Hot Posts

10/recent/ticker-posts

ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿ



ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿ...


ತಪ್ಪು ಮಾಡಿದ್ದಾರೆ ಅಂತ ಬೆರಳು ಮಾಡಿ ತೋರಿಸುವುದು ಸುಲಭ.. ಆದ್ರೆ ಅವರ ಸ್ಥಾನದಲ್ಲಿ ನಿಂತು ಎಂದಾದ್ರೂ ಯೋಚಿಸೋ ಮನಸ್ಸನ್ನು ಮಾತ್ರ ಯಾರೂ ಮಾಡೋದಿಲ್ಲ.. ಮಹಾತ್ಮ ಗಾಂಧಿಜಿಯವರ ಬಳಿಗೆ ಒಬ್ಬ ಮಹಿಳೆ ಬಂದು “ ಗುರುಗಳೇ ನನ್ನ ಮಗ ಯಾವಾಗ್ಲೂ ಬೆಲ್ಲ ತಿನ್ನುತ್ತಾನೆ. ದಯವಿಟ್ಟು ಅವನನ್ನು ಈ ಚಟದಿಂದ ಮುಕ್ತಿ ಮಾಡೋಕೆ ಏನಾದ್ರೂ ಉಪಾಯ ಕೊಡಿ.. ಅವನನ್ನು ಈ  ಬೆಲ್ಲ ತಿನ್ನೋ ಚಟದಿಂದ ಮುಕ್ತಗೊಳಿಸಿ ಅಂತ ಕೇಳಿಕೊಂಡ್ರು.. ಅದಕ್ಕೆ ಗಾಂಧೀಜಿ ಏನ್ ಹೇಳಿದ್ರು ಗೊತ್ತಾ..? ಒಂದು ವಾರ ಬಿಟ್ಟು ಬನ್ನಿ.. ನಾನು ಯೋಚಿಸಿ ಉಪಾಯ ಹೇಳ್ತೀನಿ.. ಅಂತ ಹೇಳಿದ್ರು..


 ಒಂದು ವಾರದ ನಂತರ ಆ ಮಹಿಳೆ ಮತ್ತೆ ಮಹಾತ್ಮಾ ಗಾಂಧೀಜಿಯವರ ಬಳಿ ಬಂದು ಕೇಳಿದ್ರು “ ಮಹಾತ್ಮರೇ ತಾವು ನನ್ನ ಮಗನ ಬೆಲ್ಲ ತಿನ್ನುವ ಚಟದಿಂದ ಮುಕ್ತಿಗೊಳಿಸಲು ಉಪಾಯ ನೀಡ್ತೀನಿ ಅಂತ ಹೇಳಿದ್ರಿ.. ದಯವಿಟ್ಟು ಉಪಾಯ ತಿಳಿಸಿ ಅಂದ್ರು.. ಅದಕ್ಕೆ ಮಹಾತ್ಮಾ ಏನ್ ಹೇಳಿದ್ರು ಗೊತ್ತಾ..? “ ನಿಮ್ಮನ್ನು ಒಂದು ವಾರ ಬಿಟ್ಟು ಬನ್ನಿ ಅಂದಿದ್ದು ಯಾಕೆ ಅಂದ್ರೆ ನಾನು ಒಂದು ವಾರಗಳ ಕಾಲ ಬೆಲ್ಲ ತಿನ್ನೋದನ್ನು ನಿಲ್ಲಿಸಿ ಪ್ರಯತ್ನ ಪಟ್ಟು ನೋಡಿದೆ.. ನನ್ನಿಂದ ಅದು ಸಾಧ್ಯವಾಗಲಿಲ್ಲ.. ಹೀಗಿರುವಾಗ ನಿಮ್ಮ ಮಗನಿಗೆ ನಾನು ಹೇಗೆ ಬುದ್ದಿ ಹೇಳೋಕೆ ಸಾಧ್ಯ..? ದಯವಿಟ್ಟು ಕ್ಷಮಿಸಿ ನನಗೆ ಆ ಅರ್ಹತೆ ಇಲ್ಲ” ಎಂದು ವಿನಮ್ರವಾಗಿ ನುಡಿದರಂತೆ ಮಹಾತ್ಮಾ..!!
ಇನ್ನೊಬ್ಬರಿಗೆ ನಾವು ಹಾಗೆ ಇರು.. ಹೀಗೆ ಇರು ಅಂತ ಹೇಳೋದು ಸುಲಭ.. ನಿಂದಿಸೋದು ಸುಲಭ.. ಆದ್ರೆ ಅವರ ಪರಿಸ್ತಿತಿಯಲ್ಲಿ ನಿಂತು ಅವರು ಮಾಡುವ ಕೆಲಸವನ್ನು ನಾವು ಮಾಡಬಹುದಾ ಅಂತ ಯೋಚಿಸಿ ನೋಡಿ..  ಯಾಕಂದ್ರೆ ಮಾಡುವುದು ಹೇಳಿದಷ್ಟು ಸುಲಭವಲ್ಲ... ಮಾಡುವವನಿಗೆ ಮಾತ್ರ ಗೊತ್ತು ತನ್ನ ಕೆಲಸದ ಪರಿಶ್ರಮ ಎಷ್ಟು ಅಂತ.


ನಿಮ್ಮ ಸವಿ ನೆನಪಿನ


 ಶೇಖ್(ಸ್ಪಿಯ)ರ‍್


9980868898

Отправить комментарий

0 Комментарии