Hot Posts

10/recent/ticker-posts

ಇತಿಹಾಸ- ಮಾರ್ಚ್ ತಿಂಗಳಲ್ಲಿ ಏನೇನು ನಡೆದಿತ್ತು..??



ಇತಿಹಾಸ- ಮಾರ್ಚ್ ತಿಂಗಳಲ್ಲಿ ಏನೇನು ನಡೆದಿತ್ತು..??


































1 1-Mar 1954 ಅಮೇರಿಕಾದ ಮೊದಲ ಜಲಜನಕದ ಬಾಂಬ್ ಅಂದ್ರೆ ಹೈಡ್ರೋಜನ್ ಬಾಂಬ್ ಅನ್ನು ಮಾರ್ಷಲ್ ದ್ವೀಪದಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಯಿತು..
2 2-Mar 1982 ಪಾಟ್ನಾದ ಬಳಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ವಿಶ್ವದ ಅತಿ ಉದ್ದವಾದ "ಮಹಾತ್ಮಾ ಗಾಂಧಿ ಸೇತುವೆ"ಯನ್ನು ಇದೇ ದಿನ ಲೋಕಾರ್ಪಣೆ ಮಾಡಲಾಯಿತು..
3 3-Mar 1918 1918ರಲ್ಲಿ---ರಷ್ಯಾ ಮತ್ತು ಜರ್ಮನಿಯ ನಡುವೆ ನಡೆಯುತ್ತಿದ್ದ ಯುದ್ಧವು "ಬ್ರೆಸ್ಟ್ ಲಿಟೋವ್ ಸ್ಕೋ" ಒಪ್ಪಂದದ ಮೂಲಕ 1918 ರ ಮಾರ್ಚ್ 3 ರಂದು ಅಂತ್ಯವಾಯಿತು..
4 4-Mar 1959 ಅಮೇರಿಕಾದ 17 ವರ್ಷದ ಬಾಲಕ "71 ಅಡಿ ಇರುವ ಕಂಬದ ಮೇಲೆ ಸತತವಾಗಿ 221 ದಿನಗಳು ಮತ್ತು 9 ಗಂಟೆಗಳ ಕಾಲ ಕೂತಿದ್ದು ವಿಶ್ವ ದಾಖಲೆ ಮಾಡಿದ್ದನು..
5 5-Mar 1851 "ದಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ" ಸಂಸ್ಥೆಯನ್ನು ಸ್ಥಾಪಿಸಲಾಯಿತು
6 6-Mar 1957 ಘಾನ ಅಂದ್ರೆ ಈಗಿನ ಗೋಲ್ಡ್ ಕಾಸ್ಟ್ ದೇಶ ಮತ್ತು ಮಲಯ ದೇಶಗಳು ಸ್ವತಂತ್ರಗೊಂಡವು..
7 7-Mar 1987 ಅಲಹಾಬಾದ್ ನಲ್ಲಿ ನಡೆದ, ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಸುನೀಲ್ ಗವಾಸ್ಕರ್ ತಮ್ಮ ಹತ್ತು ಸಾವಿರ ರನ್ ಅನ್ನು ಪೂರ್ಣಗೊಳಿಸಿದರು..
8 8-Mar 1776 ಇಂಗ್ಲೆಂಡಿನ ವಿಜ್ಞಾನಿ, ಜೇಮ್ಸ್ ವ್ಯಾಟ್ ಸಂಶೋಧಿಸಿದ "ಸ್ಟೀಮ್ ಇಂಜಿನ್" ಅಂದ್ರೆ ಉಗಿ ಯಂತ್ರವನ್ನು ಇಂಗ್ಲೆಂಡ್ ನ "ಟಪ್ ಟನ್" ಎಂಬಲ್ಲಿ ಚಲಿಸಲಾಯಿತು..
