Hot Posts

10/recent/ticker-posts

ಸ್ನಾನ ಮಾಡಿಸಿದ ದೆವ್ವ..??

ನಾನು ಮನೇಲಿ ಮಲಗಿದ್ದೆ.. ರಾತ್ರಿ ಆಗಿತ್ತು.. ನನಗೆ ರಾತ್ರಿಯಲ್ಲಿ ನೀರು ಕುಡಿಯೋ ಅಭ್ಯಾಸ.. ಅದಿಕ್ಕೆ ಒಂದು ಗ್ಲಾಸ್ ನೀರನ್ನು ಟೇಬಲ್ ಮೇಲೆ ಇಟ್ಟು ನಾನು ಮಲಗಿದೆ. ನಿದ್ದೆ ಸೊಂಪಾಗಿ ಬರ್ತಾ ಇತ್ತು.. ಬಹುಷಃ ನನ್ನ ಕೈ ನೀರಿನ ಗ್ಲಾಸ್ ಗೆ ಟಚ್ ಆಯ್ತೋ ಏನೋ.. ನೀರು ನನ್ನ ಮೇಲೆ  ಚೆಲ್ಲಿ ಎಚ್ಚರವಾಯ್ತು.. ಧಗ್ಗನೆ ಎದ್ದು ಬಿಟ್ಟೆ.. ಹಾಸಿಗೆಯ ಮೇಲೆ ನೀರು ಬಿದ್ದಿತ್ತು.. ಟೇಬಲ್ ಮೇಲಿನ ಗ್ಲಾಸ್ ನೋಡಿದೆ.. ನನಗೆ ಶಾಕ್ ಆಯ್ತು.. ಗ್ಲಾಸ್ ಹಾಗೇ ಇದೆ.. ಅದನ್ನು ಕೈಯಲ್ಲಿ ಹಿಡಿದುಕೊಂಡು ನೋಡಿದೆ.. ಅದ್ರಲ್ಲಿ ನೀರು ಹಾಗೇ ಇದೆ.. ಅಷ್ಟರಲ್ಲ ಮತ್ತೆ ನನ್ನ ಮೇಲೆ ನೀರು ಸುರೀತು.. ಮೇಲೆ ನೋಡಿದೆ.. ಟೆರೇಸ್ ಮೇಲಿಂದ ನೀರಿನ ಹನಿಗಳು ಸೋರುತ್ತಿರೋ ಥರ ಕಾಣಿಸಿತು. ಟೆರೇಸ್ ಯಾಕೋ ಲೀಕ್ ಆಗ್ತಾ ಇತ್ತು. ಆದ್ರೆ ಹೊರಗೆ ಮಳೆ ಇಲ್ಲ ಎನೂ ಇಲ್ಲ.. ನೀರಿನ ಟ್ಯಾಂಕ್ ಏನಾದ್ರೂ ಲೀಕ್ ಅಗಿ ಅದ್ರಿಂದ ಬರಓ ನೀರು ಇಲ್ಲಿ ಬೀಳ್ತಾ ಇರಬಹುದು ಅಂತ ಅಂದುಕೊಂಡು ಟೆರೇಸ್ ಮೆಟ್ಟಿಲುಗಳನ್ನು ಹತ್ತುತ್ತಿದ್ದೆ. ಯಾರೋ ಒಬ್ಬರೇ ಮಾತಾಡ್ತಾ ಇರೋ ಥರ ಧ್ವನಿ ಕೇಳಿಸಿತು.. ಮೇಲೆ ಹೋಗಿ ನೋಡಿದೆ.. ನಮ್ಮ ನೀರಿನ ಟ್ಯಾಂಕ್ ಹತ್ರ ಯಾರೋ ಕೂತುಕೊಂಡು ನೀಸ್ನಾನ ಮಾಡಿಸ್ತಾ ಇದ್ರು.. “ಮುಖ ತೊಳೀಬೇಕು.. ಪೌಡ್ರು ಹಾಕೋಬೇಕು.. ಆಮೇಲೆ ವಾಕಿಂಗ್ ಹೋಗಬೇಕು.. ಅಂತ ಏನೇನೋ ಹೇಳ್ತಾ ಇತ್ತು.. ನಂಗೆ ಭಯ ಇದ್ರೂ ಕೂಡ ಯಾರು ಅಂತ ನೋಡೋಣ ಅಂತ ಹತ್ತಿರ ಹೋದೆ.. ಹೆಣ್ಣು ಒಂದು ಸತ್ತ ಮಗುವಿಗೆ ಸ್ನಾನ ಮಾಡಿಸ್ತಾ ಇತ್ತು.. ಸಡನ್ ಆಗಿ ನನ್ ಕಡೆ ತಿರುಗಿ ನೋಡಿಯಾಕೆ ಬಂದೆ? ನಾನು ನಿನ್ನನ್ನು ಕರೆದಿದ್ದೀನಾ..?? ನಾನು ನನ್ ಮಗೂಗೆ ಸ್ನಾನ ಮಾಡಿಸ್ತಾ ಇದ್ದೀನಿ.. ನೀನು ಹೋಗು ಇಲ್ಲಿಂದಅಂತ ಹೇಳಿತು. ನಾನು ಏನೂ ಮತನಾಡದೇ ರೂಮಿಗೆ ಬಂದು ಕುಳಿತುಕೊಂಡೆ.. ರಾತ್ರಿಯೆಲ್ಲಾ ಶಬ್ಧ ಕೇಳಿಸ್ತಾ ಇತ್ತು. ಮುಂಜಾನೆ ಮೂರು ಗಂಟೆಗೆ ಅದು ನಿಂತಿತು.. ಅಬ್ಬಾ..!! ಎದೆ ತುಂಬಾ ಭಯ.


Отправить комментарий

0 Комментарии