Hot Posts

10/recent/ticker-posts

ಅದಿರು ನಾಪತ್ತೆ : ಅಧಿಕಾರಿಗಳು ದನ ಮೇಯಿಸ್ತಾ ಇದ್ದಾರೆ..?

ಬೇಲೆಕೆರೆ ಅದಿರು ನಾಪತ್ತೆ ಪ್ರಕರಣ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವನ್ನು ಉಂಟು ಮಾಡಿದೆ. ಸುಮಾರು 20 ಸಾವಿರ ಕೋಟಿ ಮೌಲ್ಯದ ಅದಿರು ಏಕಾ ಏಕಿ ಕಾಣಿಯಾಗಿದೆ ಅಂದ್ರೆ ಅಲ್ಲಿನ ಭದ್ರತೆ ಹೇಗಿರಬೇಕು..? ಇದೆಲ್ಲ ವ್ಯವಸ್ಥಿತ ತಂತ್ರ ಎಂಬ ಅನುಮಾನವೂ ಅಲ್ಲಿನ ಜನರು ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೇ ಆಗಿದ್ರೆ ಏನೋ ತಪ್ಪು ಆಗಿರಬಹುದು ಎಂದು ಸುಮ್ಮನಿರಬಹುದಾಗಿತ್ತು ಅನಿಸುತ್ತದೆ. ಆದರೆ ಈ ಪ್ರಕರಣ ಮಾಸುವ ಮುನ್ನವೇ ಕಾರವಾರ ಬಂದರಿನಲ್ಲಿ ಮತ್ತೆ 35 ಸಾವಿರ ಮೆಟ್ರಿಕ್ ಟನ್ 26-7-2010 ರಂದು ನಾಪತ್ತೆಯಾಗಿದೆ. ವಿಚಿತ್ರ ಎಂದರೆ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ 12 ಜನರ ವಿರುದ್ಧ ಕೇಸು ದಾಖಲಿಸಲಾಗಿತ್ತು ಆದರೆ ಕಾರವಾರ ಪ್ರಕರಣದಲ್ಲಿ ಸಿ. ಸ್ವಾಮಿ ಒಬ್ಬರನ್ನು ಮಾತ್ರ ಆರೋಪಿ ಎಂದು ಕೇಸು ದಾಖಲಿಸಲಾಗಿದೆ. ಕೇವಲ ಒಬ್ಬ ವ್ಯಕ್ತಿಯಿಂದ ಅಷ್ಟೊಂದು ಮೌಲ್ಯದ ಅದಿರನ್ನು ಕೊಳ್ಳೇ ಹೊಡೆಯಲು ಸಾಧ್ಯಾನಾ?


ಅಕಸ್ಮಾತ್ ಅವನೊಬ್ಬನೇ ಅದಿರು ಕದ್ದಿದ್ದರೆ ಉಳಿದವರು ಸುಮ್ಮನೇ ಇರುತ್ತಿದ್ದರೇ…? ಎಂಬುದು ಚಿಕ್ಕ ಮಗೂ ಕೂಡ ಅನುಮಾನ ಪಡುತ್ತದೆ.



ಈ ಅದಿರು ನಾಪತ್ತೆಯ ವಿರುದ್ಧ ಕಾಣದ ಕೈ ಗಳ ಕೈವಾಡವಿರುವುದು ಸ್ಪಷ್ಟವಾಗುತ್ತದೆ. ಪ್ರಭಾವೀ ವ್ಯಕ್ತಿಗಳ “ಪ್ರಭಾವ”ದಿಂದ ಕೇವಲ ಒಬ್ಬರನ್ನು ಮಾತ್ರ ಹರಕೆಯ ಕುರಿ ಮಾಡಿ ಖದೀಮರು ಮಾತ್ರ ಬಿಂದಾಸಾಗಿಯೇ ಇದ್ದಾರೆ. ತನಿಖೆ ನಡೆಸುವ ಪೋಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬುದು ರಹಸ್ಯ ಸತ್ಯ..!

ಗಣಿ ತನಿಖೆಯನ್ನು ಸಿ.ಬಿ.ಐ.ಗೆ ವಹಿಸಬೇಕು ಮತ್ತು ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ ಮೇಲೆ ಇಂಥಾ ಅದಿರು ನಾಪತ್ತೆ ಪ್ರಕರಣಗಳು ಬಯಲಿಗೆ ಬರುತ್ತಿರುವುದು ಅನುಮಾನಗಳನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.


ಇಷ್ಟೆಲ್ಲಾ ಅವಾಂತರಗಳ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಕೈ ಕಟ್ಟಿ ಕುಳಿತಿದೆ ಎಂದರೆ ನಾಚಿಕೆಗೇಡಿನ ಕೆಲಸವಲ್ಲದೇ ಮತ್ತೇನು…?

Отправить комментарий

0 Комментарии