Hot Posts

10/recent/ticker-posts

ಆವತ್ತು ರಾತ್ರಿ ಆಫೀಸಿನಲ್ಲಿ..!!



ಆವತ್ತು ಸಮಯ ಸರಿಯಾಗಿ ರಾತ್ರಿ 9 ಗಂಟೆ ಆಗಿತ್ತು.. ಎಲ್ಲರೂ 8 ಗಂಟೆಗೇ ಮನೆಗೆ  ಹೋಗಿದ್ರು.. ಆಮೇಲೆ ಇದ್ದಕ್ಕಿದ್ದಂತೆ ಮೋಹನ್  9.30ಕ್ಕೆ ವಾಪಾಸು ಬಂದ್ರು.. ಯಾಕೆ ಮೋಹನ್ ವಾಪಸು ಬಂದ್ರಿ ಅಂತ ಕೇಳಿದೆ.. ನೀವು ಒಬ್ರೆ ಇದ್ರಲ್ವಾ ಏನಾದ್ರೂ ಸಹಾಯ ಮಾಡೋಣ ಅಂತ ಬಂದೆ ಅಂದ.. ಅವರು ಮನೆಗೆ ಹೋಗಿ ಒಂದು ವರೆ ಗಂಟೆ ಆದ ಮೇಲೆ ಬಂದಿರೋದು ನನಗೆ ಶಾಕ್ ಆಗಿತ್ತು.. ಅವರ ಡಾಟಾ ಕಾರ್ಡ್ ಇಲ್ಲೇ ಬಿಟ್ಟು ಹೋಗಿದ್ರು.. ಅದನ್ನು ತಗೊಳ್ಳೋಕೆ ಬಂದಿದ್ಧಾರೆ ಅಂತ ಅಂದು ಕೊಂಡೆ.. ಸುಳ್ಳು ಹೇಳ ಬೇಡ್ರಿ ಮೋಹನ್ ನಿಮ್ಮ ಡಾಟಾ ಕಾರ್ಡ್ ಮರೆತಿದ್ದೀರಿ. ಅದನ್ನು ತಗೊಂಡು ಹೋಗೋಕೆ ತಾನೆ ಬಂದಿದ್ದು ಅಂತ ಕೇಳಿದೆ. “ಹೌದು ತಗೊಂಡು ಹೋಗೋಕೆ ಬಂದಿದ್ದೀನಿ ಕೊಡ್ತೀಯಾ” ಅಂತ ವಿಭಿನ್ನವಾದ ಧ್ವನಿಯಲ್ಲಿ ಕೇಳಿದ. ಎದೆ ಧಡಕ್ ಅಂತು ಆ ಧ್ವನಿ ಕೇಳಿ.. ನಂತರ ನನ್ನ ಫೋನ್ ರಿಂಗ್ ಆಗ್ತಾ ಇತ್ತು.. ಯಾರದು ಅಂತ ನೋಡಿದೆ.. ಫೋನ್ ಮಾಡಿರೋದು ನಮ್ಮ ಕೊಲಿಗ್ ಮೋಹನ್.. ಹಾಗಾದ್ರೆ ಇಲ್ಲಿ ಇರೋದು ಯಾರು..? ಆ ಫೋನ್ ರೀಸೀವ್ ಮಾಡಿದೆ..” ನನ್ನ ಡಾಟಾ ಕಾರ್ಡ್ ಅಲ್ಲೇ ಇದೆ.. ಸ್ವಲ್ಪ ತೆಗೆದಿಡಿ ಅಂದ್ರು.. ಮೋಹನ್ ನೀವು ಮನೇಲಿ ಇದ್ದೀರಾ..? ಹಾಗಾದ್ರೆ ಇಲ್ಲಿ ನಿಮ್ಮ ಥರ ಇರೋರು ಯಾರೋ ಇದ್ದಾರೆ ಅಂತ ಹೇಳಿ ತಿರುಗಿ ನೋಡಿದೆ.. ಮುಖ ತಿರುಗಿಸಿ ಕೊಂಡು ಕಂಪ್ಯೂಟರ್ ನಲ್ಲಿ ಏನೋ ಟೈಪ್ ಮಾಡ್ತಾ ಕುಳಿತಿತ್ತು. ಆದ್ರೆ ಅವನು ಮೋಹನ್ ಅಲ್ಲ ಅಂತ ಗೊತ್ತಾಯ್ತು.. ಹೇ ಯಾರು ನೀನು ಅಂತ ಕೇಳಿದೆ.. ಧಡಕ್ ಅಂತ ಮುಖ ಮಾತ್ರ ತಿರುಗಿಸಿತು.. ದೇಹ ಹಾಗೇ ಇತ್ತು.. ಕೈಗಳು ಟೈಪಿಂಗ್ ಮಾಡ್ತಾ ಇತ್ತು..ಆಆಆಆಆಆ ಎಂದು ಕಿರುಚಿಕೊಂಡೆ.. ಅಷ್ಟರಲ್ಲಿ ಸ್ನೇಹಿತ ಪವನ್ ಓಡೋಡಿ ಬಂದ್ರು.. ಅವನನ್ನು ನೋಡಿದ ತಕ್ಷಣ ಅದು ಇದ್ದಕ್ಕಿದ್ದಂತೆ ಮಾಯವಾಯಿತು.. ಆಮೇಲೆ ನಾನು ಆಫೀಸಿನ ಬೀಗ ಹಾಕಿ ಪವನ್ ಜೊತೆಗೆ ಕೆಳಗಿಳಿದು ಬರುವಾಗ ಅವನ ಮುಖ ನೋಡಿದೆ..ಕತ್ತಲು ಇದ್ದ ಕಾರಣ ಭಾಷಾ ರವರ ಮುಖದ ಥರ ಕಾಣಿಸ್ತಾ ಇತ್ತು.. ನನಗೆ ತಲೆ ಕೆಟ್ಟು ಹೋಯ್ತು.. ಹೇ ಪವನ್  ನೀನು ಕತ್ತಲಲ್ಲಿ  ಭಾಷಾ ಥರ ಕಾಣಿಸ್ತಾ ಇದ್ದೀಯಾ ಅಂದೆ.. ಇಲ್ಲ ಭಾಷಾನೂ ಅಲ್ಲ ಪವನ್ನೂ ಅಲ್ಲ... ನಾನು ದೆವ್ವ “ರಕ್ತ ಕುಡಿದು ಬಹಳ ದಿನ ಆಯ್ತು ಕೊಡು ಅಂತ ಹೇಳಿ ನನ್ನ ಕುತ್ತಿಗೆ ಹಿಡಿಯೋಕೆ ಬಂತು..ಬಾಯಿ ತೆರೆದು ಕೋರೆ ಹಲ್ಲುಗಳನ್ನು ಮುಂದೆ ತಂತು.  ಆದ್ರೆ ನನ್ನ ಕುತ್ತಿಗೆಯಲ್ಲಿ ಆಂಜನೇಯ ಸ್ವಾಮಿ  ಡಾಲರ್ ಇತ್ತು ಅದನ್ನು ಮುಟ್ಟಲಾಗದೇ ದೆವ್ವ ಕಿರುಚಿ ನೋವು ಪಟ್ಟು ಕೊಂಡು ಮಾಯವಾಯ್ತು.. ಅಬ್ಬ ಆಮೇಲೆ ಓಡೋಡಿ ಮನೆಗೆ ಬಂದೆ..

Отправить комментарий

0 Комментарии