Hot Posts

10/recent/ticker-posts

ಬೆಚ್ಚಿ ಬೀಳಿಸಿದ ಒಂದೇ ಒಂದು ಸುಳ್ಳು





ಒಂದೇ ಒಂದು ಸುಳ್ಳು ಇಡೀ ಭೂಮಂಡಲವನ್ನೇ ಬೆಚ್ಚಿ
ಬೀಳಿಸಿದೆ
...


ಒಬ್ಬ ಮನುಷ್ಯನ ಕಲ್ಪನೆ ಕೋಟ್ಯಾಂತರ ಜನರಲ್ಲಿ ಭಯ ಮೂಡಿಸಿದೆ




ಆದ್ರೆ ಯಾರೋ ಒಬ್ಬ ವ್ಯಕ್ತಿಯ “ಸುಳ್ಳಿನ ಕಲ್ಪನೆ”ಯನ್ನು
ಮತ್ಯಾರೋ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಲಾಭ ಮಾಡಿಕೊಂಡಿದ್ದಾರೆ ಅಂದ್ರೆ ನೀವು ನಂಬಲೇ ಬೇಕು..
ಯಾಕಂದ್ರೆ ಇಲ್ಲಿ ನಡೆದದ್ದು ಅಂಥ ಅಚ್ಚರಿಯ ವಿಷಯ.. ಮನುಷ್ಯನ ಬಾಯಲ್ಲಿ ಮಾತು ನಿಲ್ಲೋದಿಲ್ಲ
ಅಂತಾರೆ.. ಇದಕ್ಕೆ ಪುಷ್ಟಿ ನೀಡುವಂತೆ ಎಲ್ಲೋ ಹುಟ್ಟಿದ ಒಂದು ಸುಳ್ಳು ಸುದ್ದಿ ವಿಶ್ವದಾದ್ಯಂತ ಓಡಾಡಿದೆ..
ಎಲ್ಲರ ಕಿವಿಯನ್ನು ಹೊಕ್ಕು ಮನೆಮಾತಾಗಿದೆ.. ಅಷ್ಟೇ ಅಲ್ಲ, ವಿಶ್ವದಾದ್ಯಂತ ಗದ್ದಲ ಎಬ್ಬಿಸಿದೆ..
ಅಷ್ಟಕ್ಕು ಆ ಸುಳ್ಳಾದ್ರೂ ಏನು..?? ಆ ಸುಳ್ಳು ಸುದ್ದಿ ಎಲ್ಲೆಡೆ ಹಬ್ಬಿಸಿರೋದು ಯಾರು..??
ಸುಳ್ಳು ಸುದ್ದಿಯಿಂದ ಯಾರಿಗೆ ಲಾಭ 
ಯ್ತು..?? ಯಾಕೆ ಇಂಥಾ ಸುಳ್ಳು ಸುದ್ದಿ ಹಬ್ಬಿಸಿದ್ರು ಅಂತ
ನಿಮಗೆ ಹೇಳ್ತೀವಿ ಕೇಳಿ..





          ವಿಶ್ವದಾದ್ಯಂತ
ಬೆಚ್ಚಿ ಬೀಳಿಸಿದ, ಎಲ್ಲರ ಎದೆಯಲ್ಲಿ ನಡುಕ ಮೂಡಿಸಿದ, ವಿಚಾರವಂತರ ತಲೆ ಕೆಡಿಸಿದ ಹಾಗೂ ಹಳ್ಳಿ
ಜನರಲ್ಲಿ ಭೀತಿ ಮೂಡಿಸಿದ ಆ ಸುಳ್ಳು ಯಾವುದು ಗೊತ್ತಾ..??? ಅದೇ ಪ್ರಳಯ”





