್ಪ ಯೋಚನೆ ಮಾಡ್ಬೇಕಿತ್ತು. ಯಾಕಂದ್ರೆ ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೊಸ ಸಂಕಷ್ಟ ತಂದೊಡ್ಡಿದ್ದು ಮಾತ್ರ ಸುಳ್ಳಲ್ಲ..





ಮೋದಿ, ಅಡ್ವಾಣಿಯವರಂಥ ಪ್ರಭಾವಿ ನಾಯಕರಿರೋ ಬಿಜೆಪಿ ಪಕ್ಷದಲ್ಲಿ ಲಾಟರಿ ದಂಧೆಯ ಕಿಂಗ್​ಪಿನ್​ನ ಮಗ ಕಾಣಿಸಿಕೊಂಡಿರೋದು ನಿಜಕ್ಕೂ ಶಾಗ್ತಿದೆ.. ತಂದೆ ಬಹುಕೋಟಿ ಲಾಟರಿ ಹಗರಣದಲ್ಲಿ ಜೈಲಿನ ಕಂಬಿ ಎಣಿಸ್ತಿದ್ರೆ, ಮಗ ಈಗ ಸ್ವಚ್ಛ ಆಡಳಿತದ ಸರ್ಕಾರದ ಜೊತೆ ಕೈ ಜೋಡಿಸಿದ್ದಾನೆ. ಚೆನ್ನೈನಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾನೆ ಚಾರ್ಲ್ಸ್​​ ಮಾರ್ಟಿನ್​..

Отправить комментарий

0 Комментарии