
‘ಬೀರಬಲ್ ನೀನು ಹಣದಾಸೆಗೆ ಮಾರುಹೋಗುವವನಲ್ಲ.. ನ್ಯಾಯಕ್ಕಾಗಿ ಶ್ರಮಿಸುವ ನ್ಯಾಯವಂತ ಎಂದುಕೊಂಡಿದ್ದೆ.. ಆದರೆ ನೀನು ನನಗೆ ನಿರಾಸೆ ಮಾಡಿದೆ.. “ನಮ್ಮ ರಾಜ್ಯದಲ್ಲಿ ನ್ಯಾಯ ನೆಲೆಸುವಂತೆ ಮಾಡುತ್ತೀಯ ಎಂದುಕೊಂಡಿದ್ದೆ..
ಆದರೆ ನೀನು ಆ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದರು ಅಕ್ಬರ್
ಅದಕ್ಕೆ ಬೀರಬಲ್ ‘ಸ್ವಾಮಿ ಯಾರಲ್ಲಿ ಏನಿಲ್ಲವೋ ಅದನ್ನೇ ಬಯಸುತ್ತಾರೆ, ನನಗೆ ನಿಮ್ಮ ರಾಜ್ಯದಲ್ಲಿ ನ್ಯಾಯ ಸಿಕ್ಕಿದ್ದೆ,
ನ್ಯಾಯ ತುಂಬಿ ತುಳುಕುತ್ತಿರುವಾಗ ಮತ್ತೆ ನ್ಯಾಯ ಬೇಕು ಎಂದು ಕೇಳುವುದು ಮೂರ್ಖತನವಲ್ಲವೇ..?? ಅದಕ್ಕೆ ನಾನು ನಾಣ್ಯ ಕೇಳಿದೆ’ ಎಂದು ಉತ್ತರಿಸಿದ. ಅಕ್ಬರನಿಗೆ ಬೀರಬಲ್ಲನ ಮಾತು ಕೇಳಿ ಸಮಾಧಾನವಾಯ್ತು.. ಆಸ್ಥಾನಿಕರಿಗೆ ಬೀರಬಲ್ಲನನ್ನು ಪರೀಕ್ಷಿಸಿದ್ದಕ್ಕಾಗಿ ನಾಚಿಕೆಯಾಯಿತು
0 Комментарии