ಹೌದು.. ಪ್ರಳಯ ಅನ್ನೋ ಸುಳ್ಳು ಈಗ ಎಲ್ಲೆಡೆ ಹಬ್ಬಿ
ಗದ್ದಲ ಸೃಷ್ಟಿಸಿದೆ.. ಪ್ರಳಯದ ಭಯ ಅದೆಷ್ಟೋ ಜನರಲ್ಲಿನ ಉತ್ಸಾಹವನ್ನೇ ಕುಗ್ಗಿಸಿದೆ.. ಸಾಧನೆಯ
ಹಾದಿಗೆ ಮಾರಕವಾಗಿದೆ.. ಅಷ್ಟೆ ಅಲ್ಲ, ಮುಂದೆ ಏನು ಮಾಡಬೇಕು ಅನ್ನೋ ಚಿಂತೆಯಿಂದ ಎಲ್ಲರೂ ತಲೆ
ಮೇಲೆ ಕೈ ಹೊತ್ತು ಕೂತುಕೊಳ್ಳುವಂತೆ ಮಾಡಿದೆ.. ಆದ್ರೆ ಪ್ರಳಯ ಅನ್ನೋ ಸುಳ್ಳಿನ ಹಿಂದೆ ಕಾಣದ
ಕೈಗಳ ಕೈವಾಡ
ವಿದ್ದು, ಈ ಸುಳ್ಳಿನಿಂದ ಕೋಟಿ ಕೋಟಿ ಲಾಭ ಮಾಡಿಕೊಳ್ತಿದೆ ಅಂದ್ರೆ ನೀವು ಅಚ್ಚರಿ
ಪಡಬಹುದು..
ಜೀವಗಳ ಜೊತೆಗೆ ಆಟ ಆಡಿ ಜೀವನ ಸಾಗಿಸೋ ಜನಗಳ ಗುಂಪು ಪ್ರಳಯದ ಸುಳ್ಳು ಸುದ್ದಿ
ಹಬ್ಬಿಸಿ ಜನರನ್ನು ಆತಂಕಕ್ಕೆ ಈಡು ಮಾಡಿದೆ.. ಆ ಗುಂಪು ಯವುದು ಗೊತ್ತಾ..?? ರಿಯಲ್ ಎಸ್ಟೇಟ್
ಗುಂಪು.. ಮತ್ತು
2012 ಚಿತ್ರದ ಗುಂಪು..





          ಹೌದು..
ಈ ಎರಡೂ ಗುಂಪುಗಳು ಮಾಡಿದ ಅವಾಂತರವೇ ಪ್ರಳಯದ ಭಯಕ್ಕೆ ಕಾರಣವಾಗಿದೆ..
2012 ಚಿತ್ರದ ನಿರ್ದೇಶಕ ರೋಲನ್ ಎಮರಿಚ್ “ಮಾಯನ್
ಕ್ಯಾಲೆಂಡರ್” ಎಳೆಯನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ರು.. ನಿರ್ಮಾಪಕರಾದ ಹರಾಲ್ಡ್ ಕ್ಲೋಸರ್,
ಮಾರ್ಕ ಗೋರ್ಡನ್ ಲರ್ರಿ ಜೆ ಫ್ರಾಂಕೋ
ಮೂವರು ಸೇರಿ
200 ಮಿಲಿಯನ್ ಡಾಲರ್ ಹಣವನ್ನು ಹಾಕಿ ಸಿನೆಮಾ ಮಾಡಿದ್ರು.
