Hot Posts

10/recent/ticker-posts

ನಾಲ್ಕು ಕಾಲಿನ ನಾರಿ.. ಈಕೆ ವಿಚಿತ್ರ ಪೋರಿ





ಕರೆಕ್ಟಾಗಿ ಸೀರೆ ಉಟ್ಟುಕೊಂಡ್ರೆ ನಡಿಯೋದಕ್ಕೆ ಬರೋದಿಲ್ಲ ಅಂತ ನೆಪ ಹೇಳಿ ತುಂಡು ಲಂಗ
ಹಾಕೊಂಡು ತಿರುಗಾಡೋ ಮಹಿಳಾಮಣಿಗಳೇ  ಹೆಚ್ಚು.


ಪುರುಷರೇನೂ ಕಮ್ಮಿ ಇಲ್ಲ.. ಪಂಚೆ ಹಾಕಿಕೊಂಡು ಹೊರಟರೆ ಪಂಚೆಯ ಅಂಚಿನಿಂದ ಕಾಲೆಡವಿ ಬೀಳುವ
ಜನರು
ಬಹಳಷ್ಟಿದ್ದರೆ.. ಅದಕ್ಕೆ ಈಗ ಸೀರೆ-ಪಂಚೆಗಳ ಕಾಲ ಮುಗಿದು ಹೋಗಿದೆ. ಗಂಡಾಗಲಿ ಹೆಣ್ಣಾಗಲಿ
ಜೀನ್ಸು, ಟಿ ಶರ್ಟು.. ಇಬ್ಬರಿಗೂ ಒಂದೇ ಉಡುಪು.. ಏನೂ ವ್ಯತ್ಯಾಸವಿಲ್ಲದ ಜೀವನ..





ಹೀಗಿರುವಾಗ ನಾಲ್ಕು ಕಾಲುಗಳನ್ನು ಹೊಂದಿರೋ ಹುಡುಗಿ ನಡೆಯಲು ಸಾಧ್ಯವೇ..?? ಇಷ್ಟಕ್ಕೂ
ನಾಲ್ಕು ಕಾಲುಗಳು ಇರೋದು ಕೇವಲ ಪ್ರಾಣಿಗಳಿಗೆ ಅಲ್ಲವಾ..?? ಮನುಷ್ಯರ ವಿಷಯ ಯಾಕೆ ಅಂತ ನೀವು
ಕೇಳಬಹುದು.. ಆದ್ರೆ ನಾನು ಹೇಳ್ತಾ ಇರೋದು ನಾಲ್ಕು ಕಾಲು ಇರೋ ನಾರಿಯ ಬಗ್ಗೆ... ವಿಚಿತ್ರ ಪ್ರಪಂಚದಲ್ಲಿರೋ
ವಿಭಿನ್ನ ಪೋರಿಯ ಬಗ್ಗೆ...





ಆಕೆಯ ಹೆಸರು ಜೋಸೆಫೆನ್ ಮೈರ್ಟೆಲ್
ಕಾರ್ಬಿನ್
,
ಇವಳೇ  ನಾಲ್ಕು ಕಾಲಿನ ನಾರಿ.. ಈಕೆ ಹುಟ್ಟಿದ್ದು 1868 ರಲ್ಲಿ.. ಸಯಾಮಿ ಅವಳಿಗಳಂತೆ
ದೇಹರಚನೆಯನ್ನು ಹೊಂದಿರೋ
ಕಾರ್ಬಿನ್ ಗೆ ಬರೋಬ್ಬರಿ ನಾಲ್ಕು ಕಾಲುಗಳಿವೆ.. ಎರಡು ಕಾಲುಗಳು
ಉದ್ಧವಿದ್ದು ಇನ್ನೆರಡು ಕಾಲುಗಳು ಸ್ವಲ್ಪ ಚಿಕ್ಕದಾಗಿವೆ
. ಚಿಕ್ಕದಾದ ಕಾಲುಗಳಲ್ಲಿ ಅಷ್ಟೋಂದು ಶಕ್ತಿ ಇಲ್ಲವಾದ್ದರಿಂದ ಸುಸೂತ್ರವಾಗಿ ನಡೆಯಲು ಸಾಧ್ಯವಾಗುವುದಿಲ್ಲ ಎಂದು ಸ್ವತಃ ಕಾರ್ಬಿನ್
ಹೇಳಿದ್ದಳು.. ಆದರೂ ಅಲ್ಪಮಟ್ಟಿಗೆ ನಾಲ್ಕೂ ಕಾಲುಗಳನ್ನು ಬಳಸಿ ನಡೆದಾಡಬಲ್ಲೆ ಎಂದೂ ಕೂಡ ಆಕೆ
ಹೇಳಿದ್ದಾಳೆ.
. ಇದನ್ನು ಕೇಳಿದ್ರೆ ದೇಹಗಳೂ ಕೂಡ ಎರಡು ಇರಬಹುದೇ ಎಂಬ ಸಂಶಯ ನಿಮ್ಮಲ್ಲಿ ಮೂಡದೇ
ಇರೋದಿಲ್ಲ.. ಆದ್ರೆ ಅದಕ್ಕೆ ಉತ್ತರ “ಖಂಡಿತವಾಗ್ಲೂ ದೇಹಗಳು ಎರಡಿಲ್ಲ.. ಒಂದೇ ದೇಹ.. ಆದ್ರೆ
ಕಾಲುಗಳು ಮಾತ್ರ ನಾಲ್ಕು..
ಸೊಂಟದಿಂದ ಮೇಲಿನವರೆಗೆ ಒಂದೇ ದೇಹ ಇದ್ದು ಸೊಂಟದಿಂದ ಕೆಳಭಾಗದಲ್ಲಿ
ಮಾತ್ರ ಅಂದರೆ ಕೇವಲ  ಕಾಲುಗಳು ಮಾತ್ರ ನಾಲ್ಕು
ಇವೆ ಎಂಬುದು ಗಮನಾರ್ಹ.