9 9-Mar 1846 ಮೊದಲ ಸಿಖ್ ಯುದ್ಧವು ಕೊನೆಗೊಂಡ ಪರಿಣಾಮ ಸಿಖ್ ಸರ್ಕಾರವು "ಜಲಂದರ್ ಧೋಅಬ್ ಮತ್ತು ಕಾಶ್ಮೀರ ಪ್ರದೇಶವನ್ನು ಬ್ರಿಟೀಷರಿಗೆ ಬಿಟ್ಟುಕೊಡಲಾಯಿತು..
10 10-Mar 1977 ಯೂರೆನಸ್ ಗ್ರಹಕ್ಕೆ ಉಪಗ್ರಹ ಇರುವುದನ್ನು ಬೆಂಗಳೂರಿನ ವಿಜ್ಞಾನ ಸಂಶೋಧಕರು ಪ್ರಕಟಿಸಿದರು..
11 11-Mar 1990 ರಷ್ಯಾ ಸಾಮ್ರಾಜ್ಯ ಮತ್ತು ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ "ಲುಥುವೇನಿಯಾ" ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು..
12 12-Mar 1930 ಉಪ್ಪಿನ ಸತ್ಯಾಗ್ರಹ ಎಂದೇ ಖ್ಯಾತಿಯಾದ 240 ಮೈಲಿಗಳ ಕಾಲ್ನಡಿಗೆಯ ದಂಡಯತ್ರೆಯನ್ನು ಮಹಾತ್ಮಾ ಗಾಂಧೀಜಿಯವರು ಇದೇ ದಿನ ಆರಂಭಿಸಿದ್ದರು..
13 13-Mar 1881 ರಷ್ಯಾದ ಜಾರ್ (ಚಕ್ರವರ್ತಿ)ಯ ಅರಮನೆಯ ಮೇಲೆ ಬಾಂಬ್ ಧಾಳಿ ನಡೆದ ಪರಿಣಾಮ ಎರಡನೆಯ ಅಲೆಗ್ಸಾಂಡರ್ ಹತ್ಯೆಯಾದನು.
14 14-Mar 1980 ಅಂತರ್ ರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರ ಕನಾರ್ಟಕದ ಪ್ರಕಾಶ್ ಪಡುಕೋಣೆ ಸ್ವೀಡಿಶ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು..
15 15-Mar 1917 ಸಾಮಾನ್ಯ ಜನರ ಪರವಾಗಿ ರಷ್ಯಾದ ಕೊನೆಯ ಚಕ್ರವರ್ತಿ ಎರಡನೆಯ ನಿಕೋಲಸ್ ಸಿಂಹಾಸನ ತ್ಯಾಗ ಮಾಡಿದರು. ಇದು ಕಮ್ಯೂನಿಸಂ ಗೆ ನಾಂದಿಯಾಯಿತು.
16 16-Mar 1961 1961-- ಟಾಂಗನಿಕ ದೇಶವು ಸ್ವತಂತ್ರವಾಗಿ ಸ್ವಯಂ ಆಡಳಿತವನ್ನು ಆರಂಭಿಸಿತು. ಮತ್ತು 1921 ರಲ್ಲಿ ರಷ್ಯಾ ಮತ್ತು ಇಂಗ್ಲೆಂಡ್ ದೇಶಗಳ ನಡುವೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ರು..
17 17-Mar 1950 1950-- "ಕ್ಯಾಲಿಫೋರ್ನಿಯಂ" ಅನ್ನೋ ಹೊಸ ವಿಕಿರಣ ಮೂಲ ವಸ್ತುವನ್ನು ಕಂಡುಹಿಡಿಯಲಾಗಿದೆ ಎಂದು ಪ್ರಕಟಿಸಲಾಯಿತು. ಮತ್ತು 1958-ರಲ್ಲಿ ಅಂತರ್ ರಾಷ್ಟ್ರೀಯ "ಮ್ಯಾರಿಟನ್" ಅನ್ನೋ ಸಂಘಟನೆಯನ್ನು ಸ್ಥಾಪಿಸಲಾಯಿತು..