ಹಾಲೀವುಡ್ ಮಂದಿ ಹಣ ಹಾಕಿ ಹಣ ತೆಗೆಯೋ ಮಂದಿ.. ಹೀಗಾಗಿ
2012 ಸಿನೆಮಾವನ್ನು ಭರ್ಜರಿಯಾಗಿ ವಿಶ್ವದಾದ್ಯಂತ ಪ್ರಚಾರ
ಮಾಡಿದ್ರು.. ಸಿನೆಮಾ ಚಿತ್ರೀಕರಣ ಆರಂಭವಾದಾಗಿನಿಂದ ಒಂದೊಂದೇ ಕುತೂಹಲವನ್ನು ಹೊರಹಾಕುತ್ತಾ
ಬಂದಿತು ಚಿತ್ರ ತಂಡ.. ಆದ್ರೆ ಜನರಲ್ಲಿ ಇನ್ನಷ್ಟು ಕುತೂಹಲವನ್ನು ಕೆರಳಿಸೋದಕ್ಕಾಗಿ ಮಾಯನ್ ಕ್ಯಾಲೆಂಡರ್ ನಲ್ಲಿ ದಾಖಲೆ ಇದೆ ಎಂಬ
ಆಧಾರವನ್ನು ಚಿತ್ರ ತಂಡ ತೋರಿಸಿತ್ತು..
ಹೀಗಾಗಿ ಜನ ಇದು ನಿಜವೆಂದು ನಂಬಿ ಬಿಟ್ರು
.. ಇದರ ಪರಿಣಾಮವಾಗಿ ಪ್ರಪಂಚದಾದ್ಯಂತ
ಪ್ರಳಯದ ಭೀತಿ ಮೂಡಿತು.. ಪ್ರಳಯದ ಸಮಯದಲ್ಲಿ ಏನೆಲ್ಲ ಆಗಬಹುದು ಅನ್ನೋ ಕುತೂಹಲ, ಬಯ ಎಲ್ಲರಲ್ಲೂ
ಹೆಚ್ಚಾಯಿತು.. ಕೇವಲ
200 ಮಿಲಿಯನ್ ಡಾಲರ್ ಗಳನ್ನು ಖರ್ಚುಮಾಡಿದ ಚಿತ್ರತಂಡಕ್ಕೆ ಬರೋಬ್ಬರಿ 717 ಮಿಲಿಯನ್ ಡಾಲರ್ ಹಣ ಹರಿದು ಬಂದಿತ್ತು.. ಪ್ರಳಯದ ಭಯ
ಜನರನ್ನು ಈ ಸಿನೆಮಾದ ಕಡೆಗೆ ಎಳೆದು ತಂದಿತ್ತು.. “ಇನ್ನೇನು ಸತ್ತೇ ಹೋಗ್ತೀವಿ.. ಅದ್ರೆ
ಅದಕ್ಕಿಂತ ಮುಂಚೆ ಸಾವು ಹೇಗೆ ಬರುತ್ತೆ ನೋಡೋಣ” ಅಂತ ಹೆದರಿ ಹೋದವರೇ ಹೆಚ್ಚು..  ಭಯವನ್ನು ಬಂಡವಾಳ ಮಾಡಿಕೊಂಡ
2012 ಚಿತ್ರ ತಂಡಕ್ಕೆ ಮಾತ್ರ ಹಣದ ಹೊಳೆ ಹರಿದು ಬಂದಿದ್ದು
ಮಾತ್ರ ಸುಳ್ಳಲ್ಲ.. ಆದ್ರೆ ಮೂರ್ಖರಾದವರು ಮಾತ್ರ ಅಮಾಯಕ ಜನರು..





