Hot Posts

10/recent/ticker-posts

ಗಣೇಶ ಚತುರ್ಥಿ




ಪಾರ್ವತಿ ದೇವಿಯು ಸ್ನಾನಕ್ಕೆಂದು ಹೊರಟಾಗ ಕಾವಲಿಗಾಗಿ ತನ್ನ ಮೈಯ ಮಣ್ಣಿನಿಂದ ಗೊಂಬೆಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವ ನೀಡುತ್ತಾಳೆ.. ಆ ಗೊಂಬೆಯೇ ಗಣೇಶ.



 ಅದೇ ಸಮಯದಲ್ಲಿ ಪಾರ್ವತಿ ದೇವಿಯನ್ನು ಕಾಣಲು ಶಿವನು ಬಂದಾಗ, ಶಿವನನ್ನು ಒಳ ಪ್ರವೇಶಿಸಿದಂತೆ ತಡೆದು ಶಿವನ ಕೋಪಕ್ಕೆ ಒಳಗಾಗುತ್ತಾನೆ. ಕೋಪದಲ್ಲಿದ್ದ ಶಿವನು ತನ್ನ ತ್ರಿಶೂಲದಿಂದ ಗಣಪತಿಯ ಶಿರಚ್ಛೇದನ ಮಾಡುತ್ತಾನೆ. ನಂತರ ಪಾರ್ವತಿ ದೇವಿಯು ದುಃಖಿತಳಾದಾಗ, ಆಕೆಯ ಮಾತಿನ ಮೇರೆಗೆ ಆ ಮುಂಡಕ್ಕೆ ಗಜ ರುಂಡವನ್ನು ಸೇರಿಸಿ ಮತ್ತೆ ಜೀವ ತುಂಬುತ್ತಾನೆ. ಎಲ್ಲಾ ಶುಭ ಕಾರ್ಯಗಳಲ್ಲಿ ಗಣಪತಿಗೆ ಪ್ರಥಮ ಪೂನೆ ಪೂಜೆ ಸಲ್ಲಬೇಕು ಎಂದು ಶಿವ ಹೇಳುತ್ತಾನೆ. ಇಂಥಾ ವಿಶೇಷ ದೇವರಾದ ಗಣಪತಿಯ ಜನನದ ದಿನವನ್ನು ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಪಾರ್ವತಿಯ ಪ್ರಿಯ ಪುತ್ರನಾದ್ದರಿಂದ ಗೌರಿ ಮತ್ತು ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸುವ ಪದ್ಧತಿ ಇದೆ.

Отправить комментарий

0 Комментарии