Hot Posts

10/recent/ticker-posts

ಸಮಾಜದಿಂದ ದೂರವಾದವರು..!!



ಅಸಹ್ಯ ಎಂದು ಭಾವಿಸೋರು ಎಂದಿಗೂ ಕಲಾವಿದರಾಗೋಕೆ ಸಾಧ್ಯವಿಲ್ಲ..


ಡಿಸ್ಕೋ ಶಾಂತಿ, ಸಿಲ್ಕ್ ಸ್ಮಿತಾ ಮೊದಲಾದ ಕ್ಯಾಬರೆ ನಟಿಯರು ಕ್ಯಾಬರೆ ನೃತ್ಯವನ್ನು ಮಾಡ್ತಿದ್ರು ಅಂತ ಜನರು ಅಸಹ್ಯ ಅನ್ನೋದಾದ್ರೆ ಅದರ ಹಿಂದಿನ ಒಳ್ಳೆ ಸತ್ಯಾಂಶಗಳು ನಿಮಗೇನಾದ್ರೂ ಗೊತ್ತಾ.,.?  ಅವರು ಹೊಟ್ಟೇಪಾಡಿಗಾಗಿ ಕ್ಯಾಬರೆ ಮಾಡ್ತಿದ್ರು.. ಅದು ಅವರ ವೃತ್ತಿಯಷ್ಟೆ.. ಆದ್ರೆ ಪರದೆಯ ಹಿಂದೆ ಅವರಷ್ಟು ಉತ್ತಮ ಮನಸ್ಸು ನಿಮಗೇನಾದ್ರೂ ಗೊತ್ತಾ..?


ಖಂಡಿತಾ ನೀವ್ಯಾರೂ ಅದನ್ನು ಊಹಿಸೋದಕ್ಕೂ ಅಸಾಧ್ಯ ಬಿಡಿ.. ಪರದೆಯ ಮುಂದೆ ಆ ರೀತಿ ನಟಿಸೋದು ಅವರ ವೃತ್ತಿ... ಆದ್ರೆ ನಂತರ ಅವರು ಆ ಸಿನೆಮಾ ಸೆಟ್ ನಲ್ಲಿ ಕುಳಿತು ತಕ್ಷಣ ಶ್ರೀರಾಮ್ ಶ್ರೀರಾಮ್ ಶ್ರೀರಾಮ್ ಅಂತ ನೂರ ಒಂದು ಸಾರಿ ಬರೀತಾ ಇದ್ರಂತೆ.. ಯಾಕೆ ಗೊತ್ತಾ..? ತಾವು ಮಾಡ್ತಿರೋದು ಅಶ್ಲೀಲವೇ ಆಗಿರಬಹುದು. ಆದ್ರೆ ಅದು ಕಲಾವಿದೆಯ ವೃತ್ತಿ.. ಅದು ತಪ್ಪು. ಆದ್ರ ಬೇರೆ ವಿಧಿ ಇಲ್ಲ.. ಅದಕ್ಕಾಗಿ ಈ ಶ್ರೀರಾಮಜಪ ಅಂತ ಹೇಳ್ತಾರೆ ಆ ಕಲಾವಿದೆಯರು.


