Hot Posts

10/recent/ticker-posts

ಕಳ್ಳನ ಕೊನೆ ಆಸೆ







ಕೊಲೆ, ಸುಲಿಗೆ ಮಾಡಿದ್ದ ಒಬ್ಬ
ಹಳೇ ಖದೀಮನನ್ನು ಪೋಲೀಸರು ಹಿಡಿದು ತಂದು
ನ್ಯಾಯಾಲಯಕ್ಕೆ
ಒಪ್ಪಿಸಿದ್ರು
..
ಅವನನ್ನು ನೋಡಿದ ನ್ಯಾಯ ಮೂರ್ತಿಗಳು
ನೀನು
ಐದನೇ ಬಾರಿಗೆ ಈ ಕೋರ್ಟಿಗೆ ಬರುತ್ತಿದ್ದೀಯ
.. ನಿನಗೆ ನಾಚಿಕೆಯಾಗುವುದಿಲ್ಲವೇ..?? ಎಂದು
ಕೇಳಿದರು
.. ಆಗ ಆ ಕಳ್ಳ.. “ನೀವು ಪ್ರತಿ
ದಿನವೂ ಇಲ್ಲಿಗೆ
ಬರುತ್ತೀರಲ್ವಾ..?? ನಿಮಗೆ ಇಲ್ಲದ ನಾಚಿಕೆ ನಮಗೇಕೆ ಪ್ರಭು ಎಂದು ಕೇಳಿದ..


ಅವನ ಉದ್ಧಟತನವನ್ನು ನೋಡಿ ನ್ಯಾಯ ಮೂರ್ತಿಗಳಿಗೆ ಕೋಪ ಬಂತು.. “ಇವನನ್ನು
ಹಿಡಿದು ಎಲೆಕ್ಟ್ರಿಕ್
ಕುರ್ಚಿಯಲ್ಲಿ ಕೂಡಿಸಿ ವಿದ್ಯುತ್ ಹರಿಸಿ ಪ್ರಾಣ
ತೆಗೆಯಿರಿ” ಎಂದು ಶಿಕ್ಷೆ
ಕೊಟ್ಟರು.   “ ಹೇ ಕಳ್ಳ..
ನಿನ್ನ ಕೊನೆಯ ಆಸೆ ಈಡೇರಿಸಬೇಕಾದದ್ದು ನಮ್ಮ ಧರ್ಮ.. ಸಾಯುವ ಮೊದಲು ನಿನ್ನ ಕೊನೆ ಆಸೆ
ಇದ್ದರೆ
ಹೇಳು.. ಈಡೇರಿಸೋಣ ಎಂದರು ನ್ಯಾಯ ಮೂರ್ತಿಗಳು.. ಆಗ ಆ ಕಳ್ಳನು
ಸ್ವಾಮಿ ನನಗೆ ವಿದ್ಯುತ್ ಎಂದರೆ ಭಯ.. ವೈರ‍್
ನೋಡಿದ್ರೇನೇ ನನ್ನ ಕೈಕಾಲುಗಳು ಗಡ ಗಡ ಎಂದು ನಡುಗುತ್ತವೆ
.. ಅದಿಕ್ಕೆ
ಇಬ್ಬರು ಪೋಲೀಸರು ತಮ್ಮ ಕೈಗಳಿಂದ ನನ್ನ ಕೈ ಮತ್ತು
ಕಾಲುಗಳನ್ನು ಗಟ್ಟಿಯಾಗಿ
ಹಿಡಿದುಕೊಳ್ಳಲಿ..
ಅಷ್ಟೇ ನನ್ನ ಆಸೆ
ಎಂದುಬಿಟ್ಟ.. ಅವನ
ಚತುರತೆಯನ್ನು ಕಂಡ
ನ್ಯಾಯ ಮೂರ್ತಿಗಳು ನಕ್ಕು ನಕ್ಕು ಸುಸ್ತಾದ್ರು..



Отправить комментарий

0 Комментарии