ಇದೇ ಸಮಯವನ್ನು
ಉಪಯೋಗಿಸಿಕೊಳ್ಳೋಕೆ ಮತ್ತೊಂದು ತಂಡ ಆಲೋಚನೆ ಮಾಡಿತು.. ಅದೇ ರಿಯಲ್ ಎಸ್ಟೇಟ್ ತಂಡ.. 










ಪ್ರಳಯದಿಂದ ಕೋಟಿ ಕೋಟಿ ಲೂಟಿ ಮಾಡಿದ ಮತ್ತೊಂದು ತಂಡ ಇದೇ
ರಿಯಲ್ ಎಸ್ಟೇಟ್ ತಂಡ..  
ಮೇಲಿನ ಅಂಕ ಅಂಶವನ್ನು ಒಮ್ಮೆ ನೋಡಿ.. 2004-05 ರ ಸಮಯದಲ್ಲಿ ಬೆಲೆಗಳೆಲ್ಲಾ ಮುಗಿಲು ಮುಟ್ಟುತ್ತಿದ್ದವು... ಬಿಲ್ಡರ್
ಗಳು ಜಾಗವನ್ನು ಖರೀದಿ ಮಾಡೋಕೆ ಕೋಟಿ ಕೋಟಿ ಕೊಡ್ತೀನಿ ಅಂದ್ರೂ ಯಾರೂ ಕೂಡ ಜಮೀನು ಕೊಡೋಕೆ ಮುಂದೆ
ಬರಲಿಲ್ಲ.. ಯಾಕಂದ್ರೆ ಜಮೀನು ಮಾರಿದ್ರೆ ಮತ್ತೆ ಕೊಂಡುಕೊಳ್ಳೋಕೆ ಅಗಲ್ಲ ಅನ್ನೋ ಸತ್ಯ ಅದಾಗಲೇ
ಜನರಲ್ಲಿ ಮೂಡಿತ್ತು.. ಹೀಗಾಗಿ ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ ಜಮೀನು ಸಿಗದೇ ಪ್ರಾಜೆಕ್ಟ್
ಗಳೆಲ್ಲಾ ನಿಂತು ಹೋದವು.
. ಶೇರ್ ಮಾರ್ಕೆಟ್ ಕೂಡ ಬಿದ್ದು ಹೋಗಿತ್ತು.. ವಿಶ್ವದ ಶ್ರೀಮಂತ ದೇಶ ದುಬೈ
ಕೂಡ ಕಂಗಾಲಾಗಿ ಹೋಗಿತ್ತು.
. ಇಂಥಾ ಸಮಯದಲ್ಲಿ ರಿಯಲ್ ಎಸ್ಟೇಟ್ ಜನರಲ್ಲಾ ಸೇರಿ
2012 ರ ಕಾಲ್ಪನಿಕ ಕಥೆ”ಗೆ ಬಣ್ಣ ಹಚ್ಚಿ ಪ್ರಚಾರ ಮಾಡೋಕೆ
ಶುರು ಮಾಡಿದ್ರು
.. ಎಷ್ಟರ ಮಟ್ಟಿಗೆ ಈ ಕಟ್ಟು ಕಥೆ ಪ್ರಚಾರವಾಯ್ತು ಅಂದ್ರೆ ಬುದ್ದಿವಂತರಾದ ಮಾಧ್ಯಮದವರನ್ನೂ
ಈ ವಿಷಯ ಕಂಗಾಲು ಮಾಡಿತ್ತು.. ಈ ವಿಷಯ ಮಾಧ್ಯಮದ ಅಂಗಳಕ್ಕೆ ಬಂದಿದ್ದೇ ತಡ, ಬೆಳಗಾಗುವುದರೊಳಗೆ ಈ
ಸುದ್ದಿ ಮನೆ ಮಾತಾಗಿ ಬಿಟ್ಟಿತ್ತು..






          ಕಾಲ್ಪನಿಕ
ಕಥೆಯ ಸುಳ್ಳಿಗೆ ಮಾಧ್ಯಮದವರು ಮತ್ತಷ್ಟು ನೀರು ಪೋಷಿಸಿ ಬೆಳೆಸಿದರು.. ಆರಂಭದಲ್ಲಿ ಈ ಬಗ್ಗೆ
ಬಹಳಷ್ಟು ಕುತೂಹಲವಿದ್ದ ಜನರು ಯಾವ ಚನೆಲ್ ನಲ್ಲಿ ಪ್ರಳಯದ ಬಗ್ಗೆ ವರದಿ ಬಂದರೂ ಆ ಚಾನೆಲ್ ಅನ್ನು
ಎವೆಯಿಕ್ಕದೇ ನೋಡುತ್ತಿದ್ದರು.. ಇದನ್ನೇ ಬಂಡವಾಳ ಮಾಡಿಕೊಂಡ ಮಾಧ್ಯಮಗಳು ತಮ್ಮ ಟಿ.ಆರ್.ಪಿ.ಯನ್ನು
ಹೆಚ್ಚಿಸಿಕೊಳ್ಳುವಲ್ಲಿ ಪೈಪೋಟಿ ನಡೆಸುತ್ತಿದ್ದವು.. ಒಂದಕ್ಕಿಂತ ಒಂದು ವರ್ಣರಂಜಿತ
ಕಾರ್ಯಕ್ರಮಗಳು ಬಿತ್ತರಗೊಂಡವು.. ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದ ಮಾಧ್ಯಮ ಚಿಂತಕರು
ಪ್ರಳಯಕ್ಕೆ ವೈಜ್ಞಾನಿಕ ಕಾರಣಗಳನ್ನೂ ನೀಡುತ್ತಾ ಬಂದರು
..