 ಆದ್ರೆ ಅವರ‍್ಯಾರೂ ಎಂದೂ ಕೆಟ್ಟವರಲ್ಲ.. ನಾವು ಅವರನ್ನು ನೋಡುವ ರೀತಿ ಮಾತ್ರ ಬೇರೆ ಆಗಿದೆ. ಅಷ್ಟೇ ಅಲ್ಲಾ ತಮ್ಮ ವೃತ್ತಿಯಿಂದ ತಾವು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಅನಾಥ ಮಕ್ಕಳಿಗೆ ಬಡವರಿಗೆ ಕೊಡ್ತಾ ಇದ್ರು..!! ಇದು ಯಾರಿಗಾದ್ರೂ ಗೊತ್ತಿದ್ಯಾ..?  ಕೋಟಿ ಕೋಟಿ ಲೂಟಿ ಮಾಡುವ ಭ್ರಷ್ಟಾಚಾರಿಗಳು ಇರುವ ಈ ದೇಶದಲ್ಲಿ ಇಂಥಾ ಹಲವಾರು ನಟಿಯರು ಮಾದರಿಯಾಗಿ ನಿಂತಿದ್ದಾರೆ.. ಆದ್ರೆ ಕೇವಲ ಪರದೆಯ ಮುಂದೆ ನೋಡಿ ಇವರು ಇಂಥವರೇ ಎಂದು ತೀರ್ಮಾನಿಸೋದು ತಪ್ಪಾಗುತ್ತದೆ.. ಅವರು ಹೇಗೆ ಇರಲಿ.. ಆದ್ರೆ ಅವರು ಬಡವರಿಗೆ ತುತ್ತು ಅನ್ನವನ್ನು ನೀಡಿದ್ದಾರೆ.. ಇಂಥಾ ಕೆಲಸವನ್ನು ನಾವು ಆರಿಸಿ ಕಳಿಸಿದ ಮಂತ್ರಿಗಳು ಮಾಡ್ತಾ ಇದ್ದಾರಾ..?


ಹಾದಿ ಬೀದಿಯಲ್ಲಿ ನಿಲ್ಲುವ ಮಂಗಳ ಮುಖಿಯರನ್ನು ನೋಡಿ ಅಸಹ್ಯ ಪಡುವವರೆ ಹೆಚ್ಚು.. ಆದ್ರೆ ನೀವು ಒಮ್ಮೆಯಾದ್ರೂ ಅವರ ನಿಷ್ಠಾವಂತಿಕೆಯನ್ನು ನೋಡಿದ್ದೀರಾ..? ಎಷ್ಟೋ ಜನರು ಬಸ್ಸಿನಲ್ಲಿ ಪ್ರಯಾಣ ಬೆಳೆಸುವಾಗ ಟಿಕೇಟುಗಳಲನ್ನೇ ತೆಗೆದುಕೊಳ್ಳೋದಿಲ್ಲ.. ಚೆಕಿಂಗ್ ಸಮಯದಲ್ಲಿ ಸಿಕ್ಕಾಕಿಕೊಂಡಾಗ ಮರ‍್ತೋಯ್ತು, ಈಗ ತಾನೆ ಹತ್ತಿದೆ ಅನ್ನೋ ಕುಂಟು ನೆಪವನ್ನು ಹೇಳ್ತಾರೆ.. ಆದ್ರೆ ಮಂಗಳ ಮುಖಿಯರು ಬಸ್ಸು ಹತ್ತಿದ ತಕ್ಷಣ ಟಿಕೇಟುಗಳನ್ನು ತೆಗೆದುಕೊಳ್ತಾರೆ.. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ನಾನೆ.. ಅದೊಂದು ದಿವಸ ನಾನು ಆಫೀಸ್ ನಿಂದ ಮನೆಗೆ ಹೊರಡ್ತಾ ಇದ್ದೆ.. ಇಬ್ಬರು ಮಂಗಳ ಮುಖಿಯರು ಆ ಬಸ್ಸನ್ನು ಹತ್ತಿದ್ರು.. ಮತ್ತು ಕಂಡಕ್ಟರ‍್ ಗೆ ಟಿಕೇಟ್ ಕೊಡಿ ಅಂತ ದುಡ್ಡು ಕೊಟ್ರು.. ಇರಲಿ ಬಿಡಿ ಪರ‍್ವಾಗಿಲ್ಲ.. ನೀವು ತಗೋಳ್ದಿದ್ರೂ ಏನೂ ಆಗೋದಿಲ್ಲ ಅಂತ ಕಂಡಕ್ಟರ‍್ ಹೇಳಿದ.. ಆದ್ರೆ ಅದಕ್ಕೆ ಅವರು ನೀಡಿದ ಪ್ರತ್ಯುತ್ತರ ನಿಜಕ್ಕೂ ಯಾವ ಸಾಮಾನ್ಯರಿಂದಲೂ ಕೇಳಲು ಅಸಾಧಯ.. “ ಅಣ್ಣ ಪರ‍್ವಾಗಿಲ್ಲ ಟಿಕೇಟ್ ಕೊಡಿ.. ಚೆಕಿಂಗ್ ಬಂದ್ರೆ ನ ನಿಮಗೆ ದಂಡ ಹಾಕ್ತಾರೆ.. ನಮ್ಮಿಂದ ನಿಮಗ್ಯಾಕೆ ತೊಂದರೆ ಅಣ್ಣ ಟಿಕೇಟ್ ಕೊಡಿ ಅಂತ ಹೇಳಿದ್ರು...!!
ವ್ಯತ್ಯಾಸ ಹೇಗಿದೆ ನೋಡಿ... ನಾವು ಆರಿಸಿ ಕಳುಸಿದ ಜನನಾಯಕರು “ಲಂಚ”. ಹಗರಣಗಳ ಮೂಲಕ ಜನರ ಹೊಟ್ಟೆ ಮೇಲೆ ಒಡೆದು ಬದುಕ್ತಾ ಇದ್ದಾರೆ. ಆದ್ರೆ ಸಮಾಜಕ್ಕೆ ಬೇಡವೆಂದು ದೂರವಿಡಲು ಪ್ರಯತ್ನಿಸುತ್ತಿರುವವರು ಬಡವರಿಗೆ ತುತ್ತು ಅನ್ನ ನೀಡಿ ಹಸಿವನ್ನು ನೀಗಿಸೋ ದಾರಿಯಲ್ಲಿ ಶ್ರಮಿಸಿದ್ದಾರೆ.
ಈಗ ಹೇಳಿ ಮಾನವೀಯತೆ ಯಾರಲ್ಲಿದೆ...????


