Hot Posts

10/recent/ticker-posts

ಯಡ್ಯೂರಪ್ಪನವರು 270 ಕೋಟಿ ಹಫ್ತಾ ವಸೂಲಿ ಮಾಡಿದ್ರು

ರೆಡ್ಡಿಗಣಿಗಾರಿಕೆಯಲ್ಲಿ ಯಡ್ಡಿಗೆ 200 ಕೋಟಿ ಲಂಚ...
ಅಬ್ಬಬ್ಬಾ..!! ಪ್ರಚಲಿತ ರಾಜಕೀಯ ವಿದ್ಯುಮಾನಗಳು ಜನಸಾಮಾನ್ಯರನ್ನು ಹುಬ್ಬೇರಿಸುವಂತೆ ಮಾಡಿದೆ.. ಮೊದಲ ಬಾರಿಗೆ ಆಡಳಿತಕ್ಕೆ ಬಂದಿರುವ ಬಿ.ಜೆ.ಪಿ ಪಕ್ಷ ಇದೇ ಮೊದಲ ಬಾರಿಗೆ ಇಷ್ಟೋಂದು ಹಗರಣಗಳಲ್ಲಿ ಭಾಗಿಯಾಗಿರುವುದನ್ನು ಕೇಳಿದ್ರೆ ಸಾರ್ವಜನಿಕರನ್ನೇ ದಿಗ್ಭ್ರಾಂತವಾಗಿಸಿದೆ..


ಕಣ್ಣೀರು ಹಾಕಿ ಕೋಟಿ ಕೋಟಿ ಕನ್ನಡಿಗರ ಮನ ಗೆದ್ದ ಯಡ್ಯೂರಪ್ಪ ಜನ ಸಾಮಾನ್ಯರ ಕಣ್ಣಿಗೇ ಮಣ್ಣೆರಚಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಅನ್ನೋ ಭಯಾನಕ ಸತ್ಯ ಇದೀಗ ಬಯಲಾಗಿದೆ. ನೆನ್ನೆಯಷ್ಟೇ ಅಕ್ರಮಗಣಿಗಾರಿಕೆಯ ಆರೋಪ ಹೊತ್ತಿರುವ ಗಾಲಿ ಜನಾರ್ಧನ ರೆಡ್ಡಿಯ ಬಾಯಿಂದ ಭಯಾನಕ ಸತ್ಯ ಹೊರಬೀಳುತ್ತಿದ್ದಂತೆ, ಇಂದು ಮತ್ತೊಂದು ಆಘಾತಕಾರಿ ಸತ್ಯವನ್ನು ಸ್ವಾಭಿಮಾನಿ ಪಕ್ಷದ ಶ್ರೀರಾಮುಲು ಹೊರಹಾಕಿದ್ದಾರೆ..
ಗದುಗಿನ ತೋಟಗಾರಿ ಮಠಕ್ಕೆ ಭೇಟಿ ನೀಡಿದ ಶ್ರೀ ರಾಮುಲು ಮಠಾಧೀಶರೊಂದಿಗೆ ಮಾತನಾಡುತ್ತಿದ್ದಾಗ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬಿ.ಜೆ.ಪಿ. ಪಕ್ಷಕ್ಕೆ ನಾವು ಬಹಳಷ್ಟು ಸಹಾಯ ಮಾಡಿದ್ದೆವು.. ತಿಂಗಳಿಗೆ 10 ಕೋಟಿ ರೂಪಾಯಿಗಳಂತೆ ಸುಮಾರು 7 ತಿಂಗಳವರೆಗೆ ನೀಡಿದ್ದೇವೆ. ಅಷ್ಟೇ ಅಲ್ಲಾ ಪಕ್ಷ ತೊಂದರೆಯಲ್ಲಿದ್ದಾಗ 200 ಕೋಟಿ ರೂಪಾಯಿಗಳನ್ನು ಒಂದೇಬಾರಿ ನೀಡಿದ್ಧೇವೆ..  ಆದ್ರೆ ಇಂದು ನಮ್ಮನ್ನೇ ಹಗರಣಗಳಲ್ಲಿ ಸಿಲುಕಿಸಿದ್ದಾರೆ. ಇದ್ರಲ್ಲಿ ಮಾಜಿ ಮುಖ್ಯ ಮಂತ್ರಿ ಯಡ್ಯೂರಪ್ಪನವರೆ ಸೂತ್ರಧಾರಿ ಎಂಬ ಆತಂಕಕಾರಿ ಅಂಶವನ್ನು ಶ್ರೀ ರಾಮುಲು ಹೇಳಿದ್ದಾರೆ. ಆದ್ರೆ ಇಷ್ಟೋದು ಹಣ ರೆಡ್ಡಿ ಬ್ರದರ್ಸ್ ಕೊಟ್ಟಿದ್ದಾರೆ ಅಂದ್ರೆ ಅದರ ಹಿಂದೆ ಅಕ್ರಮ ಗಣಿಗಾರಿಕೆ ಅನ್ನೋ ದೊಡ್ಡ ಅಸ್ತ್ರವನ್ನೇ ಇಟ್ಟುಕೊಂಡಿದ್ದಾರೆ.. ಅಕ್ರಮ ಗಣಿಗಾರಿಕೆಯಿಂದ ಮಾಜಿ ಮುಖ್ಯ ಮಂತ್ರಿ ಯಡ್ಯೂರಪ್ಪನವರು ರೆಡ್ಡಿ ಬ್ರದರ್ಸ್ ಗಳಿಂದ ಪ್ರತಿ ತಿಂಗಳೂ ಹಫ್ತಾ ವಸೂಲಿ ಮಾಡ್ತಿದ್ರು.. ಇದೆಲ್ಲಾ ನೋಡ್ತಿದ್ರೆ ಮುಖ್ಯಮಂತ್ರಿಗಳೇ ಅಕ್ರಮಗಣಿಗಾರಿಕೆ ನಡೆಸುವಂತೆ ಅಧಿಕೃತ ಪರವಾನಗಿ ನೀಡಿದಂತಾಗಿದೆ..  ಒಟ್ಟಾರೆಯಾಗಿ ಸುಮಾರು 270 ಕೋಟಿ ರೂಪಾಯಿಗಳನ್ನು ಯಡ್ಯೂರಪ್ಪನವರು ಗುಳುಂ ಮಾಡಿದ್ದಾರೆ. ಆದರ್ಶ  ಡೆವೆಲಪರ್ಸ್ ಹಗರಣ, ಪ್ರೇರಣಾ ಟ್ರಸ್ಟ್ ಹಗರಣ ಸೇರಿದಂತೆ ಯಡ್ಯೂರಪ್ಪನವರೂ ಕೂಡಾ ಬಹಳಷ್ಟು ಹಣವನ್ನು ಲೂಟಿ ಮಾಡುವುದರ ಮೂಲಕ ಕೋಟಿ ಕೋಟಿ ನುಂಗಿ ಏನೂ ಗೊತ್ತಿಲ್ಲದಂತೆ ಅನ್ಯಾಯವಾಗಿದೆ, ಅನ್ಯಾಯವಾಗಿದೆ ಅಂತ ಮತ್ತೆ ಕಣ್ಣೀರು ಹಾಕ್ತಾಇದ್ದಾರೆ. ಒಮ್ಮೆ ಕಣ್ಣೀರು ಹಾಕಿ ಅಧಿಕಾರ ಹಿಡಿದಿದ್ದಕ್ಕೆ ಇಷ್ಟೋಂದು ಹಗರಣಗಳು ಮಾಡಿ ಕರ್ನಾಟಕವನ್ನು ಲೂಟಿ ಮಾಡಿದ್ದಾರೆ. ಮತ್ತೊಮ್ಮೆ ಇವರ ಕಣ್ಣೀರಿಗೆ ಜನ ಮರುಳಾದ್ರೆ ಕರ್ನಾಟಕ ಯಾವ ಸ್ಥಿತಿಗೆ ತಲುಪುತ್ತೆ ಅಂತ ಯೋಚಿಸಿ....!!