          ನಿಬಿರೋ
ಎಂಬ ಕ್ಷುದ್ರ ಗ್ರಹವು ಭೂಮಿಯನ್ನು ಅಪ್ಪಳಿಸುವ ಸಂಭವವಿದೆ
ಎಂಬ ಆತಂಕಕಾರಿ ವಿಷಯವನ್ನು ಹೊರ
ಹಾಕಿದ್ರು.. ಇದು ಕಾಕತಾಳೀಯವೋ ಅಥವ ಪ್ರಳಯಕ್ಕೆ ಮುನ್ಸೂಚನೆಯೋ ಗೊತ್ತಿಲ್ಲ ಎಂಬಂತೆ ವರದಿ ಮಾಡಿ
ಪ್ರಳಯ ಅಗೋದು ಪಕ್ಕಾ ಎಂಬಂತೆ ಬಿಂಬಿಸಿದವು..





          ಪ್ರಳಯದ
ಭಯ ಮತ್ತಷ್ಟು ಹೆಚ್ಚಿಸಿದ ಮಾಧ್ಯಮಗಳು ಜನರ ಮನದಲ್ಲಿ ನಡುಕ ಮೂಡಿಸಿದವು. ಬದುಕುವ ಆಸೆಯೇ ಕಮರಿ
ಹೋಗುವಂತೆ ಮಾಡಿದ್ರು
. “ಇನ್ನೇನು ನಾವು ಸತ್ತೇ ಹೋಗ್ತೀವಿ ಅಂತ ಭಾವಿಸಿದ ಜನಗಳು ಇರೋದ್ರೊಳಗೆ
ಖುಷಿಯಾಗಿ ತಿಂದು ಉಂಡು ಮಜಾ ಮಾಡೋಣ ಅಂತ ಕೆಲವು ಬಯಸಿದ್ರು
.. ಹೀಗಾಗಿ ಬಂದಷ್ಟು ಬರಲಿ ಅಂತ
ಕೆಲವರು ಜಮೀನುಗಳನ್ನು ಮಾರೋಕೆ ಮುಂದಾದ್ರು
.. ಇದನ್ನೇ ರಿಯಲ್ ಎಸ್ಟೆಟ್ ಮಂದಿ ಕೂಡ ಬಯಸಿದ್ರು. ಅತ್ಯಂತ
ಕಡಿಮೆ ಬೆಲೆಯಲ್ಲಿ ಸಿಕ್ಕ ಸಿಕ್ಕ ಜಮೀನುಗಳನ್ನು ನುಂಗಿಬಿಟ್ರು.. 






 ಇನ್ನೊಂದೆಡೆ
ಪ್ರಳಯದ ಭಯವನ್ನು ಅರಿತ ಶೇರ್ ಮಾರ್ಕೆಟ್ ಉದ್ಯಮಿಗಳು ತಮ್ಮ ಶೇರುಗಳ ಬೆಲೆ ತುಂಬಾ ಕಡಿಮೆ
ಆಗುತ್ತೆ ಅಂತ ತಿಳಿದು ಸಿಕ್ಕ ಸಿಕ್ಕಷ್ಟು ಹಣಕ್ಕೆ ಶೇರುಗಳನ್ನು ಮಾರಿ ಬಿಟ್ರು..
ಈ ಸಮಯದಲ್ಲಿ ಲ್ಯಾಂಡ್
ಮತ್ತು ರಿಯಲ್ ಎಸ್ಟೆಟ್ ಸೇರಿದಂತೆ ಶೇರ್ ಮಾರ್ಕೆಟ್ ಗಳೂ ಕೂಡ ನೆಲಕ್ಕಚ್ಚಿದವು.. ಆದ್ರೆ ರಿಯಲ್
ಎಸ್ಟೇಟ್ ಮತ್ತು ಶೆರ್ ಮಾರ್ಕೆಟ್ ನಲ್ಲಿ ಚೆನ್ನಾಗಿ ಪಳಗಿದ್ದ ಘಟೋದ್ಘಜರು,  ಅತ್ಯಂತ ಕಡಿಮೆ ಬೆಲೆಗೆ ಶೇರುಗಳನ್ನು ಕೊಂಡು ಕೊಂಡರು
. ಹೀಗಾಗಿ
2004-05 ರಲ್ಲಿ ಆಕಾಶಕ್ಕೆ ಏರಿದ್ದ ಬೆಲೆಗಳು ಮತ್ತು ಶೇರು ಉದ್ಯಮ 2005 ರ ನಂತರ ಪಾತಾಳಕ್ಕೆ ಕುಸಿಯೋಕೆ ಶುರು ಮಾಡಿತು.. 2009 ರಲ್ಲಿ 2012 ಸಿನೆಮಾ ಬಿಡುಗಡೆಯಾದ ನಂತರ ಜನ ಮುಗಿ ಬಿದ್ದು ಸಿನೆಮಾ
ನೋಡಿದ್ರು.. “ಸಾವು ಖಚಿತ.. ಇನ್ನೇನು ಮೂರೇ ವರ್ಷದಲ್ಲಿ ಹರೋ ಹರ ಅಂತೀವಿ” ಅಂತ ತಿಳಿದ ಜನ
ಇನ್ನಷ್ಟು ಹತಾಶರಾಗಿ ಹೋದ್ರು.. “ಸಾಲಾ ಮಾಡಿಯಾದ್ರು ತುಪ್ಪ ತಿನ್ನು” “ಬದುಕಿರೋವರೆಗೂ ತಿಂದು
ಸಾಯಿ ಇಲ್ಲ ಕುಡಿದು ಸಾಯಿ” ಅನ್ನೋ ಗಾದೆಯಂತೆ ಇರೋಷ್ಟು ದಿನ ಬಿಂದಾಸಾಗಿ ಇರೋಕೆ ಮನಸು ಮಾಡಿದ್ರು.
ಹೀಗಾಗಿ ಕೆಲವರು ದೀವಾಳಿಯಾದ್ರು.. ಮತ್ತೆ ಕೆಲವರು ದೀವಾನರಾದ್ರು..








