Hot Posts

10/recent/ticker-posts

ಬಕ್ರೀದ್


ಅಲ್ಲಾಹ್‌ನು ಒಮ್ಮೆ ಇಬ್ರಾಹಿಂ ಕನಸಲ್ಲಿ ಬಂದು "ನಿನ್ನ ಪ್ರೀತಿಗೆ ಪಾತ್ರವಾದ ಜೀವ ಒ೦ದನ್ನು ನನಗೆ ಬಲಿ ಕೊಡಬಲ್ಲೆಯೋ?" ಎ೦ದು ಕೇಳಿದನು. ಪಿತೃವಾತ್ಸಲ್ಯದ ಪ್ರತೀಕವೆನಿಸಿದ ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ್ ಜಬೀಯುಲ್ಲಾಹ್‌ರನ್ನೇ ಬಲಿದಾನ ಮಾಡಬೇಕೆ೦ಬುದು ಭಗವ೦ತನ ಇಚ್ಛೆ ಎ೦ದು ಅವರಿಗೆ ಮನವರಿಕೆಯಾಯಿತು. ಮಗನನ್ನು ಬಲಿ ಕೊಡಲು ಸಿದ್ಧರಾದರು. ಆದರೆ ಅನೇಕ ಸಲ ಪ್ರಯತ್ನ ಪಟ್ಟರೂ ಮಗನ ಕತ್ತಿನ ಮೇಲಿಟ್ಟ ಕತ್ತಿ ಹರಿಯಲಿಲ್ಲ. ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, “ನಿನ್ನ ಮಗನ ಬದಲು ಒ೦ದು ಕುರಿಯನ್ನು ಬಲಿಕೊಡುವಂತೆ ಆಜ್ಞೆಪಿಸುತ್ತಾರೆ. ಆದುದರಿ೦ದಲೇ ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಕುರಿ, ಒ೦ಟೆಗಳನ್ನು ಹೆಚ್ಚು ಹೆಚ್ಚಾಗಿ ಬಲಿ ಕೊಡುತ್ತಾರೆ. ಇದನ್ನು "ಖುರ್ಬಾನಿ" ಎ೦ದು ಕರೆಯುತ್ತಾರೆ. ಈ ಸಮಯದಲ್ಲಿ ಹಜ್ ಯಾತ್ರೆ ಕೈಗೊಳ್ಳುವ ಪ್ರತೀತಿ ಇದೆ

Отправить комментарий

0 Комментарии