18 18-Mar 1922 ಬ್ರಿಟೀಷ್ ಸರ್ಕಾರದ ವಿರುದ್ಧ ಮೊದಲನೆಯ ಅಸಹಕಾರ ಚಳುವಳಿಯನ್ನು ನಡೆಸುತ್ತಿರುವಾಗ ಮಹಾತ್ಮಾ ಯವರನ್ನು ಬಂಧಿಸಿ ಅವರಿಗೆ ಆರು ವರ್ಷ ಕಾರಾಗ್ರಹ ಶಿಕ್ಷೆಯನ್ನು ವಿಧಿಸಲಾಯಿತು..
19 19-Mar 1975 ಭಾರತದ ಉಪಗ್ರಹವಾದ ಆರ್ಯಭಟವನ್ನು ಸೋವಿಯತ್ ರಷ್ಯಾದ ಬೈಕನೋವ್ ಕೇಂದ್ರದಿಂದ ಉಡಾವಣೆ ಮಾಡಲಾಯಿತು....
20 20-Mar 1961 ಪುಣೆಯಲ್ಲಿ "ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ" ವನ್ನು ಸ್ಥಾಪಿಸಲಾಯಿತು..
21 21-Mar 1791 1791-ಲಾರ್ಡ್ ಕಾರನ್ವಾಲೀಸನು ಮೂರನೇ ಮೈಸೂರು ಯುದ್ಧದಲ್ಲಿ ಬೆಂಗಳೂರನ್ನು ಆಕ್ರಮಿಸಿಕೊಂಡು ಗೆದ್ದುಕೊಂಡನು.. ಮತ್ತು 1935 ರಲ್ಲಿ ಪರ್ಷಿಯಾಕ್ಕೆ ಇರಾನ್ ಎಂದು ನಾಮಕರಣ ಮಾಡಲಾಯಿತು..
22 22-Mar 1774 "ಬಾ ಬಾ ಬ್ಲ್ಯಾಕ್ ಶೀಪ್" ಅನ್ನೋ ಜನಪ್ರಿಯ ಶಿಶು ಗೀತೆಯನ್ನು ಒಳಗೊಂಡಿರುವ "ಟಾಮಿಥಂಬ್ಸ್ ಸಾಂಗ್ಸ್" ಪುಸ್ತಕವನ್ನು ಮಿಸೆಸ್ ಮೇರೀ ಕೂಪರ್ ಎಂಬಾಕೆ ಇದೇ ದಿನ ಮೊದಲ ಬಾರಿಗೆ ಪ್ರಕಟಿಸಿದರು
23 23-Mar 1931 ಭಾರತ ಸ್ವಾತಂತ್ರ್ಯದ ಕ್ರಾಂತಿಕಾರಿ ಯೋಧರಾದ, ಭಗತ್ ಸಿಂಗ್, ರಾಜಗುರು, ಮತ್ತು ಸುಖದೇವ್ ರವರನ್ನು ನೇಣುಗಂಬಕ್ಕೇರಿಸಲಾಯಿತು..
24 24-Mar 1924 1924--ರಲ್ಲಿ ಗ್ರೀಸ್ ದೇಶವು ಗಣರಾಜ್ಯವಾಯಿತು..ಮತ್ತು ಭಾರತದ ಅತಿ ವೇಗದ ರೈಲು "ಶತಾಬ್ದೀ ಎಕ್ಸ್ ಪ್ರೆಸ್" 1989 ರಲ್ಲಿ ದೆಹಲಿ ಮತ್ತು ಖಾನ್ ಪುರ್ ನಡುವೆ ಗಂಟೆಗೆ 160 ಕಿ.ಮಿ. ವೇಗದಲ್ಲಿ ಸಂಚಾರವನ್ನು ಆರಂಭಿಸಿತು.