          ಪ್ರಳಯ
ಅನ್ನೋ ಒಂದೇ ಒಂದು ಸುಳ್ಳು ಬದುಕುವ ಜನರ ಬದುಕಿಗೆ ತಿಲಾಂಜಲಿ ಇಟ್ಟಿದ್ದು ಮಾತ್ರ ಸುಳ್ಳಲ್ಲ..
ಆಸೆಗಳಿಗೆ ಎಳ್ಳು ನೀರು ಬಿಟ್ಟು, ಇರೋದನ್ನೆಲ್ಲಾ ಯಾರ್ ಯಾರಿಗೋ ಕೊಟ್ಟು ಕೈ ಖಾಲಿ ಮಾಡಿಕೊಂಡಿ
ಕೂತ್ಕೊಂಡು ಬಿಟ್ರು.. ಆದ್ರೆ
Dec-21 ಕ್ಕೆ ಪ್ರಳಯ ಆಗಿಲ್ಲ ಅಂದ್ರೆ ಕಳೆದುಕೊಂಡದ್ದು ಮತ್ತೆ
ಸಿಗುತ್ತಾ..?? ಅಷ್ಟಕ್ಕೂ ಪ್ರಳಯ ಆಗುತ್ತೆ ಅನ್ನೋ ವಿಷಯ ಎಲ್ಲಾ ಕಡೆ ಹರಡುತ್ತಿರುವಾಗ
ವಿದ್ಯಾವಂತರು, ವಿಜ್ಞಾನಿಗಳು, ವೇದ ಪಂಡಿತರು ಖಗೋಳ, ಜ್ಯೋತಿಷ್ಯರು ಎಲ್ಲರೂ ತಮ್ಮದೇ ಆದ
ಕಾರಣವನ್ನು ಕೊಡ್ತಾ ಬಂದರು
.. ಆದರೆ ಪ್ರಳಯದ ಸುದ್ದಿಯನ್ನು ಇದಕ್ಕಿಂತ ಮೊದಲೇ ಯಾಕೆ ಯಾರೂ ಹೊರಗೆ
ಹಾಕಿಲ್ಲ..??







2000 ರಲ್ಲೇ ಭೂಮಿ ವಿನಾಶವಾಗುತ್ತೆ ಅಂತ ಈ ಹಿಂದೆ ಹೇಳಲಾಗ್ತಿತ್ತು..
ಆದ್ರೆ ಏನೂ ಆಗಲಿಲ್ಲ.. ಈಗ
2012 ಕ್ಕೆ ಭೂಮಿ ವಿನಾಶವಾಗುತ್ತೆ ಅಂತ ಸುಳ್ಳು ಸುದ್ದಿ ಹರಡಿದ್ದಾರೆ.. ಬಹಳಷ್ಟು
ಮಾಧ್ಯಮಗಳು ಈ ಪ್ರಳಯದ ಬಗ್ಗೆ ಪ್ರಚಾರ ಮಾಡಿ ನೂರು ನೂರು ಎಪಿಸೋಡ್ ಗಳನ್ನು ಪೂರೈಸಿವೆ.