ಅಮೇರಿಕಾದ ವೈದ್ಯರು ಈಕೆಯನ್ನು ಪರೀಕ್ಷಿಸಿ ಆ ಕಾಲುಗಳನ್ನು ಬೇರ್ಪಡಿಸಬಹುದೇ ಎಂದು
ಆಲೋಚಿಸಿದ್ರಂತೆ. ಅದ್ರೆ ಬಹು ಮಟ್ಟಿಗೆ ಆ ಕಾಲುಗಳು ಸೊಂಟದ ನರಗಳೊಂದಿಗೆ ಬೆಸೆದು ಬಿಟ್ಟಿತ್ತು.
ಹೀಗಾಗಿ ಆ ಕಾಲುಗಳನ್ನು ತೆಗೆದೇ ಹಾಗೆ ಬಿಡಲಾಯಿತು ಎಂಬ ಅಂಶ ತಿಳಿದು ಬಂದಿದೆ.





ವಯಸ್ಸು ಮೀರುತ್ತಿದ್ದರೂ ಮದುವೆಯಾಗದೇ ಉಳಿದಿರೋ ಬಹಳಷ್ಟು ಹೆಣ್ಣುಮಕ್ಕಳನ್ನು ನಾವು
ನೋಡಿದ್ದೆವೆ. ಅಷ್ಠೆ ಅಲ್ಲ, ಸುಂದರವಾಗಿರೋ ಹುಡುಗಿಯರಿಗೇ
“ಮೂಗು ಸರಿ ಇಲ್ಲ,. ಕಣ್ಣು ಸರಿ ಇಲ್ಲ ಅಂತ ಏನೇನೋ ಹೆಸರಿಟ್ಟು
ಮದುವೆ ಮಾಡಿಕೊಳ್ಳೋದಿಲ್ಲ ಅಂತ ಓಡಿ ಹೋಗೋ ಪುರುಷರೂ ನಮ್ಮಲ್ಲಿ ಕಡಿಮೆ ಇಲ್ಲ. ಆದ್ರೆ
ನಾಲ್ಕು
ಕಾಲುಗಳನ್ನು ಹೊಂದಿರೋ ಈ ವಿಚಿತ್ರ ಬಾಲೆಗೆ ಅತಿ ಚಿಕ್ಕ ವಯಸ್ಸಿನಲ್ಲೇ
ಕಂಕಣ ಭಾಗ್ಯ ಒಲಿದು
ಬಂದಿತ್ತು
.. ಸುಮಾರು 19 ನೇ ವಯಸ್ಸಿನಲ್ಲೇ
ದಾಂಪತ್ಯಕ್ಕೆ ಕಾಲಿಟ್ಟಳು
ಈ ನಾಲ್ಕು ಕಾಲಿನ ಪೋರಿ.. ಈಕೆಯನ್ನು ಮದುವೆಯಾದವ ಅಜ್ಞಾನಿಯೇನಲ್ಲ.. ಅಮೇರಿಕಾದ
ಖ್ಯಾತ ವೈದ್ಯ
ಕ್ಲಿಂಟನ್ ಬಿಕ್ನೆಲ್‌...
ಸಂಶೋಧನೆಯನ್ನೇ
ಹಾಸುಹೊಕ್ಕಾಗಿಸಿಕೊಂಡಿದ್ದ ಈ ವೈದ್ಯ ಸಂಶೋಧನೆಯ ಗೂಡಾದ ಕಾರ್ಬಿನ್ ಳನ್ನ ತನ್ನ ಪತ್ನಿಯಾಗಿ
ಸ್ವೀಕರಿಸಿದ. ಎಲ್ಲರಂತೆ ಸಂಸಾರ ನಡೆಸಿದ. ಆಕೆಯ ಬಾಳು ಯಾರಿಗೂ ಕಡಿಮೆ ಇಲ್ಲದಂತೆ ನಡೆದಿತ್ತು.
ದೇವರ ವರವೋ, ಪುಣ್ಯದ ಫಲವೋ ಗೊತ್ತಿಲ್ಲ
ಐದು ಮಕ್ಕಳ ತಾಯಿಯಾದಳು.  ಅವರಲ್ಲಿ ನಾಲ್ಕು ಹೆಣ್ಣುಮಕ್ಕಳಾದ್ರೆ ಒಂದೇ ಒಂದು ಗಂಡು
ಮಗು ಅಗಿತ್ತು. ಎಲ್ಲರಂತೆ ತಾಯಿಯಾಗಿ, ಹೆಂಡತಿಯಾಗಿ ಸಾಮಾನ್ಯ ಜೀವನ ನಡೆಸಿದ್ದ ಜೋಸೆಫೆನ್ ಮೈರ್ಟೆಲ್
ಕಾರ್ಬಿನ್ ಮೇ
6, 1928 ರಲ್ಲಿ ಇಹಲೋಕ ತ್ಯಜಿಸಿದಳು.


Отправить комментарий

0 Комментарии