ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ನ ಮಾಲೀಕ ವಂಜುನಾಥ ರಾಯರ ಒಬ್ಬನೇ ಮಗ. ರಘು... ಅವನಿಗೆ ಕೇವಲ 18 ವರ್ಷ ಆಗಿತ್ತು.. ತೋಟದಲ್ಲಿ ಕೆಲಸ ಮಾಡೋ ಕೂಲಿ ಬಸ್ಸಪ್ಪ ನಿಗೆ ತುಂಬಾನೇ ಹುಷಾರಿರಲಿಲ್ಲ.. ಹೀಗಾಗಿ ಅವರನ್ನು ನೋಡಿಕೊಂಡು ಬರೋಕೆ ಅಂತ ಅವರ ಗುಡಿಸಲಿಗೆ ಹೋದ.. ಅಲ್ಲಿ ಒಂದು ಸುಂದರ ಹುಡುಗಿ ಕಾಣಿಸಿದಳು.. ಕೆಸರಿನಲ್ಲಿ ಅರಳಿದ ಕಮಲದಂತಿದ್ದಳು. ಗುಲಾಬಿ ಗೂವಿನ ಬಣ್ಣದಂತಿದ್ದಳು, ಹೊಳೆವ ಚಂದ್ರನಿಗೆ ನಾಚಿಸುವಂತಿದ್ದಳು. ಅವಳಿಗೆ ಮನಸೋತ ರಘು ಅವಳ ಹತ್ರ ಹೋದ.. ಅಷ್ಟರಲ್ಲಿ ಬಸ್ಸಪ್ಪ ಗುಡಿಸಲಿನಿಂದ ಹೊರಗೆ ಬಂದ. “ ಇದೇನ್ ಚಿಕ್ ಧಣಿ..? ನೀವ್ ಇಲ್ಲೀಗಂಟಾ ಬಂದ್ ಬುಟ್ಟಿದ್ದೀರಾ..? ನನ್ನಿಂದೇನಾದ್ರೂ ತೆಪ್ ಆಯ್ತಾ ಅಂತ ಕೈ ಜೋಡಿಸಿ ಕೇಳಿದ. “ಹಾಗೇನು ಇಲ್ಲ ಬಸ್ಸಣ್ಣ, ನಿಮ್ಗ ಆರಾಮ್ ಇಲ್ಲ ಅಂತ ಗೊತ್ತಾಯ್ತು. ಅದಕ್ಕಾ ನೋಡ್ಕೊಂಡು ಹೋಗೋಣ ಅಂತ ಬಂದ್ಯ ಅಂದ.

ಮತ್ತೊಂದು ದಿನ ರಘು ಹೊಳೆಯ ಹತ್ರ ಬರ್ತಾ ಇದ್ದ. ಅವಳು ಅಲ್ಲೆ ಬಟ್ಟೇ ಒಗೀತಾ ಇದ್ಳು.. ಇವನು ಅವಳ ಹತ್ರ ಹೋಗಿ ರಮ್ಯಾ ಅಂದ.. ಅವಳು ಹಿಂದೆ ತಿರುಗಿ ನೋಡಿದಳು.. ಭಯದಿಂದ ಗಡಗಡ ನಡುಗ್ತಾ ಇದ್ದಳು. “ ಯಾಕೆ ಇಷ್ಟೋಂದು ಭಯ ಪಡ್ತಾ ಇದ್ದೀಯಾ..? ನಾನು ಹಾಗೆ ಹೋಗ್ತಾ ಇದ್ದೇ ನೀನು ಕಂಡೆ. ಅದಕ್ಕೆ ಮಾತಾಡಿಸಿದೆ. ಭಯ ಪಡಬೇಡ.. ಚನ್ನಾಗಿದಿಯಾ? ಆಂದ. ಅವಳು ಏನೂ ಮಾತಾಡದೇ ಭಯದಿಂದ ತಲೆ ತಗ್ಗಿಸಿ ಹೂ ಅಂತ ತಲೆ ಅಲ್ಲಾಡಿಸಿದಳು. ಬಟ್ಟೆ ಎಲ್ಲಾ ಒಗೆದು ಆಯ್ತಾ ಅಂತ ಕೇಳಿದ. ಅದಕ್ಕೂ ಅವಳು ತಲೆ ತಗ್ಗಿಸೀನೇ ಹೂ ಅಂದಳು. ಅವನು ಅವಳ ಕಣ್ಣುಗಳನ್ನು ನೋಡಬೇಕು ಅಂತ ತುಂಬಾ ಆಸೆ ಆಯ್ತು ಅವಳ ಗಲ್ಲವನ್ನು ಹಿಒಡಿದು ಮೇಲಕ್ಕೆತ್ತಿದ. ಅವಳಲ್ಲಿ ಭಯ ಹೆಚ್ಚಾಯ್ತು.. “ ರಮ್ಯಾ ನನ್ನ ಮದುವೆ ಆಗ್ತೀಯ“ ಅಂತ ಕೇಳಿದ. ಅವಳಿಗೆ ಇನ್ನಷ್ಟು ಭಯ ಆಯ್ತು. ಅಲ್ಲಿಂದ ಓಡಿ ಹೋದಳು. ನಂತರ ಸ್ವಲ್ಪ ದೂರ ಹೋಗಿ ನಿಂತು ಮತ್ತೊಮ್ಮೆ ರಘು ಕಡೆಗೆ ತಿರುಗಿ ನೋಡಿದಳು. ನಗು ಬೀರಿದಳು. ಟಾಟಾ ಮಾಡಿದಳು.



















ಶೇಖರ‍್ ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ ಇದನ್ನೆ ಮುಂದುವರಿಸಿ.......... ಕಥೆನು ಚನ್ನಾಗಿದೆ ನಾನು ಹೇಳ್ತಿರೋದು ಕಥಾ ವಸ್ತುವಿನ ಬಗ್ಗೆ ಮಾರಾಯ ಎನಪ್ಪ ಇಂಥ ದುರಂತ ಕತೆಗೆ ಚೆನಾಗಿದೆ ಅಂತಾನಲ್ಲಾ ಅಂತ ತಿಳ್ಕೋಬೇಡ Good Luck
ОтветитьУдалить