25 25-Mar 2002 ಬಾಲಸೋರ್ಸ್ ಎಂಬಲ್ಲಿ ಪೈಲೆಟ್ ರಹಿತ ಯುದ್ಧ ವಿಮಾನ "ಲಕ್ಷ್ಯ" ವನ್ನು ಯಶಸ್ವಿಯಾಗಿ ಪ್ರಯೋಗಕ್ಕೆ ಒಳಪಡಿಸಲಾಯಿತು..
26 26-Mar 1902 ಸ್ವಾತಂತ್ರ ಪೂರ್ವದಲ್ಲಿ "ಇಂಪೀರಿಯಲ್ ಲೆಜಿಸ್ಲೆಟೀವ್ ಕೌನ್ಸಿಲ್" ನಲ್ಲಿ ತಮ್ಮ ಮೊದಲನೆಯ ಬಜೆಟ್ ಅನ್ನು ಮಂಡಿಸಿದರು..
27 27-Mar 1977 ಕ್ಯಾನರಿ ದ್ವೀಪಗಳ ಟೆನರಿಫೆ ವಿಮಾನ ನಿಲ್ದಾಣದಲ್ಲಿ "ಪ್ಯಾನ್ ಅಮೇರಿಕನ್ ಮತ್ತು ಕೆ.ಎಲ್.ಎಂ. ಜಂಬೋಜೆಟ್" ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 583 ಪ್ರಯಾಣಿಕರು ಪ್ರಾಣ ಕಳೆದುಕೊಂಡರು..
28 28-Mar 1979 ಪೆನ್ಸಿಲ್ ವೇನಿಯಾದ ಮಿಡ್ಲ್ ಟೌನ್ನ ತ್ರಿಮೈಲ್ ಐಲೆಂರ್ಡ್ ಸ್ಥಾವರದಲ್ಲಿ ಅತಿ ಅಪಾಯಕಾರಿಯಾದಂಥ "ವ್ಯಾಪಾರೀ ನ್ಯೂಕ್ಲಿಯರ್ ಶಕ್ತಿ ಕೇಂದ್ರ"ದಿಂದ ಅಧಿಕ ಪ್ರಮಾಣದ ವಿಕಿರಣ ವಸ್ತುಗಳು ವಾತಾವರಣಕ್ಕೆ ಚೆಲ್ಲಿದವು..
29 29-Mar 1904 ಬ್ರಿಟನ್ ನಲ್ಲಿ ಮೊದಲ ಬಾರಿಗೆ ವಿದ್ಯತ್ ರೈಲು ಸಂಚಾರ ಆರಂಭವಾಯಿತು..
30 30-Mar 1682 ಕೃಷಿ ಮತ್ತು ಪಶು ಸಾಕಾಣಿಕೆಯ ಅಭಿವೃದ್ದಿಗೆ ಸಹಾಯಕವಾಗಲಿ ಎಂದು "ಜಾನ್ ಹಫ್ಟನ್" ಎಂಬುವವರು " ಅಗ್ರಿಕಲ್ಚರ್ ಜರ್ನಲ್" ಅನ್ನು ಆರಂಭಿಸಿದರು.
31 31-Mar 1892 ಬೆರಳಚ್ಚಿನಿಂದ ಅಪರಾಧಿಯನ್ನು ಪತ್ತೆ ಹಚ್ಚುವ ಪ್ರಪಂಚದ ಮೊದಲನೆಯ "ಫಿಂಗರ್ ಪ್ರಿಂಟ್ ಬ್ಯೂರೋ"ವನ್ನು ಬುನೋಸ್ ಐರಿಸ್ ನ "ಸಾನ್ ನಿಕೋಲಸ್ ನಲ್ಲಿ ಉದ್ಘಾಟಿಸಲಾಯಿತು..

Отправить комментарий

0 Комментарии