Hot Posts

10/recent/ticker-posts

ಮೊಹರಂ


ಮಹಮ್ಮದೀಯರ ವರ್ಷದ ಮೊದಲ ತಿಂಗಳು ಮೊಹರಂ. ಈ ಮಾಸದ ಮೊದಲಿನ 10 ದಿನಗಳನ್ನು ಮೊಹರಂ ಎಂದು ಕರೆಯುತ್ತಾರೆ. ಪ್ರವಾದಿ ಮಹ್ಮಮದರ ಮರಿಮೊಮ್ಮಗ ಹಜರತ್ ಇಮಾಂ ಹುಸೇನ್ ಅವರ ವೀರ ಮರಣದ ಅಂಗವಾಗಿ ನಡೆಯುವ ಆಚರಣೆಯೇ ಮೊಹರಂ ಆಚರಣೆ. ಧರ್ಮ ಯುದ್ಧ ಆರಂಭವಾದ ಮೊದಲ ದಿನವನ್ನು ಮೊಹರಂ ಮೊದಲ ದಿನವೆಂದು ಕರೆಯಲಾಗುತ್ತದೆ.



ಅರಬ್ ರಾಜ್ಯವನ್ನು ಆಳುತ್ತಿದ್ದ ಯಜೀದ್ ಆಡಳಿತದಿಂದ ಬೇಸತ್ತ ಕುಫಾದ ಜನ ಯಜೀದ್‌ನನ್ನು ಪದಚ್ಯುತಿಗೊಳಿಸಬೇಕು ಎಂದು ಪ್ರವಾದಿ ಮಹ್ಮಮದರ ಮರಿಮೊಮ್ಮಗ ಹಜರತ್ ಇಮಾಂ ಹುಸೇನ್ ರವನ್ನು ಕೇಳಿಕೊಂಡರು. ಈಗಿನ ಇರಾಕ್‌ನಲ್ಲಿರುವ ಕರ್ಬಲಾ ಬಳಿ ನಡೆದ ಯುದ್ಧದಲ್ಲಿ ಯಜೀದ್‌ನ ಸೈನಿಕರಿಂದ ಇವರೆಲ್ಲರೂ ಹತರಾದರು. ಹುಸೇನ್ ಮಡಿದದ್ದು ಮೊಹರಂ ನ ಹತ್ತನೇಯ ದಿವಸ. ಹೀಗಾಗಿ ಈ ದಿನವನ್ನು “ದುಃಖದಾಯಕ ಪವಿತ್ರ ದಿನ” ಎಂಬುದರ ಸಂಕೇತವಾಗಿ ಮೊಹರಂ ಅನ್ನು ಆಚರಿಸಲಾಗುತ್ತದೆ

Отправить комментарий

0 Комментарии