Hot Posts

10/recent/ticker-posts

ಸೈನಾ ನೆಹ್ವಾಲ್-ವಿಶ್ವದ ಎರಡನೆಯ ಸ್ಥಾನದ ಆಟಗಾರ್ತಿ






ಒಲಂಪಿಕ್ಸ್ ಪಂದ್ಯಗಳ
ಬ್ಯಾಡ್ಮಿಟನ್ ಸ್ಪರ್ಧೆಯಲ್ಲಿ ಕ್ವಾಟರ್ ಫೈನಲ್ ವರೆಗೆ ತಲುಪಿದ ಮೊಟ್ಟ ಮೊದಲ ಭಾರತೀಯ ಮಹಿಳೆ
ಸೈನಾ ನೆಹ್ವಾಲ್
.




ಸೈನಾ ಈ ಸಾಧನೆಯನ್ನು ಮಾಡಿದ್ದು ಕಳೆದ 2008 ರಲ್ಲಿ ಬೀಜಿಂಗ್ ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ.. ಈ ಮೂಲಕ ಭಾರತೀಯ ದಿಟ್ಟ
ಆಟಗಾರ್ತಿ ಎಂಬ ಭರವಸೆ ಮೂಡಿಸಿದ್ರು.  ಸೈನಾ
ಹುಟ್ಟಿದ್ದು ಹರ್ಯಾಣದ ಹಿಸ್ಸಾರ್ ನಗರದಲ್ಲಿ..
2008 ರ ಒಲಂಪಿಕ್ಸ್
ಸಾಧನೆಯನ್ನು ಕಂಡ ಭಾರತ ಸರ್ಕಾರವು
2009 ನೇ ಸಾಲಿನ ಭಾರತದ  ಶ್ರೇಷ್ಟ ಕ್ರೀಡಾಪಟು ಪ್ರಶಸ್ತಿ”ಯನ್ನು ನೀಡಿ
ಗೌರವಿಸಿದೆ.. ಸುಮಾರು ಇಪ್ಪತ್ತೊಂದು-ಇಪ್ಪತ್ತೆರಡರ ಹರೆಯದ  ಸೈನಾ ನೆಹ್ವಾಲ್ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ  ಗುರ್ತಿಸಿಕೊಂಡ ಖ್ಯಾತ ಬ್ಯಾಡ್ಮಿಟನ್ ತಾರೆ.. 


   ಸಿಂಗಾಪೂರ್ ಓಪನ್ ಪ್ರಶಸ್ತಿ, ಹಾಂಗ್ ಕಾಂಗ್ ಓಪನ್ ಸೀರೀಸ್ ಪ್ರಶಸ್ತಿ, ಸೇರಿದಂತೆ ಪ್ರಶಸ್ತಿಗಳ
ಸುರಿಮಳೆಗಳೇ ಬಂದಿವೆ. ವಿಶ್ವದ ಎರಡನೆಯ ಸ್ಥಾನದ ಆಟಗಾರ್ತಿಯಾದ ಸೈನಾ ನೆಹ್ವಾಲ್ 
2010ರ ಕಾಮನ್
ವೆಲ್ತ್  ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದು
ಕೀರ್ತಿ ತಂದಿದ್ದಾರೆ.. ಹೀಗಾಗಿ ಅವರಿಗೆ ರಾಜೀವ್ ಗಾಂಧೀ ಖೇಲ್ ರತ್ನ ಮತ್ತು ಪದ್ಮ ಶ್ರೀ
ಪ್ರಶಸ್ತಿ
ಗಳನ್ನು ನೀಡಿ ಗೌರವಿಸಲಾಗಿದೆ.

Отправить комментарий

0 Комментарии