ನ್ಯೂಸ್
ಚಾನೆಲ್ ಗಳಲ್ಲಿ ಪ್ರಳಯ ಅನ್ನೋ ಎಪಿಸೋಡ್ ಮೆಗಾ ಧಾರಾವಾಹಿಯಂತೆ ಓಡ್ತಾ ಇದೆ
ಅಂದ್ರೆ ಮಾಧ್ಯಮಗಳು
ಎಷ್ಟರ ಮಟ್ಟಿಗೆ ಜನರ ದಾರಿಯನ್ನು ತಪ್ಪಿಸ್ತಿವೆ ಅನ್ನೋದು ನಾವು ಯೋಚನೆ ಮಾಡಬೇಕು.. ಪ್ರಳಯ ಆಗೇ
ಆಗುತ್ತೆ ಅಂತ ಹೇಳಿಕೊಂಡು ಬರ್ತಿದ್ದ ಮಾಧ್ಯಮಗಳು ಈಗ ನಿಧಾನವಾಗಿ ತಮ್ಮ ರಾಗ ಬದಲಿಸ್ತಾ ಇವೆ.. “ಪ್ರಳಯ
ಪೋಸ್ಟ್ ಪೋನ್ಡ್” ಆಗಿದೆ
.. ಹೆದರ ಬೇಡಿ ಅನ್ನೋ ಕಣ್ಣೀರು ಒರೆಸೋ ಪ್ರಯತ್ನ ಮಾಡ್ತಿದೆ..
ಹಾಗಾದ್ರೆ ಮಾಧ್ಯಮಗಳು ಹೇಳೋದು ಯಾವುದನ್ನೂ ನಾವು ನಂಬೋಹಾಗಿಲ್ವಾ ಅನ್ನೋ ನಿರ್ಲಕ್ಷತೆಯ ಅನುಮಾನ
ಜನರಲ್ಲಿ ಮೂಡ್ತಾ ಇರೋದಂತೂ ಸತ್ಯ.. ಯಾರದ್ದೋ ಒಂದು ಕಟ್ಟು ಕಥೆ, ಕಾಲ್ಪನಿಕ ಆಲೋಚನೆಗೆ ರಂಗು
ರಂಗಿನ ಬಣ್ಣ ತುಂಬುವ ಈ ನಾಟಕದಿಂದ ಕೆಲವು ಮಾದ್ಯಮಗಳು ಸರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿವೆ.


         


         
ಅಷ್ಟೇ ಅಲ್ಲ,, ಇನ್ನೊಂದು ಕಹಿ ಸತ್ಯ ಹೇಳ್ತೀನಿ ಕೇಳಿ.. ಪ್ರಳಯ ಫಿಕ್ಸ್ ಆಗಿರೋದು ಡಿಸೆಂಬರ‍್-21. 2012 ರಂದು ಸಂಜೆ 5.00 ಗಂಟೆಗೆಕೆ.. ಅಲ್ವಾ..?? ಆದ್ರೆ ಇಲ್ಲಿ ಒಂದು ಸಾಮಾನ್ಯ ವಿಷಯವನ್ನು ನಾವು ಅರ್ಥ ಮಾಡ್ಕೋಬೇಕಾಗುತ್ತೆ.. ಭಾರತದಲ್ಲಿ ಸಂಜೆ 5.00 ಆಗಿದ್ರೆ ಅಮೇರಿಕಾದಲ್ಲಿ ಬೆಳಿಗ್ಗೆ 5 ಗಂಟೆ ಆಗಿರುತ್ತೆ.. ನ್ಯೂಸಿಲೆಂಡ್ ನಲ್ಲಿ ಡಿಸೆಂಬರ‍್ 22 ನೇ ತಾರೀಕು ಆಗಿರುತ್ತೆ..