ರಾಜಕೀಯ ಪುಡಾರಿಗಳ ಕಣ್ಣೀರು ದೇಶ ಲೂಟಿ ಮಾಡಲು ಬಳಸುವಂಥ ಮೊಸಳೆ ಕಣ್ಣೀರು..!!




ಹಣ ಯಾತಕ್ಕಾಗಿ ಬಳಸಿದ್ದಾರೆ..?
ಅಕ್ರಮ ಗಣಿಗಾರಿಕೆಯ ಹಣವನ್ನು ಆಪರೇಷನ್ ಕಮಲಕ್ಕಾಗಿ ಬಳಸಿದ್ದಾರೆ ಅನ್ನೋದು ಮೇಲ್ನೋಟಕ್ಕೆ, ಖಚಿತವಾಗಿ ತಿಳಿದು ಬಂದಿರೋ ಮಾಹಿತಿಯಾಗಿದೆ.
ಸರ್ಕಾರ ರಚನೆಗೆ ಬಿ.ಜೆ.ಪಿ ಪಕ್ಷಕ್ಕೆ ಸಾಕಷ್ಟು ಜನ ಬೆಂಬಲ ನೀಡಿರಲಿಲ್ಲ.. ಹೀಗಾಗಿ ಪಕ್ಷೇತರನ್ನು ತಮ್ಮತ್ತ ಸೆಳೆಯುವಲ್ಲಿ ಕೋಟಿ ಕೋಟಿ ಹಣವನ್ನು ಚೆಲ್ಲಿದ್ದಾರೆ.
ನಂತರ ಪಕ್ಷೇತರರು ಸಹಕರಿಸದಿದ್ದಾಗ ಆಪರೇಷನ್ ಕಮಲದ ಮೂಲಕ  ಜನ ಬೆಂಬಲವನ್ನು ಗಳಿಸುವಲ್ಲಿ ಈ ಹಣ ಪ್ರಮುಖ ಪಾತ್ರ ವಹಿಸಿದೆ ಅನ್ನೋದು ತಿಳಿದು ಬರ‍್ತಾ ಇದೆ.
ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮೊದಲಾದ ಚುನಾವಣೆಗಳಲ್ಲಿ ಹಣವನ್ನು ಬೇಕಾಬಿಟ್ಟಿ ಹಣ ಚೆಲ್ಲಿ ಗೆಲುವನ್ನು ತಮ್ಮದಾಗಿಸಿದ್ದಾರೆ..


ಇದು ಅಕ್ರಮ ಗಣಿಗಾರಿಕೆಯ ಹಿಂದಿನ ಕಹಿ ಸತ್ಯವಾಗಿದೆ.

Отправить комментарий

0 Комментарии