Hot Posts

10/recent/ticker-posts

ಈ ಹಣ್ಣನ್ನು ತಿಂದವರು ಹೆಚ್ಚು ಕಾಲ ಬದುಕುತ್ತಾರೆ


  ಒಮ್ಮೆ ಶ್ರೀ  ಕೃಷ್ಣದೇವರಾಯನ ಆಸ್ಥಾನಕ್ಕೆ  ಚೀನಾ ದೇಶದ ರಾಯಭಾರಿ ಬಂದಿದ್ದರು. ರಾಜನಿಗಾಗಿ ಚೀನಾದಿಂದ  ಕೆಲವು ಸೇಬುಗಳನ್ನು ತಂದಿದ್ರು. ಅದನ್ನು
ರಾಜನಿಗೆ ಕೊಟ್ಟು
ಸ್ವಾಮಿ ಹಣ್ಣನ್ನು ತಿಂದವರು ಅತಿ ಹೆಚ್ಚು ಕಾಲ ಬದುಕುತ್ತಾರೆ ಎಂದು ಹೇಳಿದರು. ಇದನ್ನು ಕೇಳಿದ ತೆನಾಲಿ ರಾಮನು ಪಕ್ಕದಲೇ ಇದ್ದದ್ದರಿಂದ “ಒಂದು ಹಣ್ಣನ್ನು ಗಬಕ್ಕನೇ ತೆಗೆದು ಕೊಂಡು ಕಡಿದೇ ಬಿಟ್ಟ. ರಾಜನಿಗೆ ಬಹಳ ಕೋಪ ಬಂದಿತು ನನಗಾಗಿ ತಂದ ಹಣ್ಣನ್ನು ನೀನೇಕೆ ಕಡಿದೆ? ಈತನ ತಲೆಯನ್ನೇ ಕಡಿಯಿರಿ ಎಂದು ಸೇವಕರಿಗೆ ಆಜ್ಞೆ ಮಾಡಿದ. ಶರಚ್ಛೇದನ ಮಾಡುವ ಮೊದಲು ಶ್ರೀಕೃಷ್ಣ ದೇವರಾಯನು  ರಾಮಕೃಷ್ಣನಿಗೆ
ಕೇಳಿದ..  ಕೊನೆಯದಾಗಿ ಏನಾದರೂ ಹೇಳಬೇಕಿದ್ದರೆ
ಹೇಳು ರಾಮಕೃಷ್ಣ.. ಇನ್ನು ಕೆಲವೇ ಕ್ಷಣಗಳಲ್ಲಿ ನೀನು ಸಾಯುತ್ತೀಯ ಎಂದು ಹೇಳಿದರು. 







 ಆಗ ತೆನಾಲಿ ರಾಮಕೃಷ್ಣನು “ ಮಹಾ ರಾಜರೇ ಮನ್ನಿಸಬೇಕು.. ಆ ಹಣ್ಣು ತಿಂದರೆ ಆಯಸ್ಸು
ಹೆಚ್ಚಾಗುತ್ತೆ ಎಂದು ಹೇಳಿದ ಮಾತು ಸುಳ್ಳು
.. ಎಂದು ಹೇಳಿದ” ಅದು ಹೇಗೆ ಹೇಳುವೆ
ಎಂದು ರಾಜ ಕೇಳಿದ.. ಅದಕ್ಕೆ ರಾಮಕೃಷ್ಣನು “ಪ್ರಭುಗಳೇ, ಆ
ಹಣ್ಣನ್ನು ಸ್ವಲ್ಪ ಕಡಿದದ್ದಕ್ಕೇ  ನನ್ನ ತಲೆ ತೆಗೆಯುತ್ತಿದ್ದೀರಿ.. ಇನ್ನು ಪೂರ್ತಿ
ತಿಂದಿದ್ದರೆ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ ಎಂದರ್ಥ ಅಲ್ಲವೆ..?? ಹೀಗಿರುವಾಗ ಅವರು
ಹೇಳಿದ್ದು ಸುಳ್ಳಲ್ಲವೇ
ಎಂದು ಕೇಳಿದ.. ರಾಮಕೃಷ್ಣನ ಉತ್ತರವನ್ನು ಕೇಳಿಸಿಕೊಂಡ ರಾಜನು “ ಹೇ ರಾಮಕೃಷ್ಣ ನೀನು ನಮ್ಮ
ಜೀವವನ್ನು ಉಳಿಸಿದ್ದೀಯ ಎಂದು ಹೇಳಿ ಶಿಕ್ಷೆಯನ್ನು ಹಿಂದಕ್ಕೆ ಪಡೆದನು.. ಮತ್ತು ಆ ಚೀನಾ
ಪ್ರವಾಸಿಗರನ್ನು ನೇಣಿಗೆ ಅಟ್ಟಿ ಎಂದು ಆಜ್ಞೆ ಮಾಡಿದನು.

Отправить комментарий

0 Комментарии