ಒಟ್ಟಾರೆ ನನ್ನ ಅಭಿಪ್ರಾಯ ಇಷ್ಟೆ.. ಇನ್ನೊಬ್ಬರನ್ನು ನೋಡಿ ನಿಂದನೆ ಮಾಡೋದು ಸುಲಭ.. ಆದ್ರೆ ಅವರ ಸ್ಥಾನದಲ್ಲಿ ನಿಂತು ನೀವು ಅವರ ಕೆಲಸವನ್ನು ಮಾಡೋಕೆ ಆಗುತ್ತಾ ಅಂತ ಒಮ್ಮೆ ಯೋಚಿಸಿ.. ಆಗೋದಿಲ್ಲ ಎಂದಾದ್ರೆ ನಿಂದನೆ ಮಾಡುವ ಬದಲು ಅವರು ಮಾಡುವ ಒಳ್ಳೆಯ ಕಾರ್ಯಗಳಿಗೆ ನೀವು ಸಹಾಯ ಮಾಡಿ... ಜೀವ ಶಾಶ್ವತವಲ್ಲ.. ಬದುಕಿರುವವರೆಗೂ ಮತ್ತೊಬ್ಬರಿಗೆ ಸಹಾಯ ಹಸ್ತವನ್ನು ಚಾಚಿದ್ರೆ ಹುಟ್ಟಿದ್ದಕ್ಕೂ ಸಾರ್ಥಕತೆ ಸಿಗುತ್ತೆ.. ಈಗಲೂ ಕೂಡಾ ಕ್ಯಾಬರೆ ನಟಿಯರು ಅಂತ ನಾವು ಹಲವರನ್ನು ಗುರ್ತಿಸಿ ಮರೆಯಬಹುದು ಆದ್ರೆ ಅವರಿಂದ ಸಹಾಯ ಪಡೆದ ಅದೆಷ್ಟೋ ಜನ ಇಂದಿಗೂ ಅವರನ್ನು ಮನದಲ್ಲಿ ಆರಾಧಿಸ್ತಿದ್ದಾರೆ.. ಇದಕ್ಕಿಂತ ಇನ್ನೇನು ಬೇಕು ಸಾರ್ಥಕತೆಯ ಜೀವನಕ್ಕೆ..??






ನಿಮ್ಮ ಸವಿ ನೆನಪಿನ


 ಶೇಖ್(ಸ್ಪಿಯ)ರ‍್


9980868898

Отправить комментарий

0 Комментарии