ಅಕಸ್ಮಾತ್ ಬೇರೆ ದೇಶಗಳಲ್ಲಿ ಡಿಸೆಂಬರ‍್ 21 ಆಗಿದ್ರೆ ನಮ್ಮ ದೇಶದಲ್ಲಿ 20 ನೇ ತಾರೀಕು ಆಗಿರುತ್ತೆ.. ಅಥವ 22 ಆಗಿರುತ್ತೆ.. ಹೀಗಿರುವಾಗ
ಡಿಸೆಂಬರ‍್ 21 ನೇ ತಾರೀಕು ಎಲ್ಲಿ ಪ್ರಳಯ ಆಗುತ್ತೆ..?? ಹೇಗೆ ಪ್ರಳಯ ಆಗುತ್ತೆ??
ಹಾಗೇನಾದ್ರೂ ಆಗೋಹಾಗೆ ಇದ್ರೆ ಎಲ್ಲಾ ದೇಶದಲ್ಲೂ ಡಿಸೆಂಬರ‍್ 21  ಆಗಿರಬೇಕು.. ಆದ್ರೆ
ಹಾಗೆ ಆಗೋದಕ್ಕೆ ಸಾಧ್ಯವಿಲ್ಲ.. ಹೀಗಾಗಿ ಪ್ರಳಯ ಆಗೋದೂ ಸಾಧ್ಯವಿಲ್ಲ.. ಪ್ರಳಯ ಅನ್ನೋದು ಕೇವಲ ವ್ಯಕ್ತಿಯೊಬ್ಬನ ಕಟ್ಟು ಕಥೆ.. ಮಾಯನ್ ಕ್ಯಾಲೆಂಡರ‍್ ನಲ್ಲಿ ಪ್ರಳಯದ ಉಲ್ಲೇಖ ನಿರ್ದಿಷ್ಟವಾಗಿದೆ ಅನ್ನೋದಾದ್ರೆ  ಅದು ಸತ್ಯಕ್ಕೆ ದೂರವಾದ ಮಾತು ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಆ ಡಿಸೆಂಬರ‍್ 21 ಒಂದೇ ಸಮಯದಲ್ಲಿ ಎಲ್ಲಾ ದೇಶಗಳಲ್ಲೂ ಬರೋದಕ್ಕೆ ಸಾಧ್ಯವಿಲ್ಲ.. ಹಾಗೇನಾದ್ರೂ ಬಂದರೆ ಆಗ ಪ್ರಳಯ ಅಗುತ್ತೆ ಅಂತ ನಂಬೋಣ.. ಆಗದ ಮಾತಿಗೆ ಯಾಕೆ ಚಿಂತೆ ಮಾಡಿ ಚಿತೆಗೆ ಹೋಗಬೇಕು ಅಲ್ವಾ??





ಆದ್ರೆ  ವ್ಯಕ್ತಿಯೊಬ್ಬನ ಕಾಲ್ಪನಿಕ ಸುಳ್ಳಿನ ಕಥೆ, ನಮ್ಮೆಲ್ಲರನ್ನೂ ಆತಂಕಕ್ಕೀಡು ಮಾಡಿದ್ದು ಮಾತ್ರ ಸುಳ್ಳಲ್ಲ.. ಈಗಲೂ ಇನ್ನು ಅದೆಷ್ಟೋ ಜನರು ಪ್ರಳಯದ ಆತಂಕದಲ್ಲೇ ಇದ್ದಾರೆ.. ಪ್ರಳಯ ಆಗೇ ಆಗುತ್ತೆ ಅಂತ ದೃಢವಾಗಿ ನಂಬಿದ್ದಾರೆ.. ಯಾಕಂದ್ರೆ ಈ ಒಂದು ಸುಳ್ಳು ಜನರ ಮನಸ್ಸಿನಲ್ಲಿ ಅಛಲವಾಗಿ ಉಳಿದು ಬಿಟ್ಟಿದೆ.. ಸ್ವತಃ ಅನುಭವವಾಗುವವರೆಗೂ ಜನರ ನಂಬಿಕೆ ಮಾತ್ರ ಹೋಗೋದಿಲ್ಲ..











ಇಂತಿ ನಿಮ್ಮ


ಸವಿ ನೆನಪಿನ


ಶೇಖ್(ಸ್ಪಿಯ)ರ‍್


Отправить комментарий

0 Комментарии