Hot Posts

10/recent/ticker-posts

ಭಾರತದ "ದೋಣಿ" ಸಾಗುತಿದೆ






ತನ್ನ
ಉದ್ದವಾದ ಕೂದಲಿಂದಲೇ ಹೊಸ ಟ್ರೆಂಡ್ ಹುಟ್ಟುಹಾಕಿದ್ದ ಖ್ಯಾತ ಆಟಗಾರ ಮಹೇಂದ್ರಸಿಂಗ್ ಧೋನಿ. 




1981, ಜುಲೈ 7
ರಂದು ಬಿಹಾರದ ರಾಂಚಿ
ಯಲ್ಲಿ ಜನಿಸಿದ ಧೋನಿ ಮೇಕಾನ್ ಕಂಪೆನಿಯಲ್ಲಿ ಸಹಾಯಕರಾಗಿ ಕೆಲಸ
ಮಾಡಿದ್ದಾರೆ
.. ಕ್ರಿಕೇಟ್ ಲೋಕಕ್ಕೆ ಕಾಲಿಡುವ ಮೊದಲು ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಸೈ
ಎನಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಅಂದ್ರೆ ಫುಟ್ ಬಾಲ್ ಟೀಮ್ ನಲ್ಲಿ ಅತ್ಯುತ್ತಮ ಗೋಲ್
ಕೀಪರ್ ಆಗಿ ಗುರ್ತಿಸಿಕೊಂಡಿದ್ದ
ಧೋನಿ ಅತ್ಯುತ್ತಮ ಫುಟ್ ಬಾಲ್ ಆಟಗಾರರೂ ಆಗಿದ್ದಾರೆ.. ಜೊತೆಗೆ
ಬ್ಯಾಡ್ ಮಿಟನ್ ಕೂಡ ಅಚ್ಚುಕಟ್ಟಾಗಿ ಆಡ್ತಾರೆ. ಧೋನಿ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋಹಾಗೆ ಧೋನಿ
ನಾಯಕತ್ವ ವಹಿಸಿಕೊಂಡ ತಕ್ಷಣ
2007ICC ಟಿ 20 ಕ್ರಿಕೇಟ್ ನಲ್ಲಿ ಟೀಮ್ ಇಂಡಿಯಾ ಜಯಭೇರಿ
ಭಾರಿಸಿತು
.. ಏಕ ದಿನ ಪಂದ್ಯದಲ್ಲಿ ಅತಿ ಹೆಚ್ಚು ಅಂದ್ರೆ
10
ಸಿಕ್ಸ್ ಗಳನ್ನು ಹೊಡೆದ ಮೊಟ್ಟ ಮೊದಲ ಭಾರತೀಯ ಆಟಗಾರ
ಎಂಬ ಖಾತಿಗೆ ಒಳಗಾದ್ರು. ಇತ್ತೀಚಿನ
ಫೋರ್ಬ್ಸ್ ಪತ್ರಿಕೆಯ ಸಮೀಕ್ಷೆಯಂತೆ ವಿಶ್ವದ ಅತಿ ಹೆಚ್ಚು ಆದಾಯ ಪಡೆಯುವ ಕ್ರಿಕೇಟಿಗರಲ್ಲಿ ಧೋನಿ
ಕೂಡ ಒಬ್ಬರಾಗಿದ್ದಾರೆ.
ಅತಿ ಕಿರಿಯ ವಯಸ್ಸಿನಲ್ಲಿ ವಿಕೇಟ್ ಕೀಪರ್ ಹೊಣೆ ಹೊತ್ತ ಧೋನಿಗೆ,
ಸಿನೆಮಾ ಆಫರ್ ಗಳೂ ಕೂಡ ಹುಡುಕಿಕೊಂಡು ಬರುತ್ತಿವೆ.. ಇನ್ನು ಕೆಲವೇ ದಿನಗಳಲ್ಲಿ ಬಾಲೀವುಡ್ ಗೆ
ಇಳಿಯುವ ಸಾಧ್ಯತೆಗಳೂ ಹೆಚ್ಚಾಗಿವೆ ಎನ್ನುತ್ತವೆ ಕೆಲವು ಮೂಲಗಳು.

Отправить комментарий

